Monday, 21st September 2020

ಜಗತ್ತನ್ನು ಬದಲಿಸುವ ಮೊದಲು ನಿನ್ನನ್ನು ಬದಲಿಸಕೋ!

ಇತ್ತೀಚೆಗೆ ನೀತಿಕಥೆಗಳನ್ನು ಓದುತ್ತಿಿದ್ದಾಾಗ, ಈ ಕಥೆ ಮನಸ್ಸಿಿಗೆ ಹಿಡಿಸಿತು. ಅದು ನಿಮಗೂ ಇಷ್ಟವಾಗಬಹುದೂಂತ ಭಾವನೆ. ಎಲ್ಲ ಕಥೆಗಳು ಶುರುವಾಗುವುದು ಒಂದಾನೊಂದು ಕಾಡಿನಲ್ಲಿ, ಒಂದಾನೊಂದು ಊರಿನಲ್ಲಿ ಎನ್ನುವ ಮೂಲಕ. ಇದು ಕೂಡ ಹಾಗೆ ಶುರುವಾಯಿತು. ಒಂದೂರಲ್ಲಿ ಒಬ್ಬ ರಾಜನಿದ್ದ. ಅವನ ರಾಜ್ಯ ಸಿರಿ, ಸಂಪತ್ತಿಿನಿಂದ ತುಂಬಿ ತುಳುಕುತ್ತಿಿತ್ತು. ಇಡೀ ಸುತ್ತಲ ರಾಜ್ಯಕ್ಕೆೆ ಹೋಲಿಸಿದರೆ ಈ ಊರು ನೆಮ್ಮದಿಯ ತಾಣವಾಗಿತ್ತು.

ಹೀಗಿರಲು ಒಮ್ಮೆೆ ಏನಾಯಿತೆಂದರೆ, ರಾಜನಿಗೆ ತನ್ನ ರಾಜ್ಯದಲ್ಲೆೆಲ್ಲ ಒಮ್ಮೆೆ ತಿರುಗಾಡಿ ಬರಬೇಕೆಂದು ಆಸೆಯಾಯಿತು. ಅಂತೆಯೇ ರಾಜ ರಾಜ್ಯ ಸುತ್ತಲು ಹೊರಟ. ಹಾದಿಯುದ್ದಕ್ಕೂ ಕಲ್ಲು-ಮುಳ್ಳುಗಳಿಂದ ಕೂಡಿತ್ತು. ಬರಿಗಾಲಿನಲ್ಲಿ ಎರಡು ಹೆಜ್ಜೆೆ ಮುಂದಡಿ ಇಡುವದು ಕಷ್ಟವಾಗಿತ್ತು. ಇಂಥ ಹಾದಿಯಲ್ಲಿ ರಾಜ ಬರಿಗಾಲಿನಲ್ಲಿ ನಡೆದು ಹೋಗಿದ್ದರಿಂದ ರಾಜನ ಕಾಲಿಗೆ ಬೊಬ್ಬೆೆಗಳೆದ್ದಿದ್ದವು. ಅಲ್ಲಲ್ಲಿ ಮುಳ್ಳುಕಂಟೆಗಳಿಂದ ತೆರಚಿದಂಥ ಗೀರುಗಳು ಮೂಡಿದ್ದವು. ಆ ಗೀರುಗಳ ಮಧ್ಯೆೆ ಕಡುಕೆಂಪು ರಕ್ತ ತುಂಬಿದಂತಾಗಿತ್ತು. ರಾಜ ನೋವಿನಿಂದ ನಿತ್ರಾಾಣಗೊಂಡಿದ್ದ. ರಾಜ್ಯದ ಯಾವ ಹಾದಿಯೂ ಉತ್ತಮವಾಗಿಲ್ಲದಿರುವುದನ್ನು ಕಂಡು ರಾಜ ಬೇಸರಿಸಿಕೊಂಡು. ಇಡೀ ರಾಜ್ಯದ ಎಲ್ಲ ರಸ್ತೆೆಗಳಿಗೆ ಚರ್ಮವನ್ನು ಹೊದಿಸುವಂತೆ ಆಜ್ಞೆ ಮಾಡಿದನು. ಅದಕ್ಕಾಾಗಿ ನೂರಾರು ದನಗಳ ವಧೆ ಮಾಡಬೇಕಿತ್ತು.

ರಾಜನ ಆಪ್ತ ಸಹಾಯಕನೊಬ್ಬ ಒಂದು ಸಲಹೆ ನೀಡಿದನು. ರಾಜ್ಯದ ರಸ್ತೆೆಗಳಿಗೆ ಚರ್ಮ ಹೊದಿಸುವ ಬದಲಾಗಿ, ಒಂದು ತುಂಡು ಚರ್ಮದಿಂದ ರಾಜನು ತನ್ನ ಪಾದವನ್ನು ಮುಚ್ಚಿಿಕೊಳ್ಳಬೇಕೆಂದೂ, ಅದರಿಂದಾಗಿ ದನಗಳ ವಧೆಯಾಗುವುದನ್ನು ತಪ್ಪಿಿಸಬಹುದಾಗಿದೆ ಎಂದೂ, ಅಲ್ಲದೆ ಅನಗತ್ಯ ಖರ್ಚು ಮಾಡುವುದನ್ನೂ ತಪ್ಪಿಿಸಬಹುದು ಎಂಬುದಾಗಿಯೂ ರಾಜನಿಗೆ ವಿವರಿಸಿ ಹೇಳಿದ. ಆ ಸಹಾಯಕನ ಸಲಹೆ ರಾಜನಿಗೆ ನಿಜವೆನಿಸಿತು. ಅಂದಿನಿಂದಲೇ ರಾಜ ಪಾದರಕ್ಷೆ ಧರಿಸುವ ಅಭ್ಯಾಾಸ ಮಾಡಿಕೊಂಡನು.

ಇಡೀ ಜಗತ್ತನ್ನೇ ಬದಲಿಸುವ ಮೊದಲು ನಿನ್ನನ್ನು ನೀನು ಬದಲಿಸಿಕೋ ಎಂಬುದು ಈ ಕಥೆಯ ನೀತಿ.

‘ನೀನೇನು ಪಡೆದಿದ್ದರೂ ಅದನ್ನು ಇಲ್ಲಿಂದಲೇ ಪಡೆದಿರುವೆ. ಏನನ್ನು ನೀಡಿದರೂ ಅದನ್ನು ಇಲ್ಲಿಗೆ ನೀಡಿರುವೆ. ನಿನ್ನೆೆ ಬೇರೆ ಯಾರದ್ದೋೋ ಆಗಿದ್ದು, ಇಂದು ನಿನ್ನದಾಗಿದೆ ಮತ್ತು ನಾಳೆ ಇನ್ಯಾಾರದ್ದೋೋ ಆಗಲಿದೆ. ಪರಿವರ್ತನೆ ಜಗದ ನಿಯಮ’ ಎಂದು ಹೇಳುವ ಭಗವದ್ಗೀತೆಯ ಸಾಲುಗಳು ಎಂಥವರಿಗೂ ಸ್ಫೂರ್ತಿಯ ಚಿಲುಮೆ. ಬದಲಾವಣೆಯ ಬಗ್ಗೆೆ ಚಿಂತಿಸುವ ಪ್ರತಿಯೊಬ್ಬರೂ ಆ ಬದಲಾವಣೆಯ ರೂವಾರಿ ತಾವೇ ಆಗಬೇಕೆಂದು ಬಯಸುತ್ತಾಾರೆ. ಅಂಥ ಬದಲಾವಣೆಯು ತಮ್ಮಿಿಂದಲೇ ಆರಂಭವಾದರೆ, ಪ್ರಪಂಚದ ಬದಲಾವಣೆಯೂ ತಾನಾಗಿಯೇ ಆಗುತ್ತದೆ. ತೆರೆದ ಕಿಟಕಿಯಿಂದಲೇ ಬೆಳಕು ಬರಲು ಸಾಧ್ಯ. ಮಹಾತ್ಮರು ಪಾಲಿಸಿದ್ದು ಇದನ್ನೇ. ಅವರು ತಮ್ಮನ್ನು ತಾವು ಬದಲಿಸಿಕೊಳ್ಳುತ್ತಲೇ ಜನಮನವನ್ನು ಬದಲಿಸಿದರು. ಬಹಳಷ್ಟು ಜನರು ಇತರರ ತಪ್ಪುುಗಳನ್ನು ಎತ್ತಿಿ ತೋರಿಸುವುದನ್ನೇ ಸಮಾಜಸೇವೆ ಎಂದುಕೊಂಡಿದ್ದಾಾರೆ. ಅವರು ಸದಾ ಬೇರೆಯವರ ಟೀಕೆಗಳಲ್ಲೇ ಕಾಲಕಳೆಯುತ್ತಾಾರೆ.

