Friday, 27th May 2022

ಮೇಘಾಲಯದ ಬಳ್ಳಿಗಳ ಸೇತುವೆ

ಸಂತೋಷ್ ರಾವ್ ಪೆರ್ಮುಡ

ಸೇತುವೆಗಳನ್ನು ಸಾಮಾನ್ಯವಾಗಿ ಕಾಂಕ್ರೀಟ್ ಅಥವಾ ಕಬ್ಬಿಿಣದಿಂದ ನಿರ್ಮಿಸುತ್ತಾಾರೆ. ಆದರೆ ಜೀವಂತ ಬಳ್ಳಿಿಗಳ ಸೇತುವೆಗಳು ಈಶಾನ್ಯ ಭಾರತದ ರಾಜ್ಯವಾದ ಮೇಘಾಲಯದ ದಕ್ಷಿಣ ಭಾಗದಲ್ಲಿ ಕಾಣಸಿಗುತ್ತವೆ. ಶಿಲ್ಲಾಾಂಗ್ ಪ್ರಸ್ಥಭೂಮಿಯ ದಕ್ಷಿಣ ಭಾಗದಲ್ಲಿರುವ ಪರ್ವತ ಭೂಪ್ರದೇಶದ ಖಾಸಿ ಮತ್ತು ಜೈಂಟಿಯಾ ಪಂಗಡದ ಜನರು ಫಿಕಸ್‌ಎಲಾಸ್ಟಿಿಕ್ ಪ್ರಬೇಧಕ್ಕೆೆ ಸೇರಿದ ರಬ್ಬರ್ ಅಂಜೂರದ ಮರಗಳ ತೂಗಾಡುವ ಬೇರುಗಳನ್ನು ಸೇರಿಸಿ ಗಟ್ಟಿಿಯಾಗಿ ಬೆಸೆದು ತಯಾರಿಸುತ್ತಾಾರೆ.

ಈಶಾನ್ಯ ಭಾರತದ ಮತ್ತೊೊಂದು ರಾಜ್ಯ ಇಂತಹ ಜೀವಂತ ಬಳ್ಳಿಿಗಳ ಸೇತುವೆಗಳು ಕಾಣಲು ಸಿಗುತ್ತವೆ. ಇಂಡೋನೇಷ್ಯಾಾದಲ್ಲಿ ಸುಮಾತ್ರಾಾ ದ್ವೀೀಪದ ಜೆಂಬಾಟನ್ ಅಕರ್ ಮತ್ತು ಜಾವಾದ ಬಾಂಟೆನ್ ಪ್ರೂೂವೆನ್‌ನಲ್ಲಿ, ಬದುಯ್ ಜನರೂ ತಮ್ಮ ಗುಡ್ಡಗಾಡು ಪ್ರದೇಶಗಳ ನಡುವಿನ ತೊರೆಗಳನ್ನು ದಾಟಲು ಜೀವಂತ ಬಳ್ಳಿಿಗಳ ಸೇತುವೆಗಳನ್ನು ಬಳಸುತ್ತಾಾರೆ.

