Wednesday, 20th November 2019

ನಗರದ ಕೆಎಸ್‌ಆರ್ ರೈಲ್ವೆ ನಿಲ್ದಾಣದಲ್ಲಿ ಮಹಿಳೆಯರು ಮದ್ಯ ನಿಷೇಧಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿ ಮದ್ಯ ನಿಷೇಧ ಮಾಡಬೇಕು ಎಂದು ಒತ್ತಾಾಯಿಸಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ನೂರಾರು ಮಹಿಳೆಯರು ಕ್ರಾಾಂತಿವೀರ ಸಂಗೊಳ್ಳಿಿ ರಾಯಣ್ಣ ರೈಲ್ವೆೆ ನಿಲ್ದಾಾಣದಲ್ಲಿ ಪ್ರತಿಭಟನೆ ನಡೆಸಿದರು.
ಸ್ವಾಾತಂತ್ರ್ಯ ಉದ್ಯಾಾನದಲ್ಲಿ ಪ್ರತಿಭಟನೆ ಆಯೋಜಿಸಲಾಗಿತ್ತು. ಆದರೆ ಅಲ್ಲಿಗೆ ತಲುಪಲು ಪೊಲೀಸರು ಅಡ್ಡಿಿಪಡಿಸಿದ್ದರಿಂದ, ಮತ್ತು ಮಹಿಳೆಯರ ನಡುವೆ ವಾಗ್ವಾಾದ ನಡೆಯಿತು. ಅಕ್ರೋೋಶಗೊಂಡ ಮಹಿಳೆಯರು ರೈಲ್ವೆೆ ನಿಲ್ದಾಾಣದಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನಡೆಸುವುದಾಗಿ ತಿಂಗಳ ಮುಂಚೆಯೇ ಪೊಲೀಸರಿಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಲಾಗಿದೆ. ಆದರೆ ಪ್ರತಿಭಟನಾಕಾರರ ಸಂಖ್ಯೆೆ ಹೆಚ್ಚಿಿದೆ ಎಂಬ ಕಾರಣಕ್ಕೆೆ ಪೊಲೀಸರು ಮೆರವಣಿಗೆಗೆ ಅವಕಾಶ ನೀಡುತ್ತಿಿಲ್ಲ. ಈ ವರ್ತನೆ ಖಂಡನೀಯ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ರಾಜ್ಯದಲ್ಲಿ ಮದ್ಯಮಾರಾಟ ನಿಷೇಧಿಸಬೇಕು, ಹಂತ ಹಂತವಾಗಿ ನಿಷೇಧ ಮಾಡುವುದಾದರೆ ಮಾಹಿತಿ ನೀಡಬೇಕು. ಪ್ರತಿಗ್ರಾಾಮದಲ್ಲಿ ಸಮಿತಿ ರಚಿಸಬೇಕು. ಮಹಿಳಾ ಸದಸ್ಯರ ಸಂಖ್ಯೆೆ ಹೆಚ್ಚಿಿರಬೇಕು. ಗ್ರಾಾಮದಲ್ಲಿ ಮದ್ಯ ಮಾರಾಟ ನಿಷೇಧಿಸುವ, ಅಕ್ರಮ ಮದ್ಯ ಮಾರಾಟ ತಡೆಯುವ ಅಧಿಕಾರವನ್ನು ಸಮಿತಿಗೆ ಕೊಡಬೇಕು ಎಂದು ಒತ್ತಾಾಯಿಸಿದರು.

Leave a Reply

Your email address will not be published. Required fields are marked *