ತಮ್ಮನ್ನು ತಾವು ಮೊದಲು ಶುದ್ಧಗೊಳಿಸುವುದನ್ನೇ ಮರೆತುಬಿಡುತ್ತಾಾರೆ ಅಥವಾ ತಾವು ಶುದ್ಧರೆಂದೇ ಭ್ರಮಿಸಿರುತ್ತಾಾರೆ. ನೀವು ಉತ್ತಮರಾಗಿದ್ದರೆ, ಲೋಕದಲ್ಲಿ ಡೊಂಕು ಇದೆಯೆಂದು ಭಾವಿಸುವ ಬದಲು ಅದು ತಮ್ಮಲ್ಲಿಯೇ ಇದೆ, ಅದನ್ನು ಮೊದಲು ಸರಿಪಡಿಸಿಕೊಳ್ಳಬೇಕೆನ್ನುವ ಪ್ರಯತ್ನ ಮಾಡುತ್ತೀರಿ. ಅದಕ್ಕಾಾಗಿಯೇ ಬಸವಣ್ಣನವರು, ಲೋಕದ ಡೊಂಕು ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿಿ…ಎಂದು ಹೇಳಿದ್ದು. ವಚನಕಾರರ ಮಾತಿನಲ್ಲಿ ಎಷ್ಟೊೊಂದು ಸತ್ಯವಿದೆ ಅಲ್ಲವೇ? ಸಮಾಜದ ಬಗ್ಗೆೆ, ಸರಕಾರದ ಬಗ್ಗೆೆ ದೂಷಿಸುತ್ತಾಾ, ಸಮಾಜಿಕ ಜಾಲತಾಣಗಳಲಿ ಟ್ರೋೋಲ್ ಮಾಡುತ್ತಾಾ, ಅಸಂಬದ್ಧ ವಾದ ಮಾಡುತ್ತಾಾ, ಉಡಾಫೆಯಾಗಿ ಮಾತಾಡುತ್ತ ಕಾಲ ಕಳೆಯುವವರಿಂದ ಸಮಾಜದ ಬದಲಾವಣೆ ಖಂಡಿತ ಸಾಧ್ಯವಿಲ್ಲ.

