Friday, 4th December 2020

ಅನುದಾನ ತಡೆಹಿಡಿದು ಕೊಟ್ಟ ಮಾತಿಗೆ ತಪ್ಪಿದ ಸಿಎಂ ಬಿಎಸ್‌ವೈ

ಗ್ರಾಮಾಂತರ ಕ್ಷೇತ್ರದ ಆರೇಹಳ್ಳಿ ಗ್ರಾಮದ ದೊಡ್ಡಮ್ಮ, ಚಿಕ್ಕಮ್ಮ ಆಂಜನೇಯಸ್ವಾಾಮಿ ದೇವಾಲಯದ ಉದ್ಘಾಾಟನೆಗೆ ಹಾಗೂ ಶಿಲಾ ವಿಗ್ರಹಗಳ ಪ್ರತಿಷ್ಠಾಾಪನೆ ಕಾರ್ಯಕ್ರಮದಲ್ಲಿ ವರಿಷ್ಠ ಎಚ್.ಡಿ.ದೇವೇಗೌಡರು ಮಾತನಾಡಿದರು.

59 ವರ್ಷದಲ್ಲಿ ದ್ವೇಷದ ರಾಜಕಾರಣ ಮಾಡಿಲ್ಲ ಅವಮಾನಕ್ಕೆೆ ಒಳಗಾದ ಸ್ಥಳದಲ್ಲಿಯೇ ಜೆಡಿಎಸ್ ಕಣಕ್ಕೆ

ದ್ವೇಷದ ರಾಜಕಾರಣ ಮಾಡಲ್ಲ ಎಂದು ಹೇಳಿದ ಮುಖ್ಯಮಂತ್ರಿಿ ಬಿ.ಎಸ್.ಯಡಿಯೂರಪ್ಪ, ತುಮಕೂರು ಗ್ರಾಾಮಾಂತರ ಕ್ಷೇತ್ರಕ್ಕೆೆ ಮಾಜಿ ಸಿಎಂ ಎಚ್‌ಡಿಕೆ ಕಾಲದಲ್ಲಿ ಬಿಡುಗಡೆಯಾಗಿದ್ದ 40 ಕೋಟಿ ರು. ಅನುದಾನ ತಡೆಹಿಡಿಯುವ ಮೂಲಕ ಕೊಟ್ಟ ಮಾತಿಗೆ ತಪ್ಪಿಿದ್ದಾಾರೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮಾಂತರ ಕ್ಷೇತ್ರದ ಆರೇಹಳ್ಳಿಿ ಗ್ರಾಾಮದ ದೊಡ್ಡಮ್ಮ, ಚಿಕ್ಕಮ್ಮ ಆಂಜನೇಯಸ್ವಾಾಮಿ ದೇವಾಲಯದ ಉದ್ಘಾಾಟನೆಗೆ ಹಾಗೂ ಶಿಲಾ ವಿಗ್ರಹಗಳ ಪ್ರತಿಷ್ಠಾಾಪನೆ ಕಾರ್ಯಕ್ರಮ ಮಾತನಾಡಿ, ನನ್ನ 59 ವರ್ಷಗಳ ರಾಜಕಾರಣದಲ್ಲಿ ಎಂದಿಗೂ ಈ ರೀತಿಯ ದ್ವೇಷದ ರಾಜಕಾರಣ ಮಾಡಿಲ್ಲ. ಇದು ಒಳ್ಳೆೆಯ ಬೆಳವಣಿಗೆಯಲ್ಲ. 59 ವರ್ಷಗಳ ಸುದೀರ್ಘ ರಾಜಕಾರಣದಲ್ಲಿ ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸಿದ್ದೇನೆ ಎಂದರು.

ಜಗತ್ತಿಿನ ಯಾವ ಧರ್ಮವೂ ಇನ್ನೊೊಂದು ಧರ್ಮವನ್ನು ದ್ವೇಷಿಸು ಎಂದು ಹೇಳಿಲ್ಲ. ಏಸು ಕ್ರಿಿಸ್ತ, ಮಹಮದ್ ಪೈಗಂಬರ್, ಗುರುನಾನಕ್ ಸೇರಿ ಎಲ್ಲ ಧರ್ಮಗಳ ಸಾರ ಒಂದೇ ಅದು ಪರಸ್ಪರರನ್ನು ಪ್ರೀತಿಸು, ಗೌರವಿಸು ಎಂಬುದಾಗಿದೆ. ಮನುಷ್ಯನಿಗೆ ಮುಕ್ತಿಿ ಸಿಗುವುದು, ಅಧಿಕಾರದಿಂದಲ್ಲ. ಆತ ಧರ್ಮ ಮಾರ್ಗದಿಂದ ನಡೆದಾಗ ಮಾತ್ರ. ಈ ದಾರಿಯಲ್ಲಿ ತುಮಕೂರು ಗ್ರಾಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ ನಡೆಯುತ್ತಿಿದ್ದು, ಈತನಿಂದ ಇಂತಹ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ನಿರೀಕ್ಷಿಸುತ್ತೇನೆ ಎಂದು ಶಾಸಕರ ನಡೆಯನ್ನು ಪ್ರಶಂಸಿಸಿದರು.

ಅಯೋಧ್ಯೆೆ ತೀರ್ಪು ಏನೇ ಬರಲಿ ನಾವೆಲ್ಲರೂ ಶಾಂತಿ ಕಾಪಾಡುತ್ತೇವೆ ಎಂದು ಈಗಾಗಲೇ ಕೆಲ ಮುಸ್ಲಿಿಂ ಮುಖಂಡರು ಮಾತು ನೀಡಿದ್ದಾಾರೆ. ಅಲ್ಲದೆ ಈ ಘಟನೆಗೆ ಬಿಜೆಪಿ ಕಾರಣ. ಬಾಬರಿ ಮಸೀದಿ ಕೆಡವಿದಾಗ ಉತ್ತರಪ್ರದೇಶದಲ್ಲಿ ಬಿಜೆಪಿ ಸರಕಾರವಿತ್ತು. ಕೇಂದ್ರ, ರಾಜ್ಯದಲ್ಲಿ ಅದೇ ಸರಕಾರವಿದ್ದು, ಅವರೇ ಇದನ್ನು ನಿಭಾಯಿಸಬೇಕು, ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರಿಗೆ ನೀಡಿದ್ದ ಝಡ್ ಪ್ಲಸ್ ಸೆಕ್ಯೂರಿಟಿಯನ್ನು ಹಿಂಪಡೆದಿರುವುದು ಸರಿಯಲ್ಲ ಎಂದರು.

ಸೋಲಾಗಿದ್ದಕ್ಕೆೆ ಎದೆಗುಂದಿಲ್ಲ
ದ್ವಾಾಪರಾಯುಗದ ಧರ್ಮರಾಯನಂತೆ ಧರ್ಮದ ರಾಜಕಾರಣ ಮಾಡಿದ್ದೇನೆ. ಕಳೆದ ಲೋಕಸಭೆಯ ಕೊನೆಯ ದಿನ ಮುಂದೆ ಸ್ಪರ್ಧೆ ಮಾಡಬಾರದು ಎಂದು ತೀರ್ಮಾನಿಸಿದ್ದೆೆ. ಆದರೆ ವಿಧಿಯಾಟ, ಚಕ್ರವ್ಯೂೆಹಕ್ಕೆೆ ಸಿಲುಕಿ, ಶಕುನಿ ಆಟಕ್ಕೆೆ ಬಲಿಯಾಗಿ ಸೋಲು ಅನುಭವಿಸಬೇಕಾಯಿತು. ಇದಕ್ಕಾಾಗಿ ಎದೆಗುಂದುವುದಿಲ್ಲ. ಎಲ್ಲಿ ಅವಮಾನಕ್ಕೆೆ ಅಲ್ಲಿಯೇ ಅಂದರೆ, ತುಮಕೂರು ಜಿಲ್ಲೆೆಯಲ್ಲಿಯೇ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 11ಕ್ಕೆೆ 11 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ನಿಲ್ಲಿಸಿ, ಅವರ ಪರ ಪ್ರಚಾರ ಮಾಡಿ, ಇತರೆ ಪಕ್ಷಗಳಿಗಿಂತ ಹೆಚ್ಚು ಸ್ಥಾಾನ ಪಡೆಯುವುದು ಖಚಿತ ಎಂದು ಎಚ್.ಡಿ.ದೇವೇಗೌಡರು ಹೇಳಿದರು.

ಕಳೆದ 2018ರ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬರದಿದ್ದಾಾಗ ನನ್ನ ಮಗನನ್ನು ಮುಖ್ಯಮಂತ್ರಿಿ ಮಾಡಿ ಎಂದು ಯಾರ ಮನೆ ಬಾಗಿಲಿಗೂ ಹೋಗಿರಲಿಲ್ಲ. ಅವರೇ ನಮ್ಮ ಮನೆ ಬಾಗಿಲಿಗೆ ನಿಮ್ಮ ಮಗನನ್ನೇ ಸಿಎಂ ಮಾಡುತ್ತೇವೆ ಎಂದು ದುಂಬಾಲು ಬಿದ್ದರು. ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡಿ ಎಂದು ಸಲಹೆ ನೀಡಿದರೂ ಕೇಳಲಿಲ್ಲ. ಆದರೆ ಕಳೆದ ಒಂದುವರೆ ವರ್ಷ ನಾವು ಅನುಭವಿಸಿದ ನೋವು ಅಷ್ಟಿಿಷ್ಟಲ್ಲ. ನಮಗೂ ಒಳ್ಳೆೆಯ ಕಾಲ ಬಂದೇ ಬರುತ್ತದೆ.
ಎ ಚ್.ಡಿ.ದೇವೇಗೌಡ, ಜೆಡಿಎಸ್ ವರಿಷ್ಠ

Leave a Reply

Your email address will not be published. Required fields are marked *