Wednesday, 8th February 2023

ಮತ್ತೆ ಬಾ ಎಂದು ಯಾವಾಗಲೂ ಕರೆಯುವ ನಗರ ‘ವೆನಿಸ್’

ಮೋಹನ್ ವಿಶ್ವ

ವಿದೇಶ ಪ್ರವಾಸ ಕೈಗೊಳ್ಳುವವರಿಗೆ ಯುರೋಪ್ ಎಂದಿಗೂ ಅಚ್ಚುಮೆಚ್ಚಿಿನ ತಾಣ. ಯುರೋಪಿನ ದೇಶಗಳೆಲ್ಲವೂ, ಆರ್ಥಿಕ ಸಿರಿವಂತಿಕೆಗಿಂತ ನೈಸರ್ಗಿಕ ಶ್ರೀಮಂತಿಕೆಯಿಂದಲೇ ತುಂಬಿತುಳುಕುತ್ತವೆ. ಆದರೆ ಅಮೆರಿಕಕ್ಕೆೆ ಹೋದರೆ ಇತ್ತೀಚಿನ ಮಾನವ ನಿರ್ಮಿತ ಅಭಿವೃದ್ಧಿಿಯ ವಿಷಯಗಳೇ ಹೆಚ್ಚು . ವಿಶ್ವದ ಇತರ ದೇಶಗಳ ಅನ್ವೇಷಣೆಯಲ್ಲಿ ತೊಡಗಿದ ಯುರೋಪಿನ ದೇಶಗಳು ಸಾವಿರಾರು ವರ್ಷಗಳಿಂದಲೂ ಹೊಸ ರೀತಿಯ ಸಾಹಸಗಳನ್ನು ಮಾಡುತ್ತಲೇ ಬಂದಿದ್ದಾರೆ.

ನಾವು, ನೀವು ಓದಿರುವ ಇತಿಹಾಸದಲ್ಲಿ ರೋಮನ್ನರು, ಫ್ರೆೆಂಚರು, ಡಚ್ಚರು, ಬ್ರಿಿಟಿಷರೇ ಜಗತ್ತಿಿನ ವಿವಿಧ ಭಾಗಗಳಿಗೆ ಸಮುದ್ರ ಮಾರ್ಗಗಳನ್ನು ಕಂಡುಹಿಡಿಯುವುದರ ಜತೆಗೆ ವ್ಯಾಾಪಾರ ಅಭಿವೃದ್ಧಿಿಯನ್ನೂ ಸಾಧಿಸಿದ್ದರು. ಜಗತ್ತಿಿನ ಹಲವು ಭಾಗಗಳಲ್ಲಿನ ಜನರಿಗೆ ಒಂದು ಸಂಸ್ಕೃತಿಯ ಅಭಿವೃದ್ಧಿಿಯ ಪಾಠವನ್ನು ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಜತೆಗೆ ಅಲ್ಲಿನ ಸ್ಥಳೀಯ ಸಂಸ್ಕೃತಿಯನ್ನು ಹಾಳು ಮಾಡಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ. ಹೀಗೆ ಹಲವಾರು ದಶಕಗಳಿಂದ ನೈಸರ್ಗಿಕವಾಗಿ ಅಭಿವೃದ್ಧಿಿಯ ಪಥದಲ್ಲಿಯೇ ಸಾಗುತ್ತಿಿರುವ ಯುರೋಪಿನ ಕೆಲವು ದೇಶಗಳಲ್ಲಿ ಇಂದು ತುಸು ಭಯೋತ್ಪಾಾದನೆಯ ಕರಿನೆರಳಂತೂ ಕಾಡುತ್ತಿಿದೆ. ಏನೇ ಆದರೂ ಯುರೋಪಿನ ಕೆಲವು ತಾಣಗಳನ್ನು ನೋಡಲೇಬೇಕು. ಅದರಲ್ಲಿಯೂ ಇಟಲಿಯ ವೆನಿಸ್ ನಗರವನ್ನು ಜೀವನದಲ್ಲೊೊಮ್ಮೆೆ ನೋಡಲೇಬೇಕು. ಪ್ರೇಮಿಗಳು, ಹೊಸದಾಗಿ ಮದುವೆಯಾದ ಗಂಡ-ಹೆಂಡತಿ, ವಯಸ್ಸಾಾಗಿರುವ ದಂಪತಿಗಳು, ಬ್ರಹ್ಮಚಾರಿಗಳು.. ಹೀಗೆ ಎಲ್ಲಾಾ ವರ್ಗದವರೂ ಸಹ ನೋಡಲೇಬೇಕಿರುವ ಮಾಯಾನಗರಿ ವೆನಿಸ್.

ಇಟಲಿಯ ರಾಜಧಾನಿ ರೋಮ್ ನಗರದಿಂದ ಸುಮಾರು 550 ಕಿಮೀ ದೂರದಲ್ಲಿರುವ ನಗರವಿದು. ರೋಮ್ ನಗರದಿಂದ ಪ್ರತಿ ಎರಡು ಗಂಟೆಗೊಮ್ಮೆೆ ಹೈ ಸ್ಪೀಡ್ ರೈಲುಗಳಿವೆ. ರೈಲುಗಳ ಬಗ್ಗೆೆ ಹೇಳಲೇಬೇಕು. ಗಂಟೆಗೆ ಸರಾಸರಿಯಾಗಿ 200ಕಿಮೀ ವೇಗದಲ್ಲಿ ಚಲಿಸುವ ಇಲ್ಲಿನ ರೈಲುಗಳು ಯುರೋಪಿನ ಹಲವು ದೇಶಗಳನ್ನು ಅತ್ಯಂತ ವೇಗವಾಗಿ ಸಂಪರ್ಕಿಸುತ್ತವೆ. ಅಷ್ಟು ವೇಗವಾಗಿ ಚಲಿಸುವ ರೈಲುಗಳು ಒಂದು ಕ್ಷಣವೂ ಅಲ್ಲಾಾಡುವುದಿಲ್ಲ. ಆರಾಮವಾಗಿ ಕುಳಿತುಕೊಂಡು ಎಷ್ಟು ಹೊತ್ತು ಬೇಕಾದರೂ ಸಹ ನಿದ್ದೆೆ ಮಾಡಬಹುದು.