ಕೆಲವರು ಎಲ್ಲ ರೀತಿಯಿಂದಲೂ ಸದೃಢವಾಗಿದ್ದರೂ, ಯಾವುದೋ ದೊಡ್ಡ ಕಾರ್ಯಕ್ಕೆೆ ಮುಂದಾದಾಗಲೋ, ಸಂದರ್ಶನ ಎದುರಿಸುವಾಗಲೋ, ಏನೋ ಒಂದು ರೀತಿ ಮನಸ್ಸಿಿನಲ್ಲಿ ದುಗುಡ, ಕಳವಳ, ಅವ್ಯಕ್ತ ಭಯ, ಕೀಳರಿಮೆ, ಇದೆಲ್ಲ ನನ್ನಿಿಂದ ಸಾಧ್ಯವಾ? ಅಷ್ಟು ಜನರಲ್ಲಿ ನಾನು ಆಯ್ಕೆೆಯಾಗುತ್ತೇನಾ, ಈ ಕೆಲಸ ನನ್ನಿಿಂದ ಆಗದಿದ್ದರೆ, ಅಂಥ ಕೆಲಸಕ್ಕೆೆ ನಾನು ಹೇಳಿ ಮಾಡಿಸಿದ ವ್ಯಕ್ತಿಿನಾ? ಹೀಗೆ ಒಂದರಮೇಲೊಂದರಂತೆ ನಕಾರಾತ್ಮಕ ಭಾವನೆಗಳು ಸುಳಿದು ಮುಖದ ಮೇಲೆ ಸಣ್ಣಗೆ ಬೆವರು ಇಳಿದುಬಿಡುತ್ತದೆ. ಈ ರೀತಿಯ ವರ್ತನೆಯೇ ಒಮ್ಮೊೊಮ್ಮೆೆ ನಮ್ಮನ್ನು ಅವಕಾಶವಂಚಿತರನ್ನಾಾಗಿ ಮಾಡುತ್ತದೆ.
ನೀವು ‘ಮ್ಯಾಾಡ್ ಮ್ಯಾಾಕ್‌ಸ್‌’ ಸಿನಿಮಾ ನೋಡಿರಬಹುದು. ಅದರಲ್ಲಿನ ನಟ ಗಿಬ್ಸನ್ ನಟನೆ ನೋಡಿದರೆ ಹುಬ್ಬೇರಿಸುತ್ತೀರಿ. ಅಷ್ಟೊೊಂದು ಅದ್ಭುತವಾಗಿ ನಟಿಸಿ ಸೈ ಎನಿಸಿಕೊಂಡಿದ್ದಾಾನೆ. ಆದರೆ ಈ ಚಿತ್ರಕ್ಕೆೆ ಅವನು ನಾಯಕ ನಟನಾಗಿ ಆಯ್ಕೆೆಯಾಗಿದ್ದೇ ವಿಚಿತ್ರ.

1979ರಲ್ಲಿ ಹಾಲಿವುಡ್ ನಿರ್ಮಾಪಕ ಜಾರ್ಜ್ ಮಿಲ್ಲರ್ ‘ಮ್ಯಾಾಡ್ ಮ್ಯಾಾಕ್‌ಸ್‌’ ಚಿತ್ರದ ನಟನಿಗಾಗಿ ಪರದೆಯ ಪರೀಕ್ಷೆೆಗಾಗಿ ಹಲವಾರು ಹೊಸ ನಟರಿಗೆ ಆಹ್ವಾಾನ ನೀಡಿದ್ದ. ಅದರಂತೆ ಆ ಚಿತ್ರದಲ್ಲಿ ನಟನೆ ಮಾಡುವುದಕ್ಕಾಾಗಿ ಪರೀಕ್ಷೆೆ ಎದುರಿಸಲು ಬಂದವರಲ್ಲಿ ಆಸ್ಟ್ರೇಲಿಯದ ನಟ ಗಿಬ್ಸನ್ ಕೂಡ ಒಬ್ಬನು.

