Monday, 9th December 2019

ಬೆಳಗಾವಿಯಲ್ಲಿ ತಗ್ಗಿದ ಮಳೆ ಆರ್ಭಟ…

ಬೆಳಗಾವಿ: ಜಿಲ್ಲೆಯ ಸವದತ್ತಿಿ ತಾಲೂಕಿನ ನವಿಲುತೀರ್ಥ ಜಲಾಶಯಕ್ಕೆೆ ಹರಿದು ಬರುತ್ತಿಿರುವ ನೀರಿನ ಪ್ರಮಾಣದಲ್ಲಿ ಗಮನಾರ್ಹವಾಗಿ ಇಳಿಕೆಯಾಗಿದ್ದು ಹೊರಹರಿವು 85 ಸಾವಿರ ಕ್ಯೂಸೆಕ್‌ನಿಂದ ಹತ್ತು ಸಾವಿರಕ್ಕೆೆ ಇಳಿದಿದೆ. ಖಾನಾಪುರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಸುರಿಯುತ್ತಿಿರುವ ಮಳೆ ಕಡಿಮೆಯಾಗಿದ್ದರಿಂದ ಒಳಹರಿವು 45 ಸಾವಿರ ಕ್ಯೂಸೆಕ್‌ಗೆ 37.7 ಟಿಎಮ್‌ಸಿ ಸಾಮರ್ಥ್ಯದ ಡ್ಯಾಾಮಿನಲ್ಲಿ ಈಗ 35 ಟಿಎಮ್‌ಸಿ ನೀರು ಸಂಗ್ರಹವಾಗಿದೆ.

ಇನ್ನು ಮಹಾರಾಷ್ಟ್ರದ ಕೊಯ್ನಾಾ, ವಾರ್ಣಾ ಮತ್ತಿಿತರ ಜಲಾಶಯಗಳಿಂದ ರಾಜಾಪುರ ಡ್ಯಾಾಮ್ ಮೂಲಕ ಕರ್ನಾಟಕವನ್ನು ಪ್ರವೇಶಿಸುತ್ತಿಿರುವ ನೀರಿನ ಪ್ರಮಾಣವು 3.5 ಲಕ್ಷ ಕ್ಯೂಸೆಕ್ಸ.ಇದರೊಂದಿಗೆ ಕರ್ನಾಟಕದ ಕೃಷ್ಣಾಾ ತೀರದಲ್ಲಿ ಸುರಿಯುತ್ತಿಿರುವ ಮಳೆಯ ನೀರೂ ಸಹ ಸೇರುತ್ತಿಿದೆ. ಮಲಪ್ರಭೆ, ಘಟಪ್ರಭೆ ಮತ್ತು ಕೃಷ್ಣಾಾ ನದಿಗಳು ಉಕ್ಕಿಿ ಹರಿಯುತ್ತಿಿರುವುದರಿಂದ ಇಡೀ ಜಿಲ್ಲೆಯ ಬಹುತೇಕ ಪ್ರದೇಶಗಳು ನೆರೆಪೀಡಿತವಾಗಿವೆ. ಚಿಕ್ಕೋೋಡಿ, ಕಾಗವಾಡ, ಅಥಣಿ, ರಾಯಬಾಗ, ರಾಮದುರ್ಗ ತಾಲೂಕುಗಳ ನೂರಾರು ಗ್ರಾಾಮಗಳು ಹಾಗೂ ಬಾಗಲಕೋಟೆ ಜಿಲ್ಲೆಯ ಅನೇಕ ನಗರ ಮತ್ತು ಹಳ್ಳಿಿಗಳಲ್ಲಿಯ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ.

Leave a Reply

Your email address will not be published. Required fields are marked *