Thursday, 30th November 2023

1,272 ಹೊಸ ಕರೋನ ವೈರಸ್ ಪ್ರಕರಣ ಪತ್ತೆ

covid

ವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,272 ಹೊಸ ಕರೋನವೈರಸ್ ಪ್ರಕರಣಗಳು ಪತ್ತೆ. ಸಕ್ರಿಯ ಪ್ರಕರಣಗಳು 15,515 ಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ಭಾನುವಾರ ನವೀಕರಿಸಿವೆ.

ಮೂರು ಸಾವುಗಳೊಂದಿಗೆ ಸಾವಿನ ಸಂಖ್ಯೆ 5,31,770 ಕ್ಕೆ ಏರಿದೆ. ಪಂಜಾಬ್‌ನಲ್ಲಿ ಎರಡು ಸಾವುಗಳು ವರದಿಯಾಗಿದ್ದರೆ, ಒಂದು ಪಶ್ಚಿಮ ಬಂಗಾಳದಲ್ಲಿ ವರದಿಯಾಗಿದೆ ಎಂದು ಬೆಳಿಗ್ಗೆ 8 ಗಂಟೆಗೆ ನವೀಕರಿಸಿದ ಡೇಟಾ ತಿಳಿಸಿದೆ.

ಕೋವಿಡ್ ಪ್ರಕರಣಗಳ ಸಂಖ್ಯೆಯು ಒಟ್ಟು 4.49 ಕೋಟಿ (4,49,80,674) ಯಷ್ಟು ದಾಖಲಾಗಿದೆ. ಲಸಿಕೆ ಅಭಿಯಾನದ ಅಡಿಯಲ್ಲಿ ಇದುವರೆಗೆ ದೇಶದಲ್ಲಿ 220.66 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ.

error: Content is protected !!