ಸ್ಕ್ರೀನ್ ಟೆಸ್‌ಟ್‌‌ನ ಹಿಂದಿನ ರಾತ್ರಿಿ ಗಿಬ್ಸನ್ ನಗರದ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿಿದ್ದಾಾಗ, ಮೂರ್ನಾಾಲ್ಕು ಜನ ಕಂಠಪೂರ್ತಿ ಕುಡಿದ ಪುಂಡರು ಗಿಬ್ಸನ್ ಮೇಲೆ ದಾಳಿ ಮಾಡಿದ್ದರು. ಅಲ್ಲದೇ ಅವನನ್ನು ಅಟ್ಟಿಿಸಿಕೊಂಡು ಹೋಗಿ ಮನಸೋ ಇಚ್ಛೆೆ ಥಳಿಸಿದ್ದರು. ಅನಿರೀಕ್ಷಿಿತವಾಗಿ ನಡೆದ ಈ ದಾಳಿಯಿಂದ ಗಿಬ್ಸನ್ ಆಘಾತಕ್ಕೊೊಳಾಗಿದ್ದ. ಅವನ ಮುಖವೆಲ್ಲ ಊದಿಕೊಂಡು ವಿಕಾರಗೊಂಡಿತ್ತು. ಮಾರನೆ ದಿನವೂ ಮುಖದ ವಿಕಾರ ಇಳಿದಿರಲಿಲ್ಲ. ಇಂಥ ಮುಖವೊತ್ತುಕೊಂಡು ಸ್ಕ್ರೀನ್ ಟೆಸ್‌ಟ್‌‌ಗೆ ಹೋದರೆ ಆಯ್ಕೆೆಯಾಗುತ್ತೇನಾ ಎಂಬ ಚಿಂತೆಯೂ ಅವನನ್ನು ಕಾಡುತ್ತಿಿತ್ತು. ಊದಿಕೊಂಡು ವಿಕಾರವಾಗಿರುವ ಈ ಮುಖವನ್ನು ನೋಡಿ ನಿರ್ಮಾಪಕರು ಮೊದಲ ಹಂತದಲ್ಲೇ ಹೊರಗೆ ದಬ್ಬುವುದು ಖಚಿತವೆಂದು, ಅಲ್ಲಿಗೆ ಹೋಗುವುದರಿಂದ ಪ್ರಯೋಜನವಿಲ್ಲವೆಂದು ಚಿಂತಿಸಿದ. ಕೊನೆಗೆ ಸ್ಕ್ರೀನ್ ಟೆಸ್‌ಟ್‌ ಪಾಸಾಗುವುದಿಲ್ಲ. ಸುಮ್ಮನೆ ಟೆಸ್‌ಟ್‌‌ಗೆ ಹೋಗಿಬಂದರಾಯಿತು ಎಂದು ಗಿಬ್ಸನ್ ಜೋಲು ಮುಖವನ್ನು ಹೊತ್ತುಕೊಂಡು ಟೆಸ್‌ಟ್‌ ಹೊರಟ. ಆದರೆ ಅದೃಷ್ಟವೇ ಅವನ ಬೆನ್ನು ಹತ್ತಿಿತ್ತು.

ಜಾರ್ಜ್ ಮಿಲ್ಲರ್ ತನ್ನ ಚಿತ್ರಕ್ಕೆೆ ಮುಖದಲ್ಲಿ ಗಾಯವಾಗಿ, ವಿಕಾರವಿದ್ದವನನ್ನೇ ಹುಡುಕುತ್ತಿಿದ್ದನಂತೆ. ಗಿಬ್ಸನ್‌ಗೆ ಹಿಂದಿನ ರಾತ್ರಿಿ ಹೊಡೆತದಿಂದ ಮುಖದಲ್ಲಿ ಗಾಯವಾಗಿರುದನ್ನು ನೋಡಿ, ತನ್ನ ಚಿತ್ರಕ್ಕೆೆ ಅಂತಿಮವಾಗಿ ಅವನನ್ನೇ ನಾಯಕನ್ನಾಾಗಿ ಆಯ್ಕೆೆ ಮಾಡಿದ. ನಂತರ ಗಿಬ್ಸನ್ ನಟಿಸಿದ ಆ ಚಿತ್ರ ಅತ್ಯುತ್ತಮ ಚಿತ್ರವಾಗಿ ಗಿಬ್ಸನ್‌ಗೆ ದೊಡ್ಡ ಹೆಸರು ತಂದು ಕೊಟ್ಟಿಿತು.

