Tuesday, 5th July 2022

ಶೀಘ್ರದಲ್ಲಿ ಆನ್​ಲೈನ್​ನಲ್ಲೇ ಬಸ್‌ ಪಾಸ್‌: ಶ್ರೀರಾಮುಲು

ಬೆಂಗಳೂರು: ಶೀಘ್ರದಲ್ಲಿ ಆನ್​ಲೈನ್​ನಲ್ಲೇ ಬಸ್‌ ಪಾಸ್‌ ದೊರಕುವಂತೆ ಮಾಡಲಾಗುವುದು ಎಂದು ಸಾರಿಗೆ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧದ ಕಛೇರಿಯಲ್ಲಿ‌ ಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಸಂಬಂಧಿಸಿದ ಅಧಿಕಾರಿಗಳೊಂದಿಗೆ ಹಲವಾರು ವಿಷಯ ಗಳ ಕುರಿತು ಚರ್ಚಿಸಿದ ಬಳಿಕ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಇದೇ ವೇಳೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧಿಕಾರಿ / ಸಿಬ್ಬಂದಿಗಳ ಜುಲೈ-2021 ರ ವೇತನ ವೆಚ್ಚಕ್ಕಾಗಿ ಮೂಲ ವೇತನ ತುಟ್ಟಿ ಭತ್ಯೆಯ ಶೇ.25 ರಷ್ಟನ್ನು , 2021 -22ನೇ ಸಾಲಿನ ಆಯವ್ಯಯದ ಸಹಾಯಧನ ದಡಿ ಒದಗಿಸಿರುವ ಅನುದಾನದಡಿ ರೂ. 60.82 ಕೋಟಿಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದರು.