Monday, 13th July 2020

ಭವ್ಯ, ದಿವ್ಯ ದೃಶ್ಯ ಕಾವ್ಯ ಜಂಬೂ ಸವಾರಿ

* ವೈಭವದ 10 ದಿನಗಳ ದಸರಾ ಮಹೋತ್ಸವದ ಸಂಭ್ರಮಕ್ಕೆೆ ತೆರೆ
* ಐತಿಹಾಸಿಕ 409ನೇ ಮೈಸೂರು ದಸರಾದ ಜಂಬೂಸವಾರಿಗೆ ಸಾಕ್ಷಿಿಯಾದ ಲಕ್ಷಾಂತರ ಮಂದಿ
*ಮಧ್ಯಾಾಹ್ನ 2.15ರಿಂದ 2.58ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ನಂದಿಧ್ವಜಕ್ಕೆೆ ಸಿಎಂ ಯಡಿಯೂರಪ್ಪ ಪೂಜೆ
* ಅಂಬಾವಿಲಾಸ ಅರಮನೆ ಆವರಣದಲ್ಲಿ 4.31ರಿಂದ 4.57ರವರೆಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಚಿನ್ನದ ಅಂಬಾರಿಯಲ್ಲಿದ್ದ ಚಾಮುಂಡೇಶ್ವರಿದೇವಿ ಉತ್ಸವ ಮೂರ್ತಿಗೆ ಗಣ್ಯರಿಂದ ಪುಷ್ಪಾಾರ್ಚನೆ
* ಎಂಟನೇ ಬಾರಿ 750 ಕೆ.ಜಿ ತೂಕದ ಅಂಬಾರಿ ಹೊತ್ತ ಅರ್ಜುನ
* ಉತ್ಸವದಲ್ಲಿ ಗಮನಸೆಳೆದ 39 ಸ್ಥಬ್ದಚಿತ್ರಗಳು
* ರಾಷ್ಟ್ರಗೀತೆ ವೇಳೆ ಸೊಂಡಿಲೆತ್ತಿಿ ಸೆಲ್ಯೂಟ್ ಹೊಡೆದು ಗಮನ ಸೆಳೆದ ಅರ್ಜುನ ಹಾಗೂ ಕುಮ್ಕಿಿ ಆನೆಗಳಾದ ಕಾವೇರಿ, ವಿಜಯ

ಎಂಟನೇ ಬಾರಿಗೆ ಅಂಬಾರಿ ಹೊತ್ತ ಅರ್ಜುನ


ನವಶಕ್ತಿಿ ದುರ್ಗಾಮಾತೆ ಶ್ರೀ ಚಾಮುಂಡೇಶ್ವರಿದೇವಿ ಉತ್ಸವಮೂರ್ತಿ ಸೇರಿ 750ಕೆಜಿ ತೂಕದ ಚಿನ್ನದಅಂಬಾರಿಯನ್ನು ಹೊತ್ತಅರ್ಜುನ ಎಂಟನೇ ಬಾರಿಯೂ ಯಶಸ್ವಿಿಯಾದನು. ಬಲರಾಮನಿಗಿಂತಲೂಒಂದು ಕೈ ಮೇಲು ಎನ್ನುವಂತೆತನ್ನಗಾಂಭೀರ್ಯದ ನಡಿಗೆಯಿಂದಲೇ ಬನ್ನಿಿಮಂಟಪಕ್ಕೆೆ ನಿಗಧಿತ ಸಮಯದೊಳಗೆ ತಲುಪಿ ನಾಡಿನಜನರಿಂದಶಹಬ್ಬಾಾಸ್‌ಗಿರಿ ಪಡೆದುಕೊಂಡನು. ಉಳಿದಂತೆ 14ಬಾರಿ ಚಿನ್ನದಅಂಬಾರಿ ಹೊತ್ತ ಬಲರಾಮ ಮೆರವಣಿಗೆ ಸಾಗುವ ದಿಕ್ಕನ್ನುತೋರಿಸುವ ನಿಶಾನೆ ಆನೆಯಾಗಿ ಸಾಗಿದರೆ, ಕುಮ್ಕಿಿ ಆನೆಗಳಾದ ಕಾವೇರಿ ಮತ್ತು ವಿಜಯ ಸಾಗಿತು.

ಬಿಗಿ ಬಂದೋಬಸ್‌ತ್‌
ಈ ವರ್ಷ ಹಿಂದೆದಿಗಿಂತಲೂಜಂಬೂಸವಾರಿಗೆ ಹೆಚ್ಚಿಿನ ಪೊಲೀಸ್ ಬಂದೋಬಸ್‌ತ್‌ ಏರ್ಪಡಿಸಿದ್ದು ಜಂಬೂಸವಾರಿಯ ಆನೆಗೆ 80 ಕಮೊಂಡೊ ಪಡೆಯ ಭದ್ರತೆ ನೀಡಲಾಗಿತ್ತು. ಅರಮನೆಯೊಳಗೆ 3000 ಪೊಲೀಸ್ ಹಾಗೂ ಐದುಸಾವಿರಕ್ಕೂ ಹೆಚ್ಚಿಿನ ಪೊಲೀಸರನ್ನುಜಂಬೂಸವಾರಿ ಸಾಗುವ ಬನ್ನಿಿಮಂಟಪದ ವರೆಗಿನರಸ್ತೆೆಯಲ್ಲಿ ನಿಯೋಜಿಸಲಾಗಿತ್ತು.

                            ನಾಲ್ಕನೇ ಬಾರಿ ಪುಷ್ಪಾರ್ಚನೆಗೈದ ಬಿಎಸ್‌ವೈ

ಬದಲಾದ ರಾಜಕೀಯ ಪರಿಸ್ಥಿಿತಿಯಲ್ಲಿ ಸಿಎಂ ಗಾದಿಯೇರಿದ ಬಿ.ಎಸ್.ಯಡಿಯೂರಪ್ಪ ನಾಲ್ಕನೇ ಬಾರಿ ಚಿನ್ನದ ಅಂಬಾರಿಗೆ ಪುಷ್ಪಾಾರ್ಚನೆಗೈದರು.
ಧರಂಸಿಂಗ್, ಎಚ್.ಡಿ.ಕುಮಾರಸ್ವಾಾಮಿ, ಡಿ.ವಿ.ಸದಾನಂದಗೌಡ, ಜಗದೀಶ್ ಶೆಟ್ಟರ್ ಒಂದು ಬಾರಿ ದಸರಾಜಂಬೂಸವಾರಿಗೆಪುಷ್ಪಾಾರ್ಚನೆಮಾಡಿದ್ದರೆ, ಬಿ.ಎಸ್.ಯಡಿಯೂರಪ್ಪ 3 ಬಾರಿ ನೆರವೇರಿಸಿದ್ದರು. ಎಸ್.ಎಂ. ಕೃಷ್ಣ 4 ಬಾರಿ ಪುಷ್ಪಾಾರ್ಚನೆ ಮಾಡಿದ್ದರೆ, ಜಿಲ್ಲೆೆಯವರೇ ಆಗಿದ್ದ ಸಿದ್ದರಾಮಯ್ಯ ಸತತ ಐದು ವರ್ಷ ಪುಷ್ಪಾಾರ್ಚನೆಗೈದಿದ್ದರು. ಈಗ ಹಲವು ವರ್ಷದ ಬಳಿಕ ಯಡಿಯೂರಪ್ಪ ಸಿಎಂ ಆಗುವ ಜತೆಗೆ ಮತ್ತೊೊಮ್ಮೆೆ ದೇವಿಗೆ ಪುಷ್ಪಾಾರ್ಚನೆ ಮಾಡಿದರು.