ಕೀಳರಿಮೆ, ಭಯ, ನಾಚಿಕೆ, ಅನುಮಾನ, ಗೊಂದಲ, ಕಳವಳ, ಹಿಂಜರಿಕೆಯಿಂದ ಅವಕಾಶಗಳಿಂದ ವಂಚಿತರಾಗಿದ್ದ ಕೊರಗುವವರೇ ಹೆಚ್ಚು. ಆದರೆ ಸಿಕ್ಕ ಅವಕಾಶಗಳನ್ನು ಬಿಡದೇ ಏನಾದರೂ ಆಗಲಿ ಪ್ರಯತ್ನಿಿಸುವೆ ಎಂದು ಹೊರಡಬೇಕು. ಯಾವ ಅವಕಾಶವನ್ನೂ ವಿನಾಕಾರಣ ತಪ್ಪಿಿಸಿಕೊಳ್ಳಬಾರದೆಂಬುದಕ್ಕೆೆ ಗಿಬ್ಸನ್‌ನ ಜೀವನ ಬದಲಾಯಿಸಿದ ಈ ಸಂಗತಿಯೇ ನಿದರ್ಶನ.

ಈ ಕಾಲದ ಸ್ತ್ರೀಯರಿಗೆ ತಮ್ಮ ಅಸ್ಮಿಿತೆ ಕುರಿತು ಜಾಗೃತಿ ತಕ್ಕಮಟ್ಟಿಿಗೆ ಚೆನ್ನಾಾಗಿಯೇ ಇದೆ. ಪ್ರಜ್ಞಾಾಪೂರ್ವಕವಾಗಿಯೋ ಅಥವಾ ಸಹಜವೆಂಬಂತೆಯೋ ಅವರು ಅದನ್ನು ಸ್ಥಾಾಪಿಸಿಕೊಳ್ಳಲು, ಕಾಪಾಡಿಕೊಳ್ಳಲು ಸಾಕಷ್ಟು ಎಚ್ಚರ ವಹಿಸುತ್ತಾಾರೆ. ತಾನೊಬ್ಬ ‘ಫೆಮಿನಿಸ್‌ಟ್‌’ ಎಂದು ಹೇಳಿಕೊಳ್ಳುವ ಸುಶಿಕ್ಷಿಿತರು ಇದನ್ನು ಯಾವ ಸಮಯದಲ್ಲಿಯೂ ಅವಹೇಳನಕಾರಿ ಎಂದು ಭಾವಿಸುವುದಿಲ್ಲ. ಹಾಗೆ ಅದಕ್ಕೊೊಂದು ವಿಸ್ತಾಾರ, ಹೃದಯವಂತ ಆಯಾಮವಿದೆ ಎಂಬುದು ಚೆನ್ನಾಾಗಿ ಗೊತ್ತಿಿರುವುದರಿಂದಲೇ ಹೀಗೆ ‘ಮಹಿಳಾವಾದಿ’ ಎಂದು ಗುರುತಿಸಿಕೊಳ್ಳುವುದು ಒಂದು ಹೆಮ್ಮೆೆ ಅವರಿಗೆ.

ಏನದು ವಿಸ್ತಾಾರವಾದ ಆಯಾಮ ಅಂದರೆ, ಮಹಿಳೆಯರನ್ನು ಸಮಾನವಾಗಿ ನೋಡದ ಪುರುಷ ಪ್ರಧಾನ ಸಮಾಜದಲ್ಲಿ, ವ್ಯವಸ್ಥೆೆಯಲ್ಲಿ ಒಂದು ಘನತೆಯ ಅಸ್ತಿಿತ್ವಕ್ಕಾಾಗಿ ಎಲ್ಲ ಮತ, ಭೇದ, ಧರ್ಮ, ಸಾಮಾಜಿಕ ಸ್ತರಗಳನ್ನು ಮರೆತು ಮಹಿಳೆಯರು ಒಗ್ಗಟ್ಟು ಪ್ರದರ್ಶಿಸಬೇಕಾಗುತ್ತದೆ. ಯಾವುದೇ ಕಾರಣಕ್ಕೂ ತಮ್ಮ ಸಹಭಾಗಿಗಳಾದ ಇತರ ಸ್ತ್ರೀಯರನ್ನು ಕಡಿಮೆಯಾಗಿ ಕಾಣಕೂಡದು. ಅವರೊಂದಿಗೆ ಕಲಹ, ಮನಸ್ತಾಾಪ ಎಂದಿಗೂ ಒಂದು ಗೆರೆ ದಾಟಬಾರದು. ಶೋಷಣೆ ಯಾರಿಗೇ ಎದುರಾದರೂ ಎಲ್ಲರೂ ಸಂಘಟಿತರಾಗಬೇಕು.

