Monday, 8th March 2021

ನಂಬಿಸಿ ಮತಾಂತರ ಮಾಡುವುದು ಅಪರಾಧ

ಅಭಿವ್ಯಕ್ತಿ

ಉಮಾ ಮಹೇಶ ವೈದ್ಯ

ದೇವರ ಪ್ರತಿಮೆಗಳನ್ನು ಪೂಜಿಸಬೇಡಿ, ಫೋಟೋಗಳನ್ನು ತೆಗೆದು ಹಾಕಿ, ನೀವು ಒಂದು ವೇಳೆ ನಿಜವಾದ ದೇವರಾದ ನಮ್ಮ ಧರ್ಮವನ್ನು ಒಪ್ಪಿಕೊಂಡರೆ ನಿಮ್ಮ ಬಡತನ, ರೋಗ ರುಜಿನಗಳು ನಿರ್ಮೂಲನೆಯಾಗುತ್ತವೆ ಎಂದು ನಂಬಿಸಿ ದರೆ ಅಥವಾ ನಂಬಿಸಲು ಪ್ರಯತ್ನಿಸಿದರೆ ಅಂಥವರ ವಿರುದ್ಧ ಈ ಎರಡೂ ಕಾನೂನುಗಳಡಿ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯ. ದೇವರು ಹಾಗೂ ಧರ್ಮ ಇವು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ನಂಬಿಕೆಗಳು ಹಾಗೂ ಶ್ರದ್ಧೆ. ನಮ್ಮ ಸಂವಿ ಧಾನ ಪ್ರತಿಯೊಬ್ಬ ನಾಗರಿಕನಿಗೂ ತಾನು ನಂಬಿರುವ ಧರ್ಮದ ಆಚರಣೆಗಳನ್ನು ಯಾವುದೇ ಅಡೆತಡೆಯಿಲ್ಲದೇ ಆಚರಿಸುವ ಸಂವಿಧಾನಾತ್ಮಕ ಹಕ್ಕನ್ನು ನೀಡಿದೆ. ತನ್ನ ಧರ್ಮವೇ ಶ್ರೇಷ್ಠ, ತನ್ನ ದೇವರೊಬ್ಬನೇ ದೇವರು ಎಂದು ಹೇಳಿ ಕೈಗೊಳ್ಳುವ ಕೃತ್ಯಗಳು ಸಂವಿಧಾನ ನೀಡಿದ ಹಕ್ಕುಗಳನ್ನು ಉಲ್ಲಂಘಿಸುವ ಅಕ್ಷ್ಯಮ್ಯ ಅಪರಾಧ.

ಇತ್ತೀಚಿಗೆ ಸಾಮಾಜಿಕ ಜಾಲ ತಾಣವನ್ನು ಹಾಗೇ ಗಮನಿಸುತ್ತಿದ್ದಾಗ, ಒಂದು ವಿಡಿಯೋ ದೃಶ್ಯಾವಳಿ ಗಮನ ಸೆಳೆಯಿತು.

ಒಂದು ಧರ್ಮದ ಪ್ರಚಾರದ ಸಭೆ ನಡೆಯುತ್ತಿತ್ತು. ನೆರೆದವರೆಲ್ಲರಿಗೆ ಉಪನ್ಯಾಸ ನೀಡುತ್ತಿದ್ದ ವ್ಯಕ್ತಿಯೊಬ್ಬ ತನ್ನ ಧರ್ಮದ ದೇವರೊಬ್ಬನೇ ದೇವರು ಉಳಿದ ಧರ್ಮದ ದೇವರುಗಳು ದೇವರಲ್ಲ ಆದ್ದರಿಂದ ಯಾವ ರೋಗಿ ತನ್ನ ಧರ್ಮ ಹಾಗೂ ದೇವರ
ಇರುವಿಕೆಯನ್ನು ಒಪ್ಪಿಕೊಂಡು ಅವನನ್ನು ಆರಾಧಿಸಿದರೆ ದೇವರ ಹೆಸರಿನಲ್ಲಿ ತಾನು ಕೈ ಯಾಡಿಸಿ, ಅಥವಾ ಅಗೋಚರವಾಗಿ ಶಕ್ತಿಯ ರೂಪದಲ್ಲಿ ರೋಗಿಗಳ ರೋಗವನ್ನು ಗುಣಪಡಿಸಬಲ್ಲೆ ಎಂದು ವಾಗ್ದಾನ ಮಾಡತೊಡಗುತ್ತಾನೆ.

