Friday, 19th August 2022

ಟ್ರೆಂಡ್ ಆದ ’ಬಾಯ್ಕಾಟ್ ಲಾಲ್ ಸಿಂಗ್ ಚಡ್ಡಾ’ ಹ್ಯಾಶ್ ಟ್ಯಾಗ್

ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್ ಹಾಗೂ ಕರೀನಾ ಕಪೂರ್ ಅಭಿನಯದ ಚಿತ್ರ ‘ಲಾಲ್ ಸಿಂಗ್ ಚಡ್ಡಾ’ ಆ.11ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ.

ಆದರೆ, ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಟ್ವಿಟರ್ ನಲ್ಲಿ ‘ಬಾಯ್ಕಾಟ್ ಲಾಲ್ ಸಿಂಗ್ ಚಡ್ಡಾ’ ಎಂಬ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದ್ದು, ಇದು ಅಮೀರ್ ಖಾನ್ ಅವರನ್ನು ಕಳವಳಕ್ಕೆ ಈಡು ಮಾಡಿದೆ.

ಈ ಕುರಿತಂತೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಅವರು, ಇದು ನನ್ನ ಮನಸ್ಸಿಗೆ ನೋವುಂಟು ಮಾಡಿದೆ. ದಯವಿಟ್ಟು ನನ್ನ ಚಿತ್ರವನ್ನು ಬಾಯ್ಕಾಟ್ ಮಾಡಬೇಡಿ. ಚಿತ್ರ ಪ್ರೇಮಿಗಳೆಲ್ಲರೂ ವೀಕ್ಷಿಸಿ ಎಂದು ಮನವಿ ಮಾಡಿದ್ದಾರೆ.

‘ಲಾಲ್ ಸಿಂಗ್ ಚಡ್ಡಾ’ ಹಾಲಿವುಡ್ ನ ಆಸ್ಕರ್ ವಿಜೇತ ಚಿತ್ರ ‘ಫಾರೆಸ್ಟ್ ಗಂಪ್’ ರಿಮೇಕ್ ಆಗಿದ್ದು, ಅಮೀರ್ ಖಾನ್ ಹಾಗೂ ಕರೀನಾ ಕಪೂರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಕರೀನಾ ಕಪೂರ್ ‘ತಲಾಶ್’ ಮತ್ತು ‘ತ್ರೀ ಈಡಿಯಟ್ಸ್’ ಬಳಿಕ ಮೂರನೇ ಚಿತ್ರದಲ್ಲಿ ಅಮೀರ್ ಖಾನ್ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ.

ನಾಲ್ಕು ವರ್ಷಗಳ ಬಳಿಕ ಅಮೀರ್ ಖಾನ್ ಅವರ ಚಿತ್ರ ಬಿಡುಗಡೆಯಾಗುತ್ತಿದ್ದು, ಹೀಗಾಗಿ ಅವರ ಅಭಿಮಾನಿಗಳು ಕುತೂಹಲ ದಿಂದ ಕಾಯುತ್ತಿದ್ದಾರೆ.