Saturday, 8th August 2020

ಜನಿವಾರದ ಗಂಟನ್ನು ಸರಿಪಡಿಸಿಕೊಳ್ಳಿ ಅಂದ್ರೆ ಬ್ರಾಹ್ಮಣ್ಯವನ್ನು ಟೀಕಿಸಿದಂತಲ್ಲ!

ಬ್ರಾಹ್ಮಣರದು ಯಾವತ್ತೂ ಸಮಚಿತ್ತದ ಸಂವಾದ ಭಾವ. ತಿಳಿವಳಿಕೆಯಿಂದಲೇ ಬದಲಾವಣೆ ಸಾಧ್ಯ ಎಂಬುದು ಅವರ ನಿಲುವು. ಬಲಾತ್ಕಾಾರವಾಗಿ ಯಾರ ಮೇಲೂ ತಮ್ಮ ಅಭಿಪ್ರಾಯ ಹೇರಿದವರಲ್ಲ. ತಮ್ಮ ಅಭಿಪ್ರಾಯ, ಆಚರಣೆಯನ್ನೇ ಒಪ್ಪಿಕೊಳ್ಳಬೇಕು ಎಂದು ಹಠಕ್ಕೆ ಬಿದ್ದವರೂ ಅಲ್ಲ. ತಮ್ಮನ್ನು ಟೀಕಿಸಿದಾಗಲೆಲ್ಲ ಪರಾಮರ್ಶೆಗೆ ಗುರಿಪಡಿಸಿಕೊಂಡು ಮುನ್ನಡೆಯುವುದು ಬ್ರಾಹ್ಮಣ ಧರ್ಮದ ವೈಶಿಷ್ಟ್ಯ.

ಕೆಲವರಿಗೆ ಯಾಕೆ, ಯಾವಾಗ ಪ್ರತಿಭಟನೆ ಮಾಡಬೇಕು ಅನ್ನೋೋದೂ ಗೊತ್ತಾಾಗೊಲ್ಲ. ಇತ್ತೀಚೆಗೆ ‘ವಿಶ್ವವಾಣಿ’ ಒಂದು ಲೇಖನ ಪ್ರಕಟವಾಗಿತ್ತು. ರಘುನಾಥ ಗುರೂಜಿ ಎಂಬುವವರು ಪುರೋಹಿತರ ಬಗ್ಗೆೆ ಬರೆದಿದ್ದರು. ಪುರೋಹಿತ ವೃತ್ತಿಿಯ ಘನತೆ ಕುಂದುತ್ತಿಿರುವ ಬಗ್ಗೆೆ ಆತಂಕ, ವಿಷಾದ ವ್ಯಕ್ತಪಡಿಸಿ ತಮ್ಮ ಅಭಿಪ್ರಾಾಯ ಹಂಚಿಕೊಂಡಿದ್ದರು. ಆ ಲೇಖನದಲ್ಲಿ ತಪ್ಪೇನೂ ಇರಲಿಲ್ಲ. ಒಂದು ವೇಳೆ ರಘುನಾಥ ಗುರೂಜಿ ಅಭಿಪ್ರಾಾಯವನ್ನು ಇಷ್ಟಪಡದಿದ್ದರೆ, ಅದನ್ನು ಇನ್ನೊೊಂದು ಲೇಖನ ಬರೆದು ಖಂಡಿಸಬಹುದಿತ್ತು ಅಥವಾ ಹಾಗಲ್ಲ ಹೀಗೆ ಎಂದು ಸಮಜಾಯಿಷಿ ಕೊಡಬಹುದಿತ್ತು. ಅದು ಸರಿಯಾದ ಮಾರ್ಗ.

ಪತ್ರಿಿಕೆಗಳಲ್ಲಿ ಎಲ್ಲ ಸಲವೂ ನಮ್ಮ ಪರವಾಗಿಯೇ ಪ್ರಕಟವಾಗುವುದಿಲ್ಲ. ಬರೆದವರ ಅನಿಸಿಕೆ ಸರಿ ಇಲ್ಲದಿದ್ದರೆ, ಅದನ್ನು ಸರಿಪಡಿಸುವ, ನಮ್ಮ ಅನಿಸಿಕೆ ವ್ಯಕ್ತಪಡಿಸುವ ಸ್ವಾಾತಂತ್ರ್ಯ ಓದುಗರಿಗೆ ಇದ್ದೇ ಇದೆ. ಅಲ್ಲದೇ ಅದು ಸರಿಯಾದ ಮಾರ್ಗ ಕೂಡ. ಎಲ್ಲ ಸಲವೂ ನಮ್ಮನ್ನು ಬೆಂಬಲಿಸಿಯೇ, ನಮಗೆ ಬೇಕಾದ ಅಭಿಪ್ರಾಾಯವೇ ಪ್ರಕಟವಾಗುವುದಿಲ್ಲ. ನಮಗೆ ಕಸಿವಿಸಿ, ಮುಜುಗರವಾಗುವ ಅನಿಸಿಕೆ ಪ್ರಕಟವಾಗಬಹುದು. ಆಗ ಅದನ್ನು ಖಂಡಿಸಲು, ಸರಿಪಡಿಸಲು ಇರುವ ಮಾರ್ಗವೆಂದರೆ ಪತ್ರಿಿಕೆಗೆ ಬರೆಯುವುದು. ಪತ್ರಿಿಕೆಯಲ್ಲಿ ಪ್ರಕಟವಾದ ಲೇಖನಕ್ಕೆೆ ಪತ್ರಿಿಕೆಯಲ್ಲಿಯೇ ಪರಿಹಾರ ಕಂಡುಕೊಳ್ಳಬೇಕು. ಇದು ಸಮಂಜಸವಾದ ಮಾರ್ಗ.

