Tuesday, 11th August 2020

ಬಿಎಸ್‌ವೈ ಕಡೆ ಬೊಟ್ಟು ಮಾಡಲು ಕುಮಾರಸ್ವಾಮಿಗೆ ಯಾವ ನೈತಿಕ ಅಧಿಕಾರವಿದೆ?

ಮಾಜಿ ಮುಖ್ಯಮಂತ್ರಿಿ ಕುಮಾರಸ್ವಾಾಮಿ ತಮ್ಮನ್ನು ಏನಂತ ಭಾವಿಸಿದ್ದಾಾರೋ ಗೊತ್ತಿಿಲ್ಲ. ಆದರೆ ರಾಜ್ಯದ ಜನತೆಯನ್ನಂತೂ ಮೂಢರು, ಮೂರ್ಖರು ಎಂದು ಭಾವಿಸಿದಂತಿದೆ. ತಾನು ಏನೇ ಮಾಡಿದರೂ ಬೇರೆಯವರಿಗೆ ಗೊತ್ತಾಾಗುವುದಿಲ್ಲ ಎಂದು ಯೋಚಿಸಿದಂತಿದೆ. ಅದಕ್ಕಿಿಂತ ಮುಖ್ಯವಾಗಿ ಕುಮಾರಸ್ವಾಾಮಿಗೆ ಒಂದು ವಿಚಿತ್ರ ಖಯಾಲಿಯಿದೆ. ಅದೇನೆಂದರೆ, ತನ್ನ ಬಳಿ ಎಲ್ಲರ ಜಾತಕವೂ ಇದೆ, ತಾನು ಯಾರ ಬಂಡವಾಳವನ್ನಾಾದರೂ ಬಯಲು ಮಾಡಬಲ್ಲೆೆ, ಹೀಗಾಗಿ ತಾನು ಏನೇ ಮಾಡಿದರೂ ಜನ ಸುಮ್ಮನಿರಬೇಕು, ತಾನು ಮಾತ್ರ ಮಹಾ ಸತ್ಯವಂತ, ಎಲ್ಲರ ದಾಖಲೆಗಳೂ ತನ್ನ ಬಳಿಯಿದೆ ಎಂದು ಅವರು ಬಡಾಯಿ ಕೊಚ್ಚಿಿಕೊಳ್ಳುತ್ತಾಾರೆ. ಅಷ್ಟೇಅಲ್ಲ, ಈ ಮೂಲಕ ಹಲವರ ಬಾಯಿ ಮುಚ್ಚಿಿಸುತ್ತಾಾರೆ. ಇದು ಅವರು ಲಾಗಾಯ್ತಿಿನಿಂದಲೂ ಮಾಡಿಕೊಂಡು ಬಂದಿರುವ ತಂತ್ರ.

ಮೊನ್ನೆೆ ಹಾಸನದಲ್ಲಿ ಕುಮಾರಸ್ವಾಾಮಿ ಹೊಸ ಸರಕಾರದ ಬಗ್ಗೆೆ ಅಸಹನೆಯಿಂದ ಮಾತಾಡಿದ್ದಾಾರೆ. ‘ಇದು ಡೀಲ್ ಸರಕಾರ, ಕೋಟಿ ಕೋಟಿ ಹಣ ತೆತ್ತು ವರ್ಗಾವಣೆ ಮಾಡಿಸಿಕೊಳ್ಳುವ ದಂಧೆ ಆರಂಭವಾಗಿದೆ. ಕೆಲವು ಆಯಕಟ್ಟಿಿನ ಜಾಗಗಳಿಗೆ ಹದಿನೈದು ಕೋಟಿ ರುಪಾಯಿವರೆಗೆ ಬಿಡ್ಡಿಿಂಗ್ ನಡೆಯುತ್ತಿಿದೆ. ಈಗಾಗಲೇ ವರ್ಗಾವಣೆ ದಂಧೆ ಹುಲುಸಾಗಿ ನಡೆಯುತ್ತಿಿದೆ. ಮುಖ್ಯಮಂತ್ರಿಿ ಯಡಿಯೂರಪ್ಪನವರ ಹತ್ತಿಿರದಲ್ಲಿರುವವರಿಂದ ಈ ದಂಧೆಗೆ ಚಾಲನೆ ಸಿಕ್ಕಿಿದೆ. ಹಿಂದಿನ ಸರಕಾರ ಅಧಿಕಾರಿಗಳನ್ನು ವಿಶ್ವಾಾಸಕ್ಕೆೆ ತೆಗೆದುಕೊಂಡಿತ್ತು. ಈ ಸರಕಾರ ಹಿಂದಿನ ಸರಕಾರ ನೇಮಿಸಿದ ಎಲ್ಲಾಾ ಅಧಿಕಾರಿಗಳನ್ನು ಎತ್ತಂಗಡಿ ಮಾಡುತ್ತಿಿದೆ’ ಎಂದು ಕುಮಾರಸ್ವಾಾಮಿ ಬಡಬಡಿಸಿದ್ದಾಾರೆ.

