Sunday, 25th September 2022

ಲೋಕೋ ಪೈಲಟ್ ಸಮಯಪ್ರಜ್ಞೆ ತಪ್ಪಿತು ಭಾರೀ ದುರಂತ

ಬೆಂಗಳೂರು: ಬೆಂಗಳೂರಿನಲ್ಲಿ ಸೋಮವಾರ ರಾತ್ರಿ ಲೋಕೋ ಪೈಲಟ್ ಸಮಯಪ್ರಜ್ಞೆಯಿಂದ ಸಂಭವಿಸ ಬಹುದಾದ ಭಾರಿ ಅನಾಹುತವೊಂದು ತಪ್ಪಿದೆ.

ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಆವಲಹಳ್ಳಿ ಬಳಿ ಪ್ಯಾಸೆಂಜರ್ ರೈಲೊಂದು ಕಂಟೈನರ್​ಗೆ ಗುದ್ದಿದ್ದು, ರೈಲು ಗುದ್ದಿದ ರಭಸಕ್ಕೆ ಕಂಟೈನರ್ ಸಂಪೂರ್ಣ ಪುಡಿ ಪುಡಿ ಆಗಿದೆ. ಅದೃಷ್ಟವಷಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮೈಸೂರಿನಿಂದ ತಮಿಳುನಾಡಿನ ಮೈಲಾರಪುರಿಗೆ ಎಕ್ಸ್‌ಪ್ರೆಸ್‌ ಪ್ಯಾಸೆಂಜರ್ ರೈಲು ಹೋಗುತ್ತಿತ್ತು. ಈ ವೇಳೆ, ಈ ದುರ್ಘಟನೆ ಸಂಭವಿಸಿದೆ.

ಮಾರ್ಗದಲ್ಲಿ ಎರಡು ಹಳಿಗಳು ನಿರ್ಮಾಣ ಕಾರ್ಯ ಪ್ರಗತಿಯಲ್ಲಿತ್ತು. ಒಂದು ಹಳಿ ಮೇಲೆ ರೈಲು ಸಂಚರಿಸು ತ್ತಿತ್ತು. ಸಂಜೆ ಅದೇ ಹಳಿ ಮೇಲೆ ಕಂಟೈನರ್ ದಾಟಲು ಯತ್ನಿಸಿದ್ದಾಗ ಕಂಟೈನರ್ ನಿಂತು ಚಕ್ರವೊಂದು ಸಿಲುಕಿತ್ತು. ರೈಲು ಬರುತ್ತಿದ್ದುದ್ದನ್ನು ಕಂಡು ಚಾಲಕ ಓಡಿ ಹೋಗಿದ್ದ. ಬಳಿಕ, ರೈಲು ಕಂಟೈನರ್ ಗೆ ಗುದ್ದಿದೆ. ಪರಿಣಾಮ ಕಂಟೈನರ್ ಸಂಪೂರ್ಣ ಜಖಂಗೊಂಡಿದೆ.

ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಆವಲಹಳ್ಳಿ ಬಳಿ ದುರ್ಘಟನೆ ನಡೆದಿದೆ. ಹುಸ್ಕೂರು ಬಳಿಯ ಆವಲಹಳ್ಳಿ ಬಳಿ ಘಟನೆ ನಡೆದಿದೆ. ಸ್ಥಳಕ್ಕೆ ಆನೇಕಲ್ ಪೊಲೀಸರು ದೌಡಾಯಿಸಿದ್ದಾರೆ.