ಇಂಡಿ: ವಿಜಯಪೂರ ರಸ್ತೆಯ ವಿಧ್ಯಾನಗರ ಅಂದರೆ ಆದರ್ಶ ಶಾಲೆ ಹಾಗೂ ಇತರೆ ಶಾಲೆ, ಕಾಲೇಜುಗಳ ಸಮೀಪದಲ್ಲಿ ಸಾರಿಗೆ ವಾಹನಗಳ ರಹದಾರಿ ಇದ್ದರೂ ಕೂಡಾ ಬಸ್ಸ್ ನಿಲುಗಡೆ ಮಾಡದೆ ಇರುವದರಿಂದ ವಿಧ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗಿದೆ ಕೂಡಲೆ ನಿಲಗಡೆ ಮಾಡಬೇಕು ಎಂದು ದಲಿತ ಸಮನ್ವಯ ಸಮೀತಿ ತಾಲೂಕಾ ಅಧ್ಯಕ್ಷ ಶಿವಾನಂದ ಮೂರಮನ್ ಸಾರಿಗೆ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ಪಟ್ಟಣದ ವಿಜಯಪೂರ ರಸ್ತೆ ಮೆಟ್ರೀಕ ನಂತರ ಬಾಲಕರ ವಸತಿ ನಿಲಯ ಹಾಗೂ ಆದರ್ಶ ಶಾಲೆ, ಆಯ್,ಟಿ ಆಯ್ ಕಾಲೇಜು,ಡಿಗ್ರೀ ಕಾಲೇಜು, ವಿಜಯಪೂರ ರಸ್ತೆಯ ಲ್ಲಿಯೇ ಅನೇಕ ಶಿಕ್ಷಣ ನೀಡುವ ವಿಧ್ಯಾಕೇಂದ್ರಗಳು , ಶಿಕ್ಷಣ ಸಂಸ್ಥೆಗಳು ತಾಲೂಕಾ ಕ್ರೀಡಾಂಗಣ ಇರುತ್ತವೆ.
ಹೀಗಾಗಿ ಕೆಲ ಬಡಮಕ್ಕಳು ಶಾಲಾ ವಾಹನಗಳಿಗೆ ಫೀಜ ಕಟ್ಟಲು ಸಹಿತ ಅನಾನುಕೂಲ ವಿರುವುದರಿಂದ ಬಸ್ಸ್ ಪಾಸ್ ತಗೆಸಿರುತ್ತಾರೆ ಕೂಡಲೆ ಅಧಿಕಾರಿ ಗಳು ಎಚ್ಚೆತ್ತು ಸಾರಿಗೆ ವಾಹನಗಳು ನಿಲುಗಡೆ ಮಾಡಬೇಕು.
ಮಾಡದಿದ್ದರೆ ಸಾರಿಗೆ ಇಲಾಖೆ ವಿರಧ್ಧ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.