ರಘುನಾಥ ಗುರೂಜಿ ಅವರ ಲೇಖನ ಓದಿ ಕೆಲವು ಬ್ರಾಾಹ್ಮಣರು ಕುದ್ದುಹೋದರು. ಗುರೂಜಿ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಅವರ ಮೇಲೆ ಕೇಸು ಹಾಕಿ ಬಂಧಿಸಲು ಆಗ್ರಹಿಸುವುದಾಗಿ ಹೇಳಿದರು. ಪೊಲೀಸ್ ಸ್ಟೇಷನ್‌ಗೆ ಹೋಗಿ ದೂರು ಕೊಟ್ಟರು. ಪೊಲೀಸರು ಕೇಸನ್ನು ದಾಖಲಿಸಿಕೊಂಡು ಗುರೂಜಿ ಮೇಲೆ ಕ್ರಮಕ್ಕೆೆ ಮುಂದಾದರು. ಸಮಾಜದ ಗಣ್ಯರೆನಿಸಿಕೊಂಡವರೆಲ್ಲ ಗುರೂಜಿ ಮೇಲೆ ಒತ್ತಡ ಹೇರಿ, ಅವರಿಂದ ಕ್ಷಮೆ ಕೇಳುವಂತೆ ವಿನಂತಿಸಿಕೊಂಡರು. ಕೊನೆಗೆ ಒಲ್ಲದ ಮನಸ್ಸಿಿನಿಂದ, ಈ ಎಲ್ಲಾ ಉಸಾಬರಿ ಬೇಡವೆಂದು ಗುರೂಜಿ ಕೇಳಿದರು. ಗುರೂಜಿ ಬದಲು ಈ ಲೇಖನವನ್ನು ನಾನು ಬರೆಯಬಾರದಿತ್ತೇ ಎಂದು ನನಗೆ ಅನೇಕ ಸಲ ಅನ್ನಿಿಸಿತು. ಜೀವ ಹೋದರೂ ನಾನು ಕ್ಷಮೆ ಕೇಳುತ್ತಿಿರಲಿಲ್ಲ, ಇವರೆಲ್ಲ ಏನು ಮಾಡುತ್ತಿಿದ್ದರು ಎಂದು ನೋಡಿಯೇ ಬಿಡುತ್ತಿಿದ್ದೆ. ನಮಗೆ ಒಪ್ಪಿಿತವಲ್ಲದ ಅನಿಸಿಕೆ ವ್ಯಕ್ತವಾದಾಗ, ಅದನ್ನು ಪ್ರತಿಭಟಿಸುವ ಮಾರ್ಗ ಇದಲ್ಲವೇ ಅಲ್ಲ. ಬ್ರಾಾಹ್ಮಣರೂ ಈ ರೀತಿಯ ಮಾರ್ಗ ಅನುಸರಿಸಲು ಮುಂದಾದರಲ್ಲ ಎಂದು ನನಗೆ ಅತೀವ ಖೇದವಾಯಿತು. ಅದರಲ್ಲೂ ಬ್ರಾಾಹ್ಮಣ ಸಂಘ ಈ ಪ್ರತಿಭಟನೆಗೆ ಮುಂದೆ ನಿಂತಿದ್ದು ಸರಿ.

ಬ್ರಾಹ್ಮಣರ ವಿರುದ್ಧ ಪ್ರಗತಿಪರರು ಬಾಯಿಗೆ ಬಂದಂತೆ ಮಾತಾಡಿದ್ದಾರೆ. ಆ ಮೈಸೂರಿನ ಭಗವಾನನಂತೂ ಬ್ರಾಾಹ್ಮಣರನ್ನು ತೀರಾ ಕೀಳು ಪದಗಳಲ್ಲಿ ಅವಹೇಳನ ಮಾಡಿದ್ದಾನೆ. ಆಗೆಲ್ಲ ಬ್ರಾಾಹ್ಮಣರು ಏನು ಮಾಡಿದರು? ಈ ನಾಡಿನಲ್ಲಿ ಬ್ರಾಾಹ್ಮಣರನ್ನು ಅತ್ಯಂತ ಕೆಟ್ಟ ಪದಗಳಲ್ಲಿ ನಿಂದಿಸುವ ಪರಿಪಾಠ ಮುಂದುವರಿದುಕೊಂಡು ಬಂದಿದೆ. ಬ್ರಾಾಹ್ಮಣರನ್ನು ಮೂದಲಿಸಲೆಂದೇ ಪುರೋಹಿತಶಾಹಿ ಎಂಬ ಪದವನ್ನು ಸಹ ಉಪಯೋಗಿಸಲಾಯಿತು. ಆಗಲೂ ಈ ಬ್ರಾಾಹ್ಮಣರು ಚಕಾರ ಎತ್ತಲಿಲ್ಲ. ಬ್ರಾಾಹ್ಮಣರು ತುಪ್ಪ ತಿಂದು, ಕೊಬ್ಬು ಬೆಳೆಸಿಕೊಂಡು, ಸಮಾಜದ ಕೆಳವರ್ಗದವರನ್ನು ಬಿಟ್ಟರೆ ಏನು ಮಾಡಿದ್ದಾರೆ ಎಂದು ಪ್ರಗತಿಪರರು ನಿಂದಿಸಿದಾಗ ಈ ಅಖಿಲ ಕರ್ನಾಟಕ ಬ್ರಾಾಹ್ಮಣ ಸಂಘದವರು ಏನು ಮಾಡಿದರು? ಇಲ್ಲಿ ತನಕ ಬ್ರಾಾಹ್ಮಣ ಸಂಘದವರಿಂದ ಸಮಾಜದ ಸಂಘಟನೆ ಅಥವಾ ಅಭಿವೃದ್ಧಿಿಗಾಗಿ ಒಂದೇ ಒಂದು ಮಹತ್ಕಾಾರ್ಯ ಆಯಿತು ಎಂದು ನನ್ನ ಬ್ರಾಾಹ್ಮಣ ಸ್ನೇಹಿತರು ಹೇಳಿದ್ದನ್ನು ನಾನಂತೂ ಕೇಳಿಲ್ಲ. ನಾವು ಒಕ್ಕಲಿಗರು ಡಿಕೆಶಿ ಅವರಂಥ ಭ್ರಷ್ಟ ರಾಜಕಾರಣಿ ಜೈಲಿಗೆ ಹೋದಾಗಲೂ ಪ್ರತಿಭಟಿಸುತ್ತೇವೆ. ಆದರೆ ಬ್ರಾಾಹ್ಮಣರು ಅಂಥ ಯಾವುದೇ ಪ್ರತಿಭಟನೆ ಮಾಡಿದ ನಿದರ್ಶನವಿಲ್ಲ.