ಇನ್ನು ರೈಲಿನ ಒಳಗಡೆಯ ಸ್ವಚ್ಛತೆಯ ಬಗ್ಗೆೆ ಹೇಳುವಂತೆ ಇಲ್ಲವೇ ಇಲ್ಲ. ನಮ್ಮಲ್ಲಿನ ಹಾಗೆ ಬಾತ್‌ರೂಮಿನ ವಾಸನೆಯೂ ಬರುವುದಿಲ್ಲ. ಪೇಪರ್‌ಗಳಂತೂ ಕಾಣಿಸುವುದೇ ಇಲ್ಲ. ರೈಲ್ವೇ ನಿಲ್ದಾಾಣಗಳಲ್ಲಿಯೂ ಅಷ್ಟೇ ಸ್ವಚ್ಛತೆ. ಆದರೆ ರೈಲ್ವೇ ಹಳಿಗಳ ಮೇಲೆ ಕೆಜಿಗಟ್ಟಲೇ ಸಿಗರೇಟಿನ ಉಳಿದ ಭಾಗವೆಲ್ಲವೂ ಬಿದ್ದಿರುತ್ತದೆ. ಅಲ್ಲಿನ ಜನರಿಗೆ ಸಿಗರೇಟ್ ಎಂದರೆ, ಒಂದು ರೀತಿಯ ಹುಚ್ಚು ವ್ಯಸನ. ಗಂಟೆಗಟ್ಟಲೇ ಸೇದುತ್ತಲೇ ಇರುತ್ತಾಾರೆ. ನಾನು ರೋಮ್‌ನಿಂದ ವೆನಿಸ್‌ಗೆ ರೈಲಿನಲ್ಲಿ ಹತ್ತಿಿದಾಗ, ಕೇವಲ ಮೂರು ಗಂಟೆಗಳಲ್ಲಿ 550 ಕಿಮೀ ದೂರವನ್ನು ತಲುಪಬಹುದೆಂಬ ಸಣ್ಣ ಊಹೆಯೂ ಇರಲಿಲ್ಲ. 550 ಕಿಮೀ ಎಂದರೆ ಬೆಂಗಳೂರು-ಹೈದರಾಬಾದ್ ನಡುವಿನ ದೂರ. ನಾವು ಎಂದಾದರೂ ಈ ದೂರವನ್ನು ಕೇವಲ ಮೂರು ಗಂಟೆಯ ಅವಧಿಯಲ್ಲಿ ತಲುಪಬಹುದೆಂದು ಊಹಿಸುವುದುಂಟೇ? ಅಂದುಕೊಂಡ ಹಾಗೆಯೇ ಇನ್ನು 10 ನಿಮಿಷ ಬಾಕಿ ಇರುವಂತೆಯೇ ಏನೂ ತೊಂದರೆಯಾಗದೇ ನಮ್ಮ ‘ಗೋ ಯುರೋ’ ರೈಲು ವೆನಿಸ್ ನಗರವನ್ನು ತಲುಪಿತ್ತು.

ವೆನಿಸ್ ನಗರವು ನೀರಿನ ಮೇಲೆಯೇ ನಿಂತಿದೆ. ಇಡೀ ವೆನಿಸ್ ನಗರವು ಸುಮಾರು 8 ಅಡಿಗಳ ನೀರಿನ ಮೇಲೆ ನಿಂತಿದೆ. ಸಮುದ್ರದ ಹಿನ್ನೀರಿನಲ್ಲಿರುವ ಈ ನಗರದ ನೀರಿನ ವೈಶಿಷ್ಟ್ಯತೆಯೆಂದರೆ, ಪ್ರತಿ 8 ಗಂಟೆಗೊಮ್ಮೆೆ ಹಳೆಯ ನೀರು ತಾನಾಗಿಯೇ ಹೊರಬಂದು ಹೊಸ ನೀರು ಬರುತ್ತದೆ. ನೀರಿನ ಮೇಲೆ ಒಂದು ಸಣ್ಣ ವಾಸನೆಯೂ ಬರುವುದಿಲ್ಲ, ಅಷ್ಟು ಸ್ವಚ್ಛವಾಗಿದೆ. ನೂರಾರು ವರ್ಷಗಳ ಹಿಂದೆ ವೆನಿಸ್‌ನ ವ್ಯಾಾಪಾರಿಗಳು ಜಗತ್ತಿಿನ ಹಲವು ರಾಷ್ಟ್ರಗಳಿಗೆ ಭೇಟಿ ನೀಡಿ ತಮ್ಮ ವ್ಯವಹಾರ ನಡೆಸುತ್ತಿಿದ್ದರು. ಇಡೀ ವೆನಿಸ್ ನಗರವೇ ಯುರೋಪಿನ ರಾಷ್ಟ್ರಗಳ ಜತೆಗಿನ ವ್ಯಾಾಪಾರ ಕೊಂಡಿಯಾಗಿತ್ತು.

ನಾವು ವೆನಿಸ್ ನಗರದ ಕಾಫೀ ಶಾಪ್ ಒಂದರಲ್ಲಿ ಕಾಫೀ ಕುಡಿಯುತ್ತ ಕುಳಿತಿದ್ದೆೆವು. ನಾವು ಕುಳಿತಿದ್ದ ಅಂಗಡಿಯ ಎದುರುಗಡೆ ಹಳೆಯ ಮನೆಯೊಂದಿತ್ತು. ನಾವು ಆ ಮನೆಯ ಬಗ್ಗೆೆ ಅಂಗಡಿಯ ಮಾಲೀಕನನ್ನು ಕೇಳಿದೆವು. ಅದಕ್ಕೆೆ ಆತ, ‘ಆ ಮನೆಯು ಸುಮಾರು 400 ವರ್ಷಗಳ ಹಳೆಯ ಕಟ್ಟಡ’ ಎಂದ. ಇದನ್ನು ಕೇಳಿದ ನಮಗೆ ಆ ಕ್ಷಣಕ್ಕೆೆ ಅರಗಿಸಿಕೊಳ್ಳಲು ಆಗಲಿಲ್ಲ. ಇತ್ತೀಚೆಗೆ ದೊಡ್ಡ ವ್ಯಾಾಪಾರಿಯೊಬ್ಬ ಆ ಮನೆಯನ್ನು 10 ಮಿಲಿಯನ್ ಯುರೋ (80 ಕೋಟಿ)ರುಪಾಯಿ ಕೊಟ್ಟು ಖರೀದಿಸಿದನಂತೆ.

