Wednesday, 5th October 2022

ಅಭ್ಯಾಸ ಪಂದ್ಯದಲ್ಲಿ ಬೂಮ್ರಾ ಅರ್ಧಶತಕ

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಶುಕ್ರವಾರ ನಡೆದ ಪಿಂಕ್ ಬಾಲ್ ಅಭ್ಯಾಸ ಪಂದ್ಯದ ಆರಂಭಿಕ ದಿನದಂದು ವೇಗಿ ಜಸ್ಪ್ರಿತ್ ಬೂಮ್ರಾ ಮೊದಲ ಬಾರಿಗೆ ಅರ್ಧಶತಕ ಗಳಿಸಿದ್ದಾರೆ.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬೂಮ್ರಾ 57 ಎಸೆತಗಳಲ್ಲಿ 55 ರನ್ ಗಳಿಸಿದ ಶ್ರೇಷ್ಠ ಭಾರತೀಯ ಆಟಗಾರ ಎನಿಸಿ ಕೊಂಡರು. ಮೈದಾನದಲ್ಲಿ ರನ್ ಗಳಿಸಲು ಭಾರತೀಯ ಬ್ಯಾಟ್ಸ್ ಮನ್ ಗಳು ಹೆಣಗಾಡುತ್ತಿದ್ದಾಗ ಉತ್ತಮ ರೀತಿಯ ಬ್ಯಾಟಿಂಗ್ ಪ್ರದರ್ಶಿಸಿದ ಬೂಮ್ರಾ ಬೌನ್ಸರ್ ವಿಲ್ ಸದರ್ಲ್ಯಾಂಡ್ ಎಸೆತವನ್ನು ಸಿಕ್ಸರ್ ಬಾರಿಸುವ ಮೂಲಕ ಅರ್ಧ ಶತಕದ ಮೈಲುಗಲ್ಲು ಸಾಧಿಸಿದರು.

ಬೂಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರ ಜೊತೆಯಾಟದ 10 ವಿಕೆಟ್ ನಲ್ಲಿ 71 ರನ್ ಗಳು ಹರಿದುಬಂದವು. ಭಾರತ 48.3 ಓವರ್ ಗಳಲ್ಲಿ ಕೇವಲ 194 ರನ್ ಗಳಿಸುವ ಮೂಲಕ ನಿರಾಸೆ ಅನುಭವಿಸಿತು.