Friday, 3rd February 2023

ಕಾಲುವೆ ಹಾಗೂ ಕುಡಿಯುವ ನೀರು ಒದಗಿಸಲು ಮಾಜಿ ವಿಧಾನ ಪರಿಷತ್ ಆಗ್ರಹ

ಮಾನವಿ : ತಾಲೂಕ ಸೇರಿದಂತೆ ಜಿಲ್ಲೆಯಲ್ಲಿ ಇರುವ ಎಲ್ಲ ತಾಲೂಕುಗಳಲ್ಲಿ ಕಾಲುವೆ ನೀರು ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ಜಿಲ್ಲೆಯಲ್ಲಿ ಇರುವ ಕರೆಗಳಿಗೆ ನೀರನ್ನು ಭರ್ತಿ ಮಾಡಬೇಕು ಈಗಾಗಲೇ ಬೇಸಿಗೆ ಪ್ರಾರಂಭಗೊಂಡಿದು ಜನರಿಗೆ ಕುಡಿಯುವ ನೀರು ಸಮಸ್ಯೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮಾಜಿ ವಿಧಾನ ಪರಿಷತ್ ಸದಸ್ಯ ಎನ್ ಎಸ್ ಬೋಸರಾಜ್ ಹೇಳಿದರು.

ಪಟ್ಟಣದ ಕಾಂಗ್ರೆಸ್ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಯಚೂರು ಸಿಂಧನೂರು ಮಾನ್ವಿ ಇನ್ನಿತರ ಹಳ್ಳಿಗಳಲ್ಲಿ ಕುಡಿಯುವ ನೀರಿನ ಭೀಕರವಾದ ಪರಿಸ್ಥಿತಿ ಎದುರಾಗಿದೆ ಈಗಾಗಲೇ ಜಿಲ್ಲಾಧಿಕಾರಿಗಳ ಕರೆ ಭರ್ತಿ ಸಂಬಂಧಪಟ್ಟಂತೆ ಚರ್ಚ ನಡೆಸಿ ಕರೆ ಭರ್ತಿ ಮಾಡುವ ಸಿದ್ಧತೆ ಮಾಡಿ ತಿಳಿಸಲಾಗಿದೆ ಎಂದರು.

ಬೇಸಿಗೆಯ ಮುನ್ನವೇ ಕರೆ ಭರ್ತಿ ಮಾಡುಬೇಕು ಅದರೆ ಇದವರಗೂ ರಾಯಚೂರು ಸಿಂಧನೂರು ಮಾನ್ವಿ ಇನ್ನಿತರ ಹಳ್ಳಿಗಳಲ್ಲಿ ಕರೆ ಭರ್ತಿ ಮಾಡುವ ವಿಚಾರಕ್ಕೆ ಜಿಲ್ಲಾಧಿಕಾರಿಗಳ ಹಾಗೂ ಸ್ಥಳೀಯ ಮಟ್ಟದ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಅಸಮಾ ಧಾನ ವ್ಯಕ್ತಪಡಿಸಿದರು.

ಕೊನ ಭಾಗದ ರೈತರಿಗೆ ನೀರು ಒದಗಿಸುವ ಕಾರ್ಯ ಸರ್ಕಾರ ಮಾಡಬೇಕಿತ್ತು ಅದರೆ ಇದವರಗೂ ಕೊನೆ ಭಾಗದ ರೈತರಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗೆ ಮಾಡುವಲ್ಲಿ ಸರ್ಕಾರ ಮಲತಾಯಿ ಧೋರಣೆ ಅನುಸರಿಸಿದ್ದು ಖಂಡಿನಿಯ ಎಂದು ದೂರಿದರು.

ಏ.10 ನಂತರ ಭಂದ್ರಾದಿಂದ 1.64 ಟ.ಎಂ.ಸಿ ನೀರು ಬರುತ್ತದೆ ಎಂದು ಹೇಳಿದರು ಅದರೆ 1/2 ಟ.ಎಂ.ಸಿ ನೀರು ಬಂದಿದೆ ಈಗಾಗಲೇ ನೀರು ಖಾಲಿಯಾಗಿದೆ ಎಂದರು. 3800 ಕ್ಯೂಸ್ ಕ್ಸ್ ನೀರು ಬಿಡುವ ಸುಳ್ಳು ಭರವಸೆ ನೀಡಿದರು ರೈತರಿಗೆ ದಾರಿ ತಪ್ಪಿಸಲು ಹುನ್ನಾರ ನಡೆಸಿದ್ದಾರೆ ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಅಧಿಕೃತವಾಗಿ ನೀರು ಬಳಕೆ ಯಾಗಿವೆ ಇವುಗಳನ್ನು ಅಧಿಕಾರಿಗಳು ತಡೆಗಟ್ಟಿ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ನೀರು ಬಾರದೆ ಹಿನ್ನೆಲೆಯಲ್ಲಿ ಕೆಳ ಭಾಗದ ಬೆಳಗಳು ನಾಶವಾಗಿವೆ ಇದಕ್ಕೆ ಸರ್ಕಾರ ನೇರ ಕಾರಣ ಎಂದರು.

ಇನ್ನೂ ನಾಲ್ಕು ತಿಂಗಳ ಜನರಿಗೆ ಕುಡಿಯುವ ನೀರು ಅವಶ್ಯಕತೆ ಇದೆ ಅದನ್ನು ಅಧಿಕಾರಿಗಳು ಅವಲೋಕಿಸಿದಾಗ ಮಾತ್ರ ಸಮಸ್ಯೆ ಪರಿಹಾರ ಮಾಡಿಕೊಳ್ಳಬೇಕು ಎಂದರು.ಮಸ್ಕಿ ಉಪ ಚುನಾವಣೆ ಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿ ಮಾಡಿದೆ ಆರ್ ಬಸನಗೌಡ ಇವರು ಗೆಲುವು ವಿಶ್ವಾಸ ಇದೆ ಎಂದರು. ಮತದಾರರು ಈ ಬಾರಿ ಮತಗಳು ನೀಡಿ ಜಯ ಜಯಗಳಿಸವುಂತೆ ಕಾರ್ಯ ಜನತೆ ಮಾಡುತ್ತಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಯಚೂರು ಗ್ರಾಮೀಣ ಶಾಸಕ ದದ್ದಲ್ ಬಸನಗೌಡ, ಮಾಜಿ ಶಾಸಕ ಹಂಪಯ್ಯ ನಾಯಕ, ಡಾ.ಯಂಕನಗೌಡ, ಬಾಲಸ್ವಾಮಿ ಕೂಡ್ಲಿ, ರಾಜಾವಂಸತ ನಾಯಕ, ಶರಣಪ್ಪ ನಾಯಕ ಗುಡಿದಿನ್ನಿ, ಗಂಪೂರ್ ಸಾಬ್, ಅಮರೇಶಪ್ಪ ವೇಕಿಲರು, ಚಂದ್ರಶೇಖರ ಕುರ್ಡಿ, ಚನ್ನಬಸಪ್ಪ ಗೌಡ, ಮಹಾತೇಶ ಸ್ವಾಮಿ ರೌಡೂರ್, ಜಯಪ್ರಕಾಶ ಕೋನಾಪೂರೇಟೆ, ನಾಗೇಂದ್ರ ಗೌಡ, ಎಸ್ ಎಂ ಪಾಟೀಲ್, ಇನ್ನಿತರ ಅನೇಕರು ಭಾಗವಹಿಸಿದ್ದರು.

error: Content is protected !!