ಇಂತಹ ಸೇತುವೆಗಳು ಕೇವಲ ಒಂದು ಹಂತದ ಸೇತುವೆಗಳಿಗಷ್ಟೇೇ ಸೀಮಿತವಾಗಿರದೇ ಡಬಲ್ ಡೆಕ್ಕರ್ ರೀತಿಯ ಎರಡೆರಡು ಹಂತಗಳ ಜೀವಂತ ಬಳ್ಳಿಿಗಳ ಸೇತುವೆಗಳನ್ನು ನಿರ್ಮಿಸುವುದರಲ್ಲೂ ನಿಸ್ಸೀೀಮರು. ನದಿಗಳ ಎರಡು ದಡಗಳಲ್ಲಿರುವ ಅಂಜೂರ ಜಾತಿಯ ಎಲಾಸ್ಟಿಿಕ್) ಮರಗಳ ಹಲವಾರು ಉದ್ದನೆಯ ಜೀವಂತ ಬಳ್ಳಿಿಗಳನ್ನು ಎರಡೂ ಕಡೆಯಿಂದಲೂ ಎಳೆದುಕಟ್ಟಿಿ ಸೇತುವೆಯನ್ನು ನಿರ್ಮಿಸುತ್ತಾಾರೆ. ಮುಂದಕ್ಕೆೆ ಇವುಗಳು ಕಾಂಡದಂತೆ ದಪ್ಪನೆ ಬೆಳೆಯುತ್ತಾಾ ಶಾಶ್ವತವಾದ ಜೀವಂತ ಬಳ್ಳಿಿಗಳ ಸೇತುವೆಗಳಾಗಿ ಮಾರ್ಪಾಡಾಗುತ್ತವೆ. ಬಳ್ಳಿಿಗಳ ನಡುವೆ ಕಲ್ಲು, ಮಣ್ಣುಗಳನ್ನು ಹಾಕಿ ನೈಸರ್ಗಿಕವಾದ ಸೇತುವೆಯಂತೆ ಇದನ್ನು ಕಾಲಾನುಕ್ರಮದಲ್ಲಿ ಬದಲಾಯಿಸುತ್ತಾಾರೆ.

ಇತಿಹಾಸ

ಈ ಸೇತುವೆಗಳನ್ನು ಅತ್ಯಂತ ಅಚ್ಚುಕಟ್ಟಾಾಗಿ ಮತ್ತು ಬಲಿಷ್ಠವಾಗಿ ನಿರ್ಮಿಸುವ ಕಲೆಯನ್ನು ಅರಿತಿರುವ ಅಲ್ಲಿನ ಖಾಸಿ ಜನಾಂಗಕ್ಕೆೆ ಇದರ ಇತಿಹಾಸದ ಬಗ್ಗೆೆ ಇಲ್ಲಿನ ಜನರಿಗೆ ಚಿರಾಪುಂಜಿಯಲ್ಲಿರುವ ಜೀವಂತ ಸೇತುವೆಗಳ ಬಗ್ಗೆೆ ಲೆಫ್ಟಿಿನೆಂಟ್ ಹೆನ್ರಿಿ ಯೂಲ್ ಎಂಬವರು 1844 ರ ಜರ್ನಲ್ ಆಫ್ ಏಷಿಯಾಟಿಕ್ ಸೊಸೈಟಿ ಆಫ್ ಬಂಗಾಳ ಪತ್ರಿಿಕೆಯಲ್ಲಿ ಲಿಖಿತವಾಗಿ ದಾಖಲಿಸಿ ಇದರ ಜೀವಂತಿಕೆ ಹಾಗೂ ಸಾಮರ್ಥ್ಯದ ಬಗ್ಗೆೆ ಆಶ್ಚರ್ಯ ವ್ಯಕ್ತಪಡಿಸಿದ್ದರು.