ಈ ವಿಷಯದ ಬಗ್ಗೆೆ ಮಾತಾಡಲು ಕುಮಾರಸ್ವಾಾಮಿಗೆ ನೈತಿಕ ಹಕ್ಕಿಿಲ್ಲ. ಸಮ್ಮಿಿಶ್ರ ಸರಕಾರದ ಮುಖ್ಯಮಂತ್ರಿಿಯಾಗಿ ಕುಮಾರಸ್ವಾಾಮಿ ಬಹಳ ಆಸ್ಥೆೆಯಿಂದ, ನಿಷ್ಠೆೆಯಿಂದ ಮಾಡಿದ ಕೆಲಸವೆಂದರೆ ಅಧಿಕಾರಿಗಳ ವರ್ಗಾವಣೆ. ವೆಸ್ಟೆೆಂಡ್ ಹೋಟೆಲ್‌ನಲ್ಲಿ ಕುಳಿತು ಪ್ರತಿದಿನ ಅವರು ಮಾಡಿದ ವರ್ಗಾವರ್ಗಿ, ಬಡ್ತಿಿಗಳಿಗೆ ಲೆಕ್ಕವುಂಟಾ?
ಸಿದ್ದರಾಮಯ್ಯನವರು ಸಮನ್ವಯ ಸಮಿತಿ ಅಧ್ಯಕ್ಷರಾದರೂ, ಅವರ ಗಮನಕ್ಕೆೆ ತಾರದೇ ಈ ಎಲ್ಲ ವರ್ಗಾವಣೆಗಳನ್ನು ಮಾಡಿದರು. ಸಿದ್ದರಾಮಯ್ಯ ಸರಕಾರದಲ್ಲಿದ್ದ ಅನೇಕ ಅಧಿಕಾರಿಗಳನ್ನು ವರ್ಗ ಮಾಡಿ, ತಮಗೆ ಬೇಕಾದವರನ್ನು ತಂದುಕೊಂಡರು. ಈ ಯಾವ ವರ್ಗಾವಣೆಗಳನ್ನು ಅವರು ಪುಕ್ಕಟೆಯಾಗಿ ಮಾಡಿದ್ದಾಾರೆಂದು ನಂಬಲು ಯಾರೂ ಕಿವಿ ಮೇಲೆ ಸಂಪಿಗೆ, ದಾಸವಾಳಗಳನ್ನು ಇಟ್ಟುಕೊಂಡಿಲ್ಲ.

ಈ ವಾರ ವರ್ಗಾವಣೆಯಾಗಲಿರುವ ಅಧಿಕಾರಿಗಳು ಯಾರು, ಅವರೆಲ್ಲ ಯಾವ ಊರಿಗೆ, ಹುದ್ದೆೆಗೆ ವರ್ಗ ಆಗಲಿದ್ದಾಾರೆ ಎಂಬುದು ವೆಸ್ಟೆೆಂಡ್ ಡ್ಯೂಟಿ ಮ್ಯಾಾನೇಜರ್‌ನನ್ನು ಕೇಳಿದರೆ ಗೊತ್ತಾಾಗುತ್ತಿಿತ್ತು. ಸ್ವತಃ ಕಾಂಗ್ರೆೆಸ್ ನಾಯಕರು, ಈ ವರ್ಗಾವಣೆ ದಂಧೆ ಧಂಡಿಯಾಗಿ ನಡೆಯುತ್ತಿಿರುವುದನ್ನು ಕಂಡು ಕಂಗಾಲಾಗಿದ್ದರು. ಇದನ್ನು ನೋಡಿದ ಸಿದ್ದರಾಮಯ್ಯನವರು ‘ಇದೇನ್ರಿಿ ಇದು? ನಾನೂ ಐದು ವರ್ಷ ಸಿಎಂ ಆಗಿದ್ದೆೆ. ವರ್ಗಾವಣೆಯನ್ನೂ ಒಂದು ಉದ್ಯಮವನ್ನಾಾಗಿ ಮಾಡಬಹುದು ಎಂಬುದು ನನಗೆ ಗೊತ್ತಾಾಗಲಿಲ್ಲ. ಗೊತ್ತಾಾಗಿದ್ದರೂ ನಾನು ಅಂಥ ಕೆಲಸಕ್ಕೆೆ ಮುಂದಾಗುತ್ತಿಿರಲಿಲ್ಲ. ಆದರೆ ನಮ್ಮ ಬೆಂಬಲದಿಂದ ಅಧಿಕಾರದಲ್ಲಿರುವ ಜೆಡಿಎಸ್ ನಾಯಕರು ಮಾನ, ಮರ್ಯಾದೆ ಬಿಟ್ಟು ವರ್ಗಾವಣೆ ದಂಧೆಗೆ ಇಳಿದುಬಿಟ್ಟಿಿದ್ದಾಾರಲ್ರೀ!’ ಎಂದು ಆಪ್ತರ ಮುಂದೆ ಹಣೆಹಣೆ ಚಚ್ಚಿಕೊಂಡಿದ್ದರಂತೆ! ಆದರೆ ಅವರು ಅಸಹಾಯಕರಾಗಿದ್ದರು.

ಕೊನೆಗೆ ಸ್ವತಃ ಸಿದ್ದರಾಮಯ್ಯನವರು ಹೇಳಿದ ವ್ಯಕ್ತಿಿಯನ್ನು ಸಹ ಕುಮಾರಸ್ವಾಾಮಿ ವರ್ಗ ಮಾಡಲು ಮನಸ್ಸು ಮಾಡಲಿಲ್ಲ. ಪ್ರಾಾಯಶಃ ಅಂಥ ವರ್ಗಾವಣೆಯನ್ನು ಉಚಿತವಾಗಿ ಮಾಡಿಕೊಡಬೇಕಾಗುತ್ತದೆ ಎಂದು ಅಂದಿನ ಸಿಎಂ ಭಾವಿಸಿರಬೇಕು. ಕಾಂಗ್ರೆೆಸ್‌ನಿಂದ ಮಂತ್ರಿಿಗಳಾದವರು ಕುಮಾರಸ್ವಾಾಮಿಯವರ ‘ವರ್ಗಾವಣೆ ಗೀಳು’ ಕಂಡು ರೋಸಿ ಹೋಗಿದ್ದರು. ವರ್ಗಾವಣೆಗೊಂಡ ಅಧಿಕಾರಿಗಳು ಕಾಂಗ್ರೆೆಸ್ ನಾಯಕರ ಬಳಿ ಬಂದು, ‘ಡಿಂಗ್‌ಡಾಂಗ್’ ವ್ಯವಹಾರದ ಬಗ್ಗೆೆ ಲೆಕ್ಕವೊಪ್ಪಿಿಸಿ ಹೋಗುತ್ತಿಿದ್ದರು. (ಸಮ್ಮಿಿಶ್ರ ಸರಕಾರದ ಅವಧಿಯಲ್ಲಿ ಆದ ನೇಮಕಗಳೆಷ್ಟು, ಬಡ್ತಿಿ ಎಷ್ಟು, ವರ್ಗಾವರ್ಗಿ ಎಷ್ಟು ಎಂಬುದರ ವಿವರಗಳನ್ನೆೆಲ್ಲ ಮಾಹಿತಿ ಹಕ್ಕು ಕಾನೂನಿನ ಮೂಲಕ ಕೇಳಿದ್ದೇನೆ. ಸದ್ಯದಲ್ಲಿಯೇ ಅವೆಲ್ಲವುಗಳ ವಿವರ ಸಿಗಲಿದೆ. ಆಗ ಕುಮಾರಸ್ವಾಾಮಿಯವರನ್ನು ಕೇಳೋಣ.)