ನಾವು ಬೋಟ್‌ನಲ್ಲಿ ಹೊರಟಿದ್ದಾಾಗ ಮತ್ತೊೊಂದು 800 ವರ್ಷಗಳಷ್ಟು ಹಳೆಯದಾದ ಮನೆಯೊಂದು ಕಾಣಿಸಿತು. ಈ ಮನೆಯೂ 8 ಅಡಿ ನೀರಿನ ಮೇಲೆಯೇ ಇಂದಿಗೂ ನಿಂತಿದೆ. ಅದ್ಯಾಾವ ತಂತ್ರಜ್ಞಾಾನ ಬಳಸಿ ಈ ಮನೆಯನ್ನು ಆ ಜಮಾನದಲ್ಲಿ ಕಟ್ಟಿಿದ್ದಿರಬಹುದು?! ಹಲವಾರು ಶತಮಾನಗಳ ಕಾಲದಿಂದಲೂ ಅಲುಗಾಡದೇ, ಗಟ್ಟಿಿಮುಟ್ಟಾಾಗಿ ನಿಂತಿರುವ ಇಂಥ ಮನೆಗಳನ್ನು ಕಂಡು ನಮಗೆ ಆಶ್ಚರ್ಯವಾಯಿತು.

ಈ ರೀತಿಯ ನೂರಾರು ಮನೆಗಳನ್ನು ವೆನಿಸ್ ನಗರದಲ್ಲಿ ಕಾಣಬಹುದು. ಇಲ್ಲಿನ ಮತ್ತೊೊಂದು ವೈಶಿಷ್ಟ್ಯವೆಂದರೆ, ಪಂಚತಾರಾ ಹೋಟೆಲ್‌ಗಳ ನಿರ್ಮಾಣಕ್ಕೆೆ ಇಲ್ಲಿನ ಸರಕಾರವು ಹೆಚ್ಚಾಾಗಿ ಅನುಮತಿಯನ್ನು ನೀಡಿಲ್ಲ. ಹಳೆಯ ಹಲವು ಮನೆಗಳನ್ನೇ ಹೋಟೆಲ್‌ಗಳನ್ನಾಾಗಿ ಬದಲಾಯಿಸಲಾಗಿದೆ. ಪ್ರವಾಸಿಗರು ಸಹ ಇಲ್ಲಿಯೇ ಉಳಿದುಕೊಳ್ಳಬೇಕು. ನಾವು ಕೂಡ ಇದೇ ರೀತಿಯ ಹಳೆಯ ಮನೆಯೊಂದರಲ್ಲಿಯೇ ಉಳಿದುಕೊಂಡಿದ್ದೆೆವು. ಹಾಗಂತ ಇಲ್ಲಿನ ಹೋಟೆಲ್‌ಗಳ ಬಾಡಿಗೆಯೇನು ಕಡಿಮೆ ಇಲ್ಲ. ಕಡಿಮೆ ಎಂದರೂ ದಿನವೊಂದಕ್ಕೆೆ 8,000 ದಿಂದ 10,000 ನೀಡಲೇಬೇಕು. ಇಲ್ಲಿನ ಜನರಿಗೆ ಪ್ರವಾಸೋದ್ಯಮವೇ ವ್ಯವಹಾರ, ಪ್ರವಾಸಿಗರೇ ಗಿರಾಕಿಗಳು. ಪ್ರವಾಸಿಗರು ಬಂದರಷ್ಟೇ ಇವರ ಹೊಟ್ಟೆೆ ತುಂಬುವುದು.

ಜಗತ್ತಿಿನಾದ್ಯಂತ ಪ್ರತಿದಿನವೂ ಲಕ್ಷಾಾಂತರ ಜನರು ಈ ವೆನಿಸ್ ನಗರಕ್ಕೆೆ ಬರುತ್ತಾಾರೆ. ಇಲ್ಲಿನ ಸಂಚಾರ ವ್ಯವಸ್ಥೆೆಯೂ ವಿಶಿಷ್ಟ. ಉತ್ಕೃಷ್ಟವಾದುದು. ಒಂದು ಕಡೆಯಿಂದ ಮತ್ತೊೊಂದು ಕಡೆ ತೆರಳಲು ಬೋಟುಗಳನ್ನೇ ಬಳಸಬೇಕು. ಸಾರ್ವಜನಿಕ ವಾಹನಗಳ ರೀತಿಯೇ. ಸಾರ್ವಜನಿಕ ಬೋಟುಗಳಿವೆ. ಟಿಕೆಟ್ ತೆಗೆದುಕೊಂಡು ಹತ್ತಿಿದರೆ ಆಯಿತು. ಇನ್ನು ದಿನದ ಪಾಸುಗಳು, ವಾರದ ಪಾಸುಗಳನ್ನು ಪಡೆಯುವ ಸೌಲಭ್ಯವೂ ಇದೆ. ನಾನು ಪ್ರತಿದಿನ ಪಾಸು ತೆಗೆದುಕೊಂಡು ಓಡಾಡುತ್ತಿಿದ್ದೆೆ. ಖುಷಿಯೆಂದರೆ ನೀರಿನ ಮೇಲೆ ಸಂಚಾರ ದಟ್ಟಣೆ ಇಲ್ಲ, ಟ್ರಾಾಫಿಕ್ ಪೊಲೀಸರ ಕಿರಿಕಿರಿಯಿಲ್ಲ, ಅವೈಜ್ಞಾಾನಿಕ ರಸ್ತೆೆ ಉಬ್ಬುಗಳಿಲ್ಲ.

