Monday, 8th March 2021

ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ಆತ್ಮಹತ್ಯೆ

ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮಾಗಡಿ ರಸ್ತೆಯ ಪ್ರಗತಿ ಲೇ ಔಟ್ ನಲ್ಲಿದ್ದ ವೃದ್ಧಾಶ್ರಮವೊಂದರಲ್ಲಿ ಘಟನೆ ನಡೆದಿದೆ. ಪ್ರಗತಿ ಲೇ ಔಟ್ ನಲ್ಲಿರುವ ಸಂಧ್ಯಾಕಿರಣ ವೃದ್ಧಾ/ಅಬಲಾಶ್ರಮದಲ್ಲಿ ಭಾನುವಾರ ರಾತ್ರಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.

ಬಿಗ್ ಬಾಸ್ ಕನ್ನಡದಲ್ಲಿ ಸ್ಪರ್ಧಿಯಾಗಿದ್ದ ಜಯಶ್ರೀ ಅವರು ಈ ಹಿಂದೆ ಕೂಡಾ ಆತ್ಮಹತ್ಯೆಗೆ ಯತ್ನಿಸಿದ್ದರು. ಹಾಗೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬಹಿರಂಗವಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಸಂದೇಶ ಹಾಕಿದ್ದರು.

ನಂತರ ಕಿಚ್ಚ ಸುದೀಪ ಸೇರಿದಂತೆ ಸಿನಿಮಾರಂಗದ ಅನೇಕರು ಜಯಶ್ರೀಗೆ ಸಾಂತ್ವನ ಹೇಳಿದ್ದರು. ಆದರೆ, ಕೌಟುಂಬಿಕ ಸಮಸ್ಯೆ ಯಿಂದ ಬಳಲುತ್ತಿದ್ದ ಜಯಶ್ರೀ ಅವರು ಮಾನಸಿಕ ಖಿನ್ನತೆಯಿಂದ ಹೊರಬಂದಿರಲಿಲ್ಲ ಎಂದು ವರದಿಯಾಗಿದೆ. ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ‌ಠಾಣಾ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

 

Leave a Reply

Your email address will not be published. Required fields are marked *