ಮತ್ತೇನೂ ಬೇಡ, ಸಮ್ಮಿಿಶ್ರ ಸರಕಾರ ಪತನವಾಗಲಿದೆ ಎಂಬ ಸುಳಿವು ಸಿಕ್ಕಿಿತಲ್ಲ, ಅಂದಿನಿಂದ ಸರಕಾರ ಬೀಳುವತನಕ ಎಷ್ಟು ನೇಮಕ, ವರ್ಗಾವರ್ಗಿ, ಬಡ್ತಿಿಗಳಾದವು ಎಂಬುದನ್ನು ನೋಡಿದರೆ ಎಂಥವರಿಗಾದರೂ ದಿಗ್ಭ್ರಮೆ ಆಗುತ್ತದೆ. ಸದನದಲ್ಲಿ ಸರಕಾರದ ವಿಶ್ವಾಾಸಮತದ ಬಗ್ಗೆೆ ಚರ್ಚೆ ನಡೆಯುತ್ತಿಿದ್ದರೆ, ಕುಮಾರಸ್ವಾಾಮಿ ಕಡತಗಳ ವಿಲೇವಾರಿಯಲ್ಲಿ ತೊಡಗಿದ್ದರು. ನೂರಾರು ಜನ ವರ್ಗವಾದರು. ಐನೂರಕ್ಕೂ ಹೆಚ್ಚು ಅಧಿಕಾರಿಗಳು ಬಡ್ತಿಿ ಪಡೆದರು. ವಿಶ್ವವಿದ್ಯಾಾಲಯಗಳ ಸಿಂಡಿಕೇಟ್‌ಗೂ ನೂರಾರು ಸದಸ್ಯರುಗಳನ್ನು ನೇಮಕ ಮಾಡಿದರು. ಮೂರು ದಿನಗಳ ಮೇಜವಾನಿಗಾಗಿ ಬ್ರಾಾಹ್ಮಣ ಅಭಿವೃದ್ಧಿಿ ಮಂಡಳಿಗೆ ಅಧ್ಯಕ್ಷ ಹಾಗೂ ಸದಸ್ಯರುಗಳನ್ನು ನೇಮಿಸಿದರು. ವಿಶ್ವಾಾಸಮತ ಯಾಚನೆ ಪರೀಕ್ಷೆೆಯಲ್ಲಿ ಸೋಲುವುದಕ್ಕಿಿಂತ ಮೂರು ತಾಸಿನ ಹಿಂದಿನವರೆಗೂ ಮುಖ್ಯಮಂತ್ರಿಿ ಕಡತಗಳಿಗೆ ಸಹಿ ಹಾಕುತ್ತಿಿದ್ದರು.

ಕಳೆದ ಹದಿನೈದು ದಿನಗಳಲ್ಲಿ ಮಾಡಿದಷ್ಟು ಕೆಲಸಗಳನ್ನು ಕುಮಾರಸ್ವಾಾಮಿ ಹದಿನೈದು ತಿಂಗಳ ಅವಧಿಯಲ್ಲಿ ಮಾಡಿದ್ದಿದ್ದರೆ, ರಾಜ್ಯದ ಜನಪ್ರಿಿಯ ಮುಖ್ಯಮಂತ್ರಿಿ ಎಂದು ಕರೆಯಿಸಿಕೊಳ್ಳುತ್ತಿಿದ್ದರು. ಬಿಜೆಪಿ ಜತೆ ಸೇರಿ ಕುಮಾರಸ್ವಾಾಮಿ ಮಾಡಿದ್ದೂ ಸಮ್ಮಿಿಶ್ರ ಸರಕಾರವೇ. ಈಗ ಮಾಡಿದ್ದೂ ಅದೇ. ಆದರೆ ಆಗ ಕುಮಾರಸ್ವಾಾಮಿ ಒಂದಷ್ಟು ಒಳ್ಳೆೆಯ ಹೆಸರು ಗಳಿಸಿದ್ದರು. ಆದರೆ ಈ ಬಾರಿ ಅವರ ಅಧಿಕಾರ ಅವಧಿಯಲ್ಲಿ ಹೇಳಿಕೊಳ್ಳುವಂಥ ಯಾವ ಘನ ಕೆಲಸಗಳನ್ನೂ ಮಾಡಲಿಲ್ಲ. ವರ್ಷಗಟ್ಟಲೆ ಪಂಚತಾರಾ ಹೋಟೆಲ್‌ನ್ನೇ ತಮ್ಮ ಆಡುಂಬೊಲ ಮಾಡಿಕೊಂಡ ಅವರ ಆದ್ಯತೆಗಳೇನು ಎಂಬುದು ಇದರಿಂದ ಗೊತ್ತಾಾಗುತ್ತದೆ.