ಹಾಗಿರುವಾಗ ರಘುನಾಥ ಗುರೂಜಿ ಬರೆದ ಲೇಖನಕ್ಕೆೆ ಬ್ರಾಾಹ್ಮಣರು ವ್ಯಗ್ರರಾಗಿದ್ದು ಬಹಳ ತಮಾಷೆ ಆಗಿತ್ತು. ಮೂಲತಃ ಬ್ರಾಾಹ್ಮಣರಿಗೆ ಪ್ರತಿಭಟನೆ ಮಾಡಲು ಬರುವುದಿಲ್ಲ. ಅದು ಅವರ ಜಾಯಮಾನವಲ್ಲ. ಅವರಿಗೆ ಅಪಮಾನಗಳನ್ನು ನುಂಗಿ ಅಭ್ಯಾಾಸವಾಗಿ ಹೋಗಿದೆ. ಅದಕ್ಕಿಿಂತ ಹೆಚ್ಚಾಾಗಿ ಬ್ರಾಾಹ್ಮಣರ ಅಸ್ತ್ರ ಪ್ರತಿಭಟನೆ ಅಲ್ಲ. ಅವರು ಪ್ರತಿಭಟನೆಯನ್ನೇ ಮಾಡುವಂತಿದ್ದರೆ, ಸರಕಾರ ಅವರಿಗೆ ಯಾವ ಸೌಲಭ್ಯವನ್ನೇ ಕೊಡದೆ ಕಳೆದ ಎಪ್ಪತ್ತೆೆರಡು ವರ್ಷಗಳಿಂದ ಸತಾಯಿಸಿ, ಶೋಷಿಸುತ್ತಿಿದೆಯಲ್ಲ, ಆಗ ಅವರು ಪ್ರತಿಭಟನೆ ಮಾಡಬೇಕಿತ್ತು. ಆಗ ಪ್ರತಿಭಟಿಸದವರು ಈಗ ಸಣ್ಣ ಕಾರಣಗಳಿಗೆ ಪ್ರತಿಭಟಿಸಿದರೆ ಅದು ಹಾಸ್ಯಾಾಸ್ಪದವೆನಿಸುತ್ತದೆ. ಅಂದು ಬ್ರಾಾಹ್ಮಣ ಸಂಘದ ಪ್ರಾಾಜ್ಞರು, ರಘುನಾಥ ಗುರೂಜಿ ಬರೆದ ಲೇಖನಕ್ಕೆೆ ತಕ್ಕುದಾದ ಪ್ರತಿಕ್ರಿಿಯೆ ಬರೆದು, ‘ವಿಶ್ವವಾಣಿ’ ಸಂಪಾದಕರಲ್ಲಿ ಅದನ್ನು ಪ್ರಕಟಿಸುವಂತೆ ಮನವಿ ಮಾಡಿಕೊಂಡಿದ್ದರೆ, ಅದು ಅತ್ಯಂತ ಸೂಕ್ತವಾದ ಮಾರ್ಗ ಎಂದು ಕರೆಯಿಸಿಕೊಳ್ಳುತ್ತಿಿತ್ತು. ಪತ್ರಿಿಕೆ ಸಂಪಾದಕರು ಅದನ್ನು ಪ್ರಕಟಿಸಿಯೇ ಪ್ರಕಟಿಸುತ್ತಿಿದ್ದರು.

ಒಂದು ವೇಳೆ ಪ್ರಕಟಿಸದಿದ್ದರೆ, ಆಗ ಪ್ರತಿಭಟನೆ ಮಾಡಿದ್ದರೆ, ಅದಕ್ಕೊೊಂದು ಅರ್ಥ ಬರುತ್ತಿಿತ್ತು. ಅದು ಬ್ರಾಾಹ್ಮಣರೆನಿಸಿಕೊಂಡವರಿಗೆ ಭೂಷಣ ಎನಿಸುತ್ತಿಿತ್ತು. ಕಾರಣ ಬ್ರಾಾಹ್ಮಣರು ಯಾವತ್ತೂ ಚರ್ಚೆ, ವೈಚಾರಿಕ ವಿನಿಮಯಗಳಲ್ಲಿ ನಂಬಿಕೆ ಉಳ್ಳವರು. ಅದೇ ಅವರ ಮೂಲ ಸಂಸ್ಕಾಾರ. ಬೀದಿಗಿಳಿದು ಹೋರಾಟ ಮಾಡುವುದು ಅವರ ಸಂಸ್ಕಾಾರವಲ್ಲ.