ಬೇಕೆ ಬೇಕು ನೀರು ಬೇಕು..

ಬಿಸಿಲ ಬೇಗೆಗೆ ಸಾರ್ವಜನಿಕರು ಅಕ್ಷರಶಃ ಹೈರಾಣಾಗಿದ್ದರು. ಅರಮನೆ ಆವರಣದಲ್ಲಿ ಕುಳಿತು ಜಂಬೂ ಸವಾರಿ ವೀಕ್ಷಣೆಗೆಂದು ಬಂದಿದ್ದವರು, ಸುಡು ಬಿಸಿಲಿಗೆ ಬಸವಳಿದಿದ್ದರು. ಮೆರವಣಿಗೆ 2.15ಕ್ಕೆೆ ಆರಂಭವಾದರೂ 12 ಗಂಟೆಗೇ ಬಂದು ಕುಳಿತಿದ್ದರಿಂದ ಬಿಸಿಲ ಝಳಕ್ಕೆೆ ಬೆಂಡಾಗಿದ್ದರು. ಈ ವೇಳೆ ಕೆಲವರು ಅಲ್ಲೇ ಓಡಾಡುತ್ತಿಿದ್ದ ಅಧಿಕಾರಿಗಳು, ಪೊಲೀಸರಿಗೆ ನೀರು ಕೊಡಿಸುವಂತೆ ಕೇಳಿಕೊಂಡರು. ಆದರೆ ಅವರಿಗೆ ನೀರು ಸಿಗಲಿಲ್ಲ. ಸಿಎಂ ಯಡಿಯೂರಪ್ಪ ನಂದಿಧ್ವಜಕ್ಕೆೆ ಪೂಜೆ ಸಲ್ಲಿಸಿ ಅರಮನೆ ಆವರಣಕ್ಕೆೆ ಆಗಮಿಸುತ್ತಿಿದ್ದಾಾಗ ಬೇಕೆ ಬೇಕು ನೀರು ಬೇಕು ಎಂದು ಘೋಷಣೆ ಕೂಗುತ್ತಿಿದ್ದರು. ಕೊನೆಗೆ ಸಾರ್ವಜನಿಕರ ಒತ್ತಾಾಯಕ್ಕೆೆ ಮಣಿದು ಕುಡಿಯುವ ನೀರು ಪೂರೈಸಲಾಯಿತು.

ಬೆದರುತ್ತಾ ಸಾಗಿದ ಧನಂಜಯ

ಕಲಾತಂಡ ಮತ್ತು ಸ್ತಬ್ಧಚಿತ್ರಗಳ ಮುಂದೆ ಸಾಗಿದ ನಿಶಾನೆಗಳ ತಂಡದಲ್ಲಿದ್ದ ಧನಂಜಯ ಆನೆ, ಆರಂಭದಲ್ಲಿಯೇ ಬೆದರುವ ಮೂಲಕ ಅಡ್ಡಲಾಗಿ ನಿಂತನು. ನಂತರ ವಿಕ್ರಮ ಆನೆಯನ್ನು ಮುಂದಕ್ಕೆೆ ಬಿಡಲಾಯಿತು. ವಿಕ್ರಮ ಆನೆಯನ್ನು ಹಿಂಬಾಲಿಸಿದ ಧನಂಜಯ ದಾರಿಯದ್ದಕ್ಕೂ ಮನಸ್ಸಿಿನೊಳಗೆ ಅಂಜುತ್ತಾಾ, ಬೆದರುತ್ತಲೇ ಸಾಗಿತು. ಧನಂಜಯನ ಅವತಾರ ಅರಿತ ಅರಣ್ಯ ಇಲಾಖೆ ಅಧಿಕಾರಿಗಳು ನಿಶಾನೆಗಳ ಸುತ್ತಾಾ ಮಾನವ ಸರಪಳಿ ಮಾಡಿ ಯಾರೂ ಹತ್ತಿಿರ ಬಾರದಂತೆ ಎಚ್ಚರ ವಹಿಸಿದರು.

 

ಮೆರವಣಿಗೆಯಲ್ಲಿ ಅವ್ಯವಸ್ಥೆೆ

ಜಂಬೂಸವಾರಿ ಮೆರವಣಿಗೆ ಅವ್ಯವಸ್ಥೆೆಗೆ ಸಾಕ್ಷಿಯಾಯಿತು. ಅರಮನೆ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರು, ಸ್ವಯಂ ಸೇವಕರ ದಂಡೇ ನೆರೆದಿತ್ತು. ಸ್ತಬ್ಧಚಿತ್ರಗಳು, ಕಲಾತಂಡುಗಳು ಸಾಗುವಾಗ ಅವುಗಳೊಂದಿಗೆ ಸಾಗುತ್ತಿಿದ್ದರು. ಅಂಬಾರಿ ಬಂದಾಗಲಂತೂ ನೂಕಾಟವೇ ಆಯಿತು. ಗುರುತಿನ ಚೀಟಿ ಇಲ್ಲದಿದ್ದರೂ ಚಿನ್ನದ ಅಂಬಾರಿ ಹೊತ್ತ ಅರ್ಜುನನ ಅಕ್ಕಪಕ್ಕವೇ ಸುಳಿದಾಡುತ್ತಿಿದ್ದರು. ಇದರಿಂದ ಸಾರ್ವಜನಿಕರು ಕಿರಿ ಕಿರಿ ಅನುಭವಿಸಿದರು. ಪೊಲೀಸರು ಮೆರವಣಿಗೆ ಮಾರ್ಗದಲ್ಲಿ ನೂರಾರು ಮಂದಿ ಅಡ್ಡಾಾಡುತ್ತಿಿದ್ದರೂ ಅವರನ್ನು ಹೊರಗಡೆ ಕಳುಹಿಸುವ ಗೋಜಿಗೆ ಹೋಗಲೇ ಇಲ್ಲ.

ಹಳೆ ಕಟ್ಟಡ, ಮರವೇರಿ ವೀಕ್ಷಣೆ

ಜಂಬೂ ಸವಾರಿ ವೇಳೆ ಹಳೆ ಕಟ್ಟಡ ಹಾಗೂ ಮರಗಳನ್ನು ಏರಿ ವೀಕ್ಷಣೆ ಮಾಡಬಾರದು ಎಂದು ಸೂಚನೆ ನೀಡಿದ್ದರೂ ಸಾರ್ವಜನಿಕರು ಹಳೆ ಕಟ್ಟಡಗಳು ಮರಗಳನ್ನು ಏರಿ ಜಂಬೂ ಸವಾರಿ ವೀಕ್ಷಿಸಿದರು. ಪಾರಂಪರಿಕ ಕಟ್ಟಡಗಳು ಹಾಗೂ ಶಿಥಲಗೊಂಡಿರುವ ಕಟ್ಟಡಗಳ ಮೇಲೇರಿ ಜಂಬೂಸವಾರಿ ವೀಕ್ಷಣೆ ಮಾಡುವುದನ್ನು ನಿಷೇಧಿಸಲಾಗಿತ್ತು. ಆದರೆ ಇದನ್ನು ಜನರು, ಪ್ರವಾಸಿಗರು ಲೆಕ್ಕಕ್ಕೆೆ ಪರಿಗಣಿಸದೆ ಶಿಥಿಲಾವಸ್ತೆೆಯಲ್ಲಿರುವ ಕಟ್ಟಡಗಳ ಮೇಲೇರಿ ಜಂಬೂ ಸವಾರಿ ವೀಕ್ಷಣೆ ಮಾಡಿದರು. ಮರವೇರಿದ ಯುವಕರು: ಹಳೇ ಆರ್‌ಎಂಸಿ ಖಾಸಗಿ ಬಸ್ ನಿಲ್ದಾಾಣದ ಪಕ್ಕದ ಕಟ್ಟಡದ ಮೇಲೆ ಏರಿ ಜಂಬೂಸವಾರಿಯನ್ನು ವೀಕ್ಷಣೆ ಮಾಡಲು ಯುವಕರು ಮರದ ಸಹಾಯದಿಂದ ಕಟ್ಟಡವನ್ನು ಏರಿ ಜಂಬೂ ಸವಾರಿ ವೀಕ್ಷಣೆ ಮಾಡಿದರು. ರಾಜ ಮಾರ್ಗದುದ್ದಕ್ಕೂ ಇಂತಹ ದೃಶ್ಯಗಳು ಕಂಡುಬಂದವು.

                                                                        ಮೆಚ್ಚುಗೆ ಗಳಿಸದ ಮೆರವಣಿಗೆ

ಜಂಬೂ ಸವಾರಿ ಮೆರವಣಿಗೆಗೂ ಮುನ್ನಾಾ ಸಾಗುವ ಸ್ತಬ್ಧಚಿತ್ರಗಳು ಹಾಗೂ ಜಾನಪದ ಕಲಾ ತಂಡಗಳು ಒಂದಾದ ನಂತರ ಒಂದು ಸಾಗಲಿಲ್ಲ. 10 ರಿಂದ 15 ನಿಮಿಷ ಅಂತರದಲ್ಲಿ ಸಾಗಿದ್ದರಿಂದ ಸಾರ್ವಜನಿಕರನ್ನು ಹೆಚ್ಚು ಆಕರ್ಷಿಸುವಲ್ಲಿ ಕಲಾ ತಂಡಗಳು ವಿಫಲವಾದವು.
ಸೆಲ್ಫಿಿಗೆ ಮುಗಿಬಿದ್ದ ಪೊಲೀಸರು: ಮೆರವಣಿಗೆ ಮತ್ತು ಜಂಬೂ ಸವಾರಿ ವೇಳೆ ಪೊಲೀಸರು ತಮ್ಮ ಮೊಬೈಲ್‌ಗಳಲ್ಲಿ ಫೋಟೋ ಮತ್ತು ಸೆಲ್ಫಿಿ ತೆಗೆದುಕೊಳ್ಳಬಾರದು ಎಂದು ನಗರ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದರು. ಆದರೆ ದಾರಿಯುದ್ದಕ್ಕೂ ಪೊಲೀಸರು ಮತ್ತು ಅಧಿಕಾರಿಗಳು ಮೊಬೈಲ್‌ನಲ್ಲಿ ಸೆಲ್ಫಿಿ, ಫೋಟೋ ತೆಗೆಯುವುದರಲ್ಲಿ ಬ್ಯುಸಿಯಾದರು.

ಲಕ್ಷಾಂತರ ಮಂದಿಯ ಹರ್ಷ-ಸಂಭ್ರಮದ ಹೊನಲು ಅನಾವರಣಗೊಂಡ ನಾಡಿನ ವೈವಿಧ್ಯಮಯಜಾನಪದ ಜಾನಪದ ಕಲೆಗಳ ನೃತ್ಯ

 

 

 

 

 

 

 

 

 

 

 

 

 

ಯದುವಂಶದ ನಾಡಿನಲ್ಲಿ ಹಳೆಯ ಗತಕಾಲದ ದಿನಗಳನ್ನು ನೆನಪಿಸುವ ರೀತಿಯಲ್ಲಿ ಅತ್ಯಂತ ರಾಜ ವೈಭವದಿಂದ ಮಂಗಳವಾರ ರಾಜಮಾರ್ಗದಲ್ಲಿ ನಡೆದ ವಿಶ್ವ ವಿಖ್ಯಾಾತ ದಸರಾದ ಜಂಬೂಸವಾರಿ ಮೆರವಣಿಗೆಯಲ್ಲಿ ನಾಡಿನ ಜಾನಪದ ಕಲೆಗಳ ಝೇಂಕಾರ ಮೊಳಗಿತು.

ಜಂಬೂಸವಾರಿ ವೀಕ್ಷಣೆಗೆಂದು ಬಂದಿದ್ದ ಗಣ್ಯಾಾತಿ ಗಣ್ಯರು, ಪ್ರಮುಖರು, ಅಧಿಕಾರಸ್ಥರು ಸೇರಿ ದೇಶ-ವಿದೇಶಗಳಿಂದ ದೌಡಾಯಿಸಿದ್ದ ಲಕ್ಷಾಂತರ ಮಂದಿಯ ಮುಂದೆ ನಾಡಿನ ವೈವಿಧ್ಯಮಯ ಜಾನಪದ ಕಲೆಗಳು ಅನಾವರಣಗೊಂಡವು. ಜಾನಪದ ಕಲೆಗಳ ನೃತ್ಯಗಳು, ಕಲೆಗಳ ಪರಿಕರಗಳಿಂದ ಹೊರ ಹೊಮ್ಮಿಿದವು. ಪರಂಪರೆಯಿಂದ ಬಂದಿರುವ ಹಲವು ಬಗೆಬಗೆಯ ಝೇಂಕಾರಗಳು, ವಾದನಗಳು ಕಿಕ್ಕಿಿರಿದು ತುಂಬಿ ತುಳುಕುತ್ತಿಿದ್ದ ಲಕ್ಷಾಂತರ ಮಂದಿಗೆ ಕರ್ಣಾನಂದ ನೀಡಿದವಲ್ಲದೆ, ಕಣ್ಮನ ಸೆಳೆಯುವಂತೆ ಮನ ತಣಿಸಿದವು. ಅಲ್ಲದೆ ನಾನಾ ರಾಜ್ಯಗಳಿಂದ ಆಗಮಿಸಿದ್ದ ಕಲಾತಂಡಗಳ ಪ್ರದರ್ಶನವೂ ವಿವಿಧತೆಯಲ್ಲಿಏಕತೆಯ ಸಂಕೇತವನ್ನು ಸಂಭ್ರಮಿಸುವಂತೆ ಮಾಡಿದವು.