ಅದೇ ಸಮಯದಲ್ಲಿ ವೇದಿಕೆಯ ಮೇಲೆ ಪಾರ್ಶ್ವ ವಾಯು ಪೀಡಿತ ವ್ಯಕ್ತಿಯನ್ನು ಗಾಲಿ ಕುರ್ಚಿಯ ಮೇಲೆ ಕರೆತರಲಾಗುತ್ತದೆ. ಆತನ ರೋಗಿಯ ಹೆಸರು ಕೇಳಲಾಗಿ ಆತ ಅನ್ಯ ಧರ್ಮದ ಸಂಬಂಽತ ತನ್ನ ಹೆಸರನ್ನು ಹೇಳುತ್ತಾನೆ. ತಾನು ಕಳೆದ ಹಲವು ವರ್ಷಗಳಿಂದ ಪಾರ್ಶ್ವವಾಯು ಪೀಡಿತನಾಗಿದ್ದು ತನ್ನ ಧರ್ಮದ ಎಲ್ಲ ದೇವರನ್ನು ಪೂಜಿಸಿದರೂ ಏನೂ ಫಲ ಕಾಣಲಿಲ್ಲ.

ಡಾಕ್ಟರುಗಳೂ ಸಹ ಗುಣಪಡಿಸಲಾರದೇ ಕೈ ಚೆಲ್ಲಿದ್ದಾರೆ ಎಂದು ಹೇಳಿದಾಗ, ಉಪನ್ಯಾಸ ನೀಡುವ ವ್ಯಕ್ತಿ ಕೊನೆಗೆ ಈ ಧರ್ಮದ ದೇವರ ಆಶ್ರಯಕ್ಕೆ ಬಂದಿದ್ದು ಹಿಂದಿನ ಧರ್ಮದ ದೇವರುಗಳು ದೇವರಲ್ಲ, ಈಗಿರುವ ಧರ್ಮದ ದೇವನೊಬ್ಬನೇ ದೇವರು ಎಂದು
ನಂಬುತ್ತೇನೆ ಎಂದು ಖಚಿತವಾಗಿ ಹೇಳಿ ಈ ಧರ್ಮ ಅಥವಾ ಮತಕ್ಕೆ ಅಪ್ಪಿಕೊಂಡಿದ್ದೇನೆ ಎಂದು ಕೂಗಿ ಹೇಳು ಎಂದು ಒಪ್ಪಿಸಿ ನಂತರ ಕೈಯಾಡಿಸಿ, ಅರರರರರರರಾ ಎನ್ನುತ್ತಾ ಆ ರೋಗಿಯ ದೇಹದ ಮೇಲೆ ಕೈಯಾಡಿಸಿದಾಗ, ಗಾಲಿ ಕುರ್ಚಿಯ ಮೇಲಿದ್ದ
ಆ ರೋಗಿ ತನ್ನ ಮೈ ಮೇಲೆ ಆವೇಶ ಬಂದಂತೆ ಆಡಿ ಕುರ್ಚಿಯಿಂದ ಪವಾಡವೆನ್ನುವಂತೆ ಮೇಲೆದ್ದು ತನ್ನ ಎರಡೂ ಕಾಲುಗಳ ಮೇಲೆ ನಿಂತು ಆ ಸ್ಥಳದಲ್ಲಿಯೇ ಓಡಾಡತೊಡುಗುತ್ತಾನೆ ಹಾಗೂ ತನ್ನ ಹೊಸ ದೇವರ ಬಗ್ಗೆ ಗುಣಗಾನ ಮಾಡತೊಡಗುತ್ತಾನೆ.

ಈ ರೀತಿಯ ಚಿತ್ರಣಗಳು ಸಾಕಷ್ಟು ಕಾಣಸಿಗುತ್ತವೆ. ಕೈ ಮಾಡಿದಲ್ಲೆಲ್ಲ ನೆರೆದ ಜನ ಆವೇಶ ಬಂದವರಂತೆ ಅನಾಮತ್ತಾಗಿ ಬೀಳುವುದು ನಂತರ ದೇವರ ಜಲ ಪ್ರೋಕ್ಷಣೆಯಿಂದ ಗುಣವಾದವರಂತೆ ತೋರಿಸುವ ಎಲ್ಲ ಪ್ರಹಸನಗಳನ್ನು ದುರ್ಬಲ ಮನಸ್ಸಿನ ವ್ಯಕ್ತಿಗಳನ್ನು ತಮ್ಮ ಮತಾಂತರದ ಬಲೆಯೊಳಗೆ ಬೀಳಿಸಿಕೊಳ್ಳುವ ಮೋಸದ ಜಾಲವೆಂಬುದು ಗಟ್ಟಿ ಮನಸ್ಸಿನವರಿಗೆ ಕಂಡು ಬರುವ ಸತ್ಯ.

ಈ ದೇವರ ಹೆಸರಿನಲ್ಲಿ ರೋಗ ಗುಣಪಡಿಸುವ ಮೋಸದ ಕೃತ್ಯ ಅಪರಾಧವೇ? ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದಂತೆ ನಮ್ಮ ಕಾನೂನುಗಳಲ್ಲಿಯೇ ಅದಕ್ಕೆ ಉತ್ತರ ಕಂಡು ಬರುತ್ತದೆ. THE DRUGS AND MAGIC REMEDIES (OBJECTIONABLE
ADVERTISEMENTS) ACT, 1954 ಈ ಅಧಿನಿಯಮ ವಿಶೇಷ ಅಧಿನಿಯಮವಾಗಿದ್ದು, ಈ ಕಾನೂನಿನಡಿ ಯಾವುದೇ ವ್ಯಕ್ತಿ ತಾನು ದೇವರ ಹೆಸರಿನಲ್ಲಿ, ಮಂತ್ರದ ಮೂಲಕ, ತಲ್ಸಿಮಾ ಮೂಲಕ ಪವಾಡದ ರೀತಿಯಲ್ಲಿ ರೋಗ ಗುಣಪಡಿಸಿತ್ತೇನೆ ಎಂದು ಹೇಳುವುದೇ ಒಂದು ಅಪರಾಧ.

ಈ ಅಧಿನಿಯಮದಡಿ “magic remedy‟ includes a talisman, mantra, kavacha, and any other charm of any kind which is alleged to possess miraculous powers for or in the diagnosis, cure, mitigation, treatment or prevention of any disease in human beings or animals or for affecting or influencing in any way the structure or any organic function of the body of human beings or animals; ಎಂದು ವ್ಯಾಖ್ಯಾನಿಸಲಾಗಿದೆ.

ಮತಾಂತರವಾದರೆ ರೋಗವನ್ನು ಪವಾಡ ಸದೃಶವಾಗಿ ನಿವಾರಣೆಯಾಗುತ್ತದೆ ಎಂದು ಹೇಳುವುದು ಹಾಗೂ ನಂಬಿಸುವುದು ಈ
ಅಧಿನಿಯಮದ ಕಲಂ ೭ರಡಿ, ಆರು ತಿಂಗಳವರೆಗೆ ಶಿಕ್ಷೆಗೆ ಒಳಪಡುವ ಶಿಕ್ಷಾರ್ಹ ಅಪರಾಧವಾಗಿದೆ. ಈ ರೀತಿಯಲ್ಲಿಯೇ ಮತಾಂತರವನ್ನೇ ತಮ್ಮ ವೃತ್ತಿಯನ್ನಾಗಿ ಮಾಡಕೊಂಡ ವ್ಯಕ್ತಿ ಅಥವಾ ಸಂಸ್ಥೆಗೆ ಈ ಅಧಿನಿಯಮದಡಿ ಕಲಂ ನ್ನು ಉಲ್ಲಂಘಿ ಸಿದ ಅಪರಾಧವೆಸಗಿ ಶಿಕ್ಷೆಗೆ ಒಳಪಡುತ್ತಾರೆ. ಈ ಅಧಿನಿಯಮದಲ್ಲಿನ ಅಪರಾಧಗಳು ಕಾಗ್ನಿಜೇಬಲ್ ಅಪರಾಧಗಳಾಗಿದ್ದು, ನ್ಯಾಯಾಲಯದಿಂದ ವಾರೆಂಟ್ ಪಡೆಯದೇ ಅಪರಾಽಗಳನ್ನು ದಸ್ತಗೀರ ಮಾಡುವ ಅಧಿಕಾರ ಹೊಂದಿರುತ್ತಾರೆ ಎಂಬುದು
ಗಮನಾರ್ಹ.

