Monday, 5th December 2022

ಬಾಕ್ಸ್ ಆಫೀಸ್‌ನಲ್ಲಿ ಬ್ರಹ್ಮಾಸ್ತ್ರ ಅದ್ಭುತ ಕಲೆಕ್ಷನ್

ಮುಂಬೈ: ಬಾಲಿವುಡ್ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ ‘ಬ್ರಹ್ಮಾಸ್ತ್ರ ಭಾಗ 1: ಶಿವ’ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಎಲ್ಲಾ ಸೂಪರ್‌ಹಿಟ್ ಚಿತ್ರಗಳನ್ನು ಮೀರಿಸಿದೆ.

‘ಬ್ರಹ್ಮಾಸ್ತ್ರ ಮೊದಲ ಭಾಗ: ಶಿವ’ ಚಿತ್ರವು ಬಿಡುಗಡೆಯಾದ ಮೊದಲ ದಿನವೇ ಅದ್ಭುತ ಕಲೆಕ್ಷನ್ ಮಾಡಿದ್ದು ಇದು ವಾರಾಂತ್ಯ ದವರೆಗೂ ಮುಂದೂವರೆದಿದೆ. ಮೂರು ದಿನಗಳಲ್ಲಿ ವಿಶ್ವದಾದ್ಯಂತ 225 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ.

ಕನ್ನಡ ಚಲನಚಿತ್ರ ‘ಕೆಜಿಎಫ್ 2’ ಮೊದಲ ವಾರಾಂತ್ಯದಲ್ಲಿ 193.99 ಕೋಟಿ ರೂಪಾಯಿಗಳನ್ನು ಗಳಿಸಿತ್ತು. ಇದುವರೆಗೆ ಹಿಂದಿ ಯಲ್ಲಿ ಬಿಡುಗಡೆಯಾದ ಚಲನಚಿತ್ರಗಳಲ್ಲಿ ಮೊದಲ ವಾರಾಂತ್ಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ದಾಖಲೆಯಾಗಿದೆ.

ಹಿಂದಿ ಚಿತ್ರ ‘ಬ್ರಹ್ಮಾಸ್ತ್ರ ಭಾಗ ಒನ್: ಶಿವ’ ಮೊದಲ ವಾರಾಂತ್ಯದಲ್ಲಿ ಇಷ್ಟು ದೊಡ್ಡ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದ ಈ ವರ್ಷದ ಮೊದಲ ಚಿತ್ರವಾಗಿದೆ.

ವಾರಾಂತ್ಯದಲ್ಲಿ 122.58 ಕೋಟಿ ರೂ. ಕಲೆಕ್ಷನ್
ಶುಕ್ರವಾರ 36.42 ಕೋಟಿ ರೂಪಾಯಿಗಳ ಓಪನಿಂಗ್‌ ಕಲೆಕ್ಷನ್ ನೊಂದಿಗೆ ಬಾಲಿವುಡ್ ಅನ್ನು ಮತ್ತು ಹಿಂದಿ ಚಲನಚಿತ್ರಗಳನ್ನು ಬಹಿಷ್ಕಾರದ ಪ್ರವೃತ್ತಿಯನ್ನು ಉತ್ತೇಜಿಸುವವರನ್ನು ಆಶ್ಚರ್ಯಗೊಳಿಸಿತು.

ಚಿತ್ರವು ಶನಿವಾರದಂದು ದೇಶೀಯ ಬಾಕ್ಸ್ ಆಫೀಸ್‌ನಲ್ಲಿ 41.36 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ ಮತ್ತು ಭಾನುವಾರ ರಾತ್ರಿಯ ಪ್ರದರ್ಶನದ ನಂತರ ಆರಂಭಿಕ ಅಂಕಿಅಂಶಗಳ ಪ್ರಕಾರ 44.80 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ.

ಈ ಗಳಿಕೆಯೊಂದಿಗೆ ಚಿತ್ರವು ಮೊದಲ ವಾರಾಂತ್ಯದ ಗಳಿಕೆಯಲ್ಲಿ ‘ಸಂಜು’, ‘ಟೈಗರ್ ಜಿಂದಾ ಹೈ’, ‘ಪದ್ಮಾವತ್’, ‘ಧೂಮ್ 3’, ‘ದಂಗಲ್’ ಮತ್ತು ‘ಚೆನ್ನೈ ಎಕ್ಸ್‌ಪ್ರೆಸ್’ ಚಿತ್ರಗಳನ್ನು ಹಿಂದಿಕ್ಕಿದೆ.