ವೀರಗಾಸೆ ನೃತ್ಯ ಪ್ರದರ್ಶನ:

ಜಾನಪದ ಕಲೆಗಳ ಸೊಬಗು, ಹೊಮ್ಮಿಿ ಬರುತ್ತಿಿದ್ದ ನಾದ, ಕೇಳಿ ಬರುತ್ತಿಿದ್ದ ವಾದನಕ್ಕೆೆ ಪ್ರವಾಸಿಗರು ಮನಸೋತರು. ಹೆಜ್ಜೆೆಯ ಸದ್ದಿಗೆ ಮನಸೋತು ಮನ ತಣಿಯುವ ತನಕ ಕುಣಿದು ಕುಪ್ಪಳಿಸಿದರು. ಕಲಾವಿದರ ಕುಣಿತಕ್ಕೆೆ, ಹೊಮ್ಮುತ್ತಿಿದ್ದ ನಾದಕ್ಕೆೆ ಉತ್ತೇಜನ ನೀಡುತ್ತಿಿದ್ದರು. ಬಿ.ಬಿ.ಮೊಹಲ್ಲಾಾದ ಗುರುಮಲ್ಲೇಶ್ವರ ನಂದಿಧ್ವಜ ಸಂಘ, ಗೌರಿಶಂಕರ ನಂದಿಧ್ವಜ ಸಂಘದ ಕಲಾವಿದರು ನಂದಿಧ್ವಜ ಕುಣಿಸುತ್ತಾಾ ಮುಂದೆ ಸಾಗುತ್ತಿಿದ್ದಂತೆ ಅಭಿನವಶ್ರೀ ವೀರಭದ್ರ ನೃತ್ಯ ತಂಡ, ಚಿಕ್ಕಮಗಳೂರಿನ ರುದ್ರಪ್ಪ ವತ್ತು ತಂಡದವರು ಶೈವ ಸಂಪ್ರದಾಯದ ಮಹತ್ವಪೂರ್ಣ ಕಲೆಯಾದ ವೀರಗಾಸೆ ನೃತ್ಯ ಪ್ರದರ್ಶಿಸಿದರು.
ಚಾಮುಂಡೇಶ್ವರಿ ಅಮ್ಮನವರ ಕಲಾಬಳಗ, ಚೀಳಂಗಿ ಗ್ರಾಾಮದ ಸಿ.ಎಚ್.ಶಿವಕುಮಾರ್, ಮಹಿಳಾ ಸಾಂಸ್ಕೃತಿಕ ಕಲಾತಂಡದ ಕಲಾವಿದರು ನಾಡಿನ ಹಳ್ಳಿಿಗಳಲ್ಲಿ ಬಳಕೆಯಲ್ಲಿರುವ ವಾದ್ಯಗಳ ಗುಂಪುಗಳಲ್ಲಿ ಮೊದಲ ಸ್ಥಾಾನದಲ್ಲಿರುವ ಎಲ್ಲ ವಾದ್ಯಗಳಲ್ಲೂ ಮೊದಲು ಮೊಳಗುವ ಕೊಂಬು ಕಹಳೆಯನ್ನು ಗಣ್ಯರ ಮುಂದೆ ಆಕಾಶದತ್ತ ಮುಖ ಮಾಡಿ ಕಹಳೆ ಮೊಳಗಿಸಿದರು.

ಇದಾದ ಬಳಿಕ ಜನುಮದ ಜೋಡಿ ಚಿತ್ರದಲ್ಲಿ ಖ್ಯಾಾತಿ ಪಡೆದಿದ್ದ ಏಳು ಬೆಟ್ಟದ ಸಾಲುಗಳ ಸುಂದರ ಮನೆಯನ್ನು ಮಾಡಿಕೊಂಡಿರುವ ಮಹದೇಶ್ವರನ ಪರಮ ಭಕ್ತರಾದ ಗುಡ್ಡರು ಹಾಡುವ ಬೀಳು ಕಂಸಾಳೆಯ ಪದವನ್ನು ನುಡಿಸುತ್ತಿಿದ್ದ ಮಲೇಮಹದೇಶ್ವರ ಕಂಸಾಳೆ ಯುವಕರ ಸಂಘ, ನಾಗಮಲೆ ಕಂಸಾಳೆ ಕಲಾಸಂಘ, ಕರ್ನಾಟಕ ಜಾನಪದ ಬೀಸು ಕಂಸಾಳೆ ನೃತ್ಯಸಂಘದ ಕಲಾವಿದರು ಎಲ್ಲರನ್ನು ಮೋಡಿ ಮಾಡಿದರು.

ದಕ್ಷಿಣ ಕರ್ನಾಟಕದ ಹಲವು ಭಾಗಗಳಲ್ಲಿ ಗ್ರಾಾಮದೇವತೆಗಳ ಹಬ್ಬ, ಗೌರಿಹಬ್ಬ, ಜಾತ್ರೆೆಗಳಲ್ಲಿ ಪ್ರಮುಖವಾಗಿ ಬಳಸುವ ಚಿಟ್ ಮೇಳವನ್ನು ಧರಣೀಶ್ ತಂಡ, ಡಿ.ಕೆ.ಅರುಣ್ ನೇತೃತ್ವದ ಕಲಾವಿದರು ಬಾರಿಸಿದರೆ, ಉತ್ತರ ಕರ್ನಾಟಕದ ಜಿಲ್ಲೆೆಗಳಲ್ಲಿ ಮೊಹರಂ ಹಬ್ಬದ ಸಂದರ್ಭದಲ್ಲಿ ವಿಶೇಷವಾದ ಹೆಜ್ಜೆೆ ಮೇಳವನ್ನು ದುರ್ಗಾದೇವಿ ಹೆಜ್ಜೆೆ ಮೇಳದ ಕಲಾವಿದರು ಪ್ರದರ್ಶಿಸಿದರು. ವರ್ಷವೆಲ್ಲ ಬೆವರು ಸುರಿಸಿ ದುಡಿದ ಫಲ ಕೈಗೆ ಸಿಕ್ಕುವ ಹಿಗ್ಗಿಿನ ಕಾಲ ಸುಗ್ಗಿಿಯ ಕಾಲದಲ್ಲಿ ಪ್ರದರ್ಶನವಾಗುವ ಸುಗ್ಗಿಿ ಕುಣಿತವನ್ನು ಮಂಟೇಸ್ವಾಾಮಿ ಸುಗ್ಗಿಿಕುಣಿತ ಕಲಾಸಂಘ ಪ್ರದರ್ಶಿಸಿದರೆ, ಎಚ್.ಕೆ.ಆದರ್ಶ್ ತಂಡದ ಕಲಾವಿದದರು ಮಲೆನಾಡ ಸುಗ್ಗಿಿ ಕುಣಿತ ನಡೆಸುವ ಮೂಲಕ ಮನರಂಜಿಸಿದರು.

ಪಿಂಡನಾಯಕನಹಳ್ಳಿಿಯ ನಾಡೋಜ ಮುನಿವೆಂಕಟಪ್ಪ ಮತ್ತು ತಂಡ, ರಾಣೆಬೆನ್ನೂರು ಅಂಬೇಡ್ಕರ್ ದುರ್ಗಾದೇವಿ ಕಲಾತಂಡದವರು ತಮಟೆ ವಾದನ, ವಾಲ್ಮೀಕಿ ನಾಯಕ ಸಾಂಸ್ಕೃತಿಕ ಜನಪದ ಕಲಾವಿದರ ಸಂಘ, ಗೊಲ್ಲಹಳ್ಳಿಿಯ ಜಿ.ಎಸ್.ಮಂಜುನಾಥ್ ಮತ್ತು ತಂಡ ಕಲಾವಿದರು ಗಾರುಡುಗೊಂಬೆ, ಜನ್ಮಭೂಮಿ ಜನಪದ ಕಲಾಸಂಘದ ಕಲಾವಿದರು, ಸಿ.ಸುಂದರೇಶ್, ಕೆ.ಜೆ.ಸುರೇಶ್ ತಂಡದ ಕಲಾವಿದರು ಪೂಜಾಕುಣಿತ ನೃತ್ಯ ಪ್ರದರ್ಶಿಸಿ ಎಲ್ಲರನ್ನು ರಂಜಿಸಿದರು.

