Friday, 19th August 2022

ಅಜಾದಿ ಕಾ ಅಮೃತ ಮಹೋತ್ಸವ ವಿಜೃಂಬಣೆಯಿ0ದ ಆಚರಿಸಲು ಕಾಸುಗೌಡ ಬಿರಾದಾರ ಕರೆ

ಇಂಡಿ: ಸ್ವಾತ್ರಂತ್ರö್ಯ ಅಮೃತ ಮಹೋತ್ಸವ ಹಿನ್ನಲೆಯಲ್ಲಿ ಅ.೧೩ ರಿಂದ್ ಅ.೧೫ರ ಸೂರ್ಯಾಸ್ತದವರೆಗೆ ತಾಲೂಕಿನಾದ್ಯೆಂತ ಪ್ರತಿ ಭಾರತೀಯರ ಮನೆಗಳ ಮೇಲೆ ತ್ರೀವರ್ಣ ಧ್ವಜಾರೋಹಣ ಮಾಡುವ ಗುರಿ ಬಿಜೆಪಿ ಮಂಡಲದಿ0ದ ನಡೆಯಲಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ರಾಜಶೇಖರ ಪೂಜಾರಿ , ಜಿಲ್ಲಾ ರೈತ ಮೂರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ ಜಂಟಿಯಾಗಿ ಹೇಳಿದರು.

ಭಾರತೀಯ ಜನತಾ ಪಾರ್ಟಿ ಇಂಡಿ ಮಂಡಲ ಕಾರ್ಯಾಲಯದಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಅಜಾದಿ ಕಾ ಅಮೃತ ಮಹೋತ್ಸವ ಹರ್ ಘರ್ ತಿರಂಗಾ ಅಭಿಯಾನ ದೇಶ ವ್ಯಾಪಿ ನಡೆಯಲಿ. ಈ ಅಭಿಯಾನ ಮಂಡಲ ವಿವಿಧ ಮೋರ್ಚಾಗಳ, ಶಕ್ತಿ ಕೇಂದ್ರಗಳು, ಭೂತಗಳಲ್ಲಿ ಕಾರ್ಯಕರ್ತರು ಮನೆ ಮನೆಗಳ ಮೇಲೆ ಧ್ವಜ ಹಾರಿಸಲು ಪ್ರೇರೆಪಿಸಬೇಕು. ಮಹಿಳಾ ಮೋರ್ಚಾ ವತಿಯಿಂದ ವಂದನ್ ಭಾರತ ಮಾತಾ ಪೂಜಾ ಕಾರ್ಯಕ್ರ ಏರ್ಪಡಿಸುವುದು.

ಕ್ರೀಡೆಗಳನ್ನು ಹಮ್ಮಿಕೊಳ್ಳವುದು. ಸಸಿನೇಡುವ ಕಾರ್ಯಕ್ರಮ ಹೀಗೆ ಅನೇಕ ಕಾರ್ಯಕ್ರಮ ಹಮ್ಮಿಕೊಂಡು ದೇಶಾಭಿಮಾನ ಮೂಡುವಂತೆ ಮಾಡಬೇಕು. ಪ್ರಧಾನ ಮಂತ್ರಿ ನರೇದ್ರ ಮೋದಿಯವರು ೭೫ನೇ ಭಾರತದ ಸ್ವಾತಂತ್ರö್ಯ ದಿನೋತ್ಸವನ್ನು ದೇಶದ ದೊಡ್ಡ ಹಬ್ಬ ವನ್ನಾಗಿ ಸಂಭ್ರಮದಿ0ದ ಆಚರಿಸಲು ಹಾಗೂ ಭಾರತ ಇಡೀ ೨೦ ಕೋಟಿಗಿಂತ ಅಧಿಕ ಹೆಚ್ಚು ಮನೆಗಳ ಮೇಲೆ ತ್ರೀವರ್ಣ ಧ್ವಜಾರೋಹಣ ಮಾಡಲು ಕರೆ ನೀಡಿದ್ದಾರೆ. ಜಿಲ್ಲಾ ಬಿಜೆಪಿ ವಕ್ತಾರ ರಾಜಶೇಖರ ಪೂಜಾರಿ ಮಾತನಾಡಿದರು.

ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕೀವುಡೆ,ಶೀಲವಂತ ಉಮರಾಣಿ, ಸಿದ್ದಲಿಂಗ ಹಂಜಗಿ, ಹಣಮಂತರಾಯಗೌಡ ಪಾಟೀಲ, ಕಲ್ಲು ಕುಂಬಾರ, ಅನೀಲ ಜಮಾದಾರ, ದೆವೇಂದ್ರ ಕುಂಬಾರ, ಯಲ್ಲಪ್ಪ ಹದರಿ, ಬುದ್ದುಗೌಡ ಪಾಟೀಲ, ಜಯರಾಮ ರಾಠೋಡ, ವಿಜಯಕಮಾರ ರಾಂಪೂರೆ ಉಪಸ್ಥಿತರಿದ್ದರು.