Monday, 21st September 2020

ಬೇರ್ಪಡಿಸುವಿಕೆ ನಿಶ್ಚಿತ, ಪ್ರೀತಿಯೊಂದೇ ಶಾಶ್ವತ…

ಆ ಮಾತಿಗೆ ಮನಸೋತಿದ್ದ ಹಾರ್ಟ್ ಅದೇ ಮಾತಿಗೆ ಒಡೆದು ಹೋಯ್ತು!

ಒಂದು ದಿನ ‘ಬೇರ್ಪಡಿಸುವಿಕೆ’ ಹಾಗೂ ‘ಪ್ರೀತಿ’ ಮಾತನಾಡುತ್ತಿಿದ್ದವು. ಬೇರ್ಪಡಿಸುವಿಕೆ ಪ್ರೀತಿಗೆ ಹೇಳಿತು ‘ ನನಗೆ ಒಂದು ಕ್ಷಣ ಸಾಕು ಇಬ್ಬರು ಪ್ರೀತಿಸುವವರನ್ನು ದೂರ ಮಾಡಲು’ ಎಂದು. ಅದಕ್ಕೆೆ ಪ್ರೀತಿ ಹೇಳಿತು, ‘ಒಂದು ಕ್ಷಣ ನಿಲ್ಲು, ನಾನು ಮೊದಲು ಅವರಿಬ್ಬರ ನಡುವೆ ಹೋಗಿ ಬರುತ್ತೇನೆ. ಆ ನಂತರ ನೀನು ಹೋಗುವಂತೆ’ ಎಂದು. ಅದಕ್ಕೆೆ ಬೇರ್ಪಡಿಸುವಿಕೆ ಒಪ್ಪಿಿತು.

ಪಾರ್ಕಿನಲ್ಲಿ ಕೂತ ಯುವ ಜೋಡಿಯ ಬಳಿ ಪ್ರೀತಿ ಹೋಗಿ ಅವರಿಬ್ಬರನ್ನು ಮುಟ್ಟಿಿತು. ಜೋಡಿಯ ನಡುವೆ ಪ್ರೀತಿಯಾಯ್ತು. ಆಗ ಪ್ರೀತಿ ಬೇರ್ಪಡಿಸುವಿಕೆಯ ಬಳಿ ಬಂದು ‘ಈಗ ನಿನ್ನ ಸಮಯ ಹೋಗು ಅವರಿಬ್ಬರ ದೂರ ಮಾಡು’ ಎಂದಿತು. ಅದಕ್ಕೆೆ ಬೇರ್ಪಡಿಸುವಿಕೆ ಹೇಳಿತು ‘ನೀನು ಈಗಿನ್ನೂ ಹೋಗಿ ಬಂದಿದ್ದೀಯಾ, ಅವರ ಮನದ ತುಂಬಾ ಪ್ರೀತಿಯೇ ತುಂಬಿದೆ. ಈಗ ಬೇಡ ಸ್ವಲ್ಪ ಸಮಯ ಕಳೆಯಲಿ ನನ್ನ ಜಾದೂ ತೋರಿಸುತ್ತೇನೆ’ ಎಂದಿತು. ಸ್ವಲ್ಪ ಸಮಯ ಕಳೆಯಿತು. ಬೇರ್ಪಡಿಸುವಿಕೆ ಮತ್ತೆೆ ಬಂದಿತು ‘ ಅವರಿಬ್ಬರಿಗೂ ಮದುವೆಯಾಗಿ ಮುದ್ದಾಾದ ಮಗುವೂ ಇತ್ತು’ ಆಗ ಬೇರ್ಪಡಿಸುವಿಕೆಗೆ ಅವರಿಬ್ಬರ ಕಣ್ಣಲ್ಲಿ ಕೃತಜ್ಞತಾ ಭಾವ ಕಾಣಿಸಿತು. ಈಗ ಬೇಡ ಇನ್ನೊೊಮ್ಮೆೆ ಬರುತ್ತೇನೆ ಎಂದು ಹೊರಟು ಹೋಯಿತು. ಮತ್ತೆೆ ಕೆಲ ವರ್ಷದ ನಂತರ ಬೇರ್ಪಡಿಸುವಿಕೆ ಮತ್ತೆೆ ಬಂದಿತು. ಆಗ ಅವರಿಬ್ಬರ ಕಣ್ಣಲ್ಲಿ ಪ್ರೀತಿ, ಕೃತಜ್ಞತಾ ಭಾವ ಕಾಣಲಿಲ್ಲ. ಇದೇ ಸರಿಯಾದ ಸಮಯ ಇವರಿಬ್ಬರನ್ನು ಬೇರೆ ಮಾಡಲು ಎಂದು ಯೋಚಿಸಿತು. ಆದರೆ ಅವರ ಕಣ್ಣಲ್ಲಿ ಬೇರೇನೋ ಕಾಣುತ್ತಿಿದೆ. ಹತ್ತಿಿರದಿಂದ ನೋಡಿದಾಗ ಅವರಿಬ್ಬರ ಕಣ್ಣಲ್ಲಿ ಕಂಡದ್ದು ಪರಸ್ಪರ ಗೌರವ ಹಾಗೂ ಹೊಂದಾಣಿಕೆ.