ಇನ್ನು ಹರಿಯಾಣದ ಘೂಮರ್ ನೃತ್ಯ, ಜಾರ್ಖಂಡ್‌ನ ಜಾವ್ ನೃತ್ಯ ಎಲ್ಲರನ್ನು ವಿಶೇಷವಾಗಿ ಆಕರ್ಷಿಸಿತು. ಬಣ್ಣದ ಧೋತರ, ಕೆಂಪುಪೇಟ, ಹೂವಿನ ತಲೆಯುಡಿಗೆ, ಬೆಳ್ಳಿಿಯ ಉಡಿದಾರ, ಕಾಲು ಖಡ್ಗ ಧರಿಸಿ ಕೈಯಲ್ಲಿ ಢಕ್ಕೆೆ ಹಿಡಿದಿದ್ದ ದುರ್ಗಾಗೊಂಡ ಡಕ್ಕೆೆ ಕುಣಿತ ತಂಡದ ಕಲಾವಿದರು ಗೊಂಡರ ಡಕ್ಕೆೆ ನೃತ್ಯ ಪ್ರದರ್ಶಿಸಿದರೆ, ಸೋಲಿಗ ಪುಷುಮಾಲೆ ಕಲಾಸಂಘದವರು ಗೋರು ಗೋರುಕ ಗೋರುಕಾನ ಎಂದು ಹಾಡನ್ನು ಹಾಡುತ್ತ ಕಾಡಿನಲ್ಲಿರುವ ದೇವರೇ ನಮ್ಮನ್ನು ಕಾಪಾಡಿಕೋ ಅಂತ ಗೋರುಕಾನ ನೃತ್ಯ ಪ್ರದರ್ಶಿಸಿದರು.ದುರ್ಗಾಪರಮೇಶ್ವರಿ ಮಹಿಳಾ ಚಂಡೇವಾದನ ತಂಡದ ಕಲಾವಿದರು ಚಂಡೆಮೇಳ, ಗಜಾನನ ಯುವಕ ಮಂಡಳಿ ಕಲಾವಿದರು ಹೂವಿನ ನೃತ್ಯ, ಮಹರ್ಷಿ ವಾಲ್ಮೀಕಿ ನಾಯಕ ಜನಾಂಗ ಕ್ಷೇಮಾಭಿವೃದ್ಧಿಿ ಸಂಘದ ಕಲಾವಿದರು ಮರಗಾಲು ಕುಣಿತ, ವೀರಮದಕರಿನಾಯಕ ಯುವಕರ ಸಂಘದ ಕಲಾವಿದರು ದೊಣ್ಣೆೆವರಸೆ ನೃತ್ಯ ಪ್ರದರ್ಶಿಸಿದರೆ, ಖಾನಾಪುರದ ಶ್ರೀ ಬಸವೇಶ್ವರ ಜಾನಪದ ಜಗ್ಗಲಗಿ ಮೇಳದ ಕಲಾವಿದರು ಆಕರ್ಷಕವಾಗಿ ಸದ್ದು ಮಾಡಿದರು.

ಐದು ಅಡಿ ವ್ಯಾಾಸದ ಎತ್ತಿಿನಬಂಡಿಯ ಚಕ್ರದ ಹಳಿಗೆ ಎಮ್ಮೆೆಯ ಚರ್ಮವನ್ನು ಹೊದಿಸಿ ತಯಾರಿಸಿದಂತಹ ಚರ್ಮ ವಾದ್ಯವಾಗಿದ್ದು, ತಲೆಗೆ ರುಮಾಲು ಸುತ್ತಿಿಕೊಂಡಿದ್ದ ಕಲಾವಿದರು ರಾಜಮಾರ್ಗದಲ್ಲಿ ವೀರಾವೇಷದಿಂದ ಬಡಿಯುತ್ತಾಾ ಕುಣಿಯುವಂತೆ ಮಾಡಿದರು.

ಇನ್ನು ಮಹಾರಾಷ್ಟ್ರ ರಾಜ್ಯದ ತಂಡದ ಕಲಾವಿದರು ಡಾಂಗ್ರಿಿ ಗಜ ನೃತ್ಯ ಪ್ರದರ್ಶಿಸಿದರೆ,ತಿಲಕ್ ನಗರದ ಸರಸ್ವತಿ ನಾಸಿಕ್ ಡೋಲು ತಂಡದವರು ನಾಸಿಕ್ ಡೋಲು ಬಾರಿಸಿದರೆ, ರೇವಣ ಸಿದ್ದೇಶ್ವರ ಯುವಕ ಕಲಾಸಂಘದ ಕಲಾವಿದರು ಸತ್ತಿಿಗೆ ಕುಣಿತ, ಸುಗಿಪು ಜಾನಪದ ಕಲಾತಂಡದ ಕಲಾವಿದರು ಕಂಗೀಲು ನೃತ್ಯ ಪ್ರದರ್ಶಿಸಿದರು.

ಶ್ರೀ ಶಾರದಾ ಹುಲಿವೇಷ ಸಂಘದ ಕಲಾವಿದರು ಕಾಡಿನಲ್ಲಿ ಹುಲಿ ಘರ್ಜಿಸಿದಂತೆ ದಾರಿಯುದ್ದಕ್ಕೂ ಅತ್ತಿಿಂದಿತ್ತ ಓಡಿಹೋಗುವಂತೆ ಕುಣಿದು ಕುಪ್ಪಳಿಸಿದರು. ಹುಬ್ಬಳ್ಳಿಿಯ ಅಲೆಮಾರಿ ಜಾನಪದ ಗೊಂಬೆ ಕುಣಿತ ಕಲಾವಿದರು ಗೊಂಬೆಕುಣಿತ, ಶ್ರೀೀಮಲ್ಲಿಕಾರ್ಜುನ ಅಲೆಮಾರಿ ದಾಲಪಟಾ ಕಲಾವಿದರ ಸಂಘದ ಕಲಾವಿದರು ದಾಲಪಟ, ಶ್ರೀೀಚಾಮುಂಡೇಶ್ವರಿ ದಾಲಪಟ ಕಲಾವಿದರ ಸಂಘದ ಕಲಾವಿದರು ಅಮೋಘವಾದ ದಾಲಪಟ ಗೊಂಬೆಗಳ ನೃತ್ಯ ಪ್ರದರ್ಶಿಸಿದರು. ಸೋಮನ ಮುಖವಾಡ ಧರಿಸಿ ಅರೆ,ದೋಣು, ತಮಟೆ,ನಗಾರಿ,ಮಾರಿವಾದ್ಯಗಳ ಮೂಲಕ ಕುಣಿದರು.

