ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಕೇಸ್ನ ‘ಸಂತ್ರಸ್ಥೆ’ ಯುವತಿಯನ್ನ ವಿಚಾರಣೆ ಮಾಡುತ್ತಿದ್ದ ಎಸ್ಐಟಿ ಅಧಿಕಾರಿಗಳು, ಆಕೆ ವಾಸವಿದ್ದ ಪಿಜಿಯನ್ನ ಪಂಚನಾಮೆ ಮಾಡುವ ನೆಪದಲ್ಲಿ ಪ್ರಮುಖ ಸಾಕ್ಷ್ಯ ನಾಶ ಮಾಡಿದ್ದಾರೆ ಎಂದು ಸಿಡಿ ಲೇಡಿ ನಗರ ಪೊಲೀಸ್ ಆಯುಕ್ತರಿಗೆ ಎಸ್ಐಟಿ ಮತ್ತು ಜಾರಕಿಹೊಳಿ ವಿರುದ್ಧ ಬರೆದಿರುವ ಪತ್ರದಲ್ಲಿ ಸಾಕ್ಷ್ಯ ನಾಶದ ಬಗ್ಗೆ ಪ್ರಸ್ತಾಪಿಸಿದ್ದಾಳೆ.
ನನ್ನ ಪಿಜಿ ಮೇಲೆ ದಾಳಿ ಅಲ್ಲಿ ಇರುವ ಸಾಕ್ಷ್ಯಗಳನ್ನು ನಾಶ ಮಾಡಿ ನನ್ನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಸರ್ಕಾರದ ಒತ್ತಡಕ್ಕೆ ಎಸ್ಐಟಿ ಮಣಿದಿದೆ ಎಂದು ಸಿಡಿ ಲೇಡಿ ಗಂಭೀರ ಆರೋಪ ಮಾಡಿದ್ದಾಳೆ.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್ ಬುಕ್ ಪೇಜ್ ಲೈಕ್ ಮಾಡಿ