ಐವತ್ತು ಮೀಟರ್‌ಗಿಂತ ಹೆಚ್ಚು ಉದ್ದದ ಜೀವಂತ ಬಳ್ಳಿಿಗಳ ಸೇತುವೆಯ ಸುದೀರ್ಘ ಉದಾಹರಣೆಯು ಭಾರತದ ಸಣ್ಣ ಖಾಸಿ ಪಟ್ಟಣವಾದ ಪೈನುರ್ಸ್ಲಾಾ ಸಮೀಪದಲ್ಲಿದೆ. ಈ ಪ್ರದೇಶಕ್ಕೆೆ ಮಾವ್ಕಿಿರ್ನೋಟ್ ಅಥವಾ ರಂಗ್ತಿಿಲಿಯಾಂಗ್ ಗ್ರಾಾಮಗಳಿಂದಲೂ ತಲುಪಬಹುದು. ಎರಡು ಜೀವಂತ ಬಳ್ಳಿಿಯ ಸೇತುವೆಗಳಿಗೆ ಹಲವಾರು ಉದಾಹರಣೆಗಳಿದ್ದು, ಅವುಗಳಲ್ಲಿ ಪ್ರಸಿದ್ಧವಾದದ್ದು ನೊಂಗ್ರಿಿಯಾಟ್ ಗ್ರಾಾಮದ ಡಬಲ್ ಡೆಕ್ಕರ್ ಬಳ್ಳಿಿಯ ಸೇತುವೆ. ಇಲ್ಲಿ ಸಮಾನಾಂತರ ವ್ಯಾಾಪ್ತಿಿಯನ್ನು ಹೊಂದಿರುವ ಒಟ್ಟು ಮೂರು ಡಬಲ್ ಡೆಕ್ಕರ್ ಸೇತುವೆಗಳಿದ್ದು, ಎರಡು ಸೇತುವೆಗಳು ಪಶ್ಚಿಿಮ ಜೈನ್ತಿಿಯಾ ಬೆಟ್ಟಗಳಲ್ಲಿ ಪಡು ಮತ್ತು ನಾಂಗ್‌ಬರೆ ಗ್ರಾಾಮಗಳ ಸಮೀಪದಲ್ಲಿದ್ದರೆ, ಇನ್ನೊೊಂದು ಪೂರ್ವ ಖಾಸಿ ಬೆಟ್ಟದ ಬರ್ಮಾ ಗ್ರಾಾಮದಲ್ಲಿದೆ. ಪೈನುರ್ಸ್ಲಾಾಕ್ಕೆೆ ಹತ್ತಿಿರವಿರುವ ರಂಗ್ತಿಿಲಿಯಾಂಗ್ ಗ್ರಾಾಮದ ಬಳಿ ಡಬಲ್ ಡೆಕ್ಕರ್ ಅಥವಾ ಟ್ರಿಿಪಲ್ ಡೆಕ್ಕರ್ ಸೇತುವೆಯೂ ಇದು ಬೆಳವಣಿಗೆಯ ಹಂತದಲ್ಲಿದೆ.

ಜೀವಂತ ಬಳ್ಳಿಿಯ ಸೇತುವೆಗಳನ್ನು ರಚಿಸುವ ವಿಧಾನ


ಫಿಕಸ್‌ಎಲಾಸ್ಟಿಿಕ್ ಮರದ ಬೇರುಗಳನ್ನು ನದಿಗೆ ಅಡ್ಡಲಾಗಿ ಎಳೆದು ಕಟ್ಟುವ ಮೂಲಕ ಜೀವಂತ ಬಳ್ಳಿಿಗಳ ಸೇತುವೆ ರೂಪುಗೊಳ್ಳುತ್ತದೆ. ನಂತರ ಬೇರುಗಳು ಮನುಷ್ಯನ ತೂಕವನ್ನು ಹಿಡಿದಿಟ್ಟುಕೊಳ್ಳುವಂತಹ ಸಾಮರ್ಥ್ಯವನ್ನು ಪಡೆದುಕೊಳ್ಳುವಂತೆ ಬಳ್ಳಿಿಗಳು ಬಲಿಷ್ಟವಾಗಿ ಬೆಳೆಯಲು ಅವಕಾಶ ನೀಡಲಾಗುತ್ತದೆ. ಎಳೆಯ ಬೇರುಗಳನ್ನು ಕೆಲವೊಮ್ಮೆೆ ಪ್ರಬುದ್ಧ ಬೇರುಗಳೊಂದಿಗೆ ಒಟ್ಟಿಿಗೆ ಸೇರಿಸಿ ಅಥವಾ ತಿರುಚಿ ಕಟ್ಟಲಾಗುತ್ತದೆ.