ಹೀಗಿರುವಾಗ ಕುಮಾರಸ್ವಾಾಮಿ ಅದ್ಯಾಾವ ಬಾಯಲ್ಲಿ ಯಡಿಯೂರಪ್ಪನವರನ್ನು ಟೀಕಿಸುತ್ತಾಾರೆ? ಕುಮಾರಸ್ವಾಾಮಿಗೆ ಯಡಿಯೂರಪ್ಪನವರನ್ನು ಟೀಕಿಸುವ ನೈತಿಕ ಅಧಿಕಾರವೇ ಇಲ್ಲ. ತಮ್ಮ ತಾಟಿನಲ್ಲಿ ಕತ್ತೆೆ, ಹಂದಿ, ಕಿರುಬಗಳೆಲ್ಲ ಸತ್ತುಬಿದ್ದಿವೆ. ಬೇರೆಯವರ ತಾಟಿನಲ್ಲಿ ಇರುವೆ, ನೊಣ ಬಿದ್ದಿದೆ ಎಂದು ಹೇಳಿ ನಗೆಪಾಟಲಿಗೆ ಈಡಾಗುವವರಂತೆ ಅವರು ಕಾಣುತ್ತಿಿದ್ದಾಾರೆ. ಅಷ್ಟಕ್ಕೂ ಯಡಿಯೂರಪ್ಪನವರು ಅಧಿಕಾರಕ್ಕೆೆ ಬಂದು ಇನ್ನೂ ಮೂರು ವಾರಗಳೂ ಆಗಿಲ್ಲ, ಅಸಲಿಗೆ ಅವರಿಗೆ ಇನ್ನೂ ಸಚಿವ ಸಂಪುಟವನ್ನು ವಿಸ್ತರಿಸಲು ಆಗಿಲ್ಲ. ಒಬ್ಬರೇ ಎಲ್ಲವನ್ನೂ ಮ್ಯಾಾನೇಜ್ ಮಾಡುತ್ತಿಿದ್ದಾಾರೆ. ಆಡಳಿತದ ದೃಷ್ಟಿಿಯಿಂದ ಹತ್ತಾಾರು ನೇಮಕ, ವರ್ಗಾವಣೆ ಮಾಡಿರಬಹುದು. ಅದು ಅವಶ್ಯಕವೂ ಹೌದು.

ಅಲ್ಲದೇ ಅದು ಮುಖ್ಯಮಂತ್ರಿಿಯವರ ಪರಮಾಧಿಕಾರ. ಅವರು ಅದಕ್ಕೆೆ ಯಾರನ್ನೂ ಕೇಳಬೇಕಿಲ್ಲ. ಕುಮಾರಸ್ವಾಾಮಿ ನೇಮಿಸಿದವರನ್ನು ವರ್ಗ ಮಾಡಬಾರದು, ಕಿತ್ತುಹಾಕಬಾರದು ಎಂದೇನಿಲ್ಲ. ಸಮ್ಮಿಿಶ್ರ ಸರಕಾರದ ಅಂಗಪಕ್ಷವಾದ ಕಾಂಗ್ರೆೆಸ್ ಸರಕಾರದ ನೇಮಕಗಳನ್ನೇ ಕಿತ್ತು ಹಾಕಿದ ಕುಮಾರಸ್ವಾಾಮಿಗೆ ಅದ್ಯಾಾವಾಗ ಜಾಣ ಮರೆವು ಅಮರಿಕೊಂಡಿತೋ?
ಹೊಸ ಸರಕಾರ ಬಂದಾಗ ಸಹಜವಾಗಿ ವರ್ಗಾವರ್ಗಿ, ನೇಮಕಗಳು ನಡೆಯುತ್ತವೆ.

ತಾವು ನೇಮಿಸಿದವರನ್ನೇ ಇಟ್ಟುಕೊಳ್ಳಬೇಕು ಎಂಬ ನಿರೀಕ್ಷೆೆಯನ್ನಾಾದರೂ ಕುಮಾರಸ್ವಾಾಮಿ ಏಕೆ ಇಟ್ಟುಕೊಳ್ಳಬೇಕು? ಅದನ್ನು ಪ್ರಶ್ನಿಿಸಲು ಕುಮಾರಸ್ವಾಾಮಿಯವರು ಯಾರು? ಯಡಿಯೂರಪ್ಪನವರಿಗೆ ಮ್ಯಾಾಂಡೇಟ್ ಇದೆ. ಅದರಂತೆ ಅವರು ಅಧಿಕಾರ ನಡೆಸುತ್ತಾಾರೆ. ತಮ್ಮನ್ನು ಕೇಳಿ ಅಧಿಕಾರ ನಡೆಸಬೇಕು, ವರ್ಗ, ನೇಮಕ ಮಾಡಬೇಕು ಎಂದೇನಾದರೂ ಕುಮಾರಸ್ವಾಾಮಿಯವರು ಬಯಸಿದ್ದಾಾರಾ? ಅವರ ಅಣ್ಣ ರೇವಣ್ಣ ಮುಖ್ಯಮಂತ್ರಿಿಯಾದರೂ ಅವರು ಕುಮಾರಸ್ವಾಾಮಿ ಮಾತು ಕೇಳಲಿಕ್ಕಿಿಲ್ಲ. ಹೀಗಿರುವಾಗ ಯಡಿಯೂರಪ್ಪ ತಮ್ಮನ್ನು ಕೇಳಬೇಕು ಎಂದು ಅವರು ಅಪೇಕ್ಷಿಿಸುವುದು ಶುದ್ಧ ಮೂರ್ಖತನ. ಇನ್ನೂ ಸರಿಯಾಗಿ ಸರಕಾರ ಅಸ್ತಿಿತ್ವಕ್ಕೇ ಬಂದಿಲ್ಲ. ಆಗಲೇ ಕುಮಾರಸ್ವಾಾಮಿ ಅವರು ಸಹನೆ ಕಳೆದುಕೊಂಡಿದ್ದಾಾರೆ. ತಾವು ಇಟ್ಟ ಮೊಟ್ಟೆೆಗಳಿಗೆ ಬೇರೆ ಯಾರೋ ಕಾವು ಕೊಟ್ಟು ಮರಿ ಮಾಡಿಕೊಳ್ಳುತ್ತಾಾರೆಂಬ ಆತಂಕ ಅವರನ್ನು ಕಾಡಲಾರಂಭಿಸಿದೆ. ಯಡಿಯೂರಪ್ಪನವರ ಮೇಲೆ ವೃಥಾ ಆರೋಪ ಮಾಡುತ್ತಿಿದ್ದಾಾರೆ.