ಧರ್ಮದ ಹೆಸರಿನಲ್ಲಿ, ದೇವರ ಹೆಸರಿನಲ್ಲಿ ತಮ್ಮ ಮತದ ಪ್ರಚಾರ ಮಾಡುವ ಜಾಹೀರಾತುಗಳು ಹಾಗೂ ಜನರನ್ನು ಸೇರಿಸಿ ಅವರ ಮುಗ್ಧ ಮನಸ್ಸುಗಳ ಮೇಲೆ ಅನುಚಿತ ಪ್ರಭಾವ ಬೀರಿ ಅವರು ಆರಾಧಿಸುವ ದೇವರಗಳನ್ನು ಹೀಯಾಳಿಸಿ ಮನೆಯಲ್ಲಿರುವ ದೇವರ ಫೋಟೋಗಳನ್ನು ತಗೆದು ಹಾಕುವಂತೆ ಪ್ರೇರೇಪಿಸುವ ಒಂದು ವೇಳೆ ಆ ರೀತಿ ಮಾಡದಿದ್ದರೆ ನಿಜವಾದ ದೇವರಾದ ತಮ್ಮ ದೇವರ ಅವಕೃಪೆಗೆ ಪಾತ್ರರಾಗುತ್ತೀರಿ ಎಂದು ಭಯ ಭೀತಿ ಗೊಳಿಸುವುದೂ ಸಹ ಕಾನೂನಿನಡಿಯಲ್ಲಿ ಅಪರಾಧ.

ಭಾರತ ದಂಡ ಸಂಹಿತೆಯ ಕಲಂ ೫೦೮ ರಡಿಯಲ್ಲಿ ಹೀಗೆ ಹೇಳಲಾಗಿದೆ “Act caused by inducing person to believe that he will be rendered an object of the Divine displeasure.— Whoever voluntarily causes or attempts to cause any person to do anything which that person is not legally bound to do, or to omit to do anything which he is legally entitled to do, by inducing or attempting to induce that person to believe that he or any person in whom he is interested will
become or will be rendered by some act of the offender an object of Divine displeasure if he does not do the thing
which it is the object of the offender to cause him to do, or if he does the thing which it is the object of the offender to
cause him to omit, shall be punished with imprisonment of either description for a term which may extend to one year, or with fine, or with both.”

ಅಪರಾಧಿಕ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಯಾವುದೇ ವ್ಯಕ್ತಿಯು ದೇವರ ಹೆಸರಿನಲ್ಲಿ ಭಯ ಭೀತಿಗೊಳಿಸುವುದು ಹಾಗೂ ಅವನ ನಂಬಿಕೆಗಳಿಗೆ ಅಪನಂಬಿಕೆ ಬರುವಂತೆ ಮಾಡಿ ಮೂರನೇದವರಿಗೆ ಆ ವ್ಯಕ್ತಿ ಆ ಕೃತ್ಯವನ್ನು ಸ್ವಯಂ ಸ್ಫೂರ್ತಿ ಯಿಂದ ಮಾಡುತ್ತಿದ್ದಾನೆ ಎಂದು ತೋರಿಸುವ ಕೃತ್ಯಗಳು ಒಳಗೊಂಡಿರುತ್ತವೆ ಎಂಬುದನ್ನು ಕಂಡುಕೊಳ್ಳುವುದು ಸೂಕ್ತ. ಈಗ ಈ ಕಾನೂನುಗಳ ಹಿನ್ನೆಲೆಯಲ್ಲಿ ಈ ಚಿತ್ರಣ ವನ್ನು ಗಮನಿಸೋಣ.