ಇಲ್ಲಿನ ಜನರ ಬಳಿ ಕಾರುಗಳಿಲ್ಲ, ಬದಲಿಗೆ ಮನೆಯ ಮುಂದೆ ಬೋಟುಗಳನ್ನು ನಿಲ್ಲಿಸಿಕೊಂಡಿರುತ್ತಾಾರೆ. ಈ ಬೋಟುಗಳನ್ನು ನಿಲ್ಲಿಸಲೂ ಸಹ ಅವರ ಮನೆಯ ಮುಂದೆ ಪಾರ್ಕಿಂಗ್ ವ್ಯವಸ್ಥೆೆಯೂ ಇರುತ್ತದೆ. ಅಂಗಡಿಗೆ ತೆರಳಿ ತರಕಾರಿ ತರಲು ಬೋಟುಗಳಲ್ಲಿಯೇ ಹೋಗಬೇಕು.

ಇಲ್ಲಿನವರು ತಮ್ಮ ಹೆಂಡತಿಯನ್ನು ಶಾಪಿಂಗ್‌ಗೆ ಕರೆದುಕೊಂಡು ಹೋಗಲು ಸಹ ಬೋಟುಗಳಲ್ಲಿಯೇ ತೆರಳಬೇಕು. ಇನ್ನು ಇಲ್ಲಿ ಖಾಸಗಿ ಬೋಟುಗಳೂ ಸಹ ಪ್ರವಾಸಿಗರಿಗೆ ಲಭ್ಯವಿದೆ. ನಮಗೆ ಸಾರ್ವಜನಿಕ ಬೋಟುಗಳು ಸರಿಹೊಂದಲಿಲ್ಲವೆಂದರೆ, ಖಾಸಗಿ ಬೋಟುಗಳನ್ನು ಬಳಸಬಹುದು. ಇಡೀ ವೆನಿಸ್ ನಗರದ ಸುತ್ತಲೂ ಬೋಟುಗಳು ಓಡಾಡುತ್ತಲೇ ಇರುತ್ತವೆ. ಬಸ್ ನಿಲ್ದಾಾಣದ ರೀತಿಯಲ್ಲಿಯೇ, ಬೋಟುಗಳ ನಿಲ್ದಾಾಣಗಳಿವೆ. ಪ್ರತಿನಿತ್ಯವೂ ಇಲ್ಲಿಗೆ ಆಗಮಿಸುವ ಲಕ್ಷಾಾಂತರ ಪ್ರವಾಸಿಗರನ್ನು ಹೊತ್ತೊೊಯ್ಯುವ ಈ ಬೋಟುಗಳಿಗೆ, ಒಂದು ಗಂಟೆಯೂ ಸಹ ಪುರುಸೊತ್ತೇ ಇರುವುದಿಲ್ಲ. ದಿನದ ಇಪ್ಪತ್ನಾಾಲ್ಕು ಗಂಟೆಯೂ ಸದಾ ಬೋಟುಗಳು ಲಭ್ಯವಿರುತ್ತವೆ. ಇಲ್ಲಿಗೆ ಬರುವ ಪ್ರವಾಸಿಗರು ಅಷ್ಟೇ, ಈ ನಗರದ ಸೌಂದರ್ಯ ಹಾಗೂ ಸ್ವಚ್ಛತೆಯನ್ನು ಕಾಪಾಡಲು ಅಷ್ಟೇ ಸಹಕರಿಸತ್ತಾಾರೆ.

ಯುರೋಪಿನಲ್ಲಿ ಸಾಕು ಪ್ರಾಾಣಿಗಳನ್ನು ಸಾರ್ವಜನಿಕ ಸಾರಿಗೆಗಳಲ್ಲಿ ಕರೆದುಕೊಂಡು ಹೋಗಬಹುದು. ನಾಯಿ, ಬೆಕ್ಕುಗಳು ಇಲ್ಲಿನ ಬಸ್ಸುಗಳಲ್ಲಿ, ಬೋಟುಗಳಲ್ಲಿ ಕಾಣುವುದು ಸಾಮಾನ್ಯ. ತಮ್ಮ ಸಾಕುಪ್ರಾಾಣಿಗಳನ್ನು ಅಚ್ಚುಕಟ್ಟಾಾಗಿ ಸಿಂಗರಿಸಿಕೊಂಡು ಬೋಟುಗಳಲ್ಲಿ ಹತ್ತಿಿಯೇ ಬಿಡುತ್ತಾಾರೆ. ನಾಯಿಗಳು ಸಾರ್ವಜನಿಕ ಪ್ರದೇಗಳಲ್ಲಿ ಗಲೀಜು ಮಾಡಿದರೆ, ಆ ಗಲೀಜನ್ನು ತಮ್ಮ ಬ್ಯಾಾಗಿನಲ್ಲಿರುವ ಪೇಪರ್‌ನಿಂದ ತಮ್ಮ ಕೈಯಲ್ಲಿಯೇ ತೆಗೆದು ಡಸ್‌ಟ್‌‌ಬಿನ್‌ಗಳಿಗೆ ಹಾಕುತ್ತಾಾರೆ. ನಮ್ಮಲ್ಲಿ ಮನುಷ್ಯರೇ ಕೆರೆಯ ಪಕ್ಕ ಕುಳಿತು ಮಲ ವಿಸರ್ಜನೆ ಮಾಡುತ್ತಾಾರೆ. ಸ್ವ ಚ್ಛತೆಯಿಂದ ಕೂಡಿದ ಅಲ್ಲಿನ ಜನರ ಮನಸ್ಥಿಿತಿಯಿಂದ ಆ ದೇಶವನ್ನು ಈ ಮಟ್ಟಕ್ಕೆೆ ತೆಗೆದುಕೊಂಡು ಹೋಗಿದೆ. ನಮ್ಮ ಗಲೀಜು ಇಡೀ ದೇಶವನ್ನು ಹಾಳುಮಾಡುತ್ತದೆಯೆಂಬ ಮನಸ್ಥಿಿತಿಯ ಜನರಿಂದ ಮಾತ್ರ ಆ ದೇಶದ ಸಮಗ್ರ ಅಭಿವೃದ್ಧಿಿಯು ಸಾಧ್ಯ.