ಇದನ್ನು ಸಿದ್ದರಾಮಯ್ಯನವರು ಮಾಡಿದ್ದರೆ ಅದು ಬೇರೆ. ಅವರು ಎಂದೂ ಕುಮಾರಸ್ವಾಾಮಿಯವರಂತೆ ‘ಅರ್ಥಗರ್ಭಿತ’ವಾಗಿ ವರ್ಗಾವಣೆ ಮಾಡಿರಲಿಲ್ಲ. ಈಗ ಅಂತ ಅಲ್ಲ, ಯಡಿಯೂರಪ್ಪನವರತ್ತ ಬೊಟ್ಟು ತೋರಿಸಲು ಕುಮಾರ ಸ್ವಾಾಮಿಯವರಿಗೆ ನೈತಿಕ ಬಲವೇ ಇಲ್ಲ. ಅದನ್ನು ಅವರು ಎಂದೋ ಕಳೆದುಕೊಂಡಿದ್ದಾಾರೆ. ಅವರ ದೋಸ್ತಿಿ ಸರಕಾರ ಎಲ್ಲಾಾ ದೃಷ್ಟಿಿಗಳಿಂದಲೂ ಅತ್ಯಂತ ನಿಷ್ಕ್ರಿಿಯ, ಶುದ್ಧ ಸೋಂಬೇರಿ, ಅಸಡ್ಡಾಾಳ, ಬೇಜವಾಬ್ದಾಾರಿ, ಅನುಕೂಲಸಿಂಧು, ಅವಕಾಶವಾದಿ, ಅನಿಷ್ಟ ಸರಕಾರವಾಗಿತ್ತು. ಇನ್ನೂ ಆವೇಶದಿಂದ ಹೇಳಬೇಕೆಂದರೆ, ಅದೊಂದು ದರಿದ್ರ ಸರಕಾರವಾಗಿತ್ತು. ಅದು ಜೆಡಿಎಸ್‌ನ ಮೂರ್ನಾಲ್ಕು ಮಂತ್ರಿಿಗಳಿಗೆ ಮಾತ್ರ ಇದ್ದ ಸರಕಾರವಾಗಿತ್ತು. ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ಕಾಂಗ್ರೆೆಸ್ ಮಾಡಿಕೊಂಡ ಅತ್ಯಂತ ದುಬಾರಿ, ಪರಮ ಪಾಪದ ಅರೇಂಜ್‌ಮೆಂಟ್ ಆಗಿತ್ತು. ಕುಮಾರಸ್ವಾಾಮಿಯನ್ನು ಇಷ್ಟಪಟ್ಟು ಕಾಂಗ್ರೆೆಸ್‌ನವರೇನು ಸಿಎಂ ಮಾಡಿರಲಿಲ್ಲ. ಈ ‘ಅನಿಷ್ಟ’ವನ್ನು ಸಲಹಬೇಕಲ್ಲ ಎಂಬ ತಾತ್ಸಾಾರದಿಂದಲೇ ಕಾಂಗ್ರೆೆಸ್ ನಾಯಕರು ಕುಮಾರಸ್ವಾಾಮಿಗೆ ಪಟ್ಟ ಕಟ್ಟಿಿದ್ದರು.

ಕುಮಾರಸ್ವಾಾಮಿಗೂ ಈ ವಿಷಯ ಗೊತ್ತಿಿತ್ತು. ಇವರ್ಯಾಾರೂ ನನ್ನನ್ನು ಇಷ್ಟಪಟ್ಟು ಸಿಎಂ ಮಾಡಿಲ್ಲ, ತನ್ನನ್ನು ಹರಕು ಚಪ್ಪಲಿಯಂತೆ ಎಲ್ಲಿಡಬೇಕೋ ಅಲ್ಲೇ ಇಟ್ಟಿಿರುತ್ತಾಾರೆ. ಹೀಗಾಗಿ ಅಧಿಕಾರದಲ್ಲಿ ಇದ್ದಷ್ಟು ದಿನ ಚೆನ್ನಾಾಗಿ ಮೇಯ್ದು ಹೋಗಬೇಕು ಎಂಬ ವಾಂಛೆಯಿಂದಲೇ ಸರಕಾರವೆಂಬ ಬೇಲಿಯೇ ಇಲ್ಲದ ಹುಲ್ಲುಗಾವಲಿಗೆ ಬಂದರು. ಅಲ್ಲಿ ಕಾಂಗ್ರೆೆಸ್‌ನವರನ್ನಾಾಗಲಿ, ಜನರನ್ನಾಾಗಲಿ, ರಾಜ್ಯವನ್ನಾಾಗಲಿ ಉದ್ಧಾಾರ ಮಾಡುವ ಯಾವ ಆಶಯಗಳೂ ಇರಲಿಲ್ಲ. ಕುಮಾರಸ್ವಾಾಮಿಯನ್ನು ಮುಂದಿಟ್ಟುಕೊಂಡು ಬಿಜೆಪಿಯಿಂದ ಅಧಿಕಾರ ಕಿತ್ತುಕೊಳ್ಳಬೇಕೆಂಬುದು ಕಾಂಗ್ರೆೆಸ್ ಕಳಕಳಿಯಾಗಿತ್ತು. ಈ ಎರಡೂ ಪಕ್ಷಗಳ ಶಾಸಕರನ್ನು ಮ್ಯಾಾನೇಜ್ ಮಾಡಿ, ಸರಕಾರ ಬೀಳಿಸಿ, ಬಿಜೆಪಿ ಅಧಿಕಾರಕ್ಕೆೆ ಬಂದಿತು,ಇದರಲ್ಲಿ ಪ್ರಜಾಪ್ರಭುತ್ವದ ಕಗ್ಗೊೊಲೆಯೇನು ಬಂತು?

ಒಂದು ವೇಳೆ ಇದೇ ಪ್ರಜಾಪ್ರಭುತ್ವದ ಕಗ್ಗೊೊಲೆಯಾದರೆ, ಚುನಾವಣೆಯಲ್ಲಿ ಪರಸ್ಪರರನ್ನು ಬೈಯ್ದುಕೊಂಡ ಕಾಂಗ್ರೆೆಸ್-ಜೆಡಿಎಸ್ ಅಪವಿತ್ರ ಮೈತ್ರಿಿ ಮಾಡಿಕೊಂಡಿದ್ದು ಪ್ರಜಾಸತ್ತೆೆಯ ಮೇಲೆ ಅತ್ಯಾಾಚಾರವಲ್ಲವಾ? ಕುಮಾರಸ್ವಾಾಮಿ ಸಿಎಂ ಆಗಬೇಕೆಂದು ರಾಜ್ಯದ ಮತದಾರರು ಜನಾದೇಶ ನೀಡಿದ್ದರಾ? ಮೂವತ್ತೇಳು ಸ್ಥಾಾನ ಪಡೆದ ಪಕ್ಷದ ನಾಯಕನು ರಾಜ್ಯದ ಮುಖ್ಯಮಂತ್ರಿಿಯಾಗುವುದು ಪ್ರಜಾಪ್ರಭುತ್ವದ ಕ್ರೂರ ಅಣಕವಲ್ಲವಾ? ಅದು ಪ್ರಜಾಪ್ರಭುತ್ವದ ಕಗ್ಗೊೊಲೆ ಅಲ್ಲವಾ? ಪಾಪಕ್ಕೆೆ ಹುಟ್ಟಿಿದ ಮಗುವನ್ನು ಪಾಪದಲ್ಲಿಯೇ ಸಾಯಿಸಿದರೆ ಪಾಪ ಬರುವುದಿಲ್ಲ. ದೇವಾನುದೇವತೆಗಳೆಲ್ಲ ಶತ್ರುಸಂಹಾರ, ಶಿಷ್ಟರ ರಕ್ಷಣೆ ಮಾಡುತ್ತಿಿದ್ದುದೇ ಹೀಗೆ. ಹಾದರಕ್ಕೆೆ ಹುಟ್ಟಿಿದ ಭ್ರೂಣವನ್ನು ಸಂಹಾರ ಮಾಡಿದರೆ ಅದು ಪಾಪವಲ್ಲ. ಕೆಲವು ಸಲ ಆ ರೀತಿ ಸಂಹಾರ ಮಾಡಬೇಕಾದುದೇ ಸರಿಯಾದ ಮಾರ್ಗ.

ಆ ಕೆಲಸವನ್ನು ಬಿಜೆಪಿ ಮಾಡಿದೆ. ಹೀಗಿರುವಾಗ ಅಲ್ಲಿ ಪ್ರಜಾಪ್ರಭುತ್ವದ ಕಗ್ಗೊೊಲೆಯೇನು ಬಂತು? ದೋಸ್ತಿಿ ಸರಕಾರ ಅಸ್ತಿಿತ್ವಕ್ಕೆೆ ಬಂದಿದ್ದು ನ್ಯಾಾಯಸಮ್ಮತ ಅಲ್ಲ ಎಂದಮೇಲೆ, ಅದನ್ನು ಕಿತ್ತು ಎಸೆದಿದ್ದು ಘೋರ ಅನ್ಯಾಾಯ ಎಂದು ವಾದಿಸುವುದು ಎಷ್ಟು ಸರಿ? ಮುಳ್ಳನ್ನು ಮುಳ್ಳಿಿನಿಂದಲೇ ಕೀಳಬೇಕಾದುದು ಸರಿಯಾದ ಮಾರ್ಗವೇ. ಆ ಕೆಲಸವನ್ನು ಬಿಜೆಪಿ ಮಾಡಿದೆ. ಅದರಲ್ಲಿ ಕಗ್ಗೊೊಲೆಯೇನು ಬಂತು? ಅಷ್ಟಕ್ಕೂ ಕುಮಾರಸ್ವಾಾಮಿ ನೇತೃತ್ವದ ಅನಿಷ್ಟ ಸರಕಾರ ಅಧಿಕಾರದಲ್ಲಿ ಮುಂದುವರಿಯುವುದನ್ನು ನೋಡುತ್ತಾಾ ಬಿಜೆಪಿ ಸುಮ್ಮನೆ ಕುಕ್ಕುರು ಬಡಿದುಕೊಂಡು ಕುಳಿತಿರಬೇಕಿತ್ತಾಾ? ನೋ ಛಾನ್‌ಸ್‌. ದೋಸ್ತಿಿ ಸರಕಾರದ ಸಂಹಾರ ಮಾಡಿದ್ದು ಯೋಗ್ಯವಾಗಿದೆ. ಅದು ಬಿಜೆಪಿ ರಾಜ್ಯಕ್ಕೆೆ ಮಾಡಿದ ಮಹದುಪಕಾರವೇ. ದೋಸ್ತಿಿ ಸರಕಾರದಲ್ಲಿ ತಾಳ-ಮೇಳವೇ ಇರಲಿಲ್ಲ. ವಿಧಾನಸೌಧ ವೆಸ್ಟೆೆಂಡ್ ಹೋಟೆಲ್‌ಗೆ ಶಿಫ್‌ಟ್‌ ಆಗಿತ್ತು ಎಂದು ಜನ ಮಾತಾಡಿಕೊಳ್ಳುವ ಮಟ್ಟಿಿಗೆ ಅದು ಹಾದಿ ತಪ್ಪಿಿತ್ತು. ಇದು ಕಾಂಗ್ರೆೆಸ್ ನಾಯಕರಿಗೂ ಗೊತ್ತಿತ್ತು.

ಆದರೆ ರಾಜಕೀಯ ಕಾರಣಗಳಿಗೆ ಅವರು ಬಾಯಿ ಮುಚ್ಚಿಿಕೊಂಡಿದ್ದರು. ಹೈಕಮಾಂಡ್ ಸೂಚನೆಯೂ ಅವರ ಕೈ ಕಟ್ಟಿಿಹಾಕಿತ್ತು. ಸರಕಾರ ಬೀಳುವುದಾದರೆ ಬೀಳಲಿ, ತಾವು ಬೀಳಿಸಿದೆವು ಎಂಬ ಅಪಕೀರ್ತಿ ಬರುವುದು ಬೇಡ ಎಂದು ಸುಮ್ಮನಿದ್ದರು. ಅಷ್ಟರಮಟ್ಟಿಿಗೆ ಕುಮಾರಸ್ವಾಾಮಿ ಆಡಳಿತ ವೈಖರಿಯಿಂದ ಕಾಂಗ್ರೆೆಸ್ ನಾಯಕರು ರೋಸಿಹೋಗಿದ್ದರು. ಸರಕಾರದಲ್ಲಿದ್ದರೆ ತಮಗೆ ಮರ್ಯಾಾದೆ ಇಲ್ಲ ಎಂಬುದು ಅವರಿಗೆ ಖಾತ್ರಿಿಯಾಗಿತ್ತು. ಆದರೆ ಅನಿವಾರ್ಯ ಕರ್ಮ ಎಂಬಂತೆ ತೆಪ್ಪಗಿದ್ದರು. ಆದರೆ ಕಾಂಗ್ರೆೆಸ್‌ನ ಹತ್ತಕ್ಕೂ ಹೆಚ್ಚು ನಿಷ್ಠಾಾವಂತ ಶಾಸಕರೇ ತಮ್ಮ ಸ್ಥಾಾನಕ್ಕೆೆ ರಾಜೀನಾಮೆ ನೀಡಿದಾಗ, ನಾಯಕರು ‘ಈ ಅನಿಷ್ಟ ಸರಕಾರ ಹೋಗುವುದಿದ್ದರೆ ಹೋಗಲಿ’ ಎಂದು ಒಳಗೊಳಗೇ ಖುಷಿಪಟ್ಟರು. ಆದರೆ ಹೊರಗೆ ಬಂದು ಕಣ್ಣೀರು ಸುರಿಸಿದರು.