ಒಂದು ಊರಿಗೆ ಧರ್ಮ ಪ್ರಚಾರಕರ ದಂಡು ಬಂದಿಳಿಯುತ್ತದೆ. ತಂಡ ತಂಡವಾಗಿ ಮನೆ ಮನೆಗಳಿಗೆ ಭೇಟಿ ಕೊಟ್ಟು, ಆ
ಮನೆಯವರನ್ನು ಉದ್ದೇಶಿಸಿ ತಮ್ಮ ಧರ್ಮ ಗ್ರಂಥದ ಪ್ರತಿಯೊಂದನ್ನು ನೀಡಿ ತಮ್ಮ ದೇವರೊಬ್ಬನೇ ದೇವರು ಉಳಿದವರೆಲ್ಲ ಕೇವಲ ಕಾಲ್ಪನಿಕ ವ್ಯಕ್ತಿಗಳು, ಮನೆಯಲ್ಲಿರುವ ದೇವರ ಪ್ರತಿಮೆಗಳನ್ನು ಪೂಜಿಸಬೇಡಿ, ಫೋಟೋಗಳನ್ನು ತೆಗೆದು ಹಾಕಿ, ನೀವು
ಒಂದು ವೇಳೆ ನಿಜವಾದ ದೇವರಾದ ನಮ್ಮ ಧರ್ಮವನ್ನು ಒಪ್ಪಿಕೊಂಡರೆ ನಿಮ್ಮ ಬಡತನ, ರೋಗ ರುಜಿನಗಳು ನಿರ್ಮೂಲನೆ ಯಾಗುತ್ತವೆ ಎಂದು ನಂಬಿಸಿದರೆ ಅಥವಾ ನಂಬಿಸಲು ಪ್ರಯತ್ನಿಸಿದರೆ ಅಂಥವರ ವಿರುದ್ಧ ಈ ಎರಡೂ ಕಾನೂನುಗಳಡಿ ಸೂಕ್ತ
ಕ್ರಮ ಕೈಗೊಳ್ಳಲು ಸಾಧ್ಯ.

ದೇವರು ಹಾಗೂ ಧರ್ಮ ಇವು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ನಂಬಿಕೆಗಳು ಹಾಗೂ ಶ್ರದ್ಧೆ. ನಮ್ಮ ಸಂವಿಧಾನ ಪ್ರತಿ ಯೊಬ್ಬ ನಾಗರಿಕನಿಗೂ ತಾನು ನಂಬಿರುವ ಧರ್ಮದ ಆಚರಣೆಗಳನ್ನು ಯಾವುದೇ ಅಡೆತಡೆಯಿಲ್ಲದೇ ಆಚರಿಸುವ ಸಂವಿಧಾ ನಾತ್ಮಕ ಹಕ್ಕನ್ನು ನೀಡಿದೆ. ಅಂಥಹುದರಲ್ಲಿ ಯಾವುದೇ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಧಾರ್ಮಿಕ ಆಚರಣೆ ಹಾಗೂ ನಂಬಿಕೆಗಳನ್ನು ಹೀಗೆಳೆಯುವ ಹಾಗೂ ತನ್ನ ಧರ್ಮವೇ ಶ್ರೇಷ್ಠ, ತನ್ನ ದೇವರೊಬ್ಬನೇ ದೇವರು ಉಳಿದವರೆಲ್ಲ ಹೆಸರಿಗಷ್ಟೇ ಎಂದು ಹೇಳಿ ಕೈಗೊಳ್ಳುವ ಕೃತ್ಯಗಳು ಸಂವಿಧಾನ ನೀಡಿದ ಹಕ್ಕುಗಳನ್ನು ಉಲ್ಲಂಘಿಸುವ ಅಕ್ಷ್ಯಮ್ಯ ಅಪರಾಧಗಳು ಎಂಬುದನ್ನು ಗಮನ ದಲ್ಲಿಟ್ಟುಕೊಳ್ಳಬೇಕು.

ಯಾವುದೇ ವ್ಯಕ್ತಿ ತನ್ನ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತಂದಾಗ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸುವುದ
ರಿಂದ ಸಂವಿಧಾನದ ತತ್ತ್ವಗಳನ್ನು ಗಾಳಿಗೆ ತೂರಲು ಪ್ರಯತ್ನಿಸಿದವರ ಹುನ್ನಾರಗಳಿಗೆ ಕಡಿವಾಣ ಹಾಕಲು ಸಾಧ್ಯ. ಈಗಿನ ವೈಜ್ಞಾನಿಕ ದಿನಗಳಲ್ಲಿ ಔಷಧಿಗಳಿಂದ ಗುಣಪಡಿಸಲಾರದ ಎಷ್ಟೋ ರೋಗಗಳನ್ನು ದೇವರ ಹೆಸರಿನಲ್ಲಿ ಗುಣಪಡಿಸುತ್ತೇವೆ ಎಂದು ಹೇಳುವುದು ಹಾಸ್ಯಾಸ್ಪದ ಒಂದೆಡೆಯಾದರೆ, ಜನರನ್ನು ಮೋಸಗೊಳಿಸುವ ಕೃತ್ಯವಾಗುತ್ತದೆ ಎಂಬುದನ್ನೂ ಮರೆಯ ಬಾರದು.