ಇವುಗಳು ಇನಾಸ್ಕ್ಯುಲೇಷನ್ ಪ್ರಕ್ರಿಿಯೆಯ (ಒಂದಕ್ಕೊೊಂದು ಹೆಣೆದುಕೊಳ್ಳುವಿಕೆ) ಮೂಲಕ ಬಳ್ಳಿಿಗಳು ಸಂಯೋಜಿಸಿಕೊಳ್ಳುವಂತೆ ಮಾಡಲಾಗುತ್ತದೆ. ಫಿಕಸ್ ಜಾತಿಯ ಸ್ಥಿಿತಿಸ್ಥಾಾಪಕ ಮರ ಮತ್ತು ಇದರ ಬಳ್ಳಿಿಗಳು ಕಡಿದಾದ ಇಳಿಜಾರು ಮತ್ತು ಕಲ್ಲಿನ ಮೇಲ್ಮೈಗಳನ್ನು ಭದ್ರವಾಗಿ ಹಿಡಿದುಕೊಂಡು ಬೆಳೆಯುವ ಗುಣವನ್ನು ಹೊಂದಿರುವುದರಿಂದ ನದಿ ತೀರಗಳ ಎದುರು ಬದಿಗಳಲ್ಲಿ ಹಿಡಿತ ಸಾಧಿಸಲು ಅದರ ಬೇರುಗಳನ್ನು ಎಳೆದು ಕಟ್ಟುವುದು ಕಷ್ಟವೇನಲ್ಲ. ಈ ಬಳ್ಳಿಿಗಳು ಜೀವಂತವಾಗಿದ್ದು, ಬೆಳೆಯುತ್ತಿಿರುವ, ಜೀವಿಗಳಿಂದ ತಯಾರಿಸಲ್ಪಟ್ಟಂತಿರುತ್ತದೆ. ಆದ್ದರಿಂದ ಇಂತಹ ಜೀವಂತ ಬಳ್ಳಿಿಗಳ ಸೇತುವೆಗಳು ಹಲವು ಶತಮಾನಗಳಷ್ಟು ಜೀವಿತಾವಧಿಯನ್ನು ಹೊಂದುತ್ತವೆ. ಅತ್ಯುತ್ತಮ ವಾತಾವರಣ ಮತ್ತು ಪರಿಸ್ಥಿಿತಿಗಳಲ್ಲಿ ಬಳ್ಳಿಿಯ ಸೇತುವೆಗಳು ನೂರಾರು ವರ್ಷಗಳವರೆಗೆ ಬಾಳ್ವಿಿಕೆ ಬರುತ್ತವೆೆ. ಸೇತುವೆ ನಿರ್ಮಾಣಗೊಂಡ ಮರವು ಆರೋಗ್ಯಕರವಾಗಿ ಇರುವವರೆಗೂ ಸೇತುವೆಯು ಅದರ ಘಟಕದ ಬೇರುಗಳು ದಪ್ಪವಾಗಿ ಬೆಳೆದಂತೆ ಸ್ವಾಾಭಾವಿಕವಾಗಿ ಸ್ವಯಂ ನವೀಕರಣಗೊಳ್ಳುತ್ತದೆ ಮತ್ತು ಸ್ವಯಂ ಬಲಗೊಳ್ಳುತ್ತದೆ.

ಕೈಯಿಂದ ಬಳ್ಳಿಿಯ ಸೇತುವೆ ಉತ್ಪಾಾದನೆ ಫಿಕಸ್‌ಎಲಾಸ್ಟಿಿಕ್ ಮರದ ಬೇರುಗಳನ್ನು ಕೈಯಿಂದ ಕುಶಲತೆಯಿಂದ ನಿರ್ವಹಿಸುವ ಮೂಲಕ ಯಾವುದೇ ನೈಸರ್ಗಿಕ ಅಥವಾ ಮಾನವ ನಿರ್ಮಿತ ವಸ್ತುಗಳ ಸಹಾಯವಿಲ್ಲದೆ ಕೆಲವು ಜೀವಂತ ಬಳ್ಳಿಿಯ ಸೇತುವೆಗಳನ್ನು ಸಂಪೂರ್ಣವಾಗಿ ರಚಿಸಲಾಗುತ್ತದೆ ಆಗಾಗ್ಗೆೆ, ಬಳ್ಳಿಿಯ ಬಳಸುವ ಸ್ಥಳೀಯರು ಅವರ ಅಗತ್ಯಕ್ಕೆೆ ತಕ್ಕಂತೆ ಸಣ್ಣ ಸಣ್ಣ ಬದಲಾವಣೆಗಳನ್ನು ಮಾಡುತ್ತಾಾರೆ. ಈ ಅವಕಾಶವು ಇದರ ಚಿಗುರು ಬೇರುಗಳನ್ನು ಕುಶಲತೆಯಿಂದ ಹೆಣೆಯುವ ಮೂಲಕ ಬೇಕಾದಂತೆ ಬದಲಾಯಿಸಲೂ ಸಾಧ್ಯವಿದೆ.

ಇದರ ವಿನ್ಯಾಾಸವನ್ನು ಮನುಷ್ಯ ಬೇಕಾದ ಆಕಾರಕ್ಕೆೆ ಬದಲಾಯಿಸಬಹುದು ಎಂದು ಸ್ಥಳೀಯರು ಹೇಳುತ್ತಾಾರೆ. ಪ್ರಾಾರಂಭದಲ್ಲಿ ಮರ ಅಥವಾ ಬಿದಿರಿನ ಗಳಗಳನ್ನು ಬಳಸಿ ಜೀವಂತ ಬಳ್ಳಿಿಗಳ ಸೇತುವೆ ನಿರ್ಮಾಣಕ್ಕೆೆ ಅಡಿಪಾಯ ಹಾಕಲಾಗುತ್ತದೆ. ಸೇತುವೆಯಂತೆ ಜೋಡಿಸಲಾದ ಈ ಮರ ಅಥವಾ ಬಿದಿರಿನ ಗಳಗಳನ್ನು ಸುತ್ತಿಿಕೊಂಡು ಫಿಕಸ್ ಎಲಾಸ್ಟಿಿಕ್ ಮರದ ಬೇರುಗಳು ಹರಡುವಂತೆ ಮಾಡುವುದರ ಮೂಲಕ ಹಲವಾರು ವರ್ಷಗಳ ತರುವಾಯ ಜೀವಂತ ಬಳ್ಳಿಿಗಳ ಸೇತುವೆಗಳು ರೂಪುಗೊಳ್ಳುತ್ತವೆ. ಇಲ್ಲಿನ ಕಾಡುಗಳಲ್ಲಿ ಲಭ್ಯವಿರುವ ಉದ್ದನೆಯ ಮರದ ಕೊಂಬೆ ಮತ್ತು ಬಿದಿರಿನ ಗಳಗಳಿಗೆ ಈ ಮರದ ಬಳ್ಳಿಿಗಳು ಸುತ್ತಿಿಕೊಂಡು ಬೆಳೆಯುವುದರಿಂದ ಬಳ್ಳಿಿಯ ಸೇತುವೆ ಬಲಗೊಳ್ಳುವವರೆಗೂ ಬಿದಿರು ಮತ್ತು ಮರದ ಕೊಂಬೆಗಳನ್ನು ವರ್ಷಗಳಲ್ಲಿ ಹಲವು ಬಾರಿ ಬದಲಾಯಿಸಬಹುದು.

