Wednesday, 26th February 2020

ಬಿಎಸ್‌ವೈ ಒಕ್ಕೊರಲ ಆಯ್ಕೆ

ಬಿಎಸ್‌ವೈ ಅವರನ್ನು ಸಿಎಂ ಆಗಿಸಲು ಹೈಕಮಾಂಡ್ ಒಪ್ಪಿಿಯೇ ತೀರ್ಮಾನಿಸಿದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಸಂತೋಷ್ ಎಲ್ಲರೂ ಒಟ್ಟುಗೂಡಿ ಅವರನ್ನು ಸಿಎಂ ಆಗಿ ನೇಮಿಸುವ ನಿರ್ಧಾರ ಕೈಗೊಂಡಿದ್ದಾರೆ. ಹೀಗಿರುವಾಗ ಅವರನ್ನು ಮುಗಿಸುವ ಮಾತೆಲ್ಲಿ ಬಂತು ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾಾರೆ.

ಬಸವರಾಜ ಯತ್ನಾಾಳ್ ಅವರ ಹೇಳಿಕೆಗೆ ಪ್ರತಿಕ್ರಿಿಯೆ ನೀಡಿ ಬಿಜೆಪಿ ಹೈಕಮಾಂಡ್ ತುಂಬಾ ಸ್ಟ್ರಾಾಂಗ್ ಆಗಿದೆ. ಮೊದಲಿನ ರೀತಿ ಹೈಕಮಾಂಡ್ ಇಲ್ಲ. ಇಲ್ಲಿ ಯಾರು ಯಾರ ಬಗ್ಗೆೆ ಚಾಡಿ ಹೇಳಿದರೂ ನಡೆಯುವುದಿಲ್ಲ. ಯಡಿಯೂರಪ್ಪ ಅವರನ್ನು ಮುಗಿಸುವ ಪ್ರಯತ್ನ ಇಲ್ಲಿ ನಡೆಯಲ್ಲ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಸಂತೋಷ್ ಎಲ್ಲರೂ ಒಟ್ಟುಗೂಡಿ ಅವರನ್ನು ಸಿಎಂ ಆಗಿ ನೇಮಿಸುವ ನಿರ್ಧಾರ ಕೈಗೊಂಡಿದ್ದಾರೆ ಎಂದರು.

ಗುರುವಾರದಿಂದ ಚಳಿಗಾಲದ ಅಧಿವೇಶನ ನಡೆಯಲಿದ್ದು, ಇದಕ್ಕೆೆ ಸರಕಾರ ಸಂಪೂರ್ಣ ಸಿದ್ಧವಾಗಿದೆ. ಪ್ರತಿಪಕ್ಷಗಳ ಟೀಕೆಗೆ ಸಮರ್ಥ ಉತ್ತರ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ರಾಜ್ಯದ ಜನರ ಸಮಸ್ಯೆೆಗೆ ಸ್ಪಂದಿಸಲು ನಾವು ಸದಾ ಸಿದ್ಧರಾಗಿದ್ದು, ಈ ಬಗ್ಗೆೆ ಯಾವುದೇ ಹಿಂಜರಿಕೆ ಇಲ್ಲ ಎಂದರು.

Leave a Reply

Your email address will not be published. Required fields are marked *