ಸಮವಸ್ತ್ರ ಧರಿಸಿ ಕೈಯಲ್ಲಿ ವಿಧ ವಿಧ ವರ್ಣದ ಕರವಸ್ತ್ರಗಳನ್ನು ಹಿಡಿದು ತಾಳಕ್ಕೆೆ ತಕ್ಕಂತೆ ಅಪ್ಪಯ್ಯಾಾಸ್ವಾಾಮಿ ಝಾಂಜ್ ಪಥಕ್ ತಂಡದ ಕಲಾವಿದರು ದಾರಿಯುದ್ದಕ್ಕೂ ಝಾಂಜ್ ಪಥಕ್ ನೃತ್ಯ ಪ್ರದರ್ಶಿಸಿದರು. ಕೇರಳದ ಮಹಿಳಾ ಕಲಾವಿದರು ಪ್ರೇಕ್ಷಕರ ಮನಗೆಲ್ಲುವಂತೆ ವಾದ್ಯದ ಮೂಲಕ ಸಿಂಗಾರಿಮೇಳಂ ಪ್ರದರ್ಶಿಸಿದರೆ, ಆಂದ್ರಪ್ರದೇಶದ ಕಲಾವಿದರು ತಪ್ಪಾಾಟಗುಲ್ಲು ನೃತ್ಯ ಮಾಡಿದರು.

 

 

 

 

ಜನಮನ ಸೆಳೆದ ಡೊಳ್ಳು ಕುಣಿತ
ಹರಿಹರದ ಮಾರುತಿ ಯುವಕ ಡೊಳ್ಳಿಿನ ಸಂಘದ ಕಲಾವಿದರು ಡೊಳ್ಳುಕುಣಿತ ಪ್ರದರ್ಶಿಸಿದರೆ, ಮಂಡ್ಯದ ಶ್ರೀ ವಿನಾಯಕ ಮಾರುತಿ ಯುವಕ ಡೊಳ್ಳಿಿನ ಸಂಘ, ಸಹ್ಯಾಾದ್ರಿಿ ಕಲಾತಂಡ, ಹಾಸನ ಸಾಂಸ್ಕೃತಿಕ ಯುವಕ ಸಂಘದವರು ಸೋಮನ ಕುಣಿತ ಪ್ರದರ್ಶಿಸುವ ಮೂಲಕ ನೆರೆದಿದ್ದ ಜನಸಮೂಹವನ್ನು ತನ್ನತ್ತ ಸೆಳೆಯುವಲ್ಲಿ ಸಫಲವಾದರು.

ನಾಡಹಬ್ಬ ದಸರಾ ಸಂಪನ್ನ ಅಂದಾಜು ಏಳೆಂಟು ಲಕ್ಷಕ್ಕೂ ಹೆಚ್ಚು ಮಂದಿ ಜಂಬೂ ಸವಾರಿಯಲ್ಲಿ ಭಾಗಿ ಎಂಟನೇ ಬಾರಿಗೆ ಚಿನ್ನದ ಅಂಬಾರಿ ಹೊತ್ತ ಕ್ಯಾಾಪ್ಟನ್ ಅರ್ಜುನ ಸಿಎಂ, ಯದುವೀರ್ ಮತ್ತಿಿತರರಿಂದ ದೇವಿಗೆ ಪುಷ್ಪಾಾರ್ಚನೆ

ಕೆ.ಬಿ.ರಮೇಶನಾಯಕ ಮೈಸೂರು


ಜಗತ್‌ಪ್ರಸಿದ್ಧ ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಯನ್ನು ಕರುನಾಡಿನ ಜನತೆ ಸೇರಿ ದೇಶದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಲಕ್ಷಾಂತರ ಮಂದಿ ಸಾಕ್ಷೀಕರಿಸಿದರು. ಈ ಮೂಲಕ ನಾಡಹಬ್ಬ ವೈಭವದ 10 ದಿನಗಳ ಕಾಲದ ದಸರಾ ಮಹೋತ್ಸವದ ಸಂಭ್ರಮಕ್ಕೆೆ ತೆರೆ ಎಳೆಯಲಾಯಿತು.

ನಿನ್ನೆೆ, ಮೊನ್ನೆೆ ಬಿದ್ದಿದ್ದ ಮಳೆಗೆ ಸ್ವಲ್ಪ ಆತಂಕ ಉಂಟಾದರೂ ದೇವಿಯ ದರ್ಶನ ಮಾಡಲೆಂದು ಮಂಗಳವಾರ ಬೆಳಗ್ಗೆೆ ಅರಮನೆ ಸೇರಿ ಇಡೀ ನಾಲ್ಕೂವರೆ ಕಿ.ಮೀ ರಾಜಮಾರ್ಗದ ಇಕ್ಕೆೆಲಗಳಲ್ಲಿ ಜಮಾಯಿಸಿದ್ದ ಜನಸಾಗರ ಜಂಬೂಸವಾರಿ ಮೆರವಣಿಗೆಯನ್ನು ಕಣ್ತುಂಬಿಕೊಂಡಿತು. ಸುಡು ಬಿಸಿಲನ್ನು ಲೆಕ್ಕಿಿಸದೆ ಬೆಳಗ್ಗೆೆಯಿಂದ ಅಂಬಾರಿ ಬನ್ನಿಿಮಂಟಪ ತಲುಪುವ ತನಕ ಜಾಗ ಬಿಟ್ಟು ಕದಲದೆ ಕೂತಲ್ಲೇ ಕೂತು, ನಿಂತಲ್ಲೇ ನಿಂತುಕೊಂಡು ಜಾನಪದ ಕಲಾತಂಡಗಳು, ಸ್ತಬ್ಧಚಿತ್ರಗಳನ್ನು ನೋಡಿಕೊಂಡು ಸಂಭ್ರಮಿಸಿದರು.

ಜನರ ಬಾಯಲ್ಲಿ ಹರ್ಷೋದ್ಘಾರ:

ಸುಮಾರು 750 ಕೆ.ಜಿ ತೂಕದ ಚಿನ್ನದ ಅಂಬಾರಿಯಲ್ಲಿ ಶ್ರೀಚಾಮುಂಡೇಶ್ವರಿ ದೇವಿ ಉತ್ಸವಮೂರ್ತಿಯನ್ನು ಹೊತ್ತು ಕುಮ್ಕಿಿ ಆನೆಗಳಾದ ಬಲಭಾಗದಲ್ಲಿ ಕಾವೇರಿ ಮತ್ತು ಎಡಭಾಗದಲ್ಲಿ ನಿಂತಿದ್ದ ವಿಜಯಳೊಂದಿಗೆ ಅರ್ಜುನ ರಾಜಗಾಂಭೀರ್ಯದಲ್ಲಿ ಸಾಗುತ್ತಿಿದ್ದಂತೆ ಮೆರವಣಿಗೆಯ ರಾಜಮಾರ್ಗದ ಇಕ್ಕೆೆಲಗಳಲ್ಲಿ ನಿಂತಿದ್ದ ಸಹಸ್ರ ಸಹಸ್ರಾಾರು ಜನಸ್ತೋೋಮ

