Friday, 17th January 2020

ಕೆಜಿಎಫ್ ಚಿತ್ರ ತಂಡದ ವಿರುದ್ಧ ದೂರು

ಕೆಜಿಎಫ್ ಚಿತ್ರೀಕರಣದಿಂದ ಗಿಡಗಳು ಹಾಳಾಗಿದ್ದು, ಸೈನೈಡ್ ದಿಬ್ಬದ ಮೇಲೆ ಚಿತ್ರೀಕರಣಕ್ಕೆೆ ತಡೆ ನೀಡುವಂತೆ ಕೋರಿ ಜಿಲ್ಲಾಾಧಿಕಾರಿಗಳಿಗೆ ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳು ಪತ್ರ ಬರೆದಿದ್ದಾಾರೆ. ಕೆಜಿಎಫ್-2 ಚಿತ್ರೀಕರಣವನ್ನು ಸೈನೈಡ್ ದಿಬ್ಬಗಳ ಮೇಲೆ ಪ್ರಾಾರಂಭ ಮಾಡಿ ಅಲ್ಲಿರುವ ವಿವಿಧ ತಳಿಗಳ ನೂರಾರು ಗಿಡಗಳನ್ನು ನಾಶ ಮಾಡಿದ್ದಾಾರೆ. ಇದು ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಹಿನ್ನಲೆಯಲ್ಲಿ ಚಿತ್ರೀಕರಣಕ್ಕೆೆ ತಡೆ ನೀಡುವಂತೆ ದೂರು ನೀಡಿದ್ದಾಾರೆ. ನಗರದ ಸೈನೈಡ್ ದಿಬ್ಬದ ವಿಷ ಮಿಶ್ರಿಿತ ಧೂಳಿನಿಂದ ನಾಗರಿಕರ ಆರೋಗ್ಯದ ಮೇಲೆ ದುಷ್ಟಪರಿಣಾಮ ಬೀರುತ್ತಿಿವೆ ಎಂದು ಮಾಧ್ಯಮಗಳಲ್ಲಿ ಸುದ್ದಿಗಳು ಪ್ರಕಟವಾದ ನಂತರ ಅಂದಿನ 3ನೇ ಅಪರ ಮತ್ತು ಜಿಲ್ಲಾಾ ಸತ್ರ ನ್ಯಾಾ. ಜಗದೀಶ್ವರ ಹಾಗೂ ಇತರೆ ನ್ಯಾಾಯಾಧೀಶರು ನಗರಸಭೆ, ಅರಣ್ಯ ಇಲಾಖೆ, ಬಿಜಿಎಂಎಲ್, ತಾಪಂ, ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆ ಕರೆದು ಸೈನೈಡ್ ಧೂಳಿನಿಂದ ನಾಗರಿಕರಿಗೆ ಮುಕ್ತಿಿ ದೊರಕಿಸುವ ನಿಟ್ಟಿಿನಲ್ಲಿ ಯೋಜನೆ ತಯಾರು ಮಾಡಿ ಲಕ್ಷಾಂತರ ವಿವಿಧ ರೀತಿಯ ಗಿಡಗಳನ್ನು ನೆಟ್ಟರು. ಅಂದು ಅವರು ಕೈಗೊಂಡ ಉತ್ತಮ ನಿರ್ಧಾರದಿಂದ ಹಾಗೂ ಶಾಲಾ ಕಾಲೇಜು ವಿದ್ಯಾಾರ್ಥಿಗಳ ಪರಿಶ್ರಮದಿಂದ ಆಷಾಢ, ಶ್ರಾಾವಣ ಮಾಸದಲ್ಲಿ ಕಂಡು ಬರುವ ಗಾಳಿಯ ಪ್ರಭಾವ ಕಡಿಮೆಯಾಗಿ ಸೈನೈಡ್ ದಿಬ್ಬಗಳ ಮೇಲೆ ಗಿಡಗಳು ಸಮೃದ್ಧಿಿಯಾಗಿ ಬೆಳೆಯಿತ್ತು.

Leave a Reply

Your email address will not be published. Required fields are marked *