Tuesday, 26th October 2021

ಇರಿದದ್ದು ಅವನನ್ನಲ್ಲ, ಅವನು ಧರಿಸಿದ ಜರ್ಕಿನನ್ನು

ರಾವ್-ಭಾಜಿ

ಪಿ.ಎಂ.ವಿಜಯೇಂದ್ರ ರಾವ್

ರಾಮ ಸ್ತ್ರೀ ದ್ವೇಷಿ ಎಂದು ಮತ್ತೊಂದು ದನಿ ಹೇಳಿತು. ಸೀತೆಯನ್ನು ಅದೆಷ್ಟು ಗೋಳು ಹುಯ್ದುಕೊಂಡನೋ! ನಾನು ಈ ರೂಮಿನಲ್ಲಿ ಒಂದರ್ಧ ಗಂಟೆ ಮಾತ್ರ ಇದ್ದೆ. ಆ ಅವಧಿಯಲ್ಲಿ ಕೇಳಿದ ವಿವಿಧ ದನಿಗಳ ಪ್ರಾತಿನಿಧಿಕ ತುಣುಕುಗಳನ್ನಷ್ಟೇ ತಮ್ಮ ಮುಂದಿಡುತ್ತಿದ್ದೇನೆ. ಅವರಲ್ಲಿ ಕೆಲವರು ಒಂದೇ ವಿಚಾರವನ್ನು ಪುನರು ಚ್ಚರಿಸುತ್ತಿದ್ದರು. ಅದನ್ನು ನಾನೂ ಮತ್ತೆ ಮತ್ತೆ ವರದಿ ಮಾಡಬೇಕಿಲ್ಲ. ಸ್ಥಳದ ಮಿತಿ ಕೂಡ ಇದೆ.

ಶಾಲಾ ದಿನಗಳಲ್ಲಿ ಹತ್ತಿರದ ಬಂಗಲೆಯಲ್ಲಿ ವಾಸವಾಗಿದ್ದ ಕಿರಿಸ್ತಾನ್ ಹುಡುಗರೊಂದಿಗೆ ಕ್ರಿಕೆಟ್ ಆಡಲು ಹೋಗುತ್ತಿದ್ದೆ. ದೊಡ್ಡ ಕುಟುಂಬ. ಆ ಹುಡುಗರೆಲ್ಲರಿಗೂ ಹಿಂದಿನ ಧುರೀಣರ ಹೆಸರುಗಳನ್ನಿಟ್ಟಿದ್ದರು. ಅವರಬ್ಬನ ಹೆಸರು ನೆಹರೂ. ಒಂದು ದಿನ ಆಟದ ನಂತರ ಮನೆಯೊಳಗೆ ಹೋದೆವು. ನೆಹರೂ ಇಸ್ಪೀಟ್ ಎಲೆಗಳನ್ನು ಬಳಸಿ ಕೆಲವು ಚಮತ್ಕಾರ ಗಳನ್ನು ತೋರಿಸುತ್ತಿದ್ದ. ಮನೆಗೆ ನಾನಿನ್ನೂ ಹೋಗಿಲ್ಲವೆಂದು ನನ್ನ ತಂದೆ ಹುಡುಕಿಕೊಂಡು ಬಂದವರು, ಅದನ್ನು ಕಂಡರು. ನಂತರ, ಅಮ್ಮನಿಗೆ ದೂರಿದರು. ಅದೇ ಕಾರಣ ದಿಂದಲೋ ಏನೋ ನನಗೆ ಇಸ್ಪೀಟಿನಲ್ಲಿ ಆಸಕ್ತಿ ಮೂಡಲಿಲ್ಲ.

ದೊಡ್ಡವನಾದ ನಂತರ ಕೆಲವು ಗೆಳೆಯರು ರಮ್ಮಿ ಕಲಿಸಲು ಪ್ರಯತ್ನಿಸಿದರು. ಆ ವಿದ್ಯೆ ನನಗೆ ಒಲಿಯಲಿಲ್ಲ. ಅಳಿಯನ ಕುರುಡು ಬೆಳಗಾದರೆ ಎನ್ನುತ್ತಾರೆ. ಆದರೆ, ಮೊದಲ ರಾತ್ರಿ ಕಳೆದು ಬೆಳಗಾಗುವವರೆಗೂ ಕಾಯ ಬೇಕಿಲ್ಲ. ವರನ ಪೂರ್ವಾಶ್ರಮದ ಸ್ನೇಹಿತರು ಮದುವೆಯ ಛತ್ರದಲ್ಲಿ ಧಾರೆಯ ಸಮಯದಲ್ಲಿ ಕೊಠಡಿ ಯೊಂದನ್ನು ಹೊಂದಿಸಿ ಕೊಂಡು ಕದವನ್ನು ಸರಿಸಿ ಇಸ್ಪೀಟ್ ಆಡಲು ಕುಳಿತಾಗಲೇ ವಧುವಿನ ಮನೆಯವರಿಗೆ ತಳಮಳ ಶುರುವಾಗುತ್ತದೇನೊ. ಒಂದು ಜತೆ ಸ್ಪೋರ್ಟ್ಸ್ ಶೂ ಇದ್ದರೆ ಸಾಕು ಹೇಗೆ ಜಾಗ್ ಮಾಡಬಹುದೋ, ಹಾಗೆ ಕಾq ಇದ್ದರೆ ಎಲ್ಲಿ ಬೇಕಾದರೂ ಕುಳಿತು ಇಸ್ಪೀಟ್ ಆಡಬಹುದು. ಕ್ಲಬ್ಬಿರಬಹುದು, ರೂಮಿರ ಬಹುದು, ರೈಲು ಬೋಗಿ ಯಿರಬಹುದು, ಮರದ ನೆರಳಿರಬಹುದು, ದೊಡ್ಮೋರಿಯ ಮೇಲೆ ಹಾಸಿದ ಚಪ್ಪಡಿ ಇರಬಹುದು, ಎಂದರಲ್ಲಿ ಕುಳಿತು ಇಸ್ಪೀಟ್ ಬಡಿಯುವುದನ್ನು ನೋಡಿದ್ದೇವೆ.

ಓಟದ ಸ್ಪರ್ಧೆಗೆ ಸಜ್ಜಾಗಿ ವಿಶಲ್ (Whistle) ಗಾಗಿ ಕಾಯುವ ಸ್ಪರ್ಧಿಗಳ ಭಂಗಿಯಲ್ಲಿ, ಪೊಲೀಸರ ಭಯದಿಂದ ಕುಕ್ಕರಗಾಲ ಕುಳಿ ತು ಅಂದರ್ -ಬಾಹರ್ ಆಡುವ ಪೋಲಿಗಳ ಚಿತ್ರ ನಿಮ್ಮಲ್ಲಿ ಕೆಲವರ ಮನದದಾರೂ ಉಳಿದಿರು ತ್ತದೆ. ಅದಕ್ಕಿಂತ ಸಲೀಸಾಗಿ ಆಡಬಹುದಾದ ಮತ್ತೊಂದಿದ್ದರೆ ಅದು ಮಾತು. ಮಾತಿಗೆ ಕ್ಲಬ್‌ಹೌಸ್ ಸಜ್ಜಾದ ವೇದಿಕೆಯನ್ನು ಒದಗಿಸಿಕೊಟ್ಟಿದೆ. ಗಂಭೀರ ವಿಷಯಗಳನ್ನು ಗಂಭೀರವಾಗಿ ಚರ್ಚಿಸುವವರ ಪಕ್ಕದ ರೂಮಲ್ಲೇ ಬ್ರಾ ಇರಲೋ ಬೇಡವೋ ಎಂಬ ಹರಟೆಯೂ ನಡೆಯುತ್ತಿರುತ್ತದೆ. ಬಾತ್ರೂಮ್‌ನಲ್ಲಿ ಹಾಡುತ್ತಿದ್ದವರು ಇಂದು ಕ್ಲಬ್‌ ಹೌಸ್ ರೂಮ್‌ಗೆ ಲಗ್ಗೆ ಇಟ್ಟಿದ್ದಾರೆ.

ಇಬ್ಬರ ನಡುವೆ ಪಿಸುಮಾತಿಗಷ್ಟೇ ಸೀಮಿತವಾಗಿದ್ದ ಬೆಡ್‌ರೂಮ್ ವಿಚಾರಗಳು ಕ್ಲಬ್‌ಹೌಸ್ ರೂಮಿನಲ್ಲಿ ಸಾಮೂಹಿಕ ವ್ಯಾಖ್ಯೆಗೆ ಒಳಗಾಗಿವೆ. ಇಂದ್ರನಿಗೆ ಮೈಯೆ
ಕಣ್ಣಾದಂತೆ, ಕ್ಲಬ್ ಹೌಸ್ ಪ್ರವೇಶಿಸಿದವರ ಮೈಯೆ ಕಿವಿಯಾಗುತ್ತಿದೆ. ಸ್ಮಾರ್ಟ್ ಫೋನ್ ಮತ್ತು ಇಂಟರ್ನೆಟ್ ಕನೆಕ್ಷನ್ ಇವೆರಡಿದ್ದರೆ ಸಾಕು. ಒಂದಷ್ಟು ಜನ ಸಮಾನ ಮನಸ್ಕರು ಕ್ಲಬ್‌ಹೌಸ್ ರೂಮ್‌ನಲ್ಲಿ ಸೇರುತ್ತಾರೆ. ಸಾಮಾನ್ಯವಾಗಿ, ರೂಮಿನ ಕದ ತೆರೆದಿರುತ್ತದೆ. ಪ್ರಜಾಪ್ರಭುತ್ವ ಮೊದಲು ಎಂಬ ಬೋರ್ಡನ್ನು ಬಾಗಿಲಿಗೆ ನೇತುಹಾಕಿದ್ದ ಅಂತಹ ಒಂದು ರೂಮಿನಲ್ಲಿ ಮೊನ್ನೆ ನಾನೂ ಸೇರಿಕೊಂಡೆ. (ರಾಮಾಯಣದ) ರಾಮ ವರ್ಣದ್ವೇಶಿ ಎಂದು ಯಾರೋ ಮಾತನಾಡುತ್ತಿದ್ದರು.

ನನಗೆ ಪ್ರತ್ಯಕ್ಷವಾಗಿಯೂ, ನಿಮ್ಮಲ್ಲಿ ಹಲವರಿಗೆ ಪರೋಕ್ಷವಾಗಿಯೂ ಪರಿಚಯವಿರುವ ಭಗವಾನ್ ಏನಾದರೂ ಇದ್ದಾರಾ ಅಂತ ರೂಮಿನಲ್ಲಿರುವ ಹೆಸರುಗಳತ್ತ ಕಣ್ಣು ಹಾಯಿಸಿದೆ, ಕಾಣಲಿಲ್ಲ. ಸುಮಾರು ಅರವತ್ತೆಪ್ಪತ್ತು ಜನರಿದ್ದ ರೂಮದು. ಹೆಸರುಗಳಲ್ಲಿ ಕೆಲವು ಗಂಡುಗಳದ್ದು, ಒಂದಷ್ಟು ಹೆಣ್ಣು ಗಳದ್ದು. ಒಂದಷ್ಟು ತೃತೀಯ ಲಿಂಗಿಗಳದ್ದು. ಅಲ್ಲಿ ಕಾಣುವ ಪ್ರೊಫೈಲ್ ಚಿತ್ರಗಳನ್ನು ನೋಡಿ ಏನೂ ಹೇಳಲಿಕ್ಕೆ ಬರುವುದಿಲ್ಲ. ಏಕೆಂದರೆ, ನಿಮ್ಮ ಹೆಸರೂ, ಭಾವಚಿತ್ರ ನಿಮ್ಮದೇ ಆಗಬೇ ಕೆಂದೇನಿಲ್ಲ. ಜನಪ್ರಿಯ ಬ್ರ್ಯಾಂಡಿನ ಬಿಸ್ಕತ್ತು, ಚಾಕ್ಲೆಟ್ಟು, ಬೆಂಕಿಪೊಟ್ಟಣಗಳನ್ನು ಹೋಲುವ ಡೂಪ್ಲಿಕೇಟ್ ಬ್ರ್ಯಾಂಡ್‌ಗಳು ಅದೆಷ್ಟಿಲ್ಲ. ನಕಲಿ ಪಾಸ್‌ಪೋರ್ಟ್
ಬಳಕೆಯ ಬಗ್ಗೆ ಗೊತ್ತೇ ಇದೆ. ಅಷ್ಟೇ ಏಕೆ, ಪೈರೇಟೆಡ್ ಆಪರೇಶನ್ ಸಿಸ್ಟಮ್ ಅದೆಷ್ಟು ಡೆಸ್ಕ್‌ಟಾಪ್/ಲ್ಯಾಪ್‌ಟಾಪ್ ಗಳಲ್ಲಿ ಅಳವಡಿಸಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ಅಂಟಿಸಿಕೊಳ್ಳಲು, ಕೋಟ್ಯಾನುಕೋಟಿ ದೇವರಿರುವ ಶದಲ್ಲಿ, ಒಂದರವತ್ತು ಹಿಂದೂ ಹೆಸರುಗಳಿಗೆ ಬರವೇ? ಮಾತಿನ ವಿಷಯ ಮತ್ತು ವೈಖರಿ ನೋಡಿ ಅಕ್ಕಿ ಚೀಲದ ಲಾಂಛನ ಹೊತ್ತ ಡಿಪಿಗಾಗಿ ತಲಾಶ್ ಮಾಡಿದೆ. ರಾಮ ಸ್ತ್ರೀ ದ್ವೇಷಿ ಎಂದು ಮತ್ತೊಂದು ದನಿ ಹೇಳಿತು. ಸೀತೆಯನ್ನು ಅದೆಷ್ಟು ಗೋಳು ಹುಯ್ದುಕೊಂಡನೋ! ನಾನು ಈ ರೂಮಿನಲ್ಲಿ ಒಂದರ್ಧ ಗಂಟೆ ಮಾತ್ರ ಇದ್ದೆ. ಆ ಅವಧಿಯಲ್ಲಿ ಕೇಳಿದ ವಿವಿಧ ದನಿಗಳ ಪ್ರಾತಿನಿಧಿಕ ತುಣುಕು ಗಳನ್ನಷ್ಟೇ ತಮ್ಮ ಮುಂದಿಡುತ್ತಿದ್ದೇನೆ. ಅವರಲ್ಲಿ ಕೆಲವರು ಒಂದೇ ವಿಚಾರವನ್ನು ಪುನರುಚ್ಚರಿಸುತ್ತಿದ್ದರು.

ಅದನ್ನು ನಾನೂ ಮತ್ತೆ ಮತ್ತೆ ವರದಿ ಮಾಡಬೇಕಿಲ್ಲ. ಸ್ಥಳದ ಮಿತಿ ಕೂಡ ಇದೆ. ರಾಮ ಕೆಟ್ಟ ಗಂಡನಷ್ಟೇ ಅಲ್ಲ, ಕೆಟ್ಟ ಮನುಷ್ಯ ಕೂಡ. ರಾಮ ವಾಲಿಯನ್ನು ಕೊಂದ. ವಾಲಿಯೇ ಏನಾದರೂ ಅವನನ್ನು ಮೊದಲು ಭೇಟಿ ಮಾಡಿದ್ದರೆ, ಅವನು ಸುಗ್ರೀ ವನನ್ನೇ ಕೊಲ್ಲುತ್ತಿದ್ದ. ಶಂಭೂಕನೆಂಬ ಶೂದ್ರ ವೇದವನ್ನು ಕಲಿಯುವು ದನ್ನು ಸಹಿಸದ ಬ್ರಾಹ್ಮಣನೊಬ್ಬ ರಾಮನಿಗೆ ದೂರಿನ ಮೇರೆಗೆ ರಾಮ ಶಂಭೂಕನನ್ನು ಕೊಂದ. ರಾಮ ಶೂದ್ರ ದ್ವೇಷಿ. ಹನುಮಾನ್ ಚಾಲೀಸಾ ಹೇಳುವಾಗ ಹನು ಮಂತ ಜನಿವಾರ ಧರಿಸುತ್ತಾನೆ. ಕೋತಿಯನ್ನು ಬ್ರಾಹ್ಮಣ ಮಾಡಲಾಗಿದೆ.

ಹನುಮಂತ ವಾಸ್ತವವಾಗಿ ಬುಡಕಟ್ಟಿನ ಜನಾಂಗದವನು. ಅವನನ್ನು ಕೀಳಾಗಿ ಬಿಂಬಿಸಲು ಕೋತಿಯನ್ನಾಗಿ ಮಾಡಲಾಯಿತು. ಹೌದೌದು. ಆಸ್ಟ್ರೇಲಿಯಾ ದೇಶದ ಕ್ರಿಕೆಟ್ ಆಟಗಾರ ಆಂಡ್ರೂ ಸೈಮಂಡ್ಸ್ ಭಾರತಕ್ಕೆ ಬಂದಾಗ ಅವನನ್ನು ಕೋತಿ ಎಂದು ಕರೆಯಲಾಯಿತು. ರಾಮಾಯಣದ ಹೆಸರಿನಲ್ಲಿ ವರ್ಣದ್ವೇಷವನ್ನು ಆಚರಿಸಲಾಗುತ್ತಿದೆ. ಪರಿಶಿಷ್ಠ ವರ್ಗದವರನ್ನು ಈ ದೇಶದಲ್ಲಿ ಶೋಷಿಸಲಾಗುತ್ತಿದೆ. ಈಗ ನಾನು ಕೆಲಸದಲ್ಲಿದ್ದೇನೆ. ಆದರೂ ಮಾತನಾಡುತ್ತೇನೆ. ಅದಕ್ಕೇ ನನಗೆ ಕ್ಲಬ್‌ಹೌಸ್ ಕಂಡರೆ ಇಷ್ಟ. ಚಿಕ್ಕಂದಿನಲ್ಲಿ ನಾನು ರಾಮಾಯಣದ ಕತೆಯನ್ನು ಕೇಳಿದ್ದೆ. ಅದನ್ನು ನಾನೆಂದೂ ಓದಲಿಲ್ಲ. ರಾಮಾಯಣದಲ್ಲಿ ಬರುವ ಪ್ರತಿಯೊಂದು
ಹೆಣ್ಣೂ ಕ್ರೌರ್ಯಕ್ಕೊಳಗಾದವಳೇ.

ಹನುಮಂತ ಕೋತಿ. ಕೋತಿ ಲಂಕಾಗೆ ಹಾರಿದ್ದಾದರೂ ಹೇಗೆ? ಬಿಜೆಪಿ ಇಂಡಿಯಾನಾ ಹಾಳುಗೆಡವುತ್ತಿದೆ. ದೇಶದಲ್ಲಿ ಮುಸ್ಲಿಮರಿಗೆ ಜಾಗವಿಲ್ಲ. ಎರಡು ಸಾವಿರ ವರ್ಷಗಳ ಹಿಂದೆ ಇಂಡಿಯಾ ಇರಲಿಲ್ಲ. ಬ್ರಿಟಿಷರು ನಮ್ಮನ್ನಾಳುವವರೆಗೂ ಹಿಂದೂ ಧರ್ಮವೇ ಇರಲಿಲ್ಲ. ಶೂದ್ರರಿಗೆ ಶಿಕ್ಷಣ ಕೊಡಬಾರದೆಂದು ಮೊದಲು ಹೇಳಿದ್ದು, ವೇದದಲ್ಲೂ ಅದೇ ಹೇಳಿದೆ. ಅಯ್ಯೋ, ನಾನು ರಾಮಾಯಣದ ಬಗ್ಗೆ ಮಾತನಾಡುವುದಿತ್ತು, ಮರೆತೇಬಿಟ್ಟೆ. ನಮ್ಮ ಊರಿನಲ್ಲಿ ಹೆಂಗಸರ ಮೇಲೆ ದೌರ್ಜನ್ಯ ಎಸಗುವ ಎಲ್ಲಾ ಗಂಡಸರು ರಾಮನ ಕಡೆ ಬೊಟ್ಟು ತೋರಿಸುತ್ತಾರೆ. ಜೈ ಶ್ರೀ ರಾಮ್ ಅಂತ ಕೂಗೋರನ್ನ ನಾವು ವಿಚಾರಿಸಿಕೊಳ್ಳಬೇಕಿದೆ. ರಾಮಾಯಣ ಹಿಂಸೆಗೆ ಪ್ರಚೋದನೆ ನೀಡುತ್ತದೆ. ನಿಯತ್ತುಳ್ಳ ಹನುಮಂತನೂ ನಿಷ್ಠೆಯನ್ನು ಸಾಬೀತುಪಡಿಸಲು ಎದೆ ಬಿರಿದುಕೊಳ್ಳಬೇಕಾಯಿತು.ನಾವು ಯಾವುದೇ ಹಿಂದೂವಿಗೆ ಚಾಲೆಂಜ್ ಮಾಡಬವು.

ಶಾಸ್ತ್ರಗಳಲ್ಲಿ ಅವರದ್ದು ಕುರುಡು ನಂಬಿಕೆ. ಜೈ ಶ್ರೀರಾಂ ಘೋಷಣೆ ಕೂಗುವವರಿಗೆ ಈ ಸಂದೇಶವನ್ನು ಮುಟ್ಟಿಸಬೇಕು. ನಾನು ರಾಮಾಯಣವನ್ನು ಓದಿ
ದ್ದೇನೆ. ನಾನು ತಟಸ್ಥೆ. ಈ ಚರ್ಚೆಯಿಂದ ಫಲಪ್ರದವಾದದ್ದೇನೂ ಸಾಧಿಸಲಾ ಗುವುದಿಲ್ಲ…. ನೀನು ಮಾತಾಡಬೇಡ. ಪ್ರಬುದ್ಧರಿಗೆ ನಮ್ಮ ಚರ್ಚೆಯನ್ನು ಅರಗಿಸಿ ಕೊಳ್ಳಲಾಗದಿದ್ದರೆ, ಅವರು ರೂಮಿ ನಿಂದ ಹೊರನಡೆಯಬಹುದು. ಅದಕ್ಕಾಗಿಯೇ ನಿರ್ಗಮನದ ಬಟನ್ ಇದೆ. ನಿಮ್ಮ ಗಮನವನ್ನು ಸೆಳೆಯುತ್ತಿದ್ದೇನೆ. ಈ ಚರ್ಚೆ ನಡೆಯುವಾಗಲೇ, ನನಗೆ ಖಾಸಗಿ ಸಂದೇಶವೊಂದು ಬಂದಿದೆ. ಈ ನಮ್ಮ ಚರ್ಚೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಧ್ವನಿಮುದ್ರಿಸಿಕೊಳ್ಳುತ್ತಿದೆಯಂತೆ. ಆ ಸಂಸ್ಥೆ ಯಿರುವುದೇ ಅಮಾಯಕರನ್ನು ಬೆದರಿಸುವುದಕ್ಕೆ. ನಾವು ಹೆದರಬೇಕಿಲ್ಲ.

ಇಂತಹ ಸಂದೇಶಗಳಿಂದ ನಮ್ಮನ್ನು ಹತ್ತಿಕ್ಕಲಾಗದು. ರಾಮಾಯಣ ನಡೆದದ್ದೇ ಸುಳ್ಳು. ಮಹಾಭಾರತದ್ದೂ ಇದೇ ಕತೆ. ನಾನಿನ್ನೂ ಮಾಹಿತಿ ಕಲೆ ಹಾಕಬೇಕಿದೆ. ರಾಮಾಯಣದ್ದೇ 200 ರೂಪಗಳಿವೆ. ಭಾರತದಲ್ಲಿ ರಾಮಾಯಣದ 800 ಅವತಾರಗಳಿವೆ. ಯಾವುದನ್ನು ನಂಬುವುದು? ತುಳಸೀ ದಾಸ್ ಒಬ್ಬ ಬ್ರಾಹ್ಮಣ. ಅವನದ್ದೂ ಒಂದು ರಾಮಾಯಣ ವಿದೆ. ರಾಮಾಯಣ ಈಸ್ ಬುಲ್‌ಶಿಟ್. F**k ರಾಮಾಯಣ. ತುಳಸೀದಾಸ್ ಒಬ್ಬ ಕಾಮುಕ. ನಾವು ಎಲ್ಲ ಸುಳ್ಳುಗಳನ್ನೂ ಬಯಲಿಗೆಳೆಯಬೇಕು.

ಪ್ರಾಫೆಟ್ಟನ್ನೂ ನಾವು ಪ್ರಶ್ನಿಸಬವು. ಹೀಗೆ, ಇಸ್ಪೀಟ್ ಆಟದಲ್ಲಿ, ಒಂದು ಎಲೆಯ ಮೇಲೆ ಮತ್ತೊಂದು ಎಲೆ ಬೀಳುತ್ತಾ ಹೋದಂತೆ ಮಾತುಗಳು ಬಿಸುಡಲ್ಪಡು ತ್ತಿದ್ದವು. ಈ ವಿದ್ವದ್ಗೋಷ್ಠಿಯಲ್ಲಿ ನಾನೇನೂ ಮಾತನಾಡಲು ಹೋಗಲಿಲ್ಲ. ಈ ಗುಂಪಿನಲ್ಲಿ ವ್ಯಾಲಿ ಎಂಬ ಒಂದು ಹೆಂಗಸನ್ನು ಆಗಾಗ್ಗೆ ಕೇಳಿದ್ದೀನಿ. ಇತ್ತೀಚೆಗಷ್ಟೆ ಚರ್ಚೆಯಲ್ಲಿ ಪಾಲ್ಗೊಳ್ಳಲು ಮುಂದಾದ ಸಂಸ್ಕೃತ ಬಲ್ಲ ಮಹಿಳೆಯೊಬ್ಬರು ಬಾಯಿ ತೆಗೆಯುತ್ತಿದ್ದಂತೆ ನೀನು ಸವರ್ಣೀ, ತೊಲಗಾಚೆ ಎಂದು ವ್ಯಾಲಿ ಹೇಳಿದ್ದನ್ನು ಕೇಳಿದ್ದ ನನಗೆ ಚರ್ಚೆಯಲ್ಲಿ ಭಾಗವಹಿಸುವ ಧೈರ್ಯ ಬರಲಿಲ್ಲ. ಮೇಲಾಗಿ, ಆ ಗುಂಪಿನ ಹೆಸರೇ ಪ್ರಜಾಪ್ರಭುತ್ವ ಮೊದಲು, ಪ್ರಜಾಪ್ರಭುತ್ವದ ಗಂಧವೇ ಇಲ್ಲದ ನನ್ನನ್ನೂ ರೂಮಿನಿಂದ ತಳ್ಳಿದರೇ? ಟೌನ್ ಹಾಲ್ ಬಳಿ, ಸಿಟಿ ಮಾರ್ಕೆಟ್ ಬಳಿ ಕದ್ದ ಮಾಲನ್ನು ಹರಾಜು ಕುವ ಖದೀಮರನ್ನು ನೋಡಿರುತ್ತೀರಿ. ಸುತ್ತಮುತ್ತಲಿನ ಹಳ್ಳಿಗಳಿಂದ ಪಟ್ಟಣಕ್ಕೆ ಸಡಗರದಿಂದ ಬರುವ ಮುಗ್ಧ ಹಳ್ಳಿಗರು ಅಲ್ಲಿ ನೆರೆದಿರುತ್ತಾರೆ.