ಬ್ರಾಾಹ್ಮಣರ ಮೇಲೆ ಬಹಳ ವರ್ಷಗಳಿಂದ ಟೀಕೆ, ದಬಾವಣೆ, ತಿರಸ್ಕಾಾರ ನಡೆದುಕೊಂಡು ಬಂದಿದೆ. ಅದರಿಂದ ಬ್ರಾಾಹ್ಮಣರೇನೂ ನಶಿಸಿಹೋಗಿಲ್ಲ ಅಥವಾ ಅವರು ಅದರಿಂದ ಧೃತಿಗೆಟ್ಟಿಿಲ್ಲ. ಬ್ರಾಾಹ್ಮಣರನ್ನು ತುಳಿಯುವ ಪ್ರತಿ ಪ್ರಯತ್ನ ನಡೆದಾಗಲೂ ಅವರು ಮತ್ತಷ್ಟು ಗಟ್ಟಿಿಯಾಗಿದ್ದಾರೆ. ಇದಕ್ಕೆೆ ಕಾರಣ ಬ್ರಾಾಹ್ಮಣರ ಬೌದ್ಧಿಿಕ ಸಾಮರ್ಥ್ಯ. ಬೌದ್ಧಿಿಕ ಪ್ರತಿಭೆಯನ್ನು ಯಾವ ಬಾಹ್ಯ ಶಕ್ತಿಿಯಿಂದಲೂ ಕುಗ್ಗಿಿಸಲು, ಜಗ್ಗಿಿಸಲು, ಸಾಧ್ಯವಿಲ್ಲ. ಬ್ರಾಾಹ್ಮಣರು ಅಲ್ಪಸಂಖ್ಯಾಾತರಾದರೂ ಇಂದು ಸಮಾಜದಲ್ಲಿ ಅವರು ಪ್ರಭಾವ ಮತ್ತು ಉಳಿದ ಜಾತಿಗಳ ಮೇಲೆ ತಮ್ಮ ಹಿಡಿತ ಹೊಂದಿದ್ದಾರೆ. ಅದಕ್ಕೆೆ ಕಾರಣ ಅವರ ಬುದ್ಧಿಿಮತ್ತೆೆ. ಬ್ರಾಾಹ್ಮಣರ ಈ ಗುಣಕ್ಕೆೆ ಉಳಿದ ಜಾತಿಗಳೂ ಶಿರ ಬಾಗುತ್ತವೆ. ಬುದ್ಧಿಿ, ಜಾಣ್ಮೆೆ ಬ್ರಾಾಹ್ಮಣರಿಗೆ ಜನ್ಮಜಾತವಾಗಿ ಬಂದಿರುವುದು. ಅವರಿಗೆ ಬೌದ್ಧಿಿಕ ಶಕ್ತಿಿಯೇ ಮೂಲಾಧಾರ.

ಹೀಗಾಗಿ ಬ್ರಾಾಹ್ಮಣರನ್ನು ತುಳಿಯಲು, ಹೊಸಕಿಹಾಕಲು ಯಾರಿಂದಲೂ ಸಾಧ್ಯವಿಲ್ಲ. ಬ್ರಾಾಹ್ಮಣರಿಗೆ ಮೀಸಲು ಸೌಲಭ್ಯ ಕೊಡದಿದ್ದರೆ ಅವರ ಮಕ್ಕಳು ಚೆನ್ನಾಾಗಿ ಓದಿ, ವಿದೇಶಗಳಲ್ಲಿ ಒಳ್ಳೆೆಯ ನೌಕರಿಗಳನ್ನು ಗಿಟ್ಟಿಿಸುತ್ತಾಾರೆ. ಉಳಿದ ಜಾತಿಗಳವರು ಇಲ್ಲಿಯೇ ಸರಕಾರೀ ನೌಕರಿ ಮಾಡಿಕೊಂಡು ಬಿದ್ದಿರುತ್ತಾಾರೆ. ಮೀಸಲು ಸೌಲಭ್ಯವನ್ನು ಬ್ರಾಾಹ್ಮಣರಿಗೆ ನೀಡಿದ್ದಿದ್ದರೆ ಅವರೆಲ್ಲ ಇಲ್ಲೇ ಇರುತ್ತಿಿದ್ದರು, ಜಾತಿ ರಾಜಕೀಯ ಮಾಡಿಕೊಂಡು. ಆ ಸೌಲಭ್ಯ ಕೊಡದಿರುವುದರಿಂದಲೇ ಬ್ರಾಾಹ್ಮಣರ ಮಕ್ಕಳು ಇಂದು ವಿದೇಶಗಳಲ್ಲಿ ನೆಲೆಸಿದ್ದಾರೆ. ಇದು ಅವರ ತಾಕತ್ತು. ಇದರಿಂದ ಬ್ರಾಾಹ್ಮಣರಿಗೆ ಮೇಲ್ನೋೋಟಕ್ಕೆೆ ಅನ್ಯಾಾಯವಾದರೂ ಅದರಿಂದ ಅವರಿಗೆ ಅನುಕೂಲವೇ ಆಗಿದೆ. ಇಂದು ಬ್ರಾಾಹ್ಮಣರು ಎಲ್ಲ ದೇಶಗಳಲ್ಲೂ ಆಯಕಟ್ಟಿಿನ ಜಾಗದಲ್ಲಿದ್ದಾರೆ. ತಮ್ಮನ್ನು ಸರಕಾರ ಶೋಷಿಸುತ್ತಿಿದೆ ಎಂದು ಪ್ರತಿಭಟನೆ ಮಾಡುತ್ತಾಾ ಕುಳಿತಿರುತ್ತಿಿದ್ದರೆ, ಬ್ರಾಾಹ್ಮಣರು ಉದ್ಧಾಾರವಾಗುತ್ತಿಿರಲಿಲ್ಲ. ಇದು ವಸ್ತುಸ್ಥಿಿತಿ.

ಇನ್ನು ರಘುನಾಥ ಗುರೂಜಿ ಅವರು ಬರೆದ ವಿಷಯಕ್ಕೆೆ ಬರುತ್ತೇನೆ. ಅವರು ಬರೆದಿದ್ದರಲ್ಲಿ ಏನು ತಪ್ಪಿಿದೆ? ಅವರು ಬರೆದಿದ್ದನ್ನು ನಾನು ಸಂಪೂರ್ಣವಾಗಿ ಸಮರ್ಥಿಸುತ್ತೇನೆ. ತಾಕತ್ತಿಿದ್ದರೆ ಬ್ರಾಾಹ್ಮಣರು ಅಥವಾ ಪುರೋಹಿತರು ನನ್ನ ಜತೆ ಸಂವಾದ ಅಥವಾ ಬಹಿರಂಗ ಚರ್ಚೆಗೆ ಬರಲಿ. ಶಂಕರಮಠದಲ್ಲಿ ಈ ಚರ್ಚೆ ಆಗಲಿ. ಪುರೋಹಿತರು ಅವರ ವಾದ ಮಂಡಿಸಲಿ, ನಾನು ನನ್ನ ವಾದ ಮಂಡಿಸುತ್ತೇನೆ. ಪುರೋಹಿತರಿಂದ ಆಗುತ್ತಿಿರುವ ಅಧ್ವಾಾನಗಳ ಹೇಳಲೇಬಾರದು ಅಂದರೆ ಹೇಗೆ? ಇದು ಪುರೋಹಿತರಿಗೆ ಶೋಭಿಸುವಂಥದ್ದಲ್ಲ. ಯಾರಾದರೂ ತಮ್ಮ ತಪ್ಪನ್ನು ತೋರಿಸಿದರೆ ಪ್ರಾಾಜ್ಞರಾದವರು ತಿದ್ದಿಕೊಳ್ಳುತ್ತಾಾರೆ. ಅದು ಬುದ್ಧಿಿವಂತರ ಲಕ್ಷಣ. ನಮ್ಮನ್ನು ಟೀಕಿಸಲೇಬಾರದು ಎಂದರೆ ಹೇಗೆ? ಈ ರೀತಿ ಒಕ್ಕಲಿಗರು ಹೇಳಿದರೆ ಒಪ್ಪಿಿಕೊಳ್ಳಬಹುದು. ಕಾರಣ ಅವರಿಗೆ ಬುದ್ಧಿಿಗಿಂತ ತೋಳ್ಬಲದಲ್ಲಿ ನಂಬಿಕೆ ಹೆಚ್ಚು. ಆದರೆ ಬ್ರಾಾಹ್ಮಣರು ಹಾಗಲ್ಲ. ಅವರು ಈ ಸಮಾಜವನ್ನು ಮುನ್ನಡೆಸಿದ್ದೇ ಬೌದ್ಧಿಿಕತೆ, ವೈಚಾರಿಕತೆಯಿಂದ. ಅದೇ ಬೇಡ ಅಂತ ಹೇಳಿದರೆ ಹೇಗೆ?

ರಘುನಾಥ ಗುರೂಜಿ ಬರೆದ ಲೇಖನವನ್ನು ನಾನು ನಾಲ್ವರು ಬ್ರಾಾಹ್ಮಣ ಸ್ನೇಹಿತರಿಗೆ ಕಳಿಸಿಕೊಟ್ಟು, ತಮ್ಮ ಅಭಿಪ್ರಾಾಯ ತಿಳಿಸುವಂತೆ ಕೋರಿದೆ. ಅವರೆಲ್ಲರೂ ಗುರೂಜಿ ಬರೆದಿರುವುದು ಸರಿಯಾಗಿದೆ ಎಂದೇ ಹೇಳಿದರು. ಸತ್ಯವನ್ನು ಅಷ್ಟು ನೇರಾನೇರ ಹೇಳಬಾರದಿತ್ತು ಎಂದು ಒಬ್ಬರು ಹೇಳಿದರು. ಆದರೆ ಬರೆದಿರುವುದರಲ್ಲಿ ಸುಳ್ಳಿಿಲ್ಲ ಎಂದು ಹೇಳಿದರು. ಇದಕ್ಕೆೆ ಬ್ರಾಾಹ್ಮಣ ಸಂಘದವರು ಏನು ಹೇಳುತ್ತಾಾರೆ?

ನಿಜ ಹೇಳ್ತೇನೆ, ಪುರೋಹಿತರ ತಪ್ಪುುಗಳನ್ನು ಎತ್ತಿಿ ತೋರಿಸಿದ ರಘುನಾಥ ಗುರೂಜಿ ಅವರನ್ನು ಬ್ರಾಾಹ್ಮಣರು ಪ್ರಶಂಸಿಸಬೇಕಿತ್ತು. ಪುರೋಹಿತ ವೃತ್ತಿಿಯ ಬಗ್ಗೆೆ ಕಾಳಜಿ ವಹಿಸಿದ್ದಕ್ಕೆೆ ಅವರನ್ನು ಮೆಚ್ಚಬೇಕಾಗಿತ್ತು. ಬದಲು, ಅವರ ಮೇಲೆ ಕೇಸು ಹಾಕಿ ಜೈಲಿಗೆ ಅಟ್ಟುವ ಪ್ರಯತ್ನ ಮಾಡಿದ್ದು ಸರ್ವಥಾ ಸರಿ ಅಲ್ಲ. ಅಷ್ಟೇ ಅಲ್ಲ, ಬಲವಂತವಾಗಿ ಕ್ಷಮೆ ಕೋರುವಂತೆ ಮಾಡಿದ್ದು ಸಹ ಸರಿ ಅಲ್ಲ. ಇದು ಬ್ರಾಾಹ್ಮಣರಿಗೆ ತಕ್ಕುದಾದ ನಡೆ ಅಲ್ಲ. ಬ್ರಾಾಹ್ಮಣರು ಒಕ್ಕಲಿಗರ ಮೆಂಟಾಲಿಟಿ ಬೆಳೆಸಿಕೊಳ್ಳಬಾರದು. ಯಾರು ಹೇಗಿರಬೇಕೋ ಹಾಗೆ ಇರಬೇಕು.

