Monday, 9th December 2019

ಬಿಟ್ಟು ಹೋದವರು ಕೊರಗಬೇಕು ಅಂತಹ ಜೀವನ ನಮ್ಮದಾಗಬೇಕು !

* ಪ್ರಶಾಂತ್ ಟಿ.ಆರ್

ಈ ಜಗತ್ತಿಿನಲ್ಲಿ ಜನಿಸಿದ ಪ್ರತಿಯೊಬ್ಬರೂ, ಹರೆಯಕ್ಕೆೆ ಬಂದಾಗ ಬಣ್ಣ ಬಣ್ಣದ ಕನಸುಗಳಲ್ಲಿ ಮಿಂದೇಳುತ್ತಾಾರೆ. ಚಿತ್ತಾಾರದ ಲೋಕದಲ್ಲೇ ವಿಹರಿಸುತ್ತಿಿರುತ್ತಾಾರೆ. ತನ್ನಾಾಕೆಯನ್ನು ಅರಸುತ್ತಾಾ, ಆಕೆಯ ಚಿತ್ತಾಾಕರ್ಷಣೆಗೆ ಒಳಗಾಗುತ್ತಾಾರೆ. ಆಗ ತನ್ನದೇ ಜಗತ್ತು ಮನದಲ್ಲಿ ಸೃಷ್ಟಿಿಯಾಗುತ್ತದೆ. ಆ ಗುಂಗಿನಲ್ಲಿಯೇ ದಿನದೂಡುತ್ತಾಾರೆ. ಇಂತಹ ಸ್ಥಿಿತಿಗೆ ತಲುಪುವವರಲ್ಲಿ ಯುವಕರೇ ಹೆಚ್ಚು, ಹುಡುಗನೆಂಬ ಹುಚ್ಚು ಒಂದು ಕಡೆಯಾದರೆ. ಸ್ವಾಾಂತತ್ರ್ಯವಾಗಿ ವಿಹರಿಸಬಹುದೆಂಬ ಆಲೋಚನೆ ಮತ್ತೊೊಂದು ಕಡೆ. ತನ್ನ ಪ್ರೇಯಸಿ ಹಾಗಿದ್ದಾಾಳೆ. ಅವಳೇ ಎಲ್ಲಾಾ, ಮದುದೆಯಾದರೆ ಅವಳನ್ನೇ, ಅವಳೇ ನನ್ನ ಸರ್ವಸ್ವ ಎಂಬ ಭ್ರಮಾಲೋಕದಲ್ಲಿ ಮಿಂದೇಳುತ್ತಿಿರುತ್ತಾಾರೆ. ಆದರೆ ತನಗರಿವಿಲ್ಲದೆ, ಸಮಯ ಓಡುತ್ತಿಿದೆ. ಸಮಯ ಕಳೆಯುತ್ತಿಿದೆ ಎಂಬ ಕಿಂಚಿತ್ತೂ ಅರಿವು ಆಗ ಇರುವುದಿಲ್ಲ. ತಾನು ನಡೆದದ್ದೇ ದಾರಿ ಎಂಬ ಆಶಾಭಾವನೆಯಲ್ಲೇ ದಿನಕಳೆಯುತ್ತಿಿರುತ್ತಾಾರೆ. ಸಮಯ ಕಳೆಯುತ್ತಿಿದ್ದಂತೆ, ಸಾಗುತ್ತಾಾ… ಸಾಗುತ್ತಾಾ… ಕಾಲನ ಹೊಡೆತಕ್ಕೆೆ ಸಿಕ್ಕು ಚಡಪಡಿಸುತ್ತಾಾರೆ. ತನ್ನಾಾಕೆಯ ಬಗೆಗೆ ಕಟ್ಟಿಿಕೊಂಡ ಗಾಳಿಗೋಪುರ ಒಡೆದು ಪುಡಿಪುಡಿಯಾದಾಗಲೇ ನೈಜತೆಯ ಅರಿವು ಆಕೆಗೆ ಅಥವಾ ಆತನಿಗೆ ತಿಳಿಯುವುದು. ಅರಿತು ವಾಸ್ತವಕ್ಕೆೆ ಮರಳುವುದು.