ಇಷ್ಟೆೆಲ್ಲ ಇರುವಾಗ, ಈ ಅತ್ತೆೆ-ಸೊಸೆಯರ ನಡುವೆ ಏಕೆ ಇಷ್ಟೊೊಂದು ವೈಷಮ್ಯ ಇರುತ್ತದೆ ಎಂಬುದು ಒಂದು ಬಗೆಹರಿಯದ ಪ್ರಶ್ನೆೆ. ನನ್ನ ಪರಿಚಯದಾಕೆ ಹೇಳಿಕೊಂಡ ಈ ಒಳತೋಟಿ ಇತರ ಎಲ್ಲ ಮಹಿಳೆಯರದೂ ಆಗಿರಬಹುದು. ಆದರೆ ಇಲ್ಲಿ ವೈಮನಸ್ಯಕ್ಕಿಿಂತ ಹೆಚ್ಚಾಾಗಿ ಎಷ್ಟು ಸುರಳೀತವಾಗಿ ಅದು ಮುಕ್ತಾಾಯವಾಯಿತು, ಜಾಗೃತಿ ಇಬ್ಬರಲ್ಲೂ ಉಂಟಾಯಿತು ಎನ್ನುವುದು ಮುಖ್ಯ. ಅದನ್ನು ಅವರ ಮಾತುಗಳಲ್ಲೇ ಕೇಳಿ:

‘ನನ್ನ ಅತ್ತೆೆ ಅಂದರೆ ಪತಿಯ ತಾಯಿಯೊಂದಿಗೆ ನನ್ನ ಬಾಂಧವ್ಯ ಅಷ್ಟೇನೂ ಸೌಹಾರ್ದಯುತವಾಗಿರಲಿಲ್ಲ. ಎಲ್ಲ ಮನೆಗಳಲ್ಲಿ ಇರುವಂತೆ ಇಬ್ಬರೂ ಒಂದೊಂದು ದಿಕ್ಕಿಿಗೆ ನೋಡುತ್ತಿಿದ್ದೆೆವು. ಭಿನ್ನವಾಗಿ ಯೋಚಿಸುತ್ತಿಿದ್ದೆೆವು. ತರಕಾರಿ ಹೆಚ್ಚುವುದರಿಂದ ಹಿಡಿದು ತೊಡುವ ಉಡುಪಿನವರೆಗೆ ಎಲ್ಲದಕ್ಕೂ ನನ್ನನ್ನು ಟೀಕಿಸುವವರನ್ನು ನಾನು ಸ್ನೇಹದಿಂದ ಹೇಗೆ ಕಾಣಬಲ್ಲೆೆ ಎಂದು ಆಕ್ರೋೋಶಗೊಳ್ಳುತ್ತಿಿದ್ದೆೆ. ನಮ್ಮಲ್ಲಿ ಉಳಿಯಲು ಬಂದಾಗ ಹೇಗೋ ಅವರನ್ನು ಸಹಿಸಿಕೊಳ್ಳುತ್ತಿಿದ್ದೆೆನಾದರೂ ಈ ಅವಧಿ ಸ್ವಲ್ಪ ದೀರ್ಘವಾದರೂ ನನಗೆ ಭಯಂಕರ ಹಿಂಸೆಯಾಗುತ್ತಿಿತ್ತು.