ಹರ್ಷೋದ್ಘಾಾರ ಮಾಡಿ ತಮ್ಮಗೌರವವನ್ನು ಸಲ್ಲಿಸಿದರು. ಮಂಗಳವಾರ ಮಧ್ಯಾಾಹ್ನ 2.15ರಿಂದ 2.58ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ನಂದೀಧ್ವಜಕ್ಕೆೆ ಮುಖ್ಯಮಂತ್ರಿಿ ಬಿ.ಎಸ್.ಯಡಿಯೂರಪ್ಪ, ಉಪಮುಖ್ಯಮಂತ್ರಿಿ ಗೋವಿಂದ ಎಂ.ಕಾರಜೋಳ, ಸಚಿವರಾದ ವಿ.ಸೋಮಣ್ಣ, ಸಿ.ಟಿ.ರವಿ, ನಾಗೇಶ್ ಜತೆಗೂಡಿ ಪೂಜೆ ಸಲ್ಲಿಸಿದರು. ನಂತರ, ಅರಮನೆ ಮುಂಭಾಗ ಇದ್ದ

ವೇದಿಕೆಯಲ್ಲಿ ಕುಳಿತುಕೊಳ್ಳುತ್ತಿಿದ್ದಂತೆ ಜಾನಪದ ಕಲಾತಂಡಗಳ ಆಕರ್ಷಕ ಮೆರವಣಿಗೆಯು ವಿದ್ಯುಕ್ತವಾಗಿ ಆರಂಭವಾಯಿತು. ಮೊದಲಿಗೆ ನಂದೀಧ್ವಜ, ವೀರಗಾಸೆ ಸಾಗುತ್ತಿಿದ್ದಂತೆ ಮೈಸೂರು ಅರಮನೆಯಿಂದ ಹೊರಟ ನಿಶಾನೆ ಬಲರಾಮ ಜಂಬೂಸವಾರಿ ಕುರುಹು ಹೊತ್ತು ಸಾಗಿದ. ಇದರ ಜತೆಗೆ ಅಲಂಕೃತಗೊಂಡಿದ್ದ ಅಭಿಮನ್ಯು, ಧನಂಜಯ, ದುರ್ಗಾ ಪರಮೇಶ್ವರಿ,

ಗೋಪಾಲಸ್ವಾಾಮಿ, ಗೋಪಿ, ವಿಕ್ರಮ ಆನೆಗಳು ಸಾಗಿದವು.

ಅಂಬಾವಿಲಾಸ ಅರಮನೆ ಆವರಣದಲ್ಲಿ 4.31ರಿಂದ 4.57ರವರೆಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ನಿಮಿಷಕ್ಕೆೆ ಸರಿಯಾಗಿ ವಿಶೇಷ ವೇದಿಕೆಯನ್ನೇರಿದ ಮುಖ್ಯಮಂತ್ರಿಿ ಬಿ.ಎಸ್.ಯಡಿಯೂರಪ್ಪ, ಅವರು ಚಿನ್ನದ ಅಂಬಾರಿಯಲ್ಲಿರಿಸಿದ್ದ ಚಾಮುಂಡೇಶ್ವರಿದೇವಿ ಉತ್ಸವ ಮೂರ್ತಿಗೆ ಪುಷ್ಪಾಾರ್ಚನೆ ಮಾಡಿದರು. ಮುಖ್ಯಮಂತ್ರಿಿ ಅವರೊಡನೆ ರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಜಿಲ್ಲಾಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಮೇಯರ್ ಪುಷ್ಪಲತಾ ಜಗನ್ನಾಾಥ್, ಜಿಲ್ಲಾಾಧಿಕಾರಿ ಅಭಿರಾಮ್ ಜಿ.ಶಂಕರ್, ನಗರ ಪೊಲೀಸ್ ಆಯುಕ್ಯ ಕೆ.ಟಿ.ಬಾಲಕೃಷ್ಣ ಉಪಸ್ಥಿಿತರಿದ್ದು, ಸಾಂಪ್ರದಾಯಿಕವಾಗಿ ದೇವಿಗೆ ಪುಷ್ಪಾಾರ್ಚನೆ ಮಾಡಿದರು.

ಅಂಬಾರಿ ಹೊತ್ತ ಆನೆ ಅರ್ಜುನ ಕಾವೇರಿ ಮತ್ತು ವಿಜಯಳೊಂದಿಗೆ ಬಂದು ನಿಲ್ಲುತ್ತಿಿದ್ದಂತೆ ಅಶ್ವಾಾರೋಹಿದಳದ ಕಮಾಂಡೆಂಟ್ ಕೆ.ವಿ.ಶೈಲೇಂದ್ರ ಅವರು ಪಥ ಸಂಚಲನಕ್ಕೆೆ ಗಣ್ಯರಿಂದ ಅನುಮತಿ ಕೋರಿದರು. ವಿಜಯದ ಸಂಕೇತವಾಗಿ ಅರಮನೆಗೆ ಹೊಂದಿಕೊಂಡಂತೆ ಇರುವ ಕೋಟೆ ಮಾರಮ್ಮನ ದೇವಸ್ಥಾಾನದ ಬಳಿ 21 ಸುತ್ತು ಕುಶಾಲತೋಪುಗಳನ್ನು ಸಿಡಿಸಲಾಯಿತು. ಇದಾದ ನಂತರ ಮೈಸೂರು ನಗರ ಪೊಲೀಸ್ ವಾದ್ಯವೃಂದದವರು ರಾಷ್ಟ್ರಗೀತೆ ನುಡಿಸಿ ಗೌರವ ವಂದನೆ ಸಲ್ಲಿಸಿದರು. ಬಳಿಕ ಗಣ್ಯರು ಚಾಮುಂಡೇಶ್ವರಿ ದೇವಿಗೆ ನಮನ ಸಲ್ಲಿಸಿ ತಮ್ಮ ಗೌರವವನ್ನು ಅರ್ಪಿಸಿದರು. ಅರ್ಜುನ ಹಾಗೂ ಕುಮ್ಕಿಿ ಆನೆಗಳಾದ ಕಾವೇರಿ ಮತ್ತು ವಿಜಯ ರಾಷ್ಟ್ರ ಗೀತೆ ಮುಗಿಯುವವರೆಗೂ ಸೊಂಡಿಲೆತ್ತಿಿ ಸೆಲ್ಯೂಟ್ ಹೊಡೆದು ಗಮನ ಸೆಳೆದವು.

ಬಳಿಕ ಅಶ್ವರೋಹಿ ದಳದ ಎಸಿಪಿ ವಿ.ಶೈಲೇಂದ್ರ ಜಂಬೂಸವಾರಿ ಮೆರವಣಿಗೆಯಲ್ಲಿ ಅಂಬಾರಿಯನ್ನು ಕೊಂಡೊಯ್ಯುವುದಾಗಿ ಅನುಮತಿ ಪಡೆದರು. ಗಣ್ಯರು ಸಮ್ಮತಿಸುತ್ತಿಿದ್ದಂತೆ ಅರ್ಜುನ ಹಾಗೂ ಕುಮ್ಕಿಿ ಆನೆಗಳನ್ನು ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ನಂತರ ವಸಂತ್ ಕುಮಾರ್ ನೇತೃತ್ವದಲ್ಲಿ ಕೆಎಸ್‌ಆರ್‌ಪಿ ತುಕಡಿ, ಟಿ.ಆರತಿ ನೇತೃತ್ವದಲ್ಲಿ ಡಿಎಆರ್, ಪುರುಶೋತ್ತಮ್ ನೇತೃತ್ವದಲ್ಲಿ ಕೆಎಸ್‌ಆರ್‌ಪಿ, ಪ್ರಕಾಶ್ ನೇತೃತ್ವದಲ್ಲಿ ಆರ್‌ಪಿಎಫ್, ಸುರೇಶ್ ಹಾಗೂ ನಿಂಗಯ್ಯ ನೇತೃತ್ವದಲ್ಲಿ ಎರಡು ಮೌಂಟೆಡ್ ತುಕಡಿ, ಸಿದ್ದು ಗುಡಿ ನೇತೃತ್ವದಲ್ಲಿ ಕರ್ನಾಟಕ ಪೊಲೀಸ್ ಅಕಾಡೆಮಿ ತಂಡ, ದನಪ್ರಕಾಶ್ ನೇತೃತ್ವದಲ್ಲಿ ಸಿಎಆರ್ ರವೀಂದ್ರ ತವರಬೇಡ ನೇತೃತ್ವದಲ್ಲಿ ಕೆಎಸ್‌ಆರ್‌ಪಿ ಹಾಗೂ ಶಿವಣ್ಣ ನೇತೃತ್ವದಲ್ಲಿ ಮತ್ತೊೊಂದು ತಂಡ ಆಕರ್ಷಕ ಪಥ ಸಂಚಲನ ನಡೆಸುತ್ತಾಾ ಮೆರವಣಿಗೆಯಲ್ಲಿ ಸಾಗಿತು.

