Friday, 24th September 2021

ಪ್ರಶಾಂತ್ ಸಂಬರ್ಗಿ ವಿರುದ್ದ ದೂರಿತ್ತ ಬಿಗ್ಬಾಸ್ ಸ್ಫರ್ಧಿ ಚಕ್ರವರ್ತಿ ಚಂದ್ರಚೂಡ್

ಬೆಂಗಳೂರು: ಇತ್ತೀಚೆಗಷ್ಟೇ ಅಂತ್ಯವಾದ ಬಿಗ್ಬಾಸ್ ೮ ಸೀಸನ್ ಸ್ಫರ್ಧಿ ಚಕ್ರವರ್ತಿ ಚಂದ್ರಚೂಡ್ ಎಂಬ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ವಿರುದ್ದ ದೂರು ನೀಡಿದ್ದಾರೆ.

‘ಪ್ರಶಾಂತ್ ಸಂಬರ್ಗಿ ಹುಸಿ ಸಾಮಾಜಿಕ ಕಾರ್ಯಕರ್ತ. ಕಿತ್ತೂರು ಚೆನ್ನಮ್ಮ ರಾಣಿಯಂತಹ ಮಹಾತಾಯಿ ಮೊಮ್ಮಗ ಎಂದು ಹೇಳಿಕೊಳ್ಳುತ್ತಾ ಓಡಾಡುತ್ತಿರುವ ಒಬ್ಬ ಸಮಾಜ ಘಾತುಕ ವ್ಯಕ್ತಿಯ ವಿರುದ್ಧ ದೂರು ಕೊಡಬೇಕಾಗಿತ್ತು. ಕೇವಲ ಮಾಧ್ಯಮದಲ್ಲಿ ಮಾತನಾಡುವುದು, ನಮ್ಮ ಧ್ವನಿಯನ್ನು ಎತ್ತುವುದರ ಜೊತೆಗೆ ಸಂಬಂಧಪಟ್ಟ ಅಧಿಕಾರಿಗಳ ಮಟ್ಟಕ್ಕೆ ಬರಬೇಕು, ಇದರ ಬಗ್ಗೆ ತನಿಖೆ ಆಗಬೇಕು ಎಂದರು.

ಶೃತಿ ಹರಿಹರನ್ ಎಂಬ ನಟಿ ವಿರುದ್ದ ಪ್ರಶಾಂತ್ ಸಂಬರ್ಗಿ ಆರೋಪ ಮಾಡಿದ್ದಾರೆ. ವಿದೇಶದಿಂದ ಕೋಟಿ ಕೋಟಿ ಹಣ ಈ ಭಾರತ ದೇಶದ ವಿರುದ್ದದ ಅಭಿಯಾನಕ್ಕೆ ಬರುತ್ತಿದೆ. ಇದು ಸಾಮಾನ್ಯವಾದ ಅಪರಾಧವಲ್ಲ. ಇದರ ಬಗ್ಗೆ ಇವರು ಯಾವುದೇ ದಾಖಲಾತಿ ಕೊಡಲಿಲ್ಲ.

ಶೃತಿ ಹರಿಹರನ್ ಈತನ ವಿರುದ್ಧ ದೂರು ನೀಡಿದ್ದರು. ನಂತರ ಡ್ರಗ್ಸ್ ಬಗ್ಗೆ ಅನೇಕ ಜನರ ವಿರುದ್ದ ಆರೋಪ ಮಾಡಿದ್ದರು. ಪ್ರಕರಣದಲ್ಲಿ ಪೋಲಿಸರು 2500 ಪುಟ ಗಳ ಚಾರ್ಜ್ ಶೀಟ್ ಬಿಡುಗಡೆ ಮಾಡಿದ್ದರು. ಆದರೆ ಪ್ರಶಾಂತ್ ಸಂಬರ್ಗಿಯ ಉಲ್ಲೇಖ ಇಲ್ಲ. ಇವರ ಬಳಿ ಯಾವುದೇ ದಾಖಲಾತಿ ಇಲ್ಲ ಎಂಬುದು ಗೊತ್ತಾಗಿದೆ. ಹಾಗಾಗಿ ಇವರ ಮನೆಯನ್ನು ಜಪ್ತಿ ಮಾಡಬೇಕು.ಸಂಬಂಧಪಟ್ಟ ದಾಖಲೆಗಳಿದ್ದರೆ ವಶ ಮಾಡಿಕೊಳ್ಳಬೇಕು ಎಂದು ದೂರು ನೀಡಿದ್ದೇನೆ ಎಂದರು.

Leave a Reply

Your email address will not be published. Required fields are marked *