ಮತ್ತೆೆ ಬಂದ ದಾರಿ ಹಿಡಿದು ವಾಪಾಸ್ ಹೋಯಿತು. ಇನ್ನೂ ಕೆಲ ಸಮಯ ಕಳೆಯಿತು. ಬೇರ್ಪಡಿಸುವಿಕೆ ಮತ್ತೆೆ ಬಂದಾಗ ಅವರ ಮಗ ಅಪ್ಪನಷ್ಟೆೆತ್ತರಕ್ಕೇ ಬೆಳೆದು ನಿಂತಿದ್ದ. ಇದು ಸುಸಮಯ ಈಗ ಇವರನ್ನು ಬೇರ್ಪಡಿಸುವೆ ಎಂದುಕೊಂಡಿತು. ಆದರೆ ಈಗ ಅವರ ಕಣ್ಣಲ್ಲಿ ಒಬ್ಬರಿಗೊಬ್ಬರ ಮೇಲಿನ ನಂಬಿಕೆ ಎದ್ದು ಕಾಣುತ್ತಿಿತ್ತು. ಸಮಯ ಕಳೆದಂತೆ ಮೊಮ್ಮಕ್ಕಳು ಮನೆಯಲ್ಲಿ ಆಡತೊಡಗಿದರು. ಇದು ಸರಿಯಾದ ಸಮಯ ಇಷ್ಟರವರೆಗೆ ಪ್ರೀತಿ ಖಂಡಿತ ಇರಲಾರದು ಎಂದು ಯೋಚಿಸಿತು. ಆಕೆಯ ಕಣ್ಣಿಿನಲ್ಲಿ ಯಾವ ಭಾವವಿದೆ ಎಂದು ನೋಡಲು ಹೊರಟಾಗ ಆಕೆ ಎದ್ದು ಹೊರನಡೆದು ಗಂಡನ ಸಮಾಧಿ ಬಳಿ ಬಂದು ನಿಂತಳು. ಆಗ ಬೇರ್ಪಡಿಸುವಿಕೆಗೆ ಬೇಸರವಾಯಿತು. ನಾನು ಬಂದಿದ್ದು ಕೊಂಚ ತಡವೇ ಆಯಿತು. ಸಮಯವೇ ಇವರನ್ನು ಬೇರ್ಪಡಿಸಿದೆ ಎನಿಸಿತು. ಮತ್ತೆೆ ಅವಳ ಕಣ್ಣಲ್ಲಿ ನೋಡಿದಾಗ ಬೇರ್ಪಡಿಸುವಿಕೆಗೆ ಪ್ರೀತಿ, ಗೌರವ, ಹೊಂದಾಣಿಕೆ, ನಂಬಿಕೆ ಎಲ್ಲವೂ ಕಾಣಿಸಿತು. ಒಮ್ಮೆೆ ಬಂದು ಹೋದ ಪ್ರೀತಿಗೂ ಹತ್ತು ಬಾರಿ ಬಂದ ನನಗೂ ಇರುವ ವ್ಯತ್ಯಾಾಸವೇನೆಂದು ಕಂಡುಕೊಂಡಿತು.

