Saturday, 9th December 2023

ಹಿಂದಿ ಬಿಗ್​ಬಾಸ್ 17ನೇ ಸೀಸನ್​ ಪ್ರಾರಂಭಕ್ಕೆ ಮುಹೂರ್ತ: ಸಲ್ಲು ಫುಲ್ ಬ್ಯುಸಿ

ಮುಂಬೈ: ಸಲ್ಮಾನ್ ಖಾನ್, ಬಿಗ್​ಬಾಸ್ ಸೀಸನ್ 17ರ ಘೋಷಣೆ ಮಾಡಿದ್ದಾರೆ. ಒಟಿಟಿ ಆವೃತ್ತಿಯನ್ನು ಸಲ್ಮಾನ್ ಖಾನ್ ನಿರೂಪಣೆ ಮಾಡಿದ್ದರು. ಇದೀಗ ಟಿವಿ ಆವೃತ್ತಿಯನ್ನೂ ಅವರೇ ನಿರೂಪಣೆ ಮಾಡಲಾಗಿದ್ದಾರೆ.

ಹಿಂದಿ ಬಿಗ್​ಬಾಸ್ 17ನೇ ಸೀಸನ್​ ಪ್ರಾರಂಭಕ್ಕೆ ಮುಹೂರ್ತ ಇಡಲಾಗಿದೆ. 17ನೇ ಸೀಸನ್ ಅಕ್ಟೋಬರ್ 15ರಿಂದ ಪ್ರಸಾರವಾಗಲಿದೆ. ಪ್ರತಿದಿನವೂ 10 ಗಂಟೆಗೆ ಬಿಗ್​ಬಾಸ್ 17 ಎಪಿಸೋಡ್​ಗಳು ಪ್ರಸಾರವಾಗಲಿವೆ. ಶನಿವಾರ ಮತ್ತು ಭಾನುವಾರ ಮಾತ್ರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.

ಹೊಸ ಸೀಸನ್​ನ ಪ್ರೋಮೊ ಬಿಡುಗಡೆ ಆಗಿದ್ದು, ಈ ಬಾರಿ ಬಿಗ್​ಬಾಸ್​ನಲ್ಲಿ ಪಕ್ಷಪಾತ ಇರಲಿದೆ ಎಂಬುದನ್ನು ಪ್ರೋಮೋನಲ್ಲಿಯೇ ಹೇಳಲಾಗಿದೆ. ಸ್ಪರ್ಧಿಗಳಲ್ಲಿ ಕೆಲವರಿಗೆ ಸ್ವತಃ ಬಿಗ್​ಬಾಸ್ ಮಾರ್ಗದರ್ಶನ ಮಾಡಲಿದ್ದಾರಂತೆ.

ಕೆಲವು ದಿನಗಳ ಹಿಂದೆಯಷ್ಟೆ ಬಿಗ್​ಬಾಸ್ ಒಟಿಟಿ ಎರಡನೇ ಸೀಸನ್ ಮುಗಿದಿದೆ. ಜೂನ್ 17ಕ್ಕೆ ಆರಂಭವಾಗಿದ್ದ ಬಿಗ್​ಬಾಸ್ ಒಟಿಟಿ ಸೀಸನ್ ಎರಡು ಆಗಸ್ಟ್ 14 ರಂದು ಮುಗಿದಿದೆ. ಒಟ್ಟಾರೆ, ಸಲ್ಮಾನ್ ಖಾನ್ ಬಿಡುವಿಲ್ಲದೆ ಸಣ್ಣ ಪರದೆಯಲ್ಲಿ ಕಾಣಿಸಿಕೊಳ್ಳಬೇಕಿದೆ.

ಈಗಾಗಲೇ ತೆಲುಗು ಬಿಗ್​ಬಾಸ್ ಚಾಲ್ತಿಯಲ್ಲಿದೆ. ನಟ ನಾಗಾರ್ಜುನ ನಿರೂಪಣೆ ಮಾಡುತ್ತಿರುವ ಶೋ ಪ್ರಸಾರವಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!