ವೆನಿಸ್ ನಗರವು ಅಷ್ಟು ದೊಡ್ಡ ನಗರವೇನೂ ಅಲ್ಲ. ಇಡೀ ನಗರವನ್ನು ಕಾಲ್ನಡಿಗೆಯಲ್ಲೇ ಒಂದೇ ದಿನದಲ್ಲಿ ಸುತ್ತಬಹುದು. ಇಷ್ಟು ಸಣ್ಣದಾದ, ನೀರಿನ ಮೇಲಿನ ನಗರದ ಹಳೆಯ ಮನೆಗಳು ನೂರಾರು ಕಥೆಗಳನ್ನು ಹೇಳುತ್ತವೆ. ಅಲ್ಲೇ ಹುಟ್ಟಿಿ, ಅಲ್ಲೇ ಬೆಳೆದು ನೂರಾರು ವರ್ಷಗಳಿಂದ ಜೀವನವನ್ನು ನಡೆಸುತ್ತಿಿರುವ ಹಲವು ಕುಟುಂಬಗಳನ್ನು ಈ ನಗರದಲ್ಲಿ ಕಾಣಬಹುದು.

ಪ್ರಕೃತಿ ವಿಕೋಪಗಳು ಎಷ್ಟೇ ಅಪ್ಪಳಿಸಿದರೂ, ಒಂದು ಕಟ್ಟಡವೂ ಹಾನಿಯಾಗಿಲ್ಲ. ಯಾವ ರೀತಿಯ ಪ್ರದೇಶವನ್ನು ಆಯ್ಕೆೆ ಮಾಡಿಕೊಂಡು ಅಂದಿನ ಕಾಲದಲ್ಲಿ ಇಲ್ಲಿನ ಜನರು ಈ ನಗರವನ್ನು ನಿರ್ಮಿಸಿರಬಹುದು, ತುಸು ಯೋಚಿಸಿ ನೋಡಿ. ಈ ನಗರದ ಮತ್ತೊೊಂದು ಆಕರ್ಷಣೆಯೆಂದರೆ, ‘ಗೊಂಡೋಲಾ ರೈಡ್’ ಅಲಂಕಾರಿಕ ಬೋಟಿನಲ್ಲಿ ಗಂಡ-ಹೆಂಡತಿ ಕುಳಿತು ಇದರಲ್ಲಿ ಒಂದು ಸುತ್ತು ಹಾಕಿ ಬಂದರೆ, ಜೀವನ ಸಾರ್ಥಕವಾದಂಥ ಭಾವ.

ಜಗತ್ತಿಿನ ಜೋಡಿಗಳು ಒಮ್ಮೆೆಯಾದರೂ ಈ ಬೋಟಿನಲ್ಲಿ ಒಂದು ಸುತ್ತು ಹಾಕಲು ಹಪಹಪಿಸುತ್ತಿಿರುತ್ತದೆ. ಬೋಟನ್ನು ಚಲಾಯಿಸುವವನು ಹಳೆಯ ಇಂಗ್ಲಿಿಷ್ ಪ್ರೇಮಗೀತೆಗಳನ್ನು ಹಾಡುತ್ತಾಾ ನಮ್ಮನ್ನು ಅರ್ಧಗಂಟೆ ಕಾಲ ವೆನಿಸ್‌ನಗರ ಪ್ರದಕ್ಷಿಿಣೆ ಮಾಡಿಸುತ್ತಾಾನೆ. ಆತ ಬೋಟಿನ ಹಿಂಬದಿಯ ತುದಿಯಲ್ಲಿ ನಿಂತು ಹುಟ್ಟುಹಾಕುತ್ತಾಾ ಒಂದೊಂದೇ ಅಡಿಯಷ್ಟು ನೀರಿನ ಮೇಲೆ ಬೋಟನ್ನು ಮುಂದೆ ತಳ್ಳುತ್ತಿಿದ್ದರೆ, ಕುಳಿತಿರುವ ಜೋಡಿಗಳಿಗೆ ಸ್ವರ್ಗದಲ್ಲೇ ವಿಹರಿಸಿದ ಅನುಭವ. ಈ ಪ್ರಯಾಣವನ್ನು ಅನುಭವಿಸಿಯೇ ನೋಡಬೇಕು, ಅಷ್ಟು ಹಿತಕರವಾಗಿರುತ್ತದೆ.

ಇಟಲಿಯಲ್ಲಿ ಯಾವ ನಗರವನ್ನು ನೋಡದಿದ್ದರೂ ಪರವಾಯಿಲ್ಲ, ಆದರೆ ವೆನಿಸ್ ನಗರವನ್ನು ನೋಡಲೇಬೇಕು. ಸಂಜೆ 5 ಗಂಟೆಯ ನಂತರ ಸಮುದ್ರದ ಹಿನ್ನೀರಿನಿಂದ ಬರುವ ತಂಗಾಳಿಯಲ್ಲಿ ಜೋಡಿಗಳು ಒಂದು ವಾಕ್ ಮಾಡುವುದೇ ರೋಮಾಂಚನಕಾರಿಯಾದ ಅನುಭವ ನೀಡುತ್ತದೆ. ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾಾ, ಕೈಕೈ ಹಿಡಿದುಕೊಂಡು ಮುಂದೆ ಸಾಗುವ ಅನುಭವವೇ ಅದ್ಭುತ.