ಬೇರ್ಪಡಿಸುವಿಕೆಯಂಥ ಎಷ್ಟೋೋ ಸವಾಲುಗಳು ಜೀವನದಲ್ಲಿ ನಿಶ್ಚಿಿತ. ಅವು ಬರುತ್ತವೆ ಹೋಗುತ್ತವೆ. ಆದರೆ ಕೊನೆಗೆ ಉಳಿಯುವುದು ಪ್ರೀತಿಯೊಂದೇ. ಅದು ಮಾತ್ರ ಶಾಶ್ವತವಾಗಿರುತ್ತದೆ. ಜೀವ ಹೋದ ನಂತರವೂ. ಸಮಯ ಪ್ರೀತಿಸುವವರನ್ನು ಯಾವಾಗ ಬೇಕಾದರೂ ಬೇರ್ಪಡಿಸಬಹುದು. ಬದುಕಿರುವವರೆಗೂ ಬೇರ್ಪಡಿಕೆಯನ್ನು ಸಂಬಂಧದಿಂದ ದೂರ ಇಟ್ಟುಕೊಳ್ಳುವುದು ನಮ್ಮದೇ ಜವಾಬ್ದಾಾರಿ. ಇರುವವರೆಗೂ ಪ್ರೀತಿಯಿಂದ ಬಾಳಬೇಕಾದ್ದು ಮಾತ್ರ ನಮ್ಮ ಆಯ್ಕೆೆಯಾಗಿರಲಿ
**
ಸಂತರೊಬ್ಬರು ಪರ್ಯಟನೆ ಮಾಡುತ್ತಾಾ ನಗರಕ್ಕೆೆ ಆಗಮಿಸಿದ್ದರು. ಅವರ ಕಾಯಕ, ಬೋಧನೆಗಳು ಅಪಾರ ಭಕ್ತವರ್ಗವನ್ನು ಸಂಪಾದಿಸಿತ್ತು. ತಮ್ಮತಮ್ಮ ಕಷ್ಟ, ನೋವು, ಅನುಮಾನ, ದುಃಖ ಹೇಳಿಕೊಳ್ಳಲು ಪ್ರತಿದಿನವೂ ಹಲವಾರು ಮಂದಿ ಬರುತ್ತಿಿದ್ದರು. ಅವರೆಲ್ಲರಿಗೂ ಸಮಾಧಾನದಿಂದಲೇ ಸಂತರು ಉತ್ತರಿಸುತ್ತಿಿದ್ದರು. ಸಂತರನ್ನು ಭೇಟಿಯಾಗಲು ನಗರದ ಧನಿಕರೊಬ್ಬರು ಬರುತ್ತಾಾರೆ. ಎಲ್ಲರಂತೆಯೇ ಅವರನ್ನೂ ಸಂತರು ನಡೆಸಿಕೊಳ್ಳುತ್ತಾಾರೆ. ಸಂತರ ಮಾತು, ವಿಷಯ ಜ್ಞಾಾನ ಕಂಡು ಧನಿಕನಿಗೂ ಅಪಾರ ಸಂತೋಷವಾಗುತ್ತದೆ. ಇನ್ನೇನು ಎದ್ದು ಹೊರಡುವಾಗ ಆ ಧನಿಕ ಸಂತರಲ್ಲಿ‘ ನಾನು ನಿಮಗೆ ಸಾವಿರ ಚಿನ್ನದ ನಾಣ್ಯಗಳನ್ನು ಕೊಡಬೇಕೆಂದಿದ್ದೇನೆ. ಈ ಊರಿನಲ್ಲೇ ನಾನೇ ಧನಿಕ. ಆದ್ದರಿಂದ ಆ ನನ್ನ ಹೆಮ್ಮೆೆಗೆ ತಕ್ಕಂತೆ ನಿಮಗೆ ದೇಣಿಗೆ ನೀಡುತ್ತೇನೆ ಎನ್ನುತ್ತಾಾರೆ. ಅದನ್ನು ಕೇಳಿದ ಸಂತರು ‘ಸರಿ, ಚಿನ್ನದ ನಾಣ್ಯದ ಚೀಲ ನೀಡಬಹುದು’ ಎನ್ನುತ್ತಾಾರೆ. ಚೀಲ ಕೊಟ್ಟು ಹೊರಟು ನಿಂತ ಧನಿಕನನ್ನು ಸಂತರು ತಡೆದು, ನೀವೇನೂ ಭಾವಿಸದಿದ್ದರೆ ನಾನು ನಿಮಗೆ ಕೆಲ ಪ್ರಶ್ನೆೆ ಕೇಳುತ್ತೇನೆ ಎಂದರು. ಅದಕ್ಕೆೆ ಧನಿಕರು ಹೂಗುಟ್ಟಿಿದ್ದರು.

ನೀವಿಗ ನನಗೆ ಸಾವಿರ ಚಿನ್ನದ ನಾಣ್ಯ ಕೊಟ್ಟಿಿರಲ್ಲಾಾ? ನಿಮ್ಮ ಬಳಿ ಅಷ್ಟೊೊಂದು ಸಂಪತ್ತು ಇದೆಯೇ? ಈಗ ನೀವು ಹಣ ಕೊಟ್ಟರೆ ನಿಮ್ಮ ಸಂಪತ್ತು ಕಡಿಮೆಯಾಗುವುದಿಲ್ಲವೇ ಎಂದು ಸಂತರು ಪ್ರಶ್ನಿಿಸುತ್ತಾಾರೆ. ಇದಕ್ಕುತ್ತರಿಸಿದ ಧನಿಕರು, ಸಂತರೇ, ನನ್ನ ಬಳಿ ಅಪಾರ ಸಂಪತ್ತು ಇದೆ. ನಾನು ನಿಮಗೆ ಹಣ ಕೊಟ್ಟಿಿದ್ದರಿಂದ ನನ್ನ ಸಂಪತ್ತು ಕಡಿಮೆಯಾಗುವುದು ನಿಜ. ಆದರೆ ನನ್ನ ಗೌರವಕ್ಕಾಾದರೂ ನಾನು ನಿಮಗೆ ಹಣ ಕೊಡಲೇ ಬೇಕು. ಕೊಟ್ಟ ನಂತರ ನನ್ನ ಸಂಪತ್ತು ವೃದ್ಧಿಿಯಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ. ಹಣ ಕಡಿಮೆಯಾದ ಬಗ್ಗೆೆ ಎಲ್ಲೋೋ ಎಂದಷ್ಟು ಬೇಸರ ಇರುವುದಂತೂ ನಿಜ ಎನ್ನುತ್ತಾಾರೆ.