ಹದಿನೈದು ತಿಂಗಳ ಕುಮಾರಸ್ವಾಾಮಿ ಆಡಳಿತದಿಂದ ಕಾಂಗ್ರೆೆಸ್ ನಾಯಕರೆಲ್ಲ ಹೈರಾಣಾಗಿ ಹೋಗಿದ್ದರು. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಸಹವಾಸ ಮಾಡಿ, ತಾವು ಹಾಳಾಗಿ ಹೋದೆವು ಎಂಬ ತಬ್ಬಲಿಭಾವ ಕಾಂಗ್ರೆೆಸ್ ನಾಯಕರನ್ನು ಈಗಲೂ ಕಾಡುತ್ತಿಿದೆ. ಇಲ್ಲದಿದ್ದರೆ ಕಾಂಗ್ರೆೆಸ್ ಇಪ್ಪತ್ತೆೆಂಟರ ಪೈಕಿ ಇಪ್ಪತ್ತೇಳು ಕ್ಷೇತ್ರಗಳಲ್ಲಿ ಆ ರೀತಿಯ ದಯನೀಯ ಸೋಲು ಅನುಭವಿಸುತ್ತಿಿರಲಿಲ್ಲ. ತಮ್ಮ ಸೋಲಿಗೆ ಜೆಡಿಎಸ್ ಸಹವಾಸವೇ ಕಾರಣ ಎಂದು ಕಾಂಗ್ರೆೆಸ್ ನಾಯಕರಿಗೆ ಮನವರಿಕೆಯಾದ ನಂತರ ಈ ಸರಕಾರ ಇದ್ದರೆಷ್ಟು, ಬಿಟ್ಟರೆಷ್ಟು ಎಂಬ ತೀರ್ಮಾಾನಕ್ಕೆೆ ಬಂದರು

ಕುಮಾರಸ್ವಾಾಮಿ ‘ವರ್ಗಾವಣೆ ಉದ್ಯಮ’ವನ್ನು ಎಷ್ಟು ಚೆನ್ನಾಾಗಿ ಮಾಡಿದರು ಎಂಬುದನ್ನು ಕಾಂಗ್ರೆೆಸ್ ನಾಯಕರು ಬಹಳ ಸೊಗಸಾಗಿ ಬಣ್ಣಿಿಸುತ್ತಾಾರೆ. ‘ನಮಗೇ ಗೊತ್ತಿಿರಲಿಲ್ಲ, ವರ್ಗಾವರ್ಗಿಯನ್ನು ಹೀಗೂ ಮಾಡಬಹುದೆಂದು. ಕುಮಾರಸ್ವಾಾಮಿ ಅವರು ಅಷ್ಟು ಪರಿಣಾಮಕಾರಿಯಾಗಿ ಮಾಡುತ್ತಿಿದ್ದರು. ಬಹಳ ಸಂದರ್ಭಗಳಲ್ಲಿ ವರ್ಗಾವಣೆ ಆದ ಮೇಲೆಯೇ ನಮಗೆ ಗೊತ್ತಾಾಗುತ್ತಿಿತ್ತು. ಅಧಿಕಾರಿಗಳು ನೇರವಾಗಿ ಸಿಎಂ ಅವರನ್ನು ಭೇಟಿ ಮಾಡಿ ಕೆಲಸ ಮಾಡಿಕೊಂಡು ಬರುತ್ತಿಿದ್ದರು. ಈ ವಿಷಯದಲ್ಲಿ ಅವರು ಅಧಿಕಾರವರ್ಗಸ್ನೇಹಿ ಆಗಿದ್ದರು’ ಎಂದು ಕಣ್ಣರಳಿಸಿ ನಗುತ್ತಾಾರೆ.

ಈಗ ಅದೇ ಕುಮಾರಸ್ವಾಾಮಿ ‘ವರ್ಗಾವಣೆ ದಂಧೆ’ ನಡೆಯುತ್ತಿಿದೆ ಎಂದು ಆರೋಪ ಮಾಡುತ್ತಿಿದ್ದಾಾರೆ. ಈ ಆರೋಪ ಮಾಡಲು ಅವರಿಗೆ ಯಾವ ನೈತಿಕ ಅಧಿಕಾರವಿದೆ ಎಂದು ನೇರವಾಗಿ ಪ್ರಶ್ನಿಿಸಿದ್ದು ಅದಕ್ಕೇ. ‘ಭೂತದ ಬಾಯಲ್ಲಿ ಭಗವದ್ಗೀತೆ’ ಅಂತಾರಲ್ಲ, ಹಾಗಾಯ್ತು. ಯಡಿಯೂರಪ್ಪನವರು ಅಧಿಕಾರಕ್ಕೆೆ ಬಂದು ಐದಾರು ತಿಂಗಳವರೆಗಾದರೂ ಕಾಯಬಹುದಿತ್ತು. ಅವರು ಅಧಿಕಾರಕ್ಕೆೆ ಬಂದು ಇನ್ನೂ ಮೂರು ವಾರಗಳಾಗಿಲ್ಲ, ಪೂರ್ಣಪ್ರಮಾಣದ ಸರಕಾರವೂ ಅಸ್ತಿಿತ್ವಕ್ಕೆೆ ಬಂದಿಲ್ಲ. ಯಡಿಯೂರಪ್ಪ ಅವರು ಯಾರನ್ನೂ ವರ್ಗಾ ಮಾಡಿಲ್ಲ. ತಮ್ಮ ಟೀಮನ್ನಷ್ಟೇ ರಚಿಸಿಕೊಂಡಿದ್ದಾಾರೆ. ತುರ್ತು ಆಡಳಿತಾತ್ಮಕ ದೃಷ್ಟಿಿಯಿಂದ ಕೆಲವು ನೇಮಕ, ವರ್ಗಾವಣೆಗಳನ್ನು ಮಾಡಿರಬಹುದು. ಅಷ್ಟಕ್ಕೇ ಕುಮಾರಸ್ವಾಾಮಿಯವರು ಹತಾಶರಾದವರಂತೆ, ಸತ್ಯವಂತರಂತೆ, ಬಡಬಡಿಸಿದ್ದಾಾರೆ.