ಬೇಕಾದರೆ, ಅಖಿಲ ಕರ್ನಾಟಕ ಮಾಧ್ವ ಮಹಾಸಭಾ ಆಗಲಿ, ಅಖಿಲ ಕರ್ನಾಟಕ ಬ್ರಾಾಹ್ಮಣ ಮಹಾಸಭಾ ಆಗಲಿ, ಇಲ್ಲಿಯವರೆಗೆ ಎಷ್ಟು ಪ್ರತಿಭಟನೆಗಳನ್ನು ಮಾಡಿದೆ ಲೆಕ್ಕ ಕೊಡಲಿ? ತಮ್ಮ ಸಮಾಜದ ಜನರಿಗೆ ಅನ್ಯಾಾಯವಾದಾಗ ಈ ಬ್ರಾಾಹ್ಮಣ ಸಂಘಟನೆಗಳು ಎಷ್ಟು ಸಲ ಬೀದಿಗಿಳಿದು ಪ್ರತಿಭಟನೆ ಮಾಡಿವೆ? ಅದಿರಲಿ, ಪತ್ರಿಿಕೆಗಳಿಗೆ ಒಂದು ಖಂಡನಾ ಹೇಳಿಕೆಗಳನ್ನು ಕಳಿಸಿಕೊಟ್ಟಿಿವೆ ? ಬ್ರಾಾಹ್ಮಣ ಸ್ವಾಾಮೀಜಿಗಳ ಮೇಲೆ ಆಗಬಾರದ ತೇಜೋವಧೆಗಳಾದವು. ದೇವಸ್ಥಾಾನಗಳನ್ನು ಸರಕಾರ ವಶಪಡಿಸಿಕೊಂಡಿತು. ಮಠಾಧೀಶರ ಮೇಲೆ ಸುಳ್ಳು ಕೇಸುಗಳನ್ನು ಹಾಕಲಾಯಿತು. ಅವರನ್ನು ಪೊಲೀಸ್ ಠಾಣೆಗೆ, ಕೋರ್ಟಿಗೆ ಎಳೆಯಲಾಯಿತು. ಆಗ ಈ ಸಂಘಟನೆಗಳೆಲ್ಲಾ ಎಲ್ಲಿ ಹೋಗಿದ್ದವು? ಸಂಘಟನೆಗಳ ಮುಖಂಡರೆಲ್ಲ ಬಾಯಲ್ಲಿ ಕಡಬು, ಬೋಂಡಾ ಇದೇ ಮಾಧ್ವ ಮಠದ ಸ್ಮಾಾಮೀಜಿಗಳನ್ನು ಬಹಿರಂಗವಾಗಿ ತೇಜೋವಧೆ ಮಾಡಲಾಯಿತು, ಹಗುರವಾಗಿ ಲೇವಡಿ ಮಾಡಲಾಯಿತು, ಪತ್ರಿಿಕೆಗಳಲ್ಲಿ ತೀಕ್ಷ್ಣವಾಗಿ ಟೀಕಿಸಲಾಯಿತು. ಆಗ ಈ ಸಂಘಟನೆಗಳು ಒಂದು ಪ್ಯಾಾರಾ ಖಂಡನಾ ಹೇಳಿಕೆಯನ್ನೂ ಪತ್ರಿಿಕಾ ಕಚೇರಿಗಳಿಗೆ ಕಳಿಸಿಕೊಟ್ಟಿಿಲ್ಲ.

ಇದೇ ಪೇಜಾವರ ಸ್ವಾಾಮೀಜಿ, ರಾಮಚಂದ್ರಾಾಪುರಮಠದ ರಾಘವೇಶ್ವರ ಭಾರತೀ ಸ್ವಾಾಮೀಜಿ ಅವರ ಮೇಲೆ ನಡೆದ ಆಕ್ರಮಣಗಳು ಒಂದೇ, ಎರಡೇ? ಆಗ ಯಾವುದೇ ಬ್ರಾಾಹ್ಮಣ ಸಂಘಟನೆಗಳು ಒಂದು ಹೇಳಿಕೆಯನ್ನಾಾದರೂ ಕೊಟ್ಟಿಿದ್ದು ನಾನಂತೂ ಕಾಣೆ. ರಾಘವೇಶ್ವರರನ್ನು ಮಾನಸಿಕವಾಗಿ ಎಷ್ಟು ಹಿಂಸಿಸಬೇಕೋ ಹಿಂಸೆ ನೀಡಿದ ನಂತರವೂ ಅವರ ಮೇಲಿನ ಆರೋಪಗಳು ಇಲ್ಲಿತನಕ ಸಾಬೀತಾಗಿಲ್ಲ. ಅವರ ವಿರುದ್ಧ ಮತ್ತು ಮಠದ ವಿರುದ್ಧ ವ್ಯವಸ್ಥಿಿತವಾಗಿ ಒಳಸಂಚು ನಡೆದವು. ಅದರಲ್ಲಿ ಸತ್ಯಾಾಂಶ ಇಲ್ಲ ಎಂಬುದು ಗೊತ್ತಿಿದ್ದೂ, ಬ್ರಾಾಹ್ಮಣ ಸಮಾಜದ ಮುಖಂಡರು ಮೌನ ಧರಿಸಿದ್ದು ಏಕೆ? ಅಸಲಿಗೆ ಆಗ ಈ ಸಂಘಟನೆಗಳ ಮುಖಂಡರು ಪ್ರತಿಭಟನೆ ಮಾಡಬೇಕಿತ್ತು. ಬೀದಿಗಿಳಿದು ಹೋರಾಡಬೇಕಾದ ಸಂದರ್ಭದಲ್ಲೆಲ್ಲ ಸುಮ್ಮನಿರುವುದು ಬ್ರಾಾಹ್ಮಣರಿಗೆ ರೂಢಿಯಾಗಿದೆ.

ಎಂಥ ವಿಪರ್ಯಾಸ ಅಂದ್ರೆೆ, ಪಾಪದ ರಘುನಾಥ ಗುರೂಜಿ ಒಂದು ಲೇಖನ ಬರೆದು ಕಳಕಳಿಯ ಅನಿಸಿಕೆಗಳನ್ನು ಬರೆದರೆ ಅದಕ್ಕೆೆ ಬ್ರಾಾಹ್ಮಣರು ಪೊಲೀಸ್ ಠಾಣೆ ಮೆಟ್ಟಿಿಲೇರುತ್ತಾಾರೆ. ಅಷ್ಟಕ್ಕೂ ರಘುನಾಥ ಗುರೂಜಿ ಬೇರೆ ಜಾತಿಯವರಲ್ಲ. ಇದು ಒಂಥರಾ ಹೇಡಿಗಳ ಕೃತ್ಯ. ಬ್ರಾಾಹ್ಮಣರು ಒಳಬಾಯಲ್ಲಿ ಮಂತ್ರ ಹೇಳಲಿ, ಆದರೆ ಮರೆಯಲ್ಲಿ ನಿಂತು ಕಲ್ಲು ಹೊಡೆಯುವುದನ್ನು ನಿಲ್ಲಿಸಬೇಕು. ಪೊಲೀಸ್ ಠಾಣೆಗೆ ಹೋದ ಬ್ರಾಾಹ್ಮಣ ಮುಖಂಡರು ಚರ್ಚೆಗೆ ಬರುವ ಧೈರ್ಯ ತೋರಬೇಕು.

ನಾನು ಗುರೂಜಿ ಅವರ ಆಶಯ ಏನಿದ್ದಿರಬಹುದು ಎಂದು ಇನ್ನೊೊಂದು ಸಲ ಅವರ ಲೇಖನ ಓದಿದೆ. ಅದು ಒಂದು ಕಳಕಳಿಯ ಲೇಖನ. ಪುರೋಹಿತರ ಬಗ್ಗೆೆ ಕಾಳಜಿಯಿಂದ ಬರೆದ ಲೇಖನ. ಅದರಲ್ಲಿ ಯಾರನ್ನೂ ಅವಹೇಳನ ಮಾಡುವ ಆಶಯವಿಲ್ಲ. ಪುರೋಹಿತರ ಬಗ್ಗೆೆ ಒಂದು ಗೌರವವನ್ನು ಇಟ್ಟುಕೊಂಡೇ, ಕಾಳಜಿಪೂರ್ವಕವಾಗಿ ಬರೆದಿದ್ದಾರೆ. ಅಷ್ಟಕ್ಕೇ ಒಂದಷ್ಟು ಬ್ರಾಾಹ್ಮಣರು ಅಬ್ರಾಾಹ್ಮಣ ಕೃತ್ಯಕ್ಕೆೆ ಮುಂದಾದರೆ? ರಘುನಾಥ ಗುರೂಜಿ ಬರೆದ ಪ್ರತಿ ವಾಕ್ಯವೂ ಸರಿಯಾಗಿದೆ. ಪುರೋಹಿತರು ಆತ್ಮವಿಮರ್ಶೆ ಮಾಡಿಕೊಳ್ಳುವ ಲೇಖನವದು. ತಮ್ಮ ವೃತ್ತಿಿಯ ಬಗ್ಗೆೆ ಆತ್ಮಾಾವಲೋಕನ ಮಾಡಿಕೊಳ್ಳಬೇಕಾದ ಬರಹವದು. ಕಹಿಸತ್ಯ ಹೇಳಿದರೆ ಕೆಲವರಿಗೆ ಬೇಸರವಾಗುವುದು ಸಹಜ. ಹಾಗಂತ ಸತ್ಯವನ್ನೇ ಹೇಳಬಾರದು ಹೇಗೆ? ಅದು ಬ್ರಾಾಹ್ಮಣ್ಯಕ್ಕೆೆ ಅಪಚಾರ ಬಗೆದಂತೆ. ಬ್ರಾಾಹ್ಮಣರು ಎಲ್ಲಾ ವಿಚಾರಗಳನ್ನೂ ಪುರಸ್ಕರಿಸುವವರು. ತಮ್ಮನ್ನು ಟೀಕಿಸಿದಾಗಲೂ ಅದನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕೆಂದು ಭಾವಿಸುವವರು. ಹೀಗಿರುವಾಗ ಒಂದು ಸಣ್ಣ ಟೀಕೆಯನ್ನು ಸಹಿಸಿಕೊಳ್ಳದೇ ಗುರೂಜಿ ಅವರ ಮೇಲೆ ಕೇಸು ಹಾಕುವ ಮಟ್ಟಕ್ಕೆೆ ಹೋಗಿ, ಅವರಿಂದ ಬಲವಂತದ ಕ್ಷಮೆ ಕೇಳಿಸಿದ್ದು ಸರಿ ಅಲ್ಲ.

ಬ್ರಾಾಹ್ಮಣರ ಆಚಾರ, ವಿಚಾರಗಳನ್ನು ಜನ ಇಂದಿಗೂ ಒಪ್ಪಿಿಕೊಂಡಿರುವುದು ಅವರು ಚರ್ಚೆಗೆ, ಸಂವಾದಕ್ಕೆೆ ತೆರೆದುಕೊಂಡಿರುವುದರಿಂದ. ಬ್ರಾಾಹ್ಮಣರು ತಮ್ಮ ಪ್ರತಿ ಆಚಾರ, ಕಟ್ಟುಪಾಡು, ಸಂಪ್ರದಾಯ, ವೈಜ್ಞಾನಿಕ ವಿವರಣೆ ಕೊಡುತ್ತಾಾರೆ. ಶಾಸ್ತ್ರ, ಧರ್ಮಗ್ರಂಥಗಳನ್ನು ಉದ್ಧರಿಸುತ್ತಾಾರೆ, ಉಲ್ಲೇಖಿಸುತ್ತಾಾರೆ. ಪ್ರತಿ ಆಚರಣೆಗೂ ಒಂದು ಅರ್ಥವಿದೆ, ವಿವರಣೆ ಇದೆ. ಬ್ರಾಾಹ್ಮಣರು ಯಾರು ಏನೇ ಹೇಳಿದರೂ ಅದನ್ನು ಇದ್ದಕ್ಕಿಿದ್ದಂತೆ ಒಪ್ಪಿಿಕೊಳ್ಳುವುದಿಲ್ಲ. ಅದನ್ನು ಒರೆಗಲ್ಲಿಗೆ ಹಚ್ಚಿಿ, ಸಾಕಷ್ಟು ನಿಷ್ಕರ್ಷೆಗೆ ಗುರಿಪಡಿಸಿ, ತದನಂತರವೇ ನಿರಾಕರಿಸುತ್ತಾಾರೆ ಅಥವಾ ಒಪ್ಪಿಿಕೊಳ್ಳುತ್ತಾಾರೆ.