ಆಗ ಸಂತರು, ಧನಿಕರೇ ನಿಮ್ಮ ಪ್ರಾಾರ್ಥನೆ ಖಂಡಿತ ದೇವರಿಗೆ ತಲುಪಿದೆ. ನಿಮ್ಮ ಕಡಿಮೆಯಾದ ಸಂಪತ್ತನ್ನು ದೇವರು ಮತ್ತೆೆ ನೀಡುತ್ತಿಿದ್ದಾಾನೆ. ನೀವು ನನಗೆ ಕೊಟ್ಟ ಚಿನ್ನದ ನಾಣ್ಯಗಳ ಚೀಲವನ್ನು ನಿಮಗೆ ಹಿಂದಿರುಗಿಸಿಕೊಳ್ಳುತ್ತಿಿದ್ದೇನೆ. ದಯಮಾಡಿ ಸ್ವೀಕರಿಸಿ ಎನ್ನುತ್ತಾಾರೆ. ಅಚ್ಚರಿಗೊಳಗಾದ ಧನಿಕರು, ಸಂತರೇ ನೀವು ಭಕ್ತರು ಕೊಡುವ ಹಣದಿಂದ ಬದುಕುವವರು, ನೀವೇ ಹಣ ಬೇಡವೆನ್ನುತ್ತಿಿದ್ದೀರಲ್ಲ? ನಿಮಗೆ ಹಣ ಏಕೆ ಬೇಡ ಎಂದು ಪ್ರಶ್ನಿಿಸುತ್ತಾಾರೆ. ನಸುನಕ್ಕ ಸಂತರು, ಧನಿಕರೇ ನನಗೆ ಹಣದ ಬಗ್ಗೆೆ ಚಿಂತೆಯೇ ಇಲ್ಲ, ಹಾಗಾಗಿ ಸಂಪತ್ತು ಕಡಿಮೆ-ಹೆಚ್ಚು ಎಂಬ ಅಂಶ ನನ್ನನ್ನು ಬಾಧಿಸದು. ಹಾಗೆಯೇ, ಇರುವುದರಲ್ಲಿ ಸಂತೃಪ್ತ ಕಾಣುವುದೇ ಬದುಕಿನ ಮೂಲ ಆಶಯ. ಬದುಕಿಗೆ ಗುರಿ, ಕನಸುಗಳು ಇರಬೇಕೇ ಹೊರತು, ಆಸೆ, ಆಮಿಷಗಳಲ್ಲ. ಹಾಗಾಗಿ ನನಗೆ ಹಣದ ಅವಶ್ಯವಿಲ್ಲ. ನೀವು ಹಣ ಕೊಟ್ಟಾಾಗಲೂ ನಾನೂ ಹಿಗ್ಗಲಿಲ್ಲ. ನಿಮಗೆ ಅದನ್ನು ಹಿಂದುರಿಗಿಸುವಾಗಲೂ ಸಂಕಟವಾಗುತ್ತಿಿಲ್ಲ ಎನ್ನುತ್ತಾಾರೆ. ಧನಿಕ ಮೌನಕ್ಕೆೆ ಶರಣಾಗುತ್ತಾಾನೆ!

***
ಒಬ್ಬ ವ್ಯಕ್ತಿಿ ಮಾತನಾಡುವ ಗಿಳಿಯನ್ನು ಸಾಕುತ್ತಿಿದ್ದ. ತುಂಬಾ ಪ್ರೀತಿಯಿಂದ ಸಾಕುತ್ತಿಿದ್ದ. ಆದರೆ ಪಂಜರದಲ್ಲಿಟ್ಟು ಸಾಕುತ್ತಿಿದ್ದರಿಂದ ಗಿಳಿ ಖುಷಿಯಾಗಿರಲಿಲ್ಲ. ಆ ವ್ಯಕ್ತಿಿ ಪ್ರತಿದಿನವೂ ಸತ್ಸಂಗಕ್ಕೆೆ ಹೋಗುತ್ತಿಿದ್ದ. ಪ್ರವಚನ ಕೇಳಿ ತಾನೇನನ್ನೋೋ ಕಲಿತಿದ್ದೇನೆ ಎಂದು ಖುಷಿಯಿಂದ ಮನೆಗೆ ಬರುತ್ತಿಿದ್ದ. ಒಂದು ದಿನ ಗಿಳಿ ‘ನನಗೆ ಯಾವಾಗ ಇಲ್ಲಿಂದ ಮುಕ್ತಿಿ, ಸ್ವಾಾತಂತ್ರ್ಯ ಸಿಗುತ್ತದೆ ಎಂದು ನಿಮ್ಮ ಗುರುವನ್ನು ಕೇಳಿ’ ಎಂದಿತು. ಅದಕ್ಕೆೆ ಈತ ಒಪ್ಪಿಿದ. ಅಂತೆಯೇ ಗುರುಗಳ ಬಳಿ ತನ್ನ ಗಿಳಿ ಈ ರೀತಿ ಪ್ರಶ್ನೆೆ ಕೇಳಿತು ಎಂದು ಹೇಳಿದಾಗ ಗುರುಗಳು ಪ್ರಜ್ಞೆೆ ತಪ್ಪಿಿದರು.