ಅಷ್ಟರಲ್ಲಾಾಗಲೇ ಜೀವನದ ಹಾದಿ ಒಂದಷ್ಟು ಸವೆದಿರುತ್ತದೆ. ಮನಸು ಹಿಂಡಿಹಿಪ್ಪೆೆಯಾಗಿರುತ್ತದೆ. ಕೆಲವೊಂದಿಷ್ಟು ಅವಕಾಶಗಳು ಕೈ ಜಾರಿ ಹೋಗಿರುತ್ತವೆ. ಹಾಗಂದ ಮಾತ್ರಕ್ಕೆೆ ಜೀವನವೇ ಕಳೆದು ಹೋಗೋದಿಲ್ಲ. ಕಾಲ ಮಿಂಚಿಲ್ಲ. ಭವಿಷ್ಯವೂ ನಮ್ಮ ಕೈಯಲ್ಲೇ ಇದೆ. ಹಾಗಾದರೆ ಮುಂದೇನು? ಎಂಬ ಚಿಂತೆ ಸಾಕಷ್ಟು ಜನರನ್ನೂ ಕಾಡಿರುತ್ತದೆ. ಕಾಡುತ್ತದೆ. ಇಂತಹ ಸಂದರ್ಭದಲ್ಲಿ ಮನಸ್ಸಿಿನ ವೇದನೆ ಹೇಳ ತೀರದು. ನಮ್ಮ ಈ ರೀತಿಯ ವರ್ತನೆ ಮನೆಯವರನ್ನೂ ಇಕ್ಕಟ್ಟಿಿನಲ್ಲಿ ಸಿಲುಕಿಸುತ್ತದೆ. ಕುಟುಂಬದ ವಾತಾವರಣವೇ ಬದಲಾದಂತಾಗುತ್ತದೆ. ಅಶಾಂತತೆ ಕಾಡಲು ಆರಂಭವಾಗಿರುತ್ತದೆ. ದುರ್ಬಲ ಮನಸಿನ ಕೆಲವರಂತೂ. ಜೀವನವನ್ನೇ ಕೊನೆಗಾಣಿಸಿಕೊಳ್ಳಲು ಬಯಸುತ್ತಾಾರೆ. ಅದು ಆತುರದ ನಿರ್ಧಾರವಷ್ಟೇ ಅಲ್ಲ. ದಡ್ಡತನವೂ ಹೌದು. ಆಕೆಯೋ ಇಲ್ಲ ಆತನೋ ತನ್ನನ್ನು ಬಿಟ್ಟು ಹೋದ ಮಾತ್ರಕ್ಕೆೆ ಜೀವನವೇ ಮುಗಿದಂತೆ ಅಲ್ಲ. ನಮಗೆ ಆಗ ಬೇಕಿರುವುದು ದೃಢ ನಿರ್ಧಾರ. ನಾನು ನಾನಾಗಿ ಬದುಕಬೇಕೆಂಬ ಹಂಬಲ. ಸಾಧಿಸಬೇಕು, ಸಾಧಿಸಿ ಜಯಿಸಬೇಕು ಎಂಬ ಛಲ, ಅಚಲ ವಿಶ್ವಾಾಸ ನಮ್ಮಲ್ಲಿ ಮೂಡಬೇಕು.

