ಅರ್ಧ ಗಂಟೆ ಬಳಿಕ ವಿಮಾನವು ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ನಂತರ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಇಂಡಿಗೋ ಸಂಸ್ಥೆಗೆ ಸೇರಿದ ವಿಮಾನದಲ್ಲಿ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಿಂದ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಮತ್ತಿತರರು ಹುಬ್ಬಳ್ಳಿಗೆ ಹೊರಟಿದ್ದರು.
ವಿಮಾನವು ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ ಲ್ಯಾಂಡಿಂಗ್ ಆಗಬೇಕಿತ್ತು. ಆದರೆ,ದಟ್ಟ ಮಂಜು ಕವಿದಿದ್ದರಿಂದ ವಿಮಾನವನ್ನು ಲ್ಯಾಂಡಿಂಗ್ ಮಾಡಲು ವಾಯು ಸಂಚಾರ ನಿಯಂತ್ರಣದಿಂದ ಅನುಮತಿ ಸಿಗಲಿಲ್ಲ. ಕೊನೆಗೆ ವಿಮಾನವನ್ನು ಮಂಗ ಳೂರಿನ ಬಜ್ಪೆ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡಲು ತೀರ್ಮಾನಿಸಲಾಯಿತು.
ಈ ದಿಢೀರ್ ಬೆಳವಣಿಗೆಯಿಂದಾಗಿ ಬೊಮ್ಮಾಯಿ ಹಾಗೂ ಜೋಶಿ ಕುಟುಂಬದವರು ಮತ್ತು ಸಿಎಂ ಕಚೇರಿಯ ಸಿಬ್ಬಂದಿಗಳು ತುಸು ಕಾಲ ಆತಂತಕ್ಕೊಳಗಾದರು.
ಮಂಗಳೂರಿನಲ್ಲಿ ಲ್ಯಾಂಡ್ ಮಾಡಲು ಅವಕಾಶ ನೀಡುವಂತೆ ಎಟಿಸಿಗೆ ಧಾರವಾಡದ ಜಿಲ್ಲಾಕಾರಿ, ಎಸ್ಪಿ ಸೇರಿದಂತೆ ಮತ್ತಿತರ ಅಧಿಕಾರಿಗಳು ಮನವಿ ಮಾಡಿದರು.