Sunday, 17th October 2021

ಸಚಿವ ಸಂಪುಟ ರಚನೆಯಲ್ಲಿ ಹಸ್ತಕ್ಷೇಪ ಮಾಡಲ್ಲ: ವಲಸಿಗರಿಗೆ ಶಾಕ್ ನೀಡಿದ ಮಾಜಿ ಸಿಎಂ

ಚಾಮರಾಜನಗರ: ಸಚಿವ ಸಂಪುಟ ರಚನೆಯಲ್ಲಿ ಹಸ್ತಕ್ಷೇಪ ಮಾಡಲ್ಲ. ಯಾರಿಗೆ ಸಚಿವ ಸ್ಥಾನ ನೀಡಬೇಕು ಬಿಡಬೇಕು ಎಂಬುದನ್ನು ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಹೈಕಮಾಂಡ್ ಗೆ ಬಿಟ್ಟ ನಿರ್ಧಾರ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಲಸಿಗರಿಗೆ ಶಾಕ್‌ ನೀಡಿದ್ದಾರೆ.

ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಮಾತನಾಡಿದ ಯಡಿಯೂರಪ್ಪ, ಬೊಮ್ಮಾಯಿ ಅವರನ್ನು ಸರ್ವಾನುಮತದಿಂದ ಸಿಎಂ ಆಗಿ ಆಯ್ಕೆ ಮಾಡಲಾಗಿದೆ. ಸಚಿವ ಸಂಪುಟ ರಚನೆಗಾಗಿ ಯಾವುದೇ ಸಲಹೆಗಳನ್ನು ಕೊಡಲ್ಲ. ಬಿಜೆಪಿಗೆ ಬಂದ 17 ಶಾಸಕರ ಬಗ್ಗೆಯೂ ಏನೂ ಹೇಳುವುದೂ ಇಲ್ಲ. ಅವರಿಗೆ ಸಚಿವ ಸ್ಥಾನ ಕೊಡುವುದು ಬಿಡುವುದು ಸಿಎಂಗೆ ಬಿಟ್ಟ ನಿರ್ಧಾರ. ಹಾಗಾಗಿ, ಹೈಕಮಾಂಡ್ ಹಾಗೂ ಸಿಎಂ ಸೇರಿ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.

ರಾಜ್ಯಾದ್ಯಂತ ನಾನು ಪ್ರವಾಸಗಳನ್ನು ಕೈಗೊಂಡು ಪಕ್ಷ ಬಲಪಡಿಸುತ್ತೇನೆ. ಗಣೇಶ ಚತುರ್ಥಿ ಬಳಿಕ ವಾರಕ್ಕೊಂದು ಜಿಲ್ಲೆಗೆ ತೆರಳಿ ಪಕ್ಷ ಸಂಘಟನೆ ನಿಟ್ಟಿನಲ್ಲಿ ಯತ್ನಿಸುತ್ತೇನೆ. ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವುದೇ ನನ್ನ ಗುರಿ. ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ನಡ್ಡಾರಿಗೆ ಇದು ನಾನು ನೀಡಿರುವ ಭರವಸೆ ಎಂದು ಹೇಳಿದರು.

Leave a Reply

Your email address will not be published. Required fields are marked *