ಹೀಗೇಕೆ? ಸುತ್ತಲಿರುವ ಎಲ್ಲ ಮಹಿಳೆಯರನ್ನೂ ಪ್ರೀತಿಸುವುದು, ಬೆಂಬಲಿಸುವುದು ಒಬ್ಬ ಸ್ತ್ರೀವಾದಿಯಾಗಿ ನನ್ನ ಆದರ್ಶ, ಆಶಯ ಆಗಿರುವಾಗ ತುಂಬ ಪ್ರೀತಿಸುವ ಪತಿಯ ತಾಯಿ ಆಕೆ ಎಂದಾದರೂ ಅತ್ತೆೆಯನ್ನು ಪ್ರೀತಿಸಲು ನನಗೇಕೆ ಸಾಧ್ಯವಾಗುತ್ತಿಿಲ್ಲ’ ಎಂದು ಅನೇಕ ಸಾರಿ ಪ್ರಾಾಮಾಣಿಕವಾಗಿ ಆತ್ಮಶೋಧನೆ ಮಾಡಿಕೊಂಡಿದ್ದಿದೆ. ಅದು ನಿಷ್ಫಲವಾಗಲಿಲ್ಲ. ಸಣ್ಣದೊಂದು ನಿದರ್ಶನ ಸಿಕ್ಕರೂ ಹೃದಯಪರಿವರ್ತನೆಗೆ ನಾನು ಪಕ್ವಗೊಂಡಿದ್ದೆೆ.

ಒಮ್ಮೆೆ ನನ್ನ ತಾಯಿಗೆ ತುರ್ತು ಆರೋಗ್ಯ ಸಮಸ್ಯೆೆ ಉಂಟಾಯಿತು. ವಿಷಯ ತಿಳಿಯುತ್ತಲೇ ಎಲ್ಲವನ್ನೂ ಇದ್ದಲ್ಲೇ ಬಿಟ್ಟು, ಸಿಕ್ಕ ಫ್ಲೈಟ್ ಹತ್ತಿಿ ಆಸ್ಪತ್ರೆೆಗೆ ಧಾವಿಸಿದೆ. ಮಾರನೇ ದಿನವೇ ಆಪರೇಶನ್. ನಿಗದಿಯಾದ ಸಮಯಕ್ಕೆೆ ಅಮ್ಮನನ್ನು ವ್ಹೀಲ್ ಚೇರಿನಲ್ಲಿ ಆಪರೇಶನ್ ಥಿಯೇಟರ್‌ಗೆ ಕರೆದುಕೊಂಡು ಹೋಗುವಾಗ ಅದೆಲ್ಲಿತ್ತೋೋ, ದುಃಖ ಉಮ್ಮಳಿಸಿ ಬಂತು. ಮತ್ತೊೊಮ್ಮೆೆ ಆಕೆಯನ್ನು ಜೀವಂತ ನೋಡಲಾರೆನೇನೋ ಎನಿಸಿತು. ವರ್ಷದ ಹಿಂದೆ ತಂದೆಯನ್ನೂ ಕಳೆದುಕೊಂಡಿದ್ದವಳಿಗೆ ಅನಾಥ ಭಾವ ದೇಹವೆಲ್ಲ ವ್ಯಾಾಪಿಸಿತು. ಇನ್ನೇನು ಕುಸಿಯುತ್ತೇನೆ ಎನ್ನುವಾಗ ಒಂದು ಪರಿಚಿತ ಆಕೃತಿ ನನ್ನತ್ತ ನಡೆದುಬರುವುದನ್ನು ನೋಡಿದೆ.

ಅಂದಿನಿಂದ ನಾನು ಸೊಸೆಯಾಗಿ-ಆಕೆ ಅತ್ತೆೆಯಾಗಿ ಎಂದೂ ಉಳಿಯಲಿಲ್ಲ.

Leave a Reply

Your email address will not be published. Required fields are marked *