ಜೀವಮಾನದಲ್ಲಿ ಒಮ್ಮೆೆಯಾದರೂ ಅನುಭವಿಸಲೇಬೇಕಾದಂಥ ಸ್ವರ್ಗಸುಖವಿದು. ಇನ್ನು ಸಂಜೆಯ ನಂತರ ಇಡೀ ವೆನಿಸ್‌ನಗರದ ಮನೆಗಳ ಅಕ್ಕಪಕ್ಕದಲ್ಲಿನ ಸಣ್ನ ಸಣ್ಣ ಹೋಟೆಲ್‌ಗಳಾಗಿ ಪರಿವರ್ತನೆಯಾಗಿರುತ್ತವೆ. ಒಂದು ವೃತ್ತಾಾಕಾರದ ಟೇಬಲ್‌ಗೆ ನಾಲ್ಕು ಕುರ್ಚಿಗಳನ್ನು ಹಾಕಿ, ಬಿಯರ್, ವೈನ್, ಪಿಜ್ಜಾಾ, ಪಾಸ್ತ, ಸಾಲಡ್‌ಗಳನ್ನು ಹೊತ್ತು ಮೆನುವೊಂದು ನಮ್ಮ ಮುಂದೆ ಇರುತ್ತದೆ. ನೀರಿನ ದಂಡೆಯಲ್ಲಿ ಕುಳಿತು ಪ್ರೇಯಸಿಯ ಜತೆ ಮಾತನಾಡುತ್ತಾಾ ಒಂದು ಗ್ಲಾಾಸ್ ವೈನ್‌ನ್ನು 2 ಗಂಟೆಗಳ ಕಾಲ ಕುಡಿದು, ಮಾತನಾಡುತ್ತಾಾ ಪಿಜ್ಜಾಾ, ಪಾಸ್ತ ತಿನ್ನುವುದೇ ಒಂದು ರೋಮಾಂಚನಕಾರಿ ಅನುಭವ. ನಿಜವಾದ ಪಾಸ್ತ, ಪಿಜ್ಜಾಾ ತಿನ್ನಬೇಕೆಂದರೆ, ಇಟಲಿಗೆ ಹೋಗಬೇಕು. ನಮ್ಮಲ್ಲಿ ಸಿಗುವ ಪಿಜ್ಜಾಾಗಳು ಅಮೆರಿಕನ್ನರು ಕಲಬೆರಕೆ ಮಾಡಿ, ಮಾಡುವ ವಿಧಾನವನ್ನೇ ಬದಲಾಯಿಸಿದ್ದಾಾರೆ.

ಈ ಪಿಜ್ಜಾಾದ ಬಗ್ಗೆೆ ಒಂದು ಕಥೆಯನ್ನು ಹೇಳಲೇಬೇಕು ನಮ್ಮಲ್ಲಿ ರೈತರು ಹೇಗೆ ಸಂಜೆ ಹೊಲಗಳಿಂದ ದಣಿದು ಬಂದು ರಾಗಿಯ ಮುದ್ದೆೆಯನ್ನು ಮಾಡಿಕೊಂಡು ತಿನ್ನುತ್ತಾಾರೋ, ಅದೇ ರೀತಿ ಇಟಲಿಯ ರೈತರು ಸಂಜೆ ಮನೆಗೆ ಬಂದ ಮೇಲೆ ಮೈದಾ ಹಿಟ್ಟಿಿನ ಮೇಲೆ ತರಕಾರಿಗಳನ್ನು ಹಾಕಿ ಬೇಯಿಸಿಕೊಂಡು ತಿನ್ನಲು ಶುರುಮಾಡಿದ ಖಾದ್ಯವೇ ಪಿಜ್ಜಾಾ. ಯಾವಾಗ ಈ ಖಾದ್ಯವು ಅಮೆರಿಕನ್ನರ ಕೈಗೆ ಸಿಕ್ಕಿಿತೋ, ಅದಕ್ಕೆೆ ಏನೇನೋ ಮಾಡಿ ವಿವಿಧ ರೀತಿಯಲ್ಲಿ ಜಗತ್ತಿಿನಾದ್ಯಂತ ಮಾರ್ಕೆಟಿಂಗ್ ಮಾಡಿ, ಇಡೀ ವಿಶ್ವವೇ ಪಿಜ್ಜಾಾ ಹಿಂದೆ ಹೋಗುವಂತೆ ಮಾಡಿದರು. ಏನು ಮಾಡೋದು, ರಾಗಿಮುದ್ದೆೆಯು ಇವರ ಕೈಗೆ ಸಿಗಲಿಲ್ಲ. ನಮ್ಮ ದೇವೇಗೌಡರ ಬಳಿಯೇ ಉಳಿಯಿತು. ಹಾಗಾಗಿ ವಿಶ್ವ ವಿಖ್ಯಾಾತಿ ಪಡೆಯಲೇ ಇಲ್ಲ.

ಇನ್ನು ಇಲ್ಲಿ ಸಿಗುವ ಪಿಜ್ಜಾಾಗಳಲ್ಲಿ ಅಷ್ಟೊೊಂದು ಬೆಣ್ಣೆೆಯೂ ಇರುವುದಿಲ್ಲ. ಬಳಸುವ ಸಾನ್‌ಗಳೂ ಅಷ್ಟೇ. ಇಟಲಿಯ ಸ್ಥಳೀಯರಿಂದಲೇ ಮಾಡಲ್ಪಟ್ಟಿಿರುವ, ನೈಸರ್ಗಿಕವಾದ ಮಿಶ್ರಣಗಳು ಅಲ್ಲಿಯ ಟೇಸ್‌ಟ್‌‌ನ್ನು ಇಲ್ಲಿಯ ಟೇಸ್ಟನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ. ಪಾಸ್ತಾ ವಿಚಾರದಲ್ಲಿಯೂ ಇದೇ ಕಥೆ. ಅಲ್ಲಿನ ರೆಸಿಪಿ ಇಲ್ಲಿನ ರೆಸಿಪಿಯನ್ನು ಹೊಂದಿಸಲು ಸಾಧ್ಯವೇ ಇಲ್ಲ. ಇಟಲಿಯಲ್ಲಿ ಸಿಗುವ ಪಿಜ್ಜಾಾಗಳು ತಿಂದಕೂಡಲೇ ಜೀರ್ಣವಾಗುತ್ತವೆ. ನಮ್ಮಲ್ಲಿನ ಪಿಜ್ಜಾಾಗಳ ರೀತಿ ದಿನಗಟ್ಟಲೇ ಜೀರ್ಣವಾಗದೇ ಇರುವುದಿಲ್ಲ.