ತಾವು ಮಾಡಿದ ನೇಮಕಗಳನ್ನು ರದ್ದುಪಡಿಸಬಾರದು, ವರ್ಗಾವರ್ಗಿಗೆ ಕೈಹಾಕಬಾರದು ಎಂಬ ಸಣ್ಣ ಎಚ್ಚರಿಕೆಯೂ ಅವರ ಮಾತಿನಲ್ಲಿ ಇದ್ದಂತಿದೆ. ಅದಕ್ಕಾಾಗಿ ಮೊದಲೇ ‘ಕೇವಿಯಟ್’ ತಂದವರಂತೆ, ಯಡಿಯೂರಪ್ಪ ವಿರುದ್ಧ ಆರೋಪ ಹೊರಿಸಿದ್ದಾಾರೆ. ಇದು ‘ಡೀಲ್ ಸರಕಾರ’ ಎಂದು ಸಡಿಲವಾಗಿ ಮಾತಾಡಿದ್ದಾಾರೆ. ಇದು ಬೇರೆಯವರಿಗೆ ಗೊತ್ತಾಾಗುವುದಿಲ್ಲವಾ? ತಮ್ಮ ಸಹೋದರನೊಬ್ಬನೇ ಕೊನೆಯ ಹತ್ತು ದಿನಗಳಲ್ಲಿ ಮಾಡಿದ ವರ್ಗಾವಣೆಗಳು, ಬಡ್ತಿಿಗಳನ್ನು ನೆನಪಿಸಿಕೊಂಡಿದ್ದರೆ, ಕುಮಾರಸ್ವಾಾಮಿ ಆ ಮಾತುಗಳನ್ನು ಹೇಳುತ್ತಿಿರಲಿಲ್ಲ.

ರಾಜ್ಯದ ಜನರೆಲ್ಲ ಮಾತಾಡಿಕೊಂಡರು, ‘ಕುಮಾರಸ್ವಾಾಮಿಯವರ ಮಾಲ್‌ನಲ್ಲಿ ಕೊನೆಯ ಒಂದು ವಾರದ ರಿಯಾಯತಿ ಮಾರಾಟ ಜೋರಾಗಿ ನಡೆಯುತ್ತಿಿದೆ’ ಎಂದು ಸೋಶಿಯಲ್ ಮೀಡಿಯಾದಲ್ಲಿ ಜನ ಕಿಂಡಲ್ ಮಾಡಿದರು. ಹಣ ತೆಗೆದುಕೊಂಡು ಈ ನೇಮಕ, ವರ್ಗಾವಣೆಗಳನ್ನು ಕುಮಾರಸ್ವಾಾಮಿಯವರು ಮಾಡಿದರೋ ಅಥವಾ ಉಚಿತವಾಗಿ ಮಾಡಿದರೋ ಅಥವಾ ಆಡಳಿತವನ್ನುಚುರುಕುಗೊಳಿಸಲು ಮಾಡಿದರೋ ಗೊತ್ತಿಿಲ್ಲ. ಆದರೆ ಧಂಡಿ ಧಂಡಿಯಾಗಿ ಫೈಲ್ ಕ್ಲಿಿಯರ್ ಮಾಡಿದ್ದಂತೂ ನಿಜ. ಪ್ರಾಾಮಾಣಿಕ ಆಡಳಿತ ನೀಡಲು ಶಕ್ತಿಿ ಮೀರಿ ಪ್ರಯತ್ನಿಿಸಿದ ಕುಮಾರಸ್ವಾಾಮಿ ಲಂಚ ಪಡೆದು ಈ ವರ್ಗಾವಣೆ ಮಾಡಿದ್ದಾಾರೆ ಎನ್ನಲು ಸಾಕ್ಷ್ಯಗಳೇನೂ ಇಲ್ಲ. ಹೀಗಾಗಿ ಲಂಚ ಪಡೆದಿಲ್ಲ ಎಂದೇ ಭಾವಿಸೋಣ. ಆದರೂ ಅವರ ಬಾಯಿಂದ ಕೊನೆಯ ಒಂದು ವಾರದಲ್ಲಿ ಇಷ್ಟೆೆಲ್ಲ ಫೈಲುಗಳನ್ನು ಕ್ಲಿಿಯರ್ ಮಾಡಿದ್ದರ ಮರ್ಮವನ್ನು ಹೇಳಿದರೆ ಉಪಕಾರ ಆಗುತ್ತದೆ. ಆಗ ಯಡಿಯೂರಪ್ಪನವರ ಮೇಲೆ ಹೊರಿಸಿದ ಆರೋಪಗಳಿಗೂ ಅರ್ಥಬರುತ್ತವೆ.
ಏನಂತೀರಿ ಕುಮಾರಸ್ವಾಾಮಿ ಅವರೇ?!

2 thoughts on “ಬಿಎಸ್‌ವೈ ಕಡೆ ಬೊಟ್ಟು ಮಾಡಲು ಕುಮಾರಸ್ವಾಮಿಗೆ ಯಾವ ನೈತಿಕ ಅಧಿಕಾರವಿದೆ?

Leave a Reply

Your email address will not be published. Required fields are marked *