Tuesday, 17th September 2019

‘ಮಹಾ’ ವಿವಾದ ಇತ್ಯರ್ಥಕ್ಕೆ ಬಿಜೆಪಿ ಮುಂದಡಿ

ಕೇಂದ್ರ, ರಾಜ್ಯ ಹಾಗೂ ನೆರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರ ವಿವಾದ ಇತ್ಯರ್ಥಕ್ಕೆೆ ಈಗಾಗಲೇ ಮಹಾ ಸಿಎಂ ಜತೆ ಸಭೆ ನಡೆಸಿರುವ ಬಿಎಸ್‌ವೈ ಶೀಘ್ರದಲ್ಲಿಯೇ ಗೋವಾ ಸಿಎಂ ಜತೆಯೂ ಚರ್ಚಿಸಿ ವಿವಾದ ಬಗೆಹರಿಸಲು ಯತ್ನ

ಕರ್ನಾಟಕ ಗೋವಾ ರಾಜ್ಯಗಳ ನಡುವೆ ಭಾರಿ ವಿವಾದಕ್ಕೆೆ ಕಾರಣವಾಗಿರುವ ಮಹದಾಯಿ ವಿವಾದವನ್ನು ಸರಿಪಡಿಸಬೇಕೆಂಬ ಬಹುವರ್ಷಗಳ ಬೇಡಿಕೆಗೆ ತಾತ್ವಿಿಕ ಹಂತ ಕಾಣುವ ಲಕ್ಷಣಗಳು ಗೋಚರವಾಗುತ್ತಿಿದೆ.
ಕಳೆದ ವಿಧಾನಸಭಾ ಚುನಾವಣೆ ವೇಳೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆೆ ಬಂದರೆ, ಮಹದಾಯಿ ವಿವಾದವನ್ನು ಇತ್ಯರ್ಥ ಪಡಿಸುವುದಾಗಿ ಪ್ರಣಾಳಿಕೆಯಲ್ಲಿ ಬಿಜೆಪಿ ಹೇಳಿತ್ತು. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರುವುದರಿಂದ, ಕಾಂಗ್ರೆೆಸ್ ಹಾಗೂ ಜೆಡಿಎಸ್ ನಾಯಕರು ಆರಂಭದಿಂದಲೂ ಬಿಜೆಪಿ ಮೇಲೆ ಮಹದಾಯಿ ವಿವಾದ ಇತ್ಯರ್ಥ ಪಡಿಸುವಂತೆ ಒತ್ತಡವನ್ನು ಹೇರುತ್ತಲೇ ಬಂದಿದ್ದರು. ಆದರೀಗ ಈ ವಿಚಾರಕ್ಕೆೆ ಸಂಬಂಧಿಸಿದಂತೆ ಸ್ವತಃ ಮುಖ್ಯಮಂತ್ರಿಿ ಯಡಿಯೂರಪ್ಪ ಅವರು ಉತ್ಸುಕತೆ ತೋರಿದ್ದಾಾರೆ ಎನ್ನಲಾಗಿದೆ.

ಮಹದಾಯಿ ವಿವಾದಕ್ಕೆೆ ಸಂಬಂಧಿಸಿದಂತೆ ಈಗಾಗಲೇ ಕೇಂದ್ರದೊಂದಿಗೆ ಒಂದು ಹಂತದ ಚರ್ಚೆಯನ್ನು ಯಡಿಯೂರಪ್ಪ ಅವರು ನಡೆಸಿದ್ದಾಾರೆ. ಇದರೊಂದಿಗೆ ಕಳೆದ ವಾರ ಮುಂಬೈಗೆ ತೆರಳಿದ್ದ ಯಡಿಯೂರಪ್ಪ ಮಹಾರಾಷ್ಟ್ರ ಮುಖ್ಯಮಂತ್ರಿಿ ದೇವೇಂದ್ರ ಫಡ್ನಾಾವೀಸ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾಾರೆ. ಯಡಿಯೂರಪ್ಪ ಅವರ ಮನವಿಗೆ ಪೂರಕವಾಗಿ ಫಡ್ನಾಾವೀಸ್ ಒಪ್ಪಿಿಗೆ ನೀಡಿರುವುದರಿಂದ, ಇದೀಗ ಗೋವಾ ಮುಖ್ಯಮಂತ್ರಿಿಯೊಂದಿಗೆ ಚರ್ಚಿಸಿ ವಿವಾದ ಬಗೆಹರಿಸಿಕೊಳ್ಳಲು ನಿರ್ಧರಿಸಿದ್ದಾಾರೆ.