ಇಟಲಿಯ ರೋಮ್ ನಗರದಲ್ಲಿ, ನಮ್ಮಲ್ಲಿನ ವಿ.ವಿ.ಪುರಂ ನಲ್ಲಿರುವ ತಿಂಡಿ ಬೀದಿಯ ರೀತಿ ಸ್ಥಳವೊಂದಿದೆ. ಈ ಜಾಗದ ಹೆಸರು ‘ಟ್ರಸ್ಟವೆರೇ’ ಇಲ್ಲಿ ರಸ್ತೆೆಯ ಅಕ್ಕಪಕ್ಕದಲ್ಲೆೆಲ್ಲಾಾ ಪಿಜ್ಜಾಾ, ಪಾಸ್ತಾಾ ಹೋಟೆಲ್‌ಗಳದ್ದೇ ದರ್ಬಾರು. ನೂರಾರು ಬಗೆಬಗೆಯ ಪಿಜ್ಜಾಾಗಳು, ಪಾಸ್ತಾಾಗಳು ಇಲ್ಲಿ ಸಿಗುತ್ತವೆ. ಇನ್ನು ಇದರ ಜತೆಗೆ ಹೋಟೆಲ್‌ಗಳ ಮುಂದೆ ಗಿಟಾರುಗಳನ್ನಿಿಟ್ಟುಕೊಂಡು ಹಳೆಯ ಹಾಡುಗಳನ್ನು ನುಡಿಸುವ ಹಲವರು ಕಲಾವಿದರು ಕಾಣಸಿಗುತ್ತಾಾರೆ. ಇದು ಒಂದು ರೀತಿಯ ಮಜಾ ನೀಡುತ್ತದೆ.

ಎಲ್ಲಿ ಹೋದರು ಸಹ ಭಾರತೀಯ ವ್ಯಾಾಪಾರಿಯೊಬ್ಬ ಸಿಗಲೇಬೇಕಲ್ಲ, ಹಾಗೆಯೇ ವೆನಿಸ್‌ನಗರದಲ್ಲಿಯೂ ಭಾರತೀಯ ಆಹಾರ ತಿನ್ನಬೇಕೆನಿಸಿದಾಗ, ಗೂಗಲ್‌ನಲ್ಲಿ ಸಿಕ್ಕ ವ್ಯಾಾಪಾರಿಯೇ ‘ಶ್ರೀ ಗಣೇಶ್ ಹೋಟೆಲ್’ ಪಂಜಾಬ್ ಮೂಲದ ಈ ಹೋಟೆಲ್‌ನ ವ್ಯಾಾಪಾರಿಯು ಸುಮಾರು 20 ವರ್ಷಗಳಿಂದ ಈ ಹೋಟೆಲ್ ನಡೆಸುತ್ತಿಿದ್ದಾಾರೆ. ಇಡೀ ವೆನಿಸ್ ನಗರದಲ್ಲಿಯೇ ನಮಗೆ ಸಿಕ್ಕ ಏಕೈಕ ಭಾರತೀಯ ಹೋಟೆಲ್ ಇದಾಗಿತ್ತು.

ಅಲ್ಲಿ ತಿನ್ನಲು ನಿಮಗೇನು ಇಡ್ಲಿಿ, ಸಾಂಬಾರು ಸಿಗುವುದಿಲ್ಲ. ನಮಗೆ ಸಿಕ್ಕಿಿದ್ದ ಸಮೋಸ, ರೋಟಿ, ದಾಲ್‌ಗಳಷ್ಟೇ. ಪಿಜ್ಜಾಾ, ಪಾಸ್ತಾಾ ತಿಂದು ನಾಲಿಗೆ ಕೆಟ್ಟುಹೋಗಿದ್ದ ನಮಗೆ ಇಲ್ಲಿ ಸಿಕ್ಕಿಿದ್ದು ಸ್ಟೀಮ್ ರೈಸ್ ಅಮೃತದಂತೆ ಕಾಣುತ್ತಿಿತ್ತು. ಒಂದೊಪ್ಪತ್ತಾಾದರೂ ಅನ್ನವನ್ನು ತಿಂದೆವೆಂಬ ಸಂತೋಷವಿತ್ತು. ಇನ್ನು ವೆನಿಸ್‌ನಲ್ಲಿ ಆಹಾರವು ಅಷ್ಟೊೊಂದು ಕಡಿಮೆ ಬೆಲೆಯಲ್ಲಿ ಸಿಗುವುದಿಲ್ಲ. ನೀವು ಮಾಡುವ ಖರ್ಚನ್ನು ರುಪಾಯಿಗೆ ನೋಡುತ್ತಾಾ ಹೊರಟರೆ, ಪ್ರವಾಸವನ್ನು ಕೈಗೊಳ್ಳಲಾಗದು.
ಒಂದು ಯುರೋ ಇಂದು 80 ರುಪಾಯಿ ಆಸುಪಾಸಿನಲ್ಲಿದೆ.

ವೆನಿಸ್‌ನಲ್ಲಿ ಒಂದು ಬಾಳೆಹಣ್ಣಿಿನ ಬೆಲೆಯು 2 ಯುರೋ ಇದೆ. ನೀವು ರುಪಾಯಿಗೆ ಹೊಂದಿಸಿ ನೋಡಿದರೆ ಒಂದು ಬಾಳೆಹಣ್ಣಿಿಗೆ 160ರುಪಾಯಿ ಕೊಟ್ಟಂತಾಗುತ್ತದೆ. ಅಬ್ಬಬ್ಬಾಾ ಎಂದು ಹುಬ್ಬೇರಿಸುತ್ತೀರಿ. ಆದರೆ ವಿಧಿಯಿಲ್ಲ. ಇಡೀ ಯುರೋಪ್ ಹೀಗೆಯೇ ಇದೆ. ಶಾಪಿಂಗ್ ಮಾಡಲು ಹೊರಟರಂತೂ ದೇವರೇ ಕಾಪಾಡಬೇಕು. ವೆನಿಸ್ ನಗರದಲ್ಲಿ ವಿವಿಧ ರೀತಿಯ ಜಾಕೆಟ್‌ಗಳು ಸಿಗುತ್ತವೆ. ಕನಿಷ್ಠವೆಂದರೂ 500 ಯುರೋದಿಂದ ಶುರುವಾಗಿ 1,00,000 ಯುರೋವರೆಗೂ ಜಾಕೆಟ್‌ಗಳು ದೊರೆಯುತ್ತವೆ. ಅಂದರೆ ಕನಿಷ್ಠ ಬೆಲೆಯ ಜಾಕೆಟ್ ನನ್ನ ಕಣ್ಣಿಿಗೆ ಬಿದ್ದಿದ್ದು ಸುಮಾರು 40,000 ರುಪಾಯಿಯದ್ದು. ಗರಿಷ್ಠ ಬೆಲೆಯ ಜಾಕೆಟ್‌ಗಳನ್ನು ತೆಗೆದುಕೊಳ್ಳಲು ಸುಮಾರು 80,00,000 ರುಪಾಯಿಯದ್ದು. ಇಷ್ಟೊೊಂದು ಬೆಲೆಯ ಜಾಕೆಟ್‌ಗಳನ್ನು ತೆಗೆದುಕೊಳ್ಳಲು ಪ್ರವಾಸಿಗರು ಇಲ್ಲಿಗೆ ಬರುತ್ತಾಾರೆ. ನಾವು ಫ್ರಿಿಡ್‌ಜ್‌ ಮೇಲೆ ಅಂಟಿಸುವ 4 ಆಟಿಕೆಗಳನ್ನು ತಂದೆವು.

