Sunday, 31st May 2020

ವಿದ್ಯಾರ್ಥಿಗಳಿಗೆ ಬೆಳಗಿನ ಉಪಹಾರ ಸೌಲಭ್ಯ

ತ್ಯಾಗರಾಜ ಕೋ-ಆಪರೇಟಿವ್ ‘ಬಾಲವಿಕಾಸ ಉಳಿತಾಯ ಯೋಜನೆ’ ಸಮಾರಂಭವನ್ನು ಸಚಿವ ಸುರೇಶ್ ಕುಮಾರ್ ಉದ್ಘಾಾಟಿಸಿದರು. ಜ್ಞಾಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರ, ಬ್ಯಾಾಂಕ್ ಅಧ್ಯಕ್ಷ ಎಂ.ಆರ್.ವೆಂಕಟೇಶ್ ಇತರರು ಇದ್ದರು.

ತ್ಯಾಾಗರಾಜ ಬಾಲವಿಕಾಸ ಉಳಿತಾಯ ಯೋಜನೆ ಕಾರ್ಯಕ್ರಮದಲ್ಲಿ ಸಚಿವ ಸುರೇಶ್ ಕುಮಾರ್ ಘೋಷಣೆ

ಸರಕಾರಿ ಹಾಗೂ ಶಾಲೆಗಳ ಸುಮಾರು ಐದು ಲಕ್ಷ ವಿದ್ಯಾಾರ್ಥಿಗಳಿಗೆ ಬೆಳಗಿನ ಉಪಾಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿಿದೆ ಎಂದು ಪ್ರಾಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.

ತ್ಯಾಾಗರಾಜ ಕೋ-ಆಪರೇಟಿವ್ ಬ್ಯಾಾಂಕ್ ವತಿಯಿಂದ ನಗರದ ಪತ್ತಿನ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ತ್ಯಾಾಗರಾಜ ಬಾಲವಿಕಾಸ ಉಳಿತಾಯ ಯೋಜನೆಯನ್ನು ಉದ್ಘಾಾಟಿಸಿ ಮಾತನಾಡಿದ ಅವರು, ಸತ್ಯಸಾಯಿ ಅನ್ನಪೂರ್ಣ ಟ್ರಸ್‌ಟ್‌ ಸಹಯೋಗದೊಂದಿಗೆ ಪಾವಗಢದಲ್ಲಿ ಬೆಳಗಿನ ಉಪಾಹಾರ ಕಾರ್ಯಕ್ರಮಕ್ಕೆೆ ಚಾಲನೆ ನೀಡಲಾಗುತ್ತಿದೆ. ಈ ತಿಂಗಳ ಅಂತ್ಯದೊಳಗೆ ಐದು ಲಕ್ಷ ಈ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸಿದ್ಧತೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಜಾಗತೀಕರಣ ಹಾಗೂ ಆಧುನೀಕರಣದ ಪರಿಣಾಮಗಳು ಸಮಾಜದಲ್ಲಿ ಕೊಳ್ಳುಬಾಕ ಸಂಸ್ಕೃತಿಯನ್ನು ಹುಟ್ಟುಹಾಕಿದೆ. ಇದರಿಂದಾಗಿ ಅನಗತ್ಯ ವಸ್ತುಗಳನ್ನು ಖರೀದಿಸುವಂತಹ ಗೀಳಿಗೆ ಬೀಳುತ್ತಿದ್ದೇವೆ. ಹೀಗಾಗಿ ಇಂದಿನ ಯುವ ಜನತೆ ಇಂತಹ ದುಂದುವೆಚ್ಚಗಳಿಂದ ದೂರವಾಗಿ ಉಳಿತಾಯದ ಮಹತ್ವವನ್ನು ಅರಿಯುವ ಅಗತ್ಯವಿದೆ ಎಂದು ಹೇಳಿದರು.

ತ್ಯಾಾಗರಾಜ ಕೋ-ಅಪರೇಟಿವ್ ಬ್ಯಾಾಂಕ್ ವತಿಯಿಂದ ಬಾಲವಿಕಾಸ ಉಳಿತಾಯ ಯೋಜನೆಯನ್ನು ಜಾರಿ ಮಾಡಿರುವುದು ಶ್ಲಾಾಘನೀಯ. ಇದರಿಂದ ವಿದ್ಯಾಾರ್ಥಿ ದೆಸೆಯಿಂದಲೇ ಹಣದ ಉಳಿತಾಯದ ಜಾಣ್ಮೆೆ, ಜವಾಬ್ದಾಾರಿಯನ್ನು ಕಲಿಯಲು ಉತ್ತಮ ಅವಕಾಶವಾಗಿದೆ. ಈ ಯೋಜನೆಯ ಕುರಿತು ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ರಾಜ್ಯದ ಎಲ್ಲ ಶಾಲೆಗಳಲ್ಲೂ ಪ್ರಾಾರಂಭಿಸಲು ಚರ್ಚಿಸಲಾಗುವುದು ಎಂದು ಹೇಳಿದರು.