ಮನೆಗೆ ಬಂದು ತನ್ನ ಗಿಳಿಯ ಬಳಿ ‘ಗುರುಗಳಿಗೆ ನಿನ್ನ ಪ್ರಶ್ನೆೆಯನ್ನು ಕೇಳಿದೆ. ಆದರೆ ಅವರು ಪ್ರಜ್ಞೆೆ ತಪ್ಪಿಿ ಬಿದ್ದರು. ಇನ್ನೊೊಮ್ಮೆೆ ಕೇಳುತ್ತೇನೆ’ ಎಂದು ಹೇಳಿದ. ಗಿಳಿ ನನಗೆ ಅರ್ಥವಾಗುತ್ತದೆ ಎಂದು ಸುಮ್ಮನಾಯಿತು.
ಮಾರನೆ ದಿನ ಪಂಜರದಲ್ಲಿದ್ದ ಗಿಳಿ ಪ್ರಜ್ಞೆೆ ತಪ್ಪಿಿತ್ತು. ನೀರು ಹಾಕಿದರೂ ಎಚ್ಚರ ಆಗಲಿಲ್ಲ. ಪಂಜರದಿಂದ ಹೊರತೆಗೆದು ಅದಕ್ಕೇನಾಗಿದೆ ಎಂದು ವ್ಯಕ್ತಿಿ ನೋಡಿದ. ಕೆಲವೇ ಕ್ಷಣಗಳಲ್ಲಿ ಗಿಳಿ ಹಾರಿಹೋಯಿತು. ಗುರುಗಳಿಗೆ ಧನ್ಯವಾದ ತಿಳಿಸು ಎಂದು ಹೇಳಿಹೋಯಿತು. ಈತನಿಗೆ ಈಗ ಎಲ್ಲ ಅರ್ಥವಾಯಿತು. ಗುರುಗಳ ಬಳಿ ಬಂದು ನಡೆದಿದ್ದನ್ನೆೆಲ್ಲ ವಿವರಿಸಿದ. ಅದಕ್ಕೆೆ ಗುರುಗಳು ಪ್ರತಿವಾರ ಸತ್ಸಂಗಕ್ಕೆೆ ಬರುವುದರಿಂದ ಏನು ಪ್ರಯೋಜನವಿಲ್ಲ. ಅರ್ಥ ಮಾಡಿಕೊಳ್ಳುವ ಬುದ್ಧಿಿ ಇಲ್ಲದಿದ್ದರೆ ಸತ್ಸಂಗಕ್ಕೆೆ ಬಂದು ಪ್ರಯೋಜನವಾದರೂ ಏನು? ನಿನಗಿಂತ ಆ ಗಿಳಿಯೇ ವಾಸಿ ನನ್ನ ನಡೆಯನ್ನು ಅರ್ಥೈಸಿಕೊಂಡಿದೆ ಎಂದರು.

ಎಷ್ಟೋೋ ಬಾರಿ ನಾವು ಪ್ರವಚನ, ಸತ್ಸಂಗ ಎಂದೆಲ್ಲ ಹೋಗುತ್ತೇವೆ. ಅಲ್ಲಿ ಹೇಳಿದ್ದನ್ನು ಅಚ್ಚುಕಟ್ಟಾಾಗಿ ಕೇಳಿಕೊಳ್ಳುತ್ತೇವೆ. ಆದರೆ ಬದುಕಿನಲ್ಲಿ ಅಳವಡಿಸಿಕೊಳ್ಳುವುದಿಲ್ಲ. ವಿಚಾರಗಳನ್ನು ಅಲ್ಲಿಯೇ ಕೇಳಿ ಬಿಟ್ಟು ಬರುತ್ತೇವೆ. ಇನ್ನೂ ಕೆಲವೊಮ್ಮೆೆ ಒಳ್ಳೆೆಯ ಪುಸ್ತಕಗಳನ್ನು ಓದುತ್ತೇವೆ. ಖುಷಿ ಪಡುತ್ತೇವೆ. ಆದರೆ, ಅಳವಡಿಸಿಕೊಳ್ಳುವುದಿಲ್ಲ. ಆದರೆ ಒಬ್ಬ ವ್ಯಕ್ತಿಿ ಬೆಳೆಯಬೇಕೆಂದರೆ ಆತ ಒಳ್ಳೆೆಯ ವಿಷಯಗಳನ್ನು ಮಾತುಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮುಂದುವರಿಯಬೇಕು.
**
ಪುಟ್ಟಿಿಯನ್ನು ಕಂಡರೆ ತರಗತಿಯಲ್ಲಿ ಎಲ್ಲರಿಗೂ ಇಷ್ಟ. ಅವಳನ್ನು ಪ್ರತಿಯೊಬ್ಬರೂ ಕರೆದು ಮಾತನಾಡಿಸುತ್ತಿಿದ್ದರು. ನನ್ನ ಪಕ್ಕ ಕುಳಿತುಕೋ ಎನ್ನುತ್ತಿಿದ್ದರು. ಇಡೀ ತರಗತಿಯಲ್ಲಿ ಆಕೆಯನ್ನು ಇಷ್ಟಪಡದವರು ಯಾರೂ ಇಲ್ಲ. ಆಕೆ ನನ್ನ ಸುತ್ತ ಮುತ್ತ ತುಂಬ ಸ್ನೇಹಿತರಿದ್ದಾಾರೆ ಎಂದು ಯಾವಾಗಲೂ ಬೀಗುತ್ತಿಿದ್ದಳು. ಸ್ನೇಹಿತರ ದಿನ ಹತ್ತಿಿರ ಬಂತು. ತರಗತಿಯಲ್ಲಿ ಆಟವೊಂದನ್ನು ಏರ್ಪಡಿಸಲಾಗಿತ್ತು. ಎಲ್ಲರೂ ತಮ್ಮ ಮೂರು ಬೆಸ್‌ಟ್‌ ಫ್ರೆೆಂಡ್‌ಗಳಿಗೆ ಚಾಕಲೇಟ್ ನೀಡಿ ಎಂದು ಹೇಳಿದರು. ಪುಟ್ಟಿಿಗೆ ಅತಿಯಾದ ಸಂತೋಷ ಪ್ರತಿಯೊಬ್ಬರೂ ತನಗೆ ಚಾಕಲೇಟ್ ನೀಡುತ್ತಾಾರೆ ಎಂಬ ಉತ್ಸಾಾಹದಲ್ಲಿ ಕುಳಿತಿದ್ದಳು.

