Monday, 9th December 2019

ಭರ್ತಿನಂಚಿಗೆ ಜೀವನಾಡಿ ಕನ್ನಂಬಾಡಿ

ನೂರಡಿ ದಾಟಿದ ನಂತರ ಒಂದೇ ದಿನದಲ್ಲಿ 13 ಅಡಿ ದಾಖಲೆಯ ಏರಿಕೆ

ಸಕ್ಕರೆ ನಾಡಿನ ಜೀವನಾಡಿ ಭರ್ತಿಯಂಚಿಗೆ ತಲುಪಿದೆ. 24 ತಾಸಿನಲ್ಲಿ ಜಲಾಶಯದ ನೀರಿನ ಮಟ್ಟ 13 ಅಡಿ ಏರಿಕೆಯಾಗಿದೆ. ನೂರಡಿ ದಾಟಿದ ನಂತರ ಇಷ್ಟು ಬೇಗನೆ ನೀರಿನ ಮಟ್ಟ ಹೆಚ್ಚಳವಾಗಿರುವುದು ನಾಲ್ಕು ದಶಕದಲ್ಲಿ ಇದು ದಾಖಲೆಯಾಗಿದ್ದು, ನೀರಿನ ಒಳ ಹರಿವಿನ ಪ್ರಮಾಣ ಈಗಿರುವಂತೆಯೇ ಮುಂದುವರಿದಲ್ಲಿ ಭಾನುವಾರ ರಾತ್ರಿಿ ವೇಳೆಗೆ ಜಲಾಶಯ ತುಂಬಿ ತುಳುಕಲಿದೆ.
ಗರಿಷ್ಠ 124.80 ಅಡಿ ಎತ್ತರದ ಜಲಾಶಯದಲ್ಲಿ ಶನಿವಾರ ಸಂಜೆ ವೇಳೆಗೆ ನೀರು ಶೇಖರಣಾ ಮಟ್ಟ 115 ಅಡಿಗೆ ಏರಿದೆ. ಜಲಾಶಯಕ್ಕೆೆ ಕ್ಯೂಸೆಕ್ ನೀರು ಹರಿದು ಬರುತ್ತಿಿದ್ದು, ನದಿ ಮೂಲಕ ತಮಿಳುನಾಡಿಗೆ 59 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಜಲಾಶಯದ ಒಟ್ಟು ನೀರು ಶೇಖರಣಾ ಸಾಮರ್ಥ್ಯ 49.45 ಟಿಎಂಸಿ ಆಗಿದೆ. ಪ್ರಸ್ತುತ ಶೇಖರಣೆಯಾಗಿರುವ ನೀರು 37.054 ಟಿಎಂಸಿ ಆಗಿದೆ.

ಶುಕ್ರವಾರ ಸಂಜೆ 6ಕ್ಕೆೆ ದಾಖಲಾದಂತೆ ಜಲಾಶಯಕ್ಕೆೆ ಒಳ ಹರಿವು 73,284 ಸಾವಿರ ಕ್ಯೂಸೆಕ್ ಆಗಿತ್ತು. ನೀರಿನ ಮಟ್ಟ 102 ಅಡಿಗೆ ಏರಿತು. ಶನಿವಾರ ಬೆಳಗ್ಗೆೆ 6ಕ್ಕೆೆ 1,08.555 ಕ್ಯೂಸೆಕ್ ನೀರಿನ ಹರಿವಿದ್ದು, ಶೇಖರಣಾ ಮಟ್ಟ 108.50 ಅಡಿಗೆ ತಲುಪಿತು. ಸಂಜೆ ವೇಳೆಗೆ ನೀರಿನ ಒಳ ಹರಿವು ಮತ್ತಷ್ಟು ಹೆಚ್ಚಳವಾಯಿತು. ಮಧ್ಯಾಾಹ್ನದ ವೇಳೆಗೆಲ್ಲಾಾ ನದಿಗೆ ನೀರು ಬಿಡುಗಡೆ ಮಾಡಿದ್ದು, ನಾಲೆಗಳಿಗೆ ನೀರು ಹರಿಸದಿರುವುದು ರೈತರ ಆಕ್ರೋೋಶಕ್ಕೆೆ ಗುರಿಯಾಗಿದೆ.
ಕಳೆದ ವರ್ಷ ಜುಲೈ ಎರಡನೇ ವಾರವೇ ಜಲಾಶಯ ಭರ್ತಿಗೊಂಡು, 38 ವರ್ಷಗಳ ದಾಖಲೆಯನ್ನು ಅಳಿಸಿತ್ತು. ಈ ವರ್ಷ ಜು.15ರ ವೇಳೆಗೆ 91 ಅಡಿಯಷ್ಟಿಿದ್ದ ನೀರಿನ ಮಟ್ಟ ತಮಿಳುನಾಡಿಗೆ ನೀರು ಬಿಡುಗಡೆ ಪರಿಣಾಮ 83 ಕುಸಿದಿತ್ತು. ಕೊಡಗಿನಲ್ಲಿ ಮಳೆ ಮುಂದುವರಿದಿದೆ. ಹೇಮಾವತಿ, ಹಾರಂಗಿ ಜತೆಗೆ ಲಕ್ಷ್ಮಣತೀರ್ಥ ನದಿಯಿಂದಲೂ ಅಧಿಕ ಪ್ರಮಾಣದ ನೀರು ಹರಿದು ಬರುತ್ತಿಿರುವುದರಿಂದ ಕನ್ನಂಬಾಡಿ ಭರ್ತಿ ಖಚಿತವಾಗಿದೆ.