ಶೀಘ್ರದಲ್ಲಿಯೇ ಗೋವಾ ಸಿಎಂ ಭೇಟಿ:
ಉತ್ತರ ಕರ್ನಾಟಕ ಭಾಗದಲ್ಲಿ ಮಹದಾಯಿ ವಿವಾದವನ್ನು ಶೀಘ್ರದಲ್ಲಿ ಬಗೆಹರಿಸುವಂತೆ ಒತ್ತಡ ಹೆಚ್ಚಾಾಗುತ್ತಿಿರುವುದರಿಂದ, ಇದೀಗ ಮುಖ್ಯಮಂತ್ರಿಿ ಯಡಿಯೂರಪ್ಪ ಅವರು ಗೋವಾ ಮುಖ್ಯಮಂತ್ರಿಿ ಪ್ರಮೋದ್ ಸಾವಂತ್ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದು, ಇದಕ್ಕೆೆ ಸಮಯ ನಿಗದಿ ಮಾಡುವಂತೆ ಮನವಿ ಮಾಡಿದ್ದಾಾರೆ. ಸಮಯ ನಿಗದಿಯಾಗುತ್ತಿಿದ್ದಂತೆ ಮೊದಲ ಹಂತದಲ್ಲಿ ಗೋವಾ ಮುಖ್ಯಮಂತ್ರಿಿಯೊಂದಿಗೆ ಚರ್ಚಿಸಿ ಬಳಿಕ ಮೂರು ರಾಜ್ಯದ ಮುಖ್ಯಮಂತ್ರಿಿಗಳು ಸಭೆ ನಡೆಸಿ ವಿವಾದವನ್ನು ಇತ್ಯರ್ಥ ಪಡಿಸುವ ಯೋಚನೆಯಲ್ಲಿದ್ದಾಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆೆ ಸುದ್ದಿಗಾರರೊಂದಿಗೆ ಮಾತನಾಡಿರುವ ಯಡಿಯೂರಪ್ಪ, ಮಹದಾಯಿ ವಿವಾದ ಬಗೆಹರಿಸುವ ಸಂಬಂಧ ಮೂರು ರಾಜ್ಯಗಳ ಸಭೆ ನಡೆಸಲಾಗುತ್ತಿಿದ್ದು, ಈ ಸಂಬಂಧ ಈಗಾಗಲೇ ಮಹಾರಾಷ್ಟ್ರ ಮುಖ್ಯಮಂತ್ರಿಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಿ ಸಮಾಲೋಚಿಸಲಾಗಿದೆ. ಗೋವಾ ಮುಖ್ಯಮಂತ್ರಿಿ ಅವರಿಗೆ ಸಮಯ ನಿಗದಿಪಡಿಸುವಂತೆ ಹೇಳಲಾಗಿದೆ. ಸೆ.16 ಅಥವಾ 17 ರಂದು ಗೋವಾಕ್ಕೆೆ ಭೇಟಿ ನೀಡುತ್ತಿಿದ್ದು, ಆದಷ್ಟು ಬೇಗ ಮಹದಾಯಿ ವಿವಾದ ಬಗೆಹರಿಯಲಿದೆ ಎಂದು ಆಶ್ವಾಾಸನೆ ನೀಡಿದರು.