ಬೆಸ್‌ಟ್‌ ಫ್ರೆೆಂಡ್ ಎಂದಾಗ ಎಲ್ಲರೂ ತಮ್ಮ ಬೆಸ್‌ಟ್‌ ಫ್ರೆೆಂಡ್‌ಗಳಿಗೆ ಚಾಕಲೇಟ್ ನೀಡಿದರು. ಇಡೀ ತರಗತಿಯಲ್ಲಿ ಪುಟ್ಟಿಿಯ ಬಳಿ ಮಾತ್ರ ಚಾಕಲೇಟ್ ಇರಲಿಲ್ಲ. ಪುಟ್ಟಿಿಗೆ ಅತೀವ ದುಃಖವಾಯಿತು. ಇಡೀ ತರಗತಿಗೇ ನಾನು ಸ್ನೇಹಿತೆಯಾದೆ, ಎಲ್ಲರನ್ನೂ ಇಷ್ಟಪಟ್ಟು ಮಾತನಾಡಿಸಿದೆ. ಆದರೆ ಯಾರೂ ನನ್ನನ್ನು ಬೆಸ್‌ಟ್‌ ಫ್ರೆೆಂಡ್ ಎಂದು ಅಂದುಕೊಂಡಿಲ್ಲ ಎಂದು ಅಮ್ಮನ ಬಳಿ ಹೇಳಿ ಜೋರಾಗಿ ಅತ್ತಳು.
ಅಮ್ಮ ಸಮಾಧಾನದಿಂದ ಒಂದೇ ಸಮಯದಲ್ಲಿ ಒಬ್ಬರು ಎಲ್ಲರಿಗೂ ಬೆಸ್‌ಟ್‌ ಫ್ರೆೆಂಡ್ ಆಗಲು ಸಾಧ್ಯವಿಲ್ಲ. ಒಳ್ಳೆೆಯ ಸ್ನೇಹಿತರಾಗಲು ಸಮಯ ಬೇಕಾಗುತ್ತದೆ. ಅವರ ಸುಖ ದುಃಖದಲ್ಲಿ ಭಾಗಿಯಾಗಬೇಕಾಗುತ್ತದೆ. ಎಲ್ಲರಿಗೂ ಸ್ನೇಹಿತೆಯಾದೆ ಎಂದುಕೊಂಡ ಮಾತ್ರಕ್ಕೆೆ ಎಲ್ಲರೂ ನಿನ್ನ ಸ್ನೇಹಿತರಾಗುವುದಿಲ್ಲವಲ್ಲ ಎಂದು ಹೇಳಿದ ಮೇಲೆ ಪುಟ್ಟಿಿಗೆ ಸ್ವಲ್ಪ ಸಮಾಧಾನವಾಯ್ತು.

ಸ್ನೇಹಿತರನ್ನು ಮಾಡಿಕೊಳ್ಳುವುದು ಸುಲಭ ಅದರಲ್ಲೂ ಎಲ್ಲರನ್ನೂ ಸ್ನೇಹಿತರನ್ನಾಾಗಿ ಮಾಡಿಕೊಳ್ಳುವುದು ಇನ್ನೂ ಸುಲಭ. ನಿಮ್ಮ ಸುತ್ತ ನಿಮ್ಮ ಸ್ನೇಹಿತರೇ ತುಂಬಿದ್ದರೆ ಸಕಾರಾತ್ಮಕ ಶಕ್ತಿಿ ನಿಮ್ಮ ಸುತ್ತಲಿರುತ್ತದೆ. ಆದರೆ, ನಿಜವಾದ ಸ್ನೇಹಿತರು ಎಲ್ಲೋೋ ಕೆಲವೊಬ್ಬರು. ಪ್ರತಿಯೊಬ್ಬರೂ ನಿಮ್ಮ ನಿಜವಾದ ಸ್ನೇಹಿತನಾಗಲಾರ. ಒಂದು ನಗುವಿನಿಂದ, ಮುದ್ದಾಾದ ಮಾತಿನಿಂದ ಸ್ನೇಹ ಆರಂಭವಾಗಬಹುದಷ್ಟೆೆ. ಆದರೆ ಬಹುಕಾಲ ಉಳಿಯುವುದಿಲ್ಲ.
***
ಆ ಊರಿನಲ್ಲಿ ಒಬ್ಬ ಶ್ರೀಮಂತನಿದ್ದ. ಅವನು ಪ್ರತಿದಿನ ಅಂಗಡಿಯೊಂದಕ್ಕೆೆ ಹೋಗುತ್ತಿಿದ್ದ. ಮನೆ ಪಕ್ಕದಲ್ಲಿಯೇ ಇದ್ದ ಅಂಗಡಿಯವನ ಪರಿಚಯವಾಯಿತು. ಪರಿಚಯ ಸ್ನೇಹವೂ ಆಯಿತು. ಒಂದು ದಿನ ಶ್ರೀಮಂತ ಊರಿಗೆ ಹೋಗಬೇಕಾದ ತುರ್ತು ಪರಿಸ್ಥಿಿತಿ ಬಂತು. ಹೋದರೆ 15 ದಿನ ಬರಲಾಗುವುದಿಲ್ಲ. ಒಡವೆ, ಹಣವನ್ನು ಒಯ್ಯಲೂ ಆಗುವುದಿಲ್ಲ ಹಾಗಾಗಿ ಮನೆಯಲ್ಲಿ ನಂಬಿಕಸ್ಥನೊಬ್ಬನನ್ನು ಬಿಟ್ಟು ಹೋದರೆ ಒಳಿತೆಂದು ಯೋಚಿಸಿದ. ಅಂಥವರು ಯಾರು ಎಂದು ಯೋಚಿಸುವಾಗ ಅಂಗಡಿ ಮಾಲೀಕ ನೆನಪಿಗೆ ಬಂದ. ಇದೇ ನೆಪದಲ್ಲಿ ಅವನ ಸ್ನೇಹವನ್ನೂ ಪರೀಕ್ಷಿಿಸಿದಂತಾಗುತ್ತದೆ ಎಂದು ತನ್ನ ಪರಿಸ್ಥಿಿತಿ ವಿವರಿಸಿದ.