ಸಾಧನೆಯತ್ತ ಚಿತ್ತ

ನಮ್ಮನ್ನು ಬೇಡ ಎಂದು ಬಿಟ್ಟು ಹೋದವರನ್ನು ನೆನಸಿಕೊಂಡು ಯಾವತ್ತೂ ನಾವು ಕೊರಗಬಾರದು. ಅದರಲ್ಲಿ ಅರ್ಥವೂ ಇರುವುದಿಲ್ಲ. ಈ ಹಂತದಲ್ಲಿ ನಮ್ಮ ಬದುಕು ಹೇಗಿರಬೇಕೆಂಬುದನ್ನು ನಾವೇ ನಿರ್ಧಾರ ಮಾಡಬೇಕು. ಯಾರು ನಮ್ಮನ್ನು ತೊರೆದಿದ್ದಾಾರೋ ಅದಕ್ಕೆೆ ಅವರು ಕೊರಗಬೇಕು. ಅಯ್ಯೋ… ಯಾಕಾದರೂ ಅವನನ್ನು ತೊರೆದನೋ. ಆತನೊಂದಿಗೆ ಇದ್ದರೆ ಜೀವನ ಸಾರ್ಥಕವಾಗುತ್ತಿಿತ್ತು. ಅಂದಕೊಂಡಂತೆ ಬದುಕಬಹುದಿತ್ತಲ್ಲ ಎಂಬ ಕೊರಗು ಅವರನ್ನು ಕಾಡಬೇಕು. ನಮ್ಮನ್ನು ಕಳೆದುಕೊಂಡಿದಕ್ಕೆೆ ಅವರು ಪರಿತಪಿಸಬೇಕು. ಹಾಗಿರಬೇಕು ನಮ್ಮ ಜೀವನ. ಆ ರೀತಿ ಬದುಕುಕಟ್ಟಿಿಕೊಳ್ಳುವ ಹಂಬಲ ನಮ್ಮದಾಗಬೇಕು. ಕಟ್ಟಿಿಕೊಳ್ಳಲೇಬೇಕು. ಆಗಲೇ ನಮ್ಮ ಜೀವನ ಸಾರ್ಥಕ, ನಮ್ಮ ಹೆತ್ತವರಿಗೆ ನಾವು ಕೊಡುವ ಉಡುಗೊರೆ. ಸಾಧನೆಯ ಹಾದಿಯಲ್ಲಿ ಒಂದು ಸ್ಪಷ್ಟ ಗುರಿಯನ್ನು ಇಟ್ಟುಕೊಳ್ಳಿಿ, ಅದನ್ನು ನನಸಾಗಿಸುವತ್ತ ಶ್ರದ್ಧೆೆ, ಶ್ರಮ, ಪ್ರಾಾಮಾಣಿಕವಾಗಿ ಪ್ರಯತ್ನಿಿಸಿ. ಆಗ ಯಾವುದು ನಮಗೆ ಅಸಾಧ್ಯವಲ್ಲ. ಕಠಿಣವೂ ಅಲ್ಲ. ಎಲ್ಲವೂ ಸಾಧ್ಯವೇ, ಆ ದಾರಿಯಲ್ಲಿ ಜೀವನವೂ ಸಾರ್ಥಕವೇ. ಹೀಗಾದಾಗ ನಿಮ್ಮ ಕನಸು ಹೊಸ ರೂಪ ಪಡೆಯುತ್ತದೆ. ಸುಂದರ ಸಂಸಾರ ಕಟ್ಟಿಿಕೊಳ್ಳುವ ಮನಸು ನಮ್ಮದಾಗುತ್ತದೆ. ಅದೇ ನಮ್ಮ ಜೀವನದ ನಿಜವಾದ ಅರ್ಥ. ಆಯ್ಕೆೆ ನಮ್ಮದಾಗುತ್ತದೆ. ಅರಸುವುದು ತಪ್ಪಿಿ ಅರಸನಾಗಿ ನಾವು ಬಾಳುವ ಜತೆಗೆ, ನಮ್ಮನ್ನು ಅರಸಿಬರುವವರೇ ಬಹಳ ಮಂದಿಯಾಗುತ್ತಾಾರೆ. ಅಂದುಕೊಂಡ ಸಂಗಾತಿಯೇ ನಮ್ಮ ಜೀವನದ ಅರ್ಧಾಂಗಿಯಾಗುತ್ತಾಾಳೆ.

ಸಂಗಾತಿಯ ಕನವರಿಕೆ

ನಾವು ಮದುವೆಯಾಗಲು ಬಯಸುವ ಸಂಗಾತಿಯ ಬಗ್ಗೆೆ ಆಸೆಗಳು ಸಹಜ. ಅದು ಇರಬೇಕು ಕೂಡ. ನಮ್ಮ ಜೀವನದ ಜೊತೆಯಾಗುವು ಸಂಗಾತಿ ಸ್ನೇಹಿತೆಯಂತೆ ತಾಯಿಂತೆ ಇರಬೇಕೆಂಬ ಆಸೆ ನಮ್ಮೆೆಲ್ಲರಲ್ಲೂ ಇರುತ್ತದೆ. ಜೀವನವನ್ನು ಅರ್ಥೈಸಿಕೊಂಡು, ನಮ್ಮ ತನದಿಂದ ನಾವು ಬದುಕಿ ಕುಟುಂಬವನ್ನು ಸಂಭಾಳಿಸಕೊಂಡು ಹೋದರೆ, ಸಂಸಾರವೇ ಆನಂದ ಸಾಗರ. ಅಲ್ಲಿ ಪತಿಯೇ ರಾಜ, ಪತ್ನಿಿಯೇ ರಾಣಿ. ಅದಕ್ಕಿಿಂತ ಸ್ವರ್ಗಬೇರೆ ಬೇಕೆ?

Leave a Reply

Your email address will not be published. Required fields are marked *