Friday, 27th May 2022

ಯಜುವೇಂದ್ರ ಚಾಹಲ್, ಕೆ.ಗೌತಮ್’ಗೆ ಕರೋನಾ ಸೋಂಕು

ಕೋಲಂಬೋ: ಟೀಂ ಇಂಡಿಯಾದ ಸ್ಪಿನ್ನರ್​ಗಳಾದ ಯಜುವೇಂದ್ರ ಚಾಹಲ್​ ಹಾಗೂ ಕೆ.ಗೌತಮ್​​ ಕರೋನಾ ಸೋಂಕಿಗೆ ಒಳಗಾಗಿದ್ದಾರೆ.

ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದ ಆಲ್​ ರೌಂಡರ್​ ಕೃನಾಲ್ ಪಾಂಡ್ಯ ಕರೋನಾ ಸೋಂಕಿಗೆ ಒಳಗಾದ ಮೂರು ದಿನಗಳಲ್ಲಿ ಇನ್ನಿಬ್ಬರು ಆಟಗಾರರು ಸೋಂಕಿಗೆ ಒಳಗಾದಂತಾಗಿದೆ. ಇವರು ಕೃನಾಲ್​ರ ಪ್ರಾಥಮಿಕ ಸಂಪರ್ಕಿತರಾದ್ದರಿಂದ ಪ್ರತ್ಯೇಕವಾಗಿ ಇಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಕಳೆದ ಮಂಗಳವಾರ ಕೃನಾಲ್​ ಸೋಂಕಿಗೆ ಒಳಗಾಗಿದ್ದಾರೆ ಎಂಬುದು ವರದಿಯಿಂದ ತಿಳಿದು ಬರುತ್ತಿದ್ದಂತೆಯೇ ಪ್ರಥ್ವಿ ಶಾ, ಸೂರ್ಯಕುಮಾರ್​ ಯಾದವ್​, ಹಾರ್ದಿಕ್​ ಪಾಂಡ್ಯ, ಯಜುವೇಂದ್ರ ಚಾಹಲ್​, ದೀಪಕ್​ ಚಹರ್​, ಮನೀಷ್​ ಪಾಂಡ್ಯ, ಇಶಾನ್​ ಕಿಶನ್​ ಹಾಗೂ ಕೆ.ಗೌತಮ್​​ರನ್ನು ಪ್ರಾಥಮಿಕ ಸಂಪರ್ಕಿತರೆಂದು ಪರಿಗಣಿಸಲಾಗಿತ್ತು.

ಈ 8 ಮಂದಿ ಆಟಗಾರರಿಗೆ ಕಳೆದ ಟ್ವೆಂಟಿ 20 ಪಂದ್ಯಗಳಿಂದ ದೂರವಿಡಲಾಗಿತ್ತು. ಟೀಂ ಇಂಡಿಯಾ ತಂಡದಿಂದ ಇವರನ್ನು ಪ್ರತ್ಯೇಕವಾಗಿ ಇರಿಸಲಾಗಿತ್ತು.