Friday, 2nd June 2023

ಆಂಧ್ರದಲ್ಲಿ ಕಲಾಪಕ್ಕೆ ಅಡ್ಡಿ: 13 ಶಾಸಕರ ಅಮಾನತು

ವಿಜಯವಾಡ: ಆಂಧ್ರಪ್ರದೇಶ ವಿಧಾನಸಭೆಯ ಚಳಿಗಾಲ ಅಧಿವೇಶನದ ಮೊದಲ ದಿನ ಕಲಾಪಕ್ಕೆ ಅಡ್ಡಿಪಡಿಸಿ ಸದನದ ಬಾವಿಗೆ ನುಗ್ಗಿ ಕೋಲಾಹಲ ಸೃಷ್ಟಿಸಿದ ಪ್ರತಿಪಕ್ಷ ನಾಯಕ ಎನ್ ಚಂದ್ರಬಾಬು ನಾಯ್ಡು ಹಾಗೂ ಇತರ 12 ಟಿಡಿಪಿ ಶಾಸಕರನ್ನು ಒಂದು ದಿನ ಅಮಾನತುಗೊಳಿಸಲಾಗಿದೆ.

ಟಿಡಿಪಿ ಸದಸ್ಯೆ ನಿರ್ಮಲ ರಮಾನೈದು ನಿವಾರ್ ಚಂಡಮಾರುತದಿಂದ ಉಂಟಾದ ಹಾನಿ ಮತ್ತು ಪರಿಹಾರ ವಿಷಯ ಪ್ರಸ್ತಾಪಿಸಿ ದರು. ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ , ನಷ್ಟದ ಕುರಿತು ಡಿ.15 ರೊಳಗೆ ವರದಿ ನೀಡುವಂತೆ ಸೂಚಿಸಲಾಗಿದೆ. ವರದಿ ಬಂದ ನಂತರ ಸಬ್ಸಿಡಿ ರೂಪದಲ್ಲಿ ಡಿ.31 ರೊಳಗೆ ಪರಿಹಾರ ಪಾವತಿಸಲು ಅಧಿಕಾರಿಗಳಿಗೆ ಸೂಚಿಸ ಲಾಗಿದೆ ಎಂದು ಸ್ಪಷ್ಟಪಡಿಸಿದರು.

ಈ ವೇಳೆ ಮಾತನಾಡಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಪ್ರತಿಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರು ಸ್ಪೀಕರ್ ಕುರ್ಚಿಯ ಮುಂದೆ ನೆಲದ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರೂ ಕಡೆಗಣಿಸಿದ ಹಿನ್ನೆಲೆಯಲ್ಲಿ ಚಂದ್ರಬಾಬು ನಾಯ್ಡು ಹಾಗೂ ಇತರೆ 12 ಶಾಸಕ ರನ್ನು ಅಮಾನತುಗೊಳಿಸಲಾಗಿದೆ.

error: Content is protected !!