Tuesday, 21st March 2023

ಭ್ರಷ್ಠಾಚಾರ ರಹಿತ ಆಡಳಿತ ಆಮ್ ಆದ್ಮಿ ಪಕ್ಷಸಿದ್ದಾಂತ: ವಿಜಯ ಶರ್ಮಾ

ಇಂಡಿ: ಆಮ ಆದ್ಮಿ ಪಕ್ಷದ ಉದ್ದೇಶ ದೇಶದಲ್ಲಿ ಬ್ರಷ್ಠಾಚಾರ ರಹಿತ ಆಡಳಿತ ಮಾಡಿ ಸರ್ವರಿಗೂ ಸಮಬಾಳು ಸಮಪಾಲು ನೀಡಿ ದೇಶದ ಕಟ್ಟಕಡೆಯ ವ್ಯಕ್ತಿ ನೆಮ್ಮದಿಯ ಜೀವನ ನಡೇಸುವ ಉದ್ದೇಶವಾಗಿದೆ ಎಂದು ಆಮ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ವಿಜಯ ಶರ್ಮಾ ಹೇಳಿದರು.

ಪಕ್ಷದ ಕಾರ್ಯಾಲಯದ ಮುಂಭಾಗ ಪಾದಯಾತ್ರೆಯ ನಂತರ ಮಾತನಾಡಿದ ಅವರು ೬೦ ವರ್ಷ ಆಡಳಿತ ಮಾಡಿದ ಕಾಂಗ್ರೆಸ ದಲಿತರ ದೀನ ದುರ್ಬಲರ, ಹಿಂದುಳಿದವರಿಗೆ ಅಲ್ಪಸಂಖ್ಯಾತರಿಗೆ ಯಾವುದೇ ಅಭಿವೃದ್ದಿ ಮಾಡದೆ ಕೇವಲ ಮತಬ್ಯಾಂಕ ಮಾಡಿದ್ದಾರೆ. ಇನ್ನು ಬಿಜೆಪಿ ಅಚ್ಚೇ ದೀನ ಎಂದು ಹೇಳಿ ಅಧಿಕಾರಕ್ಕೆ ಬಂದ ನಂತರ ಗ್ಯಾಸ್ ಪೆಟ್ರೋಲ್ ,ಡಿಸೇಲ್ ದಿನಸಿ ವಸ್ತುಗಳ ಬೆಲೆ ದುಬಾರಿ ಮಾಡಿ ಬಡ ಜನತೆಗೆ ಕಂಗ್ಗ0ಟನ್ನಾಗಿ ಮಾಡಿ ದೇಶ ಆರ್ಥಿಕ ದಿವಾಳಿ ಮಾಡಿ ಅಧಾನಿ,ಅಂಬಾನಿ ಪರ ನಿಂತಿದೆ.

ಇಂತಹ ಪಕ್ಷಗಳಿಗೆ ತಕ್ಕ ಪಾಠ ಮಾಡಬೇಕು. ನಮ್ಮ ಅಭ್ಯರ್ಥಿ ಒಳ್ಳೇಯ ಜನಪರ ಬಡವರ ಹಿತಚಿಂತನೆ ಬಯಸುವವರಿಗೆ ಟಿಕೇಟ ನೀಡಲಾಗುವುದು ಆದ್ದರಿಂದ ಆಮ್ ಆದ್ಮಿ ಪಕ್ಷಕ್ಕೆ ಮತ ಹಾಕಿ ಬ್ರಷ್ಠಾಚಾರ ರಹಿತ ಶಾಸಕರನ್ನಾಗಿ ಮಾಡಿ ಎಂದು ಮನವಿ ಮಾಡಿದರು.

ಜಿಲ್ಲಾಧ್ಯಕ್ಷ ರೋಹನ ಐನಾಪೂರ, ಇಂಡಿ ಮತಕ್ಷೇತ್ರದ ಸೇವಾಕಾ0ಕ್ಷೀ ಅಭ್ಯರ್ಥಿ ಗೋಪಾಲ ಪಾಟೀಲ ಸೇರಿದಂತೆ ಅನೇಕ ರಿದ್ದರು.

Read E-Paper click here

error: Content is protected !!