ಅಷ್ಟರಮಟ್ಟಿಿಗೆ ಅವರಲ್ಲಿ ಪ್ರಜಾಸತ್ತಾಾತ್ಮಕ ನಿಲುವು ಜಾಗೃತವಾಗಿದೆ. ಈ ಕಾರಣದಿಂದಲೇ ಅವರ ಮಾತಿಗೆ ಬೆಲೆ, ತೂಕ. ಬ್ರಾಾಹ್ಮಣರ ಬಗ್ಗೆೆ ಅನಾದಿ ಕಾಲದಿಂದ ಟೀಕೆಗಳು ಕೇಳಿ ಬಂದಾಗಲೆಲ್ಲ, ಬ್ರಾಾಹ್ಮಣರು ಪ್ರತಿಭಟನೆ ಮಾರ್ಗವಲ್ಲ. ಅವರದು ಯಾವತ್ತೂ ಸಮಚಿತ್ತದ ಸಂವಾದ ಭಾವ. ತಿಳಿವಳಿಕೆಯಿಂದಲೇ ಬದಲಾವಣೆ ಸಾಧ್ಯ ಎಂಬುದು ಅವರ ನಿಲುವು. ಬಲಾತ್ಕಾಾರವಾಗಿ ಯಾರ ಮೇಲೂ ತಮ್ಮ ಅಭಿಪ್ರಾಾಯ ಹೇರಿದವರಲ್ಲ. ತಮ್ಮ ಅಭಿಪ್ರಾಾಯ, ಆಚರಣೆಯನ್ನೇ ಒಪ್ಪಿಿಕೊಳ್ಳಬೇಕು ಎಂದು ಹಠಕ್ಕೆೆ ಬಿದ್ದವರೂ ಅಲ್ಲ. ತಮ್ಮನ್ನು ಟೀಕಿಸಿದಾಗಲೆಲ್ಲ ಪರಾಮರ್ಶೆಗೆ ಗುರಿಪಡಿಸಿಕೊಂಡು ಮುನ್ನಡೆಯುವುದು ಬ್ರಾಾಹ್ಮಣ ಧರ್ಮದ ವೈಶಿಷ್ಟ್ಯ.

ಇದಕ್ಕೆೆ ಪುರೋಹಿತರೇನೂ ಹೊರತಲ್ಲ. ಅದೂ ಒಂದು ವೃತ್ತಿಿ ಎಂದು ಪರಿಗಣಿತವಾಗಿರುವುದರಿಂದ ಅದರಲ್ಲೂ ಸಹಜವಾಗಿ ಕೆಲವು ಲೋಪ-ದೋಷಗಳು ಇದ್ದಿರಲೇಬೇಕು. ಯಾವ ಅವುಗಳಿಂದ ಮುಕ್ತವಾಗಿರಲು ಸಾಧ್ಯವಿಲ್ಲ. ಈ ನಿಟ್ಟಿಿನಲ್ಲಿ ನೋಡಿದರೆ, ರಘುನಾಥ ಗುರೂಜಿ ಪೌರೋಹಿತ್ಯ ವೃತ್ತಿಿಯಲ್ಲಿನ ಕೆಲವು ಲೋಪಗಳನ್ನು ಎತ್ತಿಿ ತೋರಿಸಿದಾಗ, ಪುರೋಹಿತರು ಅವರಿಗೆ ಉಪಕೃತರಾಗಬೇಕಿತ್ತು. ಆದರೆ ಅದಕ್ಕೆೆ ವಿಪರ್ಯಾಸವಾಗಿ ಗುರೂಜಿ ಮೇಲೆ ಕೇಸು ಹಾಕಲು ಮನಸ್ಸು ಮಾಡಿದ್ದು ಸರಿ ಅಲ್ಲ.

ಮಂತ್ರ ಹೇಳುವವರು ಕುಮಂತ್ರ ಹೇಳಬಾರದು, ಕುತಂತ್ರ ಮಾಡಬಾರದು. ನಮ್ಮಲ್ಲಿರುವ ದೋಷಗಳನ್ನು ಎತ್ತಿಿ ತೋರಿಸುವವರು ನಮ್ಮ ವೈರಿಗಳಲ್ಲ. ಅವರೂ ನಮ್ಮ ಹಿತಚಿಂತಕರೇ! ಮೂಲತಃ ಇದು ಬ್ರಾಾಹ್ಮಣ ಚಿಂತನೆ. ಬ್ರಾಾಹ್ಮಣರು ಎಂದೂ ಖಟ್ಲೆೆ, ಪ್ರತಿಭಟನೆ, ಕ್ಷಮೆ ಎಂದೆಲ್ಲ ಬಡಿದಾಡಿದವರಲ್ಲ. ಅದು ಅವರ ಜನಿವಾರದಲ್ಲಿ ಹರಿದು ಬಂದ ಸಂಸ್ಕಾಾರವಲ್ಲ.
ಇದನ್ನು ಅರ್ಥಮಾಡಿಕೊಳ್ಳದ ಕೆಲವು ಉಪದ್ವ್ಯಾಾಪಿ ಬ್ರಾಾಹ್ಮಣರು ವಾಮಮಾರ್ಗ ಅನುಸರಿಸಿದ್ದು ಸರಿ ಅಲ್ಲ. ಹಾಗೆ ನೋಡಿದರೆ, ಅವರೆಲ್ಲ ತಮ್ಮ ಕೃತ್ಯಕ್ಕೆೆ ರಘುನಾಥ ಗುರೂಜಿ ಅವರಲ್ಲಿ ಕ್ಷಮೆ ಕೇಳಬೇಕು. ಜನಿವಾರಕ್ಕೆೆ ಬಿದ್ದ ಗಂಟನ್ನು ಸರಿಪಡಿಸಿಕೊಳ್ಳಿಿ ಎಂದರೆ, ಬ್ರಾಾಹ್ಮಣ್ಯವನ್ನು ಟೀಕಿಸಿದಂತೆ, ಇಡೀ ಜಾತಿಯನ್ನು ನಿಂದಿಸಿದಂತೆ ಅಲ್ಲ ಎಂಬುದನ್ನು ಬ್ರಾಾಹ್ಮಣ ಸಂಘಟನೆಗಳ ಮುಖಂಡರು ಅರಿತುಕೊಳ್ಳಬೇಕು. ಅವಿವೇಕಕ್ಕೂ ಬ್ರಾಾಹ್ಮಣ್ಯಕ್ಕೂ ಆಗಿ ಎಂಬುದನ್ನು ಆ ಮುಖಂಡರು ಅರಿಯಲಿ.

Leave a Reply

Your email address will not be published. Required fields are marked *