ಸ್ನೇಹಿತ ಒಪ್ಪಿಿಕೊಂಡ. 15 ದಿನಗಳೂ ಕಳೆದವು. ಮತ್ತೆೆ ಆತ ಮರಳಿ ಬಂದಾಗ ಅಂಗಡಿ ಮಾಲೀಕನಿಗೆ ತುಂಬಾ ಕೋಪ ಬಂದಿತ್ತು. ಜೋರು ಧ್ವನಿಯಲ್ಲಿ ‘ಲಾಕರ್ ತುಂಬಾ ಕಲ್ಲು ತುಂಬಿಸಿ ಅದನ್ನು ಕಾಯಲು ಹೇಳಿ ಹೋದೆಯಾ?’ ಎಂದ. ಅದಕ್ಕೆೆ ಆತ ಸುಮ್ಮನಿದ್ದ. ಮಾಲೀಕ ಮುಂದುವರಿದು, ‘ಇಷ್ಟೇನೇ ನಿನ್ನ ಸ್ನೇಹ? ನನ್ನ ಮೇಲೆ ನಂಬಿಕೆಯೇ ಇಲ್ಲ’ ಎಂದು ಕೂಗಿದ.
ಶ್ರೀಮಂತ ‘ನಂಬಿಕೆ ಬಗ್ಗೆೆ ನೀನು ಮಾತನಾಡಲೇಬೇಡ, ಲಾಕರ್‌ನಲ್ಲಿ ಕಲ್ಲಿದೆ ಎಂದು ನಿನಗೆ ಹೇಗೆ ಗೊತ್ತು?’ ಎಂದ.
ನಂಬಿಕೆ! ಜೀವನದ ಬಹು ಮುಖ್ಯ ಅಂಶ. ಇಬ್ಬರು ಸ್ನೇಹಿತರ ನಡುವೆ ಸ್ನೇಹ ಬಂಧವಿದೆ ಎಂದರೆ ಅವರಿಬ್ಬರ ನಡುವೆ ನಂಬಿಕೆ ಇದೆ ಎಂದರ್ಥ. ಎಲ್ಲಿ ನಂಬಿಕೆಯಿಲ್ಲವೋ ಅಲ್ಲಿ ನಿಲ್ಲಬೇಡಿ. ಸ್ನೇಹ ಎಂದಂತೂ ಖಂಡಿತ ಅಂದುಕೊಳ್ಳಬೇಡಿ.
**
ಎಲ್ಲಾಾ ಕಡೆಗಳಲ್ಲೂ ಸಮಸ್ಯೆೆಗಳು ಇದ್ದೇ ಇರುತ್ತದೆ. ಹಾಗಂತ ಎಲ್ಲವನ್ನೂ ಧಿಕ್ಕರಿಸಿ ಒಬ್ಬನೇ ಇರುತ್ತೇನೆ ಎಂದು ಭಾವಿಸಿದರೆ, ಅದು ಕೇವಲ ಮೂರ್ಖತನವೇ ಹೊರತು ಬೇರೆ ಏನೂ ಅಲ್ಲ. ಒಂದು ಕಥೆಯೊಂದಿಗೆ ಅದರ ನಿದರ್ಶನವನ್ನು ನೋಡಬಹುದು.
ಹಿಮಾಲಯದಲ್ಲಿನ ಕಂಗೆಡಿಸುವ ಚಳಿಗೆ ಅಲ್ಲಿದ್ದ ಕರಡಿಗಳೆಲ್ಲವೂ ತತ್ತರಿಸಿದ್ದವು. ಚಳಿ ತಡೆಯಲಾಗದೇ ಸಾಯುವ ಪರಿಸ್ಥಿಿತಿಗೆ ಬಂದವು. ಹೀಗಿರುವಾಗ ಒಂದು ದಿನ ಅಲ್ಲಿನ ಕರಡಿಗಳೆಲ್ಲವೂ ಸೇರಿ ಒಂದು ಸಭೆ ನಡೆಸಿದವು. ಎಲ್ಲವೂ ಒಂದಕ್ಕೊೊಂದು ಅಂಟಿಕೊಂಡಂತೆ ಕೂತಿರುವುದರಿಂದ ಪರಸ್ಪರ ಮೈ ಬಿಸಿ ಪಡೆದು ಬೆಚ್ಚಗಿದ್ದವು. ಹೀಗಾಗಿ ಎಲ್ಲವೂ ಒಟ್ಟಿಿಗೇ ಜೀವನ ಪರ್ಯಂತ ಇರುವುದಾಗಿ ಅಲ್ಲಿನ ಹಿರಿಯ ಕರಡಿ ನಿರ್ಧಾರಕ್ಕೆೆ ಬಂತು. ಅದರ ಈ ನಿರ್ಧಾರಕ್ಕೆೆ ಎಲ್ಲಾಾ ಸಮ್ಮತಿಸಿದವು. ಇದೇ ರೀತಿ ದಿನಗಳು ಸಾಗಿದವು. ಈ ಸಮಯಕ್ಕೆೆ ಗುಂಪಿನಲ್ಲಿದ್ದ ಒಂದು ಕರಡಿಗೆ ಇಲ್ಲಿ ನಡೆಯುತ್ತಿಿರುವುದು ಸರಿಯಲ್ಲ ಎಂದೆನಿಸಿತು. ಆದ್ದರಿಂದ ಎಲ್ಲರನ್ನೂ ಬಿಟ್ಟು ಒಂಟಿಯಾಗಿರುವುದಾಗಿ ನಿರ್ಧರಿಸಿ ಅಲ್ಲಿಂದ ಹೊರಡಲು ಅಣಿಯಾಯಿತು.

