ಕೋಲ್ಕತ್ತಾ: ಬೆಂಗಾಲಿ ರೂಪದರ್ಶಿ, ಕಿರುತೆರೆ ನಟಿ ಬಿದಿಶಾ ಡೆ ಮಂಜುಂದಾರ್ ಶವ ಕೋಲ್ಕತಾದ ದಮ್ ದಮ್ ನಗರದ ಅಪಾರ್ಟ್ ಮೆಂಟ್ ನಲ್ಲಿ ಪತ್ತೆಯಾಗಿದೆ.
ಪಾರ್ಟ್ ಮೆಂಟ್ ನ ಮೊದಲ ಮಹಡಿಯ ಫ್ಲ್ಯಾಟ್ ನಲ್ಲಿ ಬಾಡಿಗೆಗೆ ಇದ್ದ ನಟಿ ಬುಧವಾರ ರಾತ್ರಿ ಶವವಾಗಿ ಪತ್ತೆಯಾಗಿದ್ದು, ಡೆತ್ ನೋಟ್ ಪತ್ತೆಯಾಗಿದ್ದರಿಂದ ಇದು ಆತ್ಮಹತ್ಯೆ ಎಂದು ಶಂಕಿಸಲಾಗಿದೆ. ಬಾಗಿಲು ಒಡೆದು ಮನೆಯೊಳಗೆ ಪ್ರವೇಶಿಸಿದ ಪೊಲೀಸರು ನಟಿ ಬಿದಿಶಾ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.