ಅರೆಕಾಪಾಮ್ ಕಾಂಡಗಳನ್ನು ನದಿ ಅಥವಾ ತೊರೆಯ ಮೇಲ್ಭಾಾಗದಲ್ಲಿ ಉದ್ದನೆ ಇಟ್ಟು ಅದರ ಮೇಲೆ ಎಳೆಯ ಫಿಕಸ್‌ಎಲಾಸ್ಟಿಿಕ್ ಬಳ್ಳಿಿಯನ್ನು ನದಿಯ ಇನ್ನೊೊಂದು ಭಾಗಕ್ಕೆೆ ಸಾಗುವಂತೆ ಮಾಡಲಾಗುತ್ತದೆ. ಅಂಜೂರದ ಬೇರುಗಳು ತಮ್ಮನ್ನು ನದಿಯ ಇನ್ನೊೊಂದು ಬದಿಗೆ ತಲುಪಿ ಅಲ್ಲಿನ ಮರವನ್ನು ಆಶ್ರಯಿಸುವವರೆಗೆ ಅವುಗಳನ್ನು ನದಿಗಳು ಮತ್ತು ತೊರೆಗಳಿಗೆ ಅಡ್ಡಲಾಗಿಡಲಾಗುತ್ತದೆ. ಮರದ ಕಾಂಡಗಳು ಬೇರುಗಳನ್ನು ಬೆಳೆಸಲು, ಅವುಗಳನ್ನು ರಕ್ಷಿಸಲು ಮತ್ತು ಬೇರುಗಳು ಬೆಳೆಯುತ್ತಿಿದ್ದಂತೆ ಅವುಗಳಿಗೆ ಪೋಷಕಾಂಶಗಳನ್ನು ಒದಗಿಸಲು ಮರದ ಕೋಲುಗಳು, ಕಲ್ಲುಗಳು ಮತ್ತು ಮಣ್ಣು ಮತ್ತಿಿತರ ವಸ್ತುಗಳನ್ನು ಬೆಳೆಯುತ್ತಿಿರುವ ಸೇತುವೆಗಳ ಮಧ್ಯಭಾಗದಲ್ಲಿ ಅಲ್ಲಲ್ಲಿ ಬಳಸಲಾಗುತ್ತದೆ. ಇದರಿಂದಾಗಿ ಇವುಗಳನ್ನು ಬೆಳೆಯಲು ಆಹಾರವಾಗಿಯೂ ಬಳಸಿಕೊಳ್ಳುತ್ತವೆ. ಈ ಪ್ರಕ್ರಿಿಯೆಯು ಪೂರ್ಣಗೊಳ್ಳಲು ಕಡಿಮೆಯೆಂದರೂ 15 ವರ್ಷಗಳೇ ಬೇಕಾಗಬಹುದು. ಕಬ್ಬಿಿಣದ ತಂತಿ, ರಾಡ್ ಅಥವಾ ಮರದ ಉದ್ದನೆಯ ಕಾಂಡಗಳು, ಬಿದಿರನ ಗಳಗಳಿಗೆ ಫಿಕಸ್ ಸ್ಥಿಿತಿಸ್ಥಾಾಪಕ ಮರಗಳ ಎಳೆಯ ಬೇರುಗಳನ್ನು ಸೇತುವೆಗೆ ಅಗತ್ಯವಿರುವಂತೆ ಬಿಗಿದು ಅದೇ ರೀತಿ ಬೇರುಗಳು ಬೆಳೆಯುವಂತೆಯೂ ಮಾಡಲಾಗುತ್ತದೆ. ಬಳ್ಳಿಿಯ ಸೇತುವೆ ಸಾಕಷ್ಟು ಪ್ರಬಲವಾಗುವವರೆಗೆ ಈ ಸಾಂಪ್ರದಾಯಿಕ ರಚನೆಯನ್ನು ಬಳಸಲಾಗುತ್ತದೆ.