ಹರಾಜು ನಡೆಸುವವನ ಗುಂಪಿಗೆ ಸೇರಿದವನೇ ಜನರ ಮಧ್ಯೆ ನಿಂತು ಬಿಡ್ ಮಾಡುತ್ತಿರುತ್ತಾನೆ. ಕ್ಲಬ್‌ಹೌಸ್‌ನ ಕೆಲವು ರೂಮ್ ಗಳಲ್ಲಿರುವವರೂ ಉಚಿತ ಅನ್ನ ಸತ್ರದ ರೂಮ್‌ಗಳಲ್ಲಿ ಒಟ್ಟಿಗೆ ಆಶ್ರಯ ಪಡೆದಂತಿದೆ. ಮೊನ್ನೆಯಷ್ಟೇ ಹಿಂದುತ್ವವನ್ನು ಕೆಡವುವ ಅಜೆಂಡಾ ಹೊತ್ತ ಜಾಗತಿಕ ಆನ್‌ಲೈನ್ ಸಮ್ಮೇಳನ ಅಮೆರಿಕದಲ್ಲಿ ನಡೆದಿದೆ. ಅದು ಹಿಂದೂಗಳ ವಿರುದ್ಧವಲ್ಲ, ಹಿಂದುತ್ವದ ವಿರುದ್ಧ ವೆಂದು ಸಮ್ಮೇಳನದ ಸಂಯೋಜಕರು ವಿವರಿಸಿದ್ದರು. ನಾನು ಇರಿದದ್ದು ಅವನ ಜರ್ಕಿನ್ನನ್ನು, ಅವನನ್ನಲ್ಲ ಎಂದು ವಾದಿಸಿ ಇರಿದ ಆರೋಪದಿಂದ ಖುಲಾಸೆಗೊಳ್ಳುವುದು ನಮ್ಮ ವ್ಯವಸ್ಥೆಯಲ್ಲಿ ಕಷ್ಟವೇನಲ್ಲ.

ಆ ವಿವರಣೆ ಏನೇ ಇರಲಿ, ಅಮೆರಿಕದ ಹಿಂದೂಗಳು ಭಯಭೀತರಾಗಿzರೆ. ಎಂಭತ್ತರ ದಶಕದಲ್ಲಿ, ಡಾಟ್ ಬಸ್ಟರ್ಸ್ ಎಂದು ಕರೆಯಲಾದ ಅಲ್ಲಿಯ ಹವ್ಯಾಸಿ ಪುಂಡರು ಕುಂಕುಮವಿಟ್ಟವರ ಮೇಲೆ ಹಠಾತ್ ಹಲ್ಲೆ ನಡೆಸುತ್ತಿದ್ದರು. ಹಿಂದೂಗಳು ದುಷ್ಟರೆಂದು ಈ ಸಮ್ಮೇಳನ ತೀರ್ಮಾನಿಸಿಯಾಗಿದೆ. ಅದರಿಂದ ಪ್ರಚೋದಿತ ರಾದ ಅಮೆರಿಕದ ಬಿಳಿ ತೊಗಲಿನ ಪುಂಡರು ಮತ್ತೆ ಹಿಂದೂ ಹೆಂಗಸರ ಮೇಲೆ ಆಕ್ರಮಣ ಮಾಡುವ ಸಾಧ್ಯತೆ ಇಲ್ಲದಿಲ್ಲ. ಹಾಗೇನಾದರೂ ಆದಲ್ಲಿ, ಅಂತಹ ಆಕ್ರಮಣಕಾರರ ಕಣ್ಣಿಗೆ ಮೊದಲು ಬೀಳುವುದು ಒಂದೂ ಕಾಲಿಂಚು ವ್ಯಾಸದ ಬಿಂದಿ ಹೊತ್ತ ಹಿಂದೂ ವಿರೋಧಿ ಹೆಣ್ಣುಗಳೇ!

ಆ ಅಪಾಯದ ಅರಿವು ಅವರಿಗಿಲ್ಲವೇ? ಒಂದು ವೇಳೆ ಹಲ್ಲೆಗೊಳಗಾದರೂ, ಹಯ ಆರೋಪವನ್ನು ಹಿಂದುತ್ವ ಪ್ರತಿಪಾದಕರ ಹಣೆಗೇ ಕಟ್ಟಲು ಅದು ಭಾರತವಲ್ಲ ಎಂಬ ಅರಿವಾದರೂ ಅವರಿಗಿರಬೇಕಲ್ಲವೇ? ಆಳುವ ಡೆಮಾಕ್ರೆಟಿಕ್ ಪಕ್ಷದ ಕೃಪಾ ಕಟಾಕ್ಷ ಗಳಿಸಿರಲೂಬಹುದು. ಯಾರಿಗೆ ಗೊತ್ತು?

Leave a Reply

Your email address will not be published. Required fields are marked *