ದೂರಾದ ಆತಂಕ:
ಜು.4ರಂದು ಕನ್ನಂಬಾಡಿ ಜಲಾಶಯದ ನೀರು ಶೇಖರಣಾ ಮಟ್ಟ 83 ಅಡಿಗೆ ಕುಸಿದಿದ್ದಾಾಗ ಅಚ್ಚುಕಟ್ಟು ಪ್ರದೇಶದ ರೈತರು ಆತಂಕಗೊಂಡಿದ್ದರು. ಕೊಡಗಿನಲ್ಲಿ ಮಳೆಯ ರೌದ್ರಾಾವತಾರದಿಂದ ಸಾಕಷ್ಟು ಅವಾಂತರವಾಗಿದ್ದು, ಅಲ್ಲಿನ ಜನತೆಯ ಬದುಕು ನಲುಗಿದೆ. ಆದರೆ, ಕಾವೇರಿ ಮೈದುಂಬಿ ಹರಿದು ಬರುತ್ತಿಿರುವ ಪರಿಣಾಮ ಕನ್ನಂಬಾಡಿ ಭರ್ತಿಯಂಚಿಗೆ ಆಶ್ರಿಿತ ಜಿಲ್ಲೆೆಗಳ ರೈತರ ಆತಂಕ ದೂರವಾಗಿಸಿದೆ.

ಜಿಲ್ಲಾಾಧಿಕಾರಿ ಭೇಟಿ:
ಕನ್ನಂಬಾಡಿ ಜಲಾಶಯಕ್ಕೆೆ ಹೇಮಾವತಿಯಿಂದ 70 ಸಾವಿರ ಕ್ಯೂಸೆಕ್‌ಗಿಂತಲೂ ಅಧಿಕ ಪ್ರಮಾಣದ ನೀರು ಹರಿದು ಬರುತ್ತಿಿದೆ. ಕೆ.ಆರ್.ಪೇಟೆ ತಾಲೂಕಿನ ನದಿ ಪಾತ್ರದಲ್ಲಿನ ಪ್ರವಾಹ ಪರಿಸ್ಥಿಿತಿಯನ್ನು ಜಿಲ್ಲಾಾಧಿಕಾರಿ ಡಾ. ಎಂ.ವಿ.ವೆಂಕಟೇಶ್ ಅವರು ಶನಿವಾರ ಪರಿಶೀಲನೆ ಮಾಡಿದ್ದು, ತರುವಾಯ ಕನ್ನಂಬಾಡಿ ಅಣೆಕಟ್ಟೆೆಗೆ ಭೇಟಿ ನೀಡಿದರು. ಅಧಿಕ ಪ್ರಮಾಣದ ನೀರು ಹರಿವಿನ ಕಾರಣ ನದಿ ಪಾತ್ರದ ಜನತೆಗೆ ಮುನ್ನೆೆಚ್ಚರಿಕೆ ವಹಿಸಲು ಸೂಚನೆ ನೀಡಿದ್ದಾಾರೆ.

Leave a Reply

Your email address will not be published. Required fields are marked *