ಎಲ್ಲೆೆಲ್ಲಿ ಜೀವಂತ ಬಳ್ಳಿಿಗಳ ಸೇತುವೆಗಳನ್ನು ಕಾಣಬಹುದು?
ಪಶ್ಚಿಿಮ ಜೈನ್ತಿಿಯಾಹಿಲ್‌ಸ್‌ ಜಿಲ್ಲೆೆ ಮತ್ತು ಖಾಸಿಹಿಲ್‌ಸ್‌ ಜಿಲ್ಲೆೆಯಲ್ಲಿ ಜೀವಂತ ಬಳ್ಳಿಿಯ ಸೇತುವೆಗಳು ಕಂಡುಬರುತ್ತವೆ. ಜೈನ್ತಿಿಯಾ ಬೆಟ್ಟಗಳಲ್ಲಿ, ಶ್ನಾಾಂಗ್‌ಪ್ಡೆೆಂಗ್, ನೊಂಗ್‌ಬರೆಹ್, ಖೊಂಗ್ಲಾಾ, ಪಡು, ಕುಡೆಂಗ್ ಥೈಮೈ ಮತ್ತು ಕುಡೆಂಗ್ ರಿಮ್ ಗ್ರಾಾಮಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ, ಪೂರ್ವ ಖಾಸಿ ಬೆಟ್ಟಗಳಲ್ಲಿ, ಚಿರಾಪುಂಜಿಯ ಹತ್ತಿಿರದ ಟೈನ್‌ರಾಂಗ್, ಮೈಂಟೆಂಗ್, ನೊಂಗ್ರಿಿಯಾಟ್, ನೊಂಗ್ತಿಿಮ್ಮೈ ಮತ್ತು ಲೈಟ್‌ಕಿನ್‌ಸೆವ್ ಸುತ್ತಮುತ್ತಲಿನ ಗ್ರಾಾಮಗಳಲ್ಲಿ ಇಂತಹ ಸೇತುವೆಗಳು ಅಸ್ತಿಿತ್ವದಲ್ಲಿವೆ. ಚಿರಾಪುಂಜಿಯ ಖತರ್ಶ್‌ನಾಂಗ್ ಪ್ರದೇಶದಲ್ಲಿ, ನೊಂಗ್‌ಪ್ರಿಿಯಾಂಗ್, ಸೊಹ್ಕಿಿಂಡು, ರಿಮ್ಮೈ, ಮಾವ್‌ಶೂಟ್ ಮತ್ತು ಕೊಂಗ್‌ಥಾಂಗ್ ಗ್ರಾಾಮಗಳಲ್ಲಿ ಮತ್ತು ಸುತ್ತಮುತ್ತಲಿನ ಬಳ್ಳಿಿಯ ಸೇತುವೆಗಳಿವೆ. ಪೈನುರ್ಸ್ಲಾಾ ಬಳಿ ಮತ್ತು ಮಾವ್ಲಿಿನಾಂಗ್ ಹಳ್ಳಿಿಯ ಸುತ್ತಲೂ ಇಂತಹ ಸೇತುವೆಗಳನ್ನು ಕಾಣಬಹುದು.

ಇಲ್ಲಿನ ಇಂತಹ ಪ್ರತೀ ಸೇತುವೆಗಳು ಕನಿಷ್ಟ 500ಮೀ ಉದ್ದ ಮತ್ತು 1.5ಮೀ ಅಗಲವಿರುತ್ತವೆ. ಈ ಪ್ರಬುದ್ಧವಾದ ಸೇತುವೆಯ ಮೇಲೆ ಬರೋಬ್ಬರಿ 500 ಮಂದಿ ನಿಂತರೂ ಅಲ್ಲಾಾಡದಷ್ಟು ಗಟ್ಟಿಿಯಾಗಿ ಈ ಬಳ್ಳಿಿಗಳು ಬೆಸೆದುಕೊಂಡು ಸೇತುವೆಗೆ ಬಲವನ್ನು ನೀಡುತ್ತವೆ. ಈ ಸೇತುವೆಗಳ ಆಯಸ್ಸು ಸರಿಸುಮಾರು 500 ವರ್ಷಗಳಿಗೂ ಹೆಚ್ಚು ಎಂದರೆ ನಂಬಲೇ ಬೇಕು.