Friday, 1st December 2023

8,084 ಹೊಸ ಕರೋನ ಸೋಂಕಿತರು ಪತ್ತೆ

covid

ನವದೆಹಲಿ: ಕಳೆದ ಒಂದು ದಿನದಲ್ಲಿ 8,084 ಹೊಸ ಕರೋನ ಸೋಂಕಿತರು ಪತ್ತೆಯಾಗಿದ್ದಾರೆ. ಇದೇ ಅವಧಿಯಲ್ಲಿ 10 ಜನರು  ಮೃತಪಟ್ಟಿದ್ದಾರೆ.

ಈವರೆಗೆ ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 4,26,57,335 ಕ್ಕೆ ಏರಿದೆ. ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದಡಿ ಇದುವರೆಗೆ 195.19 ಕೋಟಿ ಡೋಸ್ ಮೀರಿದೆ. ಕೇರಳ ಮತ್ತು ದೆಹಲಿಯಿಂದ ತಲಾ ಮೂರು, ಮಹಾರಾಷ್ಟ್ರದಿಂದ ಇಬ್ಬರು ಮತ್ತು ಮಿಜೋರಾಂ ಮತ್ತು ಪಂಜಾದ ತಲಾ ಒಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ.

ಮಹಾರಾಷ್ಟ್ರದಿಂದ 1,47,870, ಕೇರಳದಿಂದ 69,835, ಕರ್ನಾಟಕದಿಂದ 40,108, ತಮಿಳುನಾಡಿನಿಂದ 38,025, ದೆಹಲಿಯಿಂದ 26,221, ಉತ್ತರ ಪ್ರದೇಶದಿಂದ 23,525 ಮತ್ತು ಪಶ್ಚಿಮ ಬಂಗಾಳದಿಂದ 21,205 ಸೇರಿದಂತೆ ದೇಶದಲ್ಲಿ ಇದುವರೆಗೆ ಒಟ್ಟು 5,24,771 ಸಾವುಗಳು ವರದಿಯಾಗಿವೆ. 

error: Content is protected !!