ಉದಾಹರಣೆಗೆ ಪಾರ್ಶ್ವವಾಯು ಪೀಡಿತ ವ್ಯಕ್ತಿಯನ್ನು ಒಂದು ವೇಳೆ ಮತಾಂತರಗೊಂಡು ತನ್ನ ದೇವರನ್ನು ಮಾತ್ರ ನಿಜವಾದ ದೇವರು ಎಂದು ಒಪ್ಪಕೊಂಡರೆ ಆತನ ಪಾರ್ಶ್ವವಾಯುವನ್ನು ಗುಣಪಡಿಸುತ್ತೇವೆ ಎಂದು ಹೇಳಿ ಅವನನ್ನು ಮತಾಂತರ
ಗೊಳಿಸಿ ಕೊನೆಗೆ ಆತನ ರೋಗವನ್ನು ಗುಣಪಡಿಸದೇ ಹೋದಲ್ಲಿ ಆ ಧರ್ಮ ಪ್ರಚಾರಕ ದೇವರ ಹೆಸರಿನಲ್ಲಿ ಮೋಸದ ವ್ಯವಹಾರ ಮಾಡುತ್ತಿದ್ದಾನೆ ಎಂಬುದು ಮೇಲ್ನೋಟಕ್ಕೆ ರುಜುವಾತಾಗುತ್ತದೆ.

ಬ್ರಿಟೀಷರು ಭಾರತದಲ್ಲಿ ತಮ್ಮ ಧರ್ಮದ ನೆಲಗಟ್ಟು ಗಟ್ಟಿಯಾಗಿರಲಿ ಎಂಬ ದುರಾಸೆಯಿಂದ ಪವಿತ್ರ ತೀರ್ಥದ ಹೆಸರಿನಲ್ಲಿ ನೀರಿನೊಳಗೆ ನೋವು ನಿವಾರಕ, ಜ್ವರ ನಿವಾರಕ ಪ್ಯಾರಾಸಿಟಮಲ್ ಔಷಧಿಯ ಮಿಶ್ರಣ ವನ್ನು ಸೇರಿಸಿರೋಗಿಗಳಿಗೆ ನೀಡಿ ಆ ಔಷಧದ ಪ್ರಭಾವಕ್ಕೆ ರೋಗ ಗುಣವಾದಾಗ, ದೇವರೇ ಆ ರೋಗ ವಾಸಿ ಮಾಡಿದ ಎಂದು ನಂಬಿಸಿ ಜನರನ್ನು ಮತಾಂತರ
ಮಾಡಿದ್ದು ಇತಿಹಾಸದಲ್ಲಿ ಕಾಣಸಿಗುತ್ತವೆ.

ಒಂದು ವೇಳೆ ದೇವರ ಹೆಸರಿನಲ್ಲಿ ರೋಗ ಗುಣವಾಗುವುದಾದರೆ, ಸಂತರ ಹೆಸರಿನಲ್ಲಿ ದೊಡ್ಡ ದೊಡ್ಡ ಆಸ್ಪತ್ರೆಗಳನ್ನು ಏಕೆ ಕಟ್ಟಿದ್ದಾರೆ? ಪರಿಣಿತ ಡಾಕ್ಟರುಗಳನ್ನು ಸಂಬಳದ ಮೇಲೆ ಏಕೆ ನೇಮಿಸಿಕೊಂಡಿದ್ದಾರೆ? ದುಬಾರಿ ಬೆಲೆಯ ಔಷಧಿಗಳನ್ನು ಸೇವಿಸುವಂತೆ ರೋಗಿಗಳಿಗೆ ಏಕೆ ನೀಡುತ್ತಿದ್ದಾರೆ? ಎಂಬ ಮೂಲ ಪ್ರಶ್ನೆಗೆಳಿಗೆ ಉತ್ತರ ದೊರಕದು. ಇತ್ತ ತಮ್ಮ ಧರ್ಮದ ವ್ಯಾಪ್ತಿ ಹೆಚ್ಚಾಗಿ ಆ ದೇಶದ ಮೂಲ ಧರ್ಮ ನಶಿಸುವಂತೆ ಮಾಡುವುದು ಒಂದು ಸಂಚಾದರೆ, ಮುಗ್ಧ ಜನರನ್ನು ದೇವರ ಹೆಸರಿನಲ್ಲಿ ತಮ್ಮತ್ತ ಸೆಳೆದುಕೊಂಡು ಮತಾಂತರ ಗೊಳಿಸುವುದು ಈ ಸಂಚಿನ ಮೂಲ ಉದ್ದೇಶ.