ಎಲ್ಲೆೆಡೆ ಬಿಜೆಪಿಯದ್ದೇ ಕಾರುಬಾರು
ಮಹದಾಯಿ ವಿವಾದವನ್ನು ಬಗೆಹರಿಸಲು ಹಾಗೂ ಕರ್ನಾಟಕ ಕೇಳಿರುವಷ್ಟು ನೀರು ಪಡೆಯಲು ಇದು ಸೂಕ್ತ ಸಮಯ ಎನ್ನಲಾಗಿದೆ. ಪ್ರಮುಖವಾಗಿ ರಾಜ್ಯದಲ್ಲಿ, ಕೇಂದ್ರದಲ್ಲಿ ಬಿಜೆಪಿಯದ್ದೇ ಸರಕಾರವಿದೆ. ಇದರೊಂದಿಗೆ ನೆರೆರಾಜ್ಯ ಗೋವಾ ಹಾಗೂ ಮಹಾರಾಷ್ಟ್ರದಲ್ಲಿಯೂ ಬಿಜೆಪಿಯೇ ಅಧಿಕಾರದಲ್ಲಿರುವುದರಿಂದ, ಈ ಸಮಸ್ಯೆೆಯನ್ನು ಬಗೆಹರಿಸುವುದು ಸುಲಭ ಎನ್ನುವ ಯೋಜನೆಯಲ್ಲಿ ಮುಖ್ಯಮಂತ್ರಿಿ ಯಡಿಯೂರಪ್ಪ ಇದ್ದಾಾರೆ. ಆದ್ದರಿಂದಲೇ ಇದೀಗ ಗೋವಾ ಮುಖ್ಯಮಂತ್ರಿಿಯೊಂದಿಗೆ ಈ ವಿಚಾರವಾಗಿ ಚರ್ಚಿಸಲು ನಿರ್ಧರಿಸಿದ್ದಾಾರೆ ಎಂದು ಮೂಲಗಳು ತಿಳಿಸಿವೆ.
ವಿವಾದವಿರುವ ರಾಜ್ಯಗಳಲ್ಲಿ ಹಾಗೂ ಕೇಂದ್ರ ಸರಕಾರದಲ್ಲಿ ಬಿಜೆಪಿಯೇ ಅಧಿಕಾರದಲ್ಲಿರುವಾಗ ಈ ಸಮಸ್ಯೆೆ ಬಗೆಹರಿಸುವುದು ಸುಲಭ. ವಿವಾದವನ್ನು ಈ ವಾತಾವರಣದಲ್ಲಿ ಬಗೆಹರಿಸದಿದ್ದರೆ ಮುಂದಿನ ದಿನದಲ್ಲಿ ಇದನ್ನು ಬಗೆಹರಿಸುವುದು ಕಷ್ಟದ ಕೆಲಸ ಎನ್ನುವ ಮಾತುಗಳು ಕೇಳಿಬಂದಿದೆ.

ಮಹದಾಯಿ ವಿವಾದ ಬಗೆಹರಿಸುವ ಸಂಬಂಧ ಮೂರು ರಾಜ್ಯಗಳ ಸಭೆ ನಡೆಸಲಾಗುತ್ತಿಿದ್ದು, ಈ ಸಂಬಂಧ ಈಗಾಗಲೇ ಮಹಾರಾಷ್ಟ್ರ ಮುಖ್ಯಮಂತ್ರಿಿ ದೇವೇಂದ್ರ ಫಡ್ನಾಾವೀಸ್ ಅವರನ್ನು ಭೇಟಿ ಮಾಡಿ ಸಮಾಲೋಚಿಸಲಾಗಿದೆ. ಇದೀಗ ಗೋವಾ ಮುಖ್ಯಮಂತ್ರಿಿ ಅವರನ್ನು ಭೇಟಿಯಾಗಲು ಸಮಯ ನಿಗದಿ ಮಾಡಿದ್ದು, ಸೆ.16 ಅಥವಾ 17 ಭೇಟಿಯಾಗಲಿದ್ದೇನೆ.
– ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಿ

Leave a Reply

Your email address will not be published. Required fields are marked *