Sunday, 29th November 2020

ಕೊರೋನಾ ಹರಡುವಿಕೆ ಜನರ ನಡವಳಿಕೆ ಮೇಲೆ ಆಧರಿಸಿದೆ: ಸಚಿವ ಡಾ.ಸುಧಾಕರ

ಧಾರವಾಡ: ಕರೊನಾ ಎರಡನೇ ಅಲೆ ವಿಶ್ವದಲ್ಲಿ ಎಲ್ಲ ಕಡೆ ಬರುತ್ತೆ, ಬಂದಿದೆ. ನಮ್ಮ ದೇಶದಲ್ಲಿ ದೆಹಲಿ, ಅಹಮದಬಾದ್‌ನಲ್ಲಿ ಬಂದಿದೆ. ಎರಡನೇ ಅಲೆ 45ದಿನದಿಂದ ಎರಡು ತಿಂಗಳು ಬಳಿಕ ಬರಲಿದೆ. ಬಂದೇ ಬರುತ್ತೇ ಎನ್ನುವುದೇನಿಲ್ಲ. ಅದು ನಮ್ಮ ಜನರ ನಡವಳಿಕೆ ಮೇಲೆ ಆಧಾರವಾಗಿದೆ ಎಂದು ಧಾರವಾಡದಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ ಹೇಳಿಕೆ ನೀಡಿದ್ದಾರೆ.

ಮಾರ್ಗಸೂಚಿ ಅನ್ವಯ ನಡೆದುಕೊಂಡರೇ ಎರಡನೇ ಅಲೆ ಬರುವುದು ಕಡಿಮೆ. ಗಂಭೀರವಾಗಿ ತೆಗೆದುಕೊಂಡು ನಿಯಮ ಅನಿಷ್ಠಾನಕ್ಕೆ ತರಬೇಕಿದೆ. ಜನ ಕರೊನಾ ಹೋಗಿದೆ ಎಂಬ ಭಾವನೆಯಲ್ಲಿದ್ದಾರೆ. ಲಸಿಕೆ ಸಿಗುವವರೆಗೂ ಕರೊನಾ ನಡವಳಿಕೆ ಸ್ವಾಭಾವಿಕವಾಗಿ ಬರಬೇಕು ಎಂದು ಸಲಹೆ ನೀಡಿದರು.

ಸಚಿವ ಸಂಪುಟ ವಿಸ್ತರಣೆ ವಿಚಾರ ಕುರಿತಂತೆ, ಸಿಎಂ‌ ಹಾಗೂ ದೆಹಲಿಯ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ. ಪದೇ ಪದೇ ವ್ಯಾಖ್ಯಾನ ಮಾಡುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.

ಕಾಲೇಜ್ ಆರಂಭ ಬಳಿಕ ಸೋಂಕು ಹೆಚ್ಚಳ ವಿಚಾರಕ್ಕೆ 120ರಿಂದ 130 ಜನರಿಗೆ ಮಾತ್ರ ಬಂದಿದೆ ಎಂಬ ಮಾಹಿತಿ ಇದೆ. ಯುವಕ ರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದೆ. ಅವರ ಶೈಕ್ಷಣಿಕ ಭವಿಷ್ಯ ರೂಪಿಸುವುದು ಸರ್ಕಾರದ ಜವಾಬ್ದಾರಿ ಆಗಿದೆ. ಈ ಜವಾಬ್ದಾರಿ ಹಿನ್ನೆಲೆ ಕಾಲೇಜ್ ಆರಂಭ ಮಾಡಿದ್ದೇವೆ. ಸೋಂಕು ಹೆಚ್ಚಳ ಆದರೆ ಮತ್ತೆ ಕಾಲೇಜ್ ಬಂದ್ ಮಾಡುತ್ತೇವೆ ಎಂದು ಸೂಚ್ಯವಾಗಿ ಪ್ರತಿಕ್ರಿಯಿಸಿದರು.

Leave a Reply

Your email address will not be published. Required fields are marked *