ಈ ರೀತಿಯ ಎಲ್ಲ ಸಂಚುಗಳನ್ನು ಹಾಗೂ ದುರುದ್ದೇಶಗಳನ್ನು ಅರಿತೇ ನಮ್ಮ ಕಾನೂನುಗಳು ಅವುಗಳಿಗೆ ಕಡಿವಾಣ ಹಾಕಲು ಜಾರಿಗೆ ಬಂದಿವೆ. ಈ ಕಾನೂನುಗಳ ಬಗ್ಗೆ ಪ್ರತಿಯೊಬ್ಬರೂ ಅರಿತುಕೊಳ್ಳುವುದು ಅತ್ಯಗತ್ಯ. ತಮ್ಮ ಹಕ್ಕುಗಳ ರಕ್ಷಣೆಯೊಂದಿಗೆ
ಸಮಾಜದ ಹಾಗೂ ದೇಶದ ತವನ್ನು ಸಂರಕ್ಷಿಸುವ ಜವಾಬ್ದಾರಿಯುತ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ. ಅದರಲ್ಲೂ ವಿಶೇಷವಾಗಿ ಧರ್ಮವನ್ನು ಜೀವನದ ಮಾರ್ಗವೆಂದು ಪರಿಗಣಿಸುವ ನಮಗೆ ಧರ್ಮೋ ರಕ್ಷತಿ ರಕ್ಷಿತಃ ಎಂಬುದ ಧ್ಯೇಯ ವಾಕ್ಯ.
ದೇವರ ಇರುವಿಕೆಯನ್ನೇ ಕಂಡುಕೊಳ್ಳದ ವ್ಯಕ್ತಿಯೊಬ್ಬ, ತನ್ನ ದೇವರು ದೊಡ್ಡವ ಇನ್ನೊಂದು ದೇವರು ದೊಡ್ಡವರಲ್ಲ ಎಂಬ ಬೇಧ ಭಿನ್ನತೆಗಳನ್ನು ಮಾಡುವುದೇ ದೊಡ್ಡ ಮೂರ್ಖತನ.

ಅದರಲ್ಲೂ ದೇವರ ಹೆಸರಿನಲ್ಲಿ ರೋಗಗಳನ್ನು ಗುಣ ಮಾಡುತ್ತೇನೆಂದು ಹೇಳಿ ಸಮಾರಂಭಗಳನ್ನು ಆಯೋಜಿಸಿ ನಾಟಕ ವಾಡಿಸುವುದು ಮೂರ್ಖತನದ ಪರಮಾವಧಿ. ಆದರೆ ಈ ಮೋಸದಾಟಗಳಿಗೆ ಬಲಿಯಾಗಿ ಬೆಂದು ತನ್ನ ಮೂಲ ಧರ್ಮಕ್ಕೆ ಮರಳುವ ವ್ಯಕ್ತಿಗಳಿಗೆ ಸೂಕ್ತ ದಾರಿ ತೋರಿಸಿ ನೆಮ್ಮದಿಯ ತೀರ ತೋರುವ ಹಾಗೂ ಪ್ರಾಯಶ್ಚಿತಕ್ಕೆ ಅವಕಾಶ ಮಾಡಿಕೊಡುವ ಕೆಲಸವಾಗಬೇಕಿದೆ. ಇಲ್ಲದಿದ್ದಲ್ಲಿ ತಾತ್ಕಾಲಿಕ ರೋಗ ವಾಸಿ ಮಾಡಿಕೊಳ್ಳಲು ಮತಾಂತರಗೊಂಡ ವ್ಯಕ್ತಿ ಶಾಶ್ವತವಾಗಿ ಮನೋರೋಗಿಯಾಗಿ ಬದುಕಬೇಕಾಗುತ್ತದೆ.

Leave a Reply

Your email address will not be published. Required fields are marked *