ಶಾಸಕ ರವಿ ಸುಬ್ರಹ್ಮಣ್ಯ ಮಾತನಾಡಿ, ವಿದ್ಯಾಾರ್ಥಿಗಳು ಹಣವನ್ನು ಉಳಿತಾಯ ಮಾಡಬೇಕೆಂಬ ಒಂದೇ ಉದ್ದೇಶದಿಂದ ತಮ್ಮ ತಂದೆ-ತಾಯಿಗಳ ಬಳಿ ಹಣಕ್ಕಾಾಗಿ ಒತ್ತಾಾಯ ಮಾಡಬಾರದು. ತಮ್ಮ ಖರ್ಚಿಗೆ ಕೊಟ್ಟ ಹಣದಲ್ಲಿ ಸ್ವಲ್ಪ ಪ್ರಮಾಣವನ್ನು ಉಳಿತಾಯ ಮಾಡುವಂತಹ ಮನಸ್ಥಿಿತಿಯನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ

ತ್ಯಾಾಗರಾಜ ಕೋ-ಅಪರೇಟಿವ್ ಬ್ಯಾಾಂಕ್‌ನಲ್ಲಿ ಹಣವನ್ನು ಕೂಡಿಡುವ ವಿದ್ಯಾಾರ್ಥಿಗಳಿಗೆ ಉನ್ನತ ವಿದ್ಯಾಾಭ್ಯಾಾಸಕ್ಕಾಾಗಿ ಯಾವುದೇ ಭದ್ರತೆಯಿಲ್ಲದೆ ಹಣಕಾಸಿನ ನೆರವು ನೀಡಲಾಗುವುದು. ವಿದ್ಯಾಾರ್ಥಿಗಳಿಗೆ ಹಾಗೂ ಪೋಷಕರಿಗೆ ಉಳಿತಾಯದ ಮಹತ್ವದ ಕುರಿತು ಆರ್ಥಿಕ ತಜ್ಞರಿಂದ ಉಪನ್ಯಾಾಸವನ್ನು ನಿರಂತರವಾಗಿ ಏರ್ಪಡಿಸುವ ಕಾರ್ಯಕ್ರಮ ಹಮ್ಮಿಿಕೊಳ್ಳಲಾಗುವುದು.
-ಸುರೇಶ್ ಕುಮಾರ್
ಪ್ರಾಾಥಮಿಕ ಶಿಕ್ಷಣ ಸಚಿವ

2 ಸಾವಿರ ವಿದ್ಯಾಾರ್ಥಿಗಳ ನೋಂದಣಿ
ಸರಕಾರಿ ಹಾಗೂ ಅನುದಾನಿತ ಶಾಲೆಯ ವಿದ್ಯಾಾರ್ಥಿಗಳಿಗಾಗಿ ಬಾಲವಿಕಾಸ ಉಳಿತಾಯ ಯೋಜನೆಯನ್ನು ಜಾರಿಗೆ ತರಲಾಗಿದೆ. ಈಗಾಗಲೇ ಈ ಸುಮಾರು ಎರಡು ಸಾವಿರ ವಿದ್ಯಾಾರ್ಥಿಗಳು ನೋಂದಣಿಯಾಗಿದ್ದಾರೆ. ಇವರು ಬ್ಯಾಾಂಕ್‌ನಲ್ಲಿ ಕೂಡಿಟ್ಟ ಹಣಕ್ಕೆೆ ವಾರ್ಷಿಕ ಶೇ.6ರಷ್ಟು ಬಡ್ಡಿಿ ಕೊಡಲಾಗುವುದು ಎಂದು ತ್ಯಾಾಗರಾಜ ಕೋ-ಅಪರೇಟಿವ್ ಬ್ಯಾಾಂಕ್ ಅಧ್ಯಕ್ಷ ಡಾ.ಎಂ.ಆರ್.ವೆಂಕಟೇಶ್ ತಿಳಿಸಿದರು.

ವಿದ್ಯಾಾರ್ಥಿಗಳು ಹಣ ಕೂಡಿಡುವುದೆಂದರೆ ಕೇವಲ ಹಣದ ಉಳಿತಾಯ ಮಾತ್ರವಲ್ಲ, ಅದೊಂದು ಆಟವಾಗಿ, ಲೆಕ್ಕದ ಪಾಠವಾಗಿ ಹಾಗೂ ಜವಾಬ್ದಾಾರಿಯ ವೌಲ್ಯವನ್ನು ಕಲಿಯುವಂಥದ್ದು. ಹೀಗಾಗಿ ಬಾಲವಿಕಾಸ ಉಳಿತಾಯ ಯೋಜನೆ ತುಂಬಾ ಅಗತ್ಯ.
ಚಂದ್ರಶೇಖರ ಕಂಬಾರ, ಹಿರಿಯ ಸಾಹಿತಿ

Leave a Reply

Your email address will not be published. Required fields are marked *