80 ಲಕ್ಷ ರುಪಾಯಿಗಳಲ್ಲಿ ಒಂದು ದೊಡ್ಡದಾಗ ಮನೆಯನ್ನೇ ಕಟ್ಟಬಹುದಾದ ದೇಶ ನಮ್ಮದು. ಇನ್ನು ಜಾಕೆಟ್ ತೆಗೆದುಕೊಳ್ಳಲಾದೀತೆ? ಇನ್ನು ವೆನಿಸ್ ನಗರದ ತುಂಬಾ ಪ್ರವಾಸಿಗರ ರಕ್ಷಣೆಗಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾತ್ರಿಿಯಿಡೀ ವೆನಿಸ್ ನಗರವನ್ನು ಸುತ್ತುತ್ತಿಿದ್ದರೂ, ಏನು ಆಗುವುದಿಲ್ಲ. ಹಗಲಿನಲ್ಲಿ ಕಾಣುವ ವೆನಿಸ್ ನಗರದ ಸೌಂದರ್ಯವೇ ಬೇರೆ, ಇರುಳಿನಲ್ಲಿ ಕಾಣುವ ಸೌಂದರ್ಯವೇ ಬೇರೆ. ರಾತ್ರಿಿಯಲ್ಲಿ ಎಲ್ಲಿಯೂ ಸಹ ಕಣ್ಣಿಿಗೆ ಹೊಳೆಯುವ ಜಗಮಗಿಸುವ ಲೈಟುಗಳು ಬೆಳಗುವುದಿಲ್ಲ. ಆದರೆ ರೋಮ್ ನಗರವು ಅಷ್ಟೊೊಂದು ಸುರಕ್ಷಿಿತವಾಗಿಲ್ಲ. ರೋಮ್‌ನಲ್ಲಿ ಕಳ್ಳರು ತುಸು ಹೆಚ್ಚಾಾಗಿಯೇ ಇದ್ದಾಾರೆ. ರಾತ್ರಿಿಯ ಹೊತ್ತಿಿನಲ್ಲಿ ಪ್ರವಾಸಿಗರು ಓಡಾಡುವಾಗ, ಎಚ್ಚರಿಕೆಯಿಂದ ಇರಬೇಕು.

ವೆನಿಸ್ ನಗರದ ಆಕರ್ಷಣೆಗಳಲ್ಲಿ ಇಲ್ಲಿನ ಚರ್ಚು ಸಹ ಒಂದು. ಸುಮಾರು 300 ವರ್ಷ ಹಳೆಯದಾದ ಈ ಚರ್ಚಿನ ವಾಸ್ತುಶಿಲ್ಪವನ್ನು ನೋಡಲೇಬೇಕು. ನೀವೇನಾದರೂ ಪ್ಯಾಾಕೇಜಿನಲ್ಲಿ ಹೋದರೆ, ಈ ಚರ್ಚನ್ನು ನೋಡುವುದು ಗ್ಯಾಾರಂಟಿ. ವೆನಿಸ್ ಎಂದರೆ ಇದನ್ನು ನೋಡಲೇಬೇಕೆಂದು ಟೂರ್ ಏಜೆಂಟರು ನಿರ್ಧರಿಸಿರುತ್ತಾಾರೆ. ಅತಿ ಹೆಚ್ಚು ಪ್ರವಾಸಿಗರನ್ನು ನಾವು ಈ ಚರ್ಚಿನಲ್ಲಿ ನೋಡಬಹುದು. ಈ ನಗರದ ಸೌಂದರ್ಯದ ಬಗ್ಗೆೆ ಎಷ್ಟು ಹೇಳಿದರೂ ಮುಗಿಯುವುದೇ ಇಲ್ಲ. ಸಂಜೆಯ ಸೂರ್ಯಾಸ್ತಮಾನವಂತೂ ಎಷ್ಟು ಚೆನ್ನಾಾಗಿ ‘ಗುಡ್‌ಬೈ’ ಹೇಳಿ ಹೋಗುತ್ತದೆ. ಅಲ್ಲಿ ಕಳೆದ ನೆನಪುಗಳು ಇಂದಿಗೂ ಹಚ್ಚ ಹಸುರಾಗಿ ಉಳಿದಿದೆ. ಸಾಯುವವರೆಗೂ ಉಳಿಯುತ್ತದೆ. ಅಷ್ಟೊೊಂದು ಸುಂದರವಾದ ನಗರ ವೆನಿಸ್. ಜೀವನದಲ್ಲಿ ಒಮ್ಮೆೆಯಾದರೂ ನೋಡಲೇಬೇಕು. ಮತ್ತೆೆ ಬಾ ಎಂದು ಯಾವಾಗಲೂ ಕರೆಯುವ ನಗರ ವೆನಿಸ್.

error: Content is protected !!