ಕೊನೆಯಲ್ಲಿ ಚಿನ್ನದ ಅಂಬಾರಿ ಪೂಜೆ


ವಿಶ್ವವಿಖ್ಯಾಾತ ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಚಿನ್ನದ ಅಂಬಾರಿಯನ್ನು ಕಟ್ಟಿಿದರೂ ಕೊನೆಯಲ್ಲಿ ಪೂಜೆ ಸಲ್ಲಿಸಲಾಯಿತು. 750 ಕೆ.ಜಿ ತೂಕದ ಅಂಬಾರಿ ಹೊತ್ತ ಅರ್ಜುನ ಎಂಟನೇ ಬಾರಿಯೂ ತನ್ನ ಕಾರ್ಯವನ್ನು ಯಶಸ್ವಿಿಯಾಗಿ ಮುಗಿಸುವ ಮೂಲಕ ಎಲ್ಲರ ಗಮನ ಸೆಳೆದನು. ಅಧಿಕಾರಿಗಳು ಅಂಬಾರಿ ಕಟ್ಟುವುದನ್ನು ಶುರು ಮಾಡಿದಾಗ ಯದುವೀರ್, ತ್ರಿಿಶಿಕಾಕುಮಾರಿ ಯದುವೀರ್, ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಕಲ್ಯಾಾಣಮಂಪಟದ ಕಿಟಕಿ ಮೂಲಕ ವೀಕ್ಷಿಸಿದರು.

ಸುಡು ಬಿಸಿಲಲ್ಲಿ ಬೆವರು ಹರಿಯುತ್ತಿಿದ್ದರ ನಡುವೆ ಕಲಾವಿದರು ಗಣ್ಯರ ಎದುರು ಜಾನಪದ ನೃತ್ಯ ಕಲೆಗಳನ್ನು ಪ್ರದರ್ಶಿಸಿದರೆ, ಒಂದರ ಹಿಂದೆ ಒಂದರಂತೆ ಸ್ತಬ್ಧಚಿತ್ರಗಳ ಮೆರವಣಿಗೆಯು ಹೊರಟಿತು. ಇನ್ನೇನೂ ಮೆರವಣಿಗೆ ಮುಗಿಯಬೇಕು ಎನ್ನುವ ಹಂತದಲ್ಲಿ ಕುಮ್ಕಿಿ ಆನೆಗಳೊಂದಿಗೆ ಚಿನ್ನದ ಅಂಬಾರಿಯನ್ನು ಹೊತ್ತು ನಿಂತಿದ್ದ ಅರ್ಜುನನನ್ನುಕರೆತಂದು ದೇವಿಗೆ ಪುಷ್ಪಾಾರ್ಚನೆ ಮಾಡಲಾಯಿತು. ಹೀಗಾಗಿ, ಚಿನ್ನದ ಅಂಬಾರಿ ಹೊತ್ತ ಅರ್ಜುನ ಬನ್ನಿಿಮಂಟಪ ಸೇರಲು ಆರು ಗಂಟೆ ಸಮಯವಾಯಿತು. ಅಂಬಾರಿ ಕೊನೆಯಲ್ಲಿ ಬರುವುದನ್ನೇ ಎದುರು ನೋಡುತ್ತಿಿದ್ದ ಜನಸ್ತೋೋಮ ಕಂಡೊಡನೆ ಅಮ್ಮನಿಗೆ ಭಕ್ತಿಿಯಿಂದ ನಮಿಸಿ ಕೈಮುಗಿದು ಕೃತಜ್ಞರಾದರು. ವಿಶೇಷ ಕಮಾಂಡೋ ಪಡೆ ಪೊಲೀಸರು ಅರ್ಜುನ ಸುಗಮವಾಗಿ ಸಾಗಲು ಎರಡು ಬದಿಯಲ್ಲಿ ಹಗ್ಗದ ಬ್ಯಾಾರಿಕೇಡ್ ಮಾಡಿಕೊಂಡು ಸಾಗಿದ್ದರಿಂದ ನಿಗದಿತ ಸಮಯದೊಳಗೆ ಅರ್ಜುನ ಅಂಬಾರಿ ಹೊತ್ತು ಮುಗಿಸಿ ಎಲ್ಲರಿಂದಲೂ ಸೈ ಅನ್ನಿಿಸಿಕೊಂಡನು.

750 ಕೆ.ಜಿ ತೂಕದ ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿದೇವಿ ಉತ್ಸವ ಮೂರ್ತಿಯನ್ನು ಹೊತ್ತ ಅರ್ಜುನ ರಾಜಮಾರ್ಗದಲ್ಲಿ ಸಾಗುತ್ತಿಿದ್ದಂತೆ ರಸ್ತೆೆಯ ಇಕ್ಕೆೆಲಗಳಲ್ಲಿ ಜಮಾಯಿಸಿದ್ದ ಜನಸ್ತೋೋಮ ಜೈಚಾಮುಂಡಮ್ಮ ಎಂಬ ಘೋಷಣೆಯೊಂದಿಗೆ ಕಣ್ತುಂಬಿಕೊಂಡರು.

ಮೈಸೂರು ಅಂಬಾವಿಲಾಸ ಅರಮನೆಯ ಎದುರು ನಿರ್ಮಿಸಿದ್ದ ವೇದಿಕೆಯಲ್ಲಿ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿ ಹೊತ್ತ ಚಿನ್ನದ ಅಂಬಾರಿಗೆ ಮುಖ್ಯಮಂತ್ರಿಿ ಬಿ.ಎಸ್.ಯಡಿಯೂರಪ್ಪ ಪುಷ್ಪಾಾರ್ಚನೆ ಮಾಡಿದರು. ಯುವರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸಚಿವ ವಿ.ಸೋಮಣ್ಣ, ಮೇಯರ್ ಪುಷ್ಪಲತಾ ಜಗನ್ನಾಾಥ್, ಜಿಲ್ಲಾಾಧಿಕಾರಿ ಅಭಿರಾಮ್ ಜಿ.ಶಂಕರ್, ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಇದ್ದರು.

Leave a Reply

Your email address will not be published. Required fields are marked *