‘ಲೈಫ್ ಇನ್ ಮೆಟ್ರೋ’ ಅವತರಣಿಕೆಯಲ್ಲಿ ವಿದ್ಯಾಬಾಲನ್‌ಗೆ ಅತಿಥಿ ಪಾತ್ರ

ಮುಂಬೈ:  ಮಹಿಳಾ ಕೇಂದ್ರಿತ ಚಿತ್ರಗಳಿಂದ ಗುರುತಿಸಿಕೊಂಡಿರುವ ಹಿಂದಿ ನಟಿ ವಿದ್ಯಾಬಾಲನ್, ಈಗ ‘ಲೈಫ್‌ ಇನ್ ಎ ಮೆಟ್ರೋ’ ಚಿತ್ರದ ಅವತರಣಿಕೆಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ನಿರ್ದೇಶಕ ಅನುರಾಗ್ ಬಸು 2007ರಲ್ಲಿ ತೆರೆಕಂಡಿದ್ದ ಸೂಪರ್ ಹಿಟ್ ಚಿತ್ರ ‘ಲೈಫ್ ಇನ್ ಮೆಟ್ರೋ’ದ ಅವತರಣಿಕೆ ತರಲು ಮುಂದಾಗಿದ್ದು, ಅದಕ್ಕೆ ‘ಲೂಡೋ’ ಎಂದು ಹೆಸರಿಸಿದ್ದಾರೆ. ಇದರಲ್ಲಿ ರಾಜ್ ಕುಮಾರ್, ಅಭಿಷೇಕ್ ಬಚ್ಚನ್ ಪ್ರಮುಖ ಪಾತ್ರದಲ್ಲಿರಲಿದ್ದಾರೆ. ಇದರಲ್ಲಿ ವಿದ್ಯಾಬಾಲನ್ ಕೂಡ ಇರಲಿದ್ದಾರೆಯಾದರೂ, ಸಣ್ಣ ಪಾತ್ರದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ ಎನ್ನಲಾಗುತ್ತಿದೆ. ಇದರಲ್ಲಿ ನಾಲ್ಕು ಬೇರೆ ಬೇರೆ ಕಥೆಗಳನ್ನು ತೋರಿಸಲಾಗುತ್ತದೆ.

ಚಿತ್ರದಲ್ಲಿ ಈ ಕಥೆಗಳ ನಿರೂಪಕಿಯಾಗಿ ವಿದ್ಯಾ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಆದರೆ, ಈ ಕುರಿತು ಯಾವುದೇ ಸ್ಪಷ್ಟನೆ ದೊರೆತಿಲ್ಲ. ತಮ್ಮ ಸ್ನೇಹಿತ ಅನುರಾಗ್ ಹೇಳಿದ ಕಥೆ ಕೇಳುತ್ತಿದ್ದಂತೆಯೇ ವಿದ್ಯಾ ಚಿತ್ರದಲ್ಲಿ ನಟಿಸಲು ಒಪ್ಪಿಗೆ ಸೂಚಿಸಿದ್ದರಂತೆ.
ಚಿತ್ರದಲ್ಲಿ ಫಾತಿಮಾ ಸನಾ ಶೇಖ್, ಸನಾಯ ಮಲ್ಹೋತ್ರ ಹಾಗೂ ಆದಿತ್ಯ ರಾಯ್ ಕಪೂರ್ ಕಾಣಿಸಿಕೊಳ್ಳಲಿದ್ದಾರೆ.

Leave a Reply

Your email address will not be published. Required fields are marked *