ಅದು ತೆಗೆದುಕೊಂಡ ನಿರ್ಧಾರ ಸರಿಯಲ್ಲವೆಂದೂ, ಅದನ್ನು ಬದಲಾಯಿಸಬೇಕೆಂದು ಕರಡಿಗಳೆಲ್ಲಾಾ ವಿನಂತಿಸಿಕೊಂಡವು. ಆದರೆ ಅದು ಮಾತ್ರ ತನ್ನ ಹಠಕ್ಕೇ ಅಂಟಿಕೊಂಡಿತ್ತು. ಅಹಂಕಾರದಿಂದ ಗುಂಪಿನಿಂದ ಹೊರಟ ಕರಡಿ ಒಂಟಿಯಾಯಿತು. ಚಳಿಯಿಂದ ನಡುಗಿತು. ಚಳಿ ಕಮ್ಮಿಿ ಮಾಡಲು ಹಲವಾರು ದಾರಿಗಳನ್ನು ಅನುಸರಿಸಿತು. ಯಾವುದೂ ಅದಕ್ಕೆೆ ಆಯಾವ ಕೊಟ್ಟಿಿಲ್ಲ. ಇದರ ಅವಸ್ಥೆೆ ನೋಡಲು ಸಾಧ್ಯವಾಗದೇ ಉಳಿದ ಕರಡಿಗಳು ಮತ್ತೆೆ ಗುಂಪಿಗೆ ಬಂದು ಸೇರುವಂತೆ ಪರಿ-ಪರಿಯಾಗಿ ಕೇಳಿಕೊಂಡವು. ಆದರೆ ಆ ಕರಡಿ ಮಾತ್ರ ತನ್ನ ಅಹಂಕಾರ ಬಿಡದೇ ಅಲ್ಲೇ ಉಳಿದುಕೊಂಡಿತು. ನಂತರ ಚಳಿ ಸಹಿಸಲು ಯಾವುದೇ ದಾರಿ ಕಾಣದ ಆ ಕರಡಿ ಚಳಿಯಲ್ಲೇ ಸತ್ತು ಹೋಯಿತು.

ನಮ್ಮ ಬದುಕಲ್ಲೂ ಅಷ್ಟೆೆ. ಜೀವನ ನಮ್ಮೆೆದುರಿಗೆ ಎರಡು ದಾರಿಗಳನ್ನು ತಂದಿಡುತ್ತದೆ. ಒಂದೋ ಕೆಲವೊಂದು ಕಷ್ಟಗಳನ್ನು ಸಹಿಸಿಕೊಂಡು, ನಮ್ಮವರ ಆಧಾರದೊಂದಿಗೆ ನೆಮ್ಮದಿಯಾಗಿರಬಹುದು. ಇನ್ನೊೊಂದು, ಯಾರೂ ಬೇಡವೆಂದು ಎಲ್ಲರಿಂದ ದೂರವಾಗಿ, ಒಂಟಿತನದಿಂದ ನೊಂದು, ಒಬ್ಬಂಟಿಯಾಗಿಯೇ ಸಾಯಬೇಕು. ಆಯ್ಕೆೆ ನಮ್ಮ ಕೈಯಲ್ಲಿರುವಾಗ ಬುದ್ಧಿಿವಂತಿಕೆಯ ನಿರ್ಧಾರ ತೆಗೆದುಕೊಳ್ಳುವುದೇ ಮನುಷ್ಯ ಧರ್ಮ.
***

Leave a Reply

Your email address will not be published. Required fields are marked *