Friday, 27th May 2022

ಸಂಸದರನ್ನ ಕೂರಿಸಿ ಮಾತನಾಡುವಷ್ಟು ಸೌಜನ್ಯವಿಲ್ವಾ…? ಬೊಮ್ಮಾಯಿ ನಡೆಗೆ ಕಿಡಿ

Mangala Suresh Angady and CM Bommai

ಬೆಂಗಳೂರು: ಬೆಳಗಾವಿ ಸಂಸದೆ ಮಂಗಳಾ ಸುರೇಶ್ ಅಂಗಡಿಗೆ ಅಗೌರವ ತೋರಿಸಿದ್ದ ಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಸಂಸದೆ‌ ಮಂಗಳಾ ಅಂಗಡಿ ಮನವಿ ಸಲ್ಲಿಸುತ್ತಿದ್ದರೆ, ಸಿಎಂ ಬೊಮ್ಮಾಯಿ ಕಾಲಿನ ಮೇಲೆ ಕಾಲು ಹಾಕಿಕೊಂಡು ಕೂತು ಮನವಿ ಸ್ವೀಕರಿಸಿದ್ದಾರೆ‌.

ಮಂಗಳಾ ಅಂಗಡಿಗೆ ಸಿಎಂ ಅಗೌರವ ತೋರಿಸಿದ್ದಾರೆ. ಸಂಸದರನ್ನ ಕೂರಿಸಿ ಮಾತನಾಡು ವಷ್ಟು ಸೌಜನ್ಯವಿಲ್ವಾ ಎಂದು ಸಿಎಂ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.

ಸಿಎಂ ಬೊಮ್ಮಾಯಿಯವರನ್ನು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಭೇಟಿಯಾದ ಸಂಸದೆ ಮಂಗಳಾ ಸುರೇಶ್ ಅಂಗಡಿ, ಬೆಳಗಾವಿ, ಕಿತ್ತೂರು, ಧಾರವಾಡ ರೈಲು ಮಾರ್ಗಕ್ಕೆ ಶೀಘ್ರ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಮನವಿ ಮಾಡಿದ್ದರು.

ಪ್ರವಾಹದ ಸಂದರ್ಭದಲ್ಲಿ ಹಾಳಾದ ರಸ್ತೆಗಳ ಸುಧಾರಣೆ ಮಾಡಬೇಕೆಂದು ತಿಳಿಸಿದ್ದರು. ಬಳಿಕ ಸಿಎಂಗೆ ಮನವಿ ಕೊಟ್ಟ ಫೋಟೋವನ್ನ ತಮ್ಮ ಫೇಸ್​ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದರು.