Thursday, 28th March 2024

ತೆಲುಗು ಚಿತ್ರ ಡಿ.ಜೆ ಖ್ಯಾತಿಯ ಪೂಜಾ ಹೆಗ್ಡೆಗೆ ಹುಟ್ಟುಹಬ್ಬದ ಸಂಭ್ರಮ

ಹೈದರಾಬಾದ್: ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗದ ಬಹು ಬೇಡಿಕೆಯ ನಟಿ ಪೂಜಾ ಹೆಗ್ಡೆ ಬುಧವಾರ ತಮ್ಮ 31ನೇ ಹುಟ್ಟುಹಬ್ಬದ ಸಂಭ್ರಮ ದಲ್ಲಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೂಜಾ ಹೆಗ್ಡೆ ಅವರಿಗೆ ಸಿನಿ ತಾರೆಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

2012ರಲ್ಲಿ ತೆರೆಕಂಡ ‘ಮುಗಮೂಡಿ’ ಎಂಬ ತಮಿಳು ಚಿತ್ರದ ಮೂಲಕ ಪೂಜಾ ಹೆಗ್ಡೆ ಸಿನಿಜರ್ನಿ ಆರಂಭಿಸಿದರು. 2017 ರಲ್ಲಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ದುವ್ವಾಡ ಜಗನ್ನಾಥಂ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದರು. ನಂತರ ಸ್ಟಾರ್ ನಟರೊಂದಿಗೆ ನಟಿಸುವ ಅವಕಾಶ ಗಿಟ್ಟಿಸಿಗೊಂಡರು.

ಪೂಜಾ ಹೆಗ್ಡೆ ಇತ್ತೀಚೆಗೆ ‘ಆಚಾರ್ಯ’ ‘ಸರ್ಕಸ್’ ಹಾಗೂ ಪ್ರಭಾಸ್ ನಟನೆಯ ‘ರಾಧೆಶ್ಯಾಮ್’ ಸೇರಿದಂತೆ ದಳಪತಿ ವಿಜಯ್ ಜೊತೆ ‘ಬೀಸ್ಟ್’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!