Thursday, 7th December 2023

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ದರ ₹25 ಏರಿಕೆ

ವದೆಹಲಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರವನ್ನು ಭಾನುವಾರ ₹25ರಷ್ಟು ಏರಿಕೆ ಮಾಡಲಾಗಿದೆ. ಇದರಿಂದಾಗಿ ಬೆಂಗಳೂರಿನಲ್ಲಿ 19 ಕೆ.ಜಿ. ತೂಕದ ಪ್ರತಿ ಸಿಲಿಂಡರ್ ಬೆಲೆಯು ₹ 1,685.5ಕ್ಕೆ ಏರಿಕೆಯಾಗಿದೆ.

ಇಂದಿನಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ವರದಿಯಾಗಿದೆ. ದೆಹಲಿಯಲ್ಲಿ ವಾಣಿಜ್ಯ ಬಳಕೆ ಎಲ್‌ಪಿಜಿ ದರವು ಏರಿಕೆಯಾದ ನಂತರದಲ್ಲಿ ಪ್ರತಿ ಸಿಲಿಂಡರ್‌ಗೆ ₹1,769ಕ್ಕೆ ತಲುಪಿದೆ. ಕೋಲ್ಕತ್ತದಲ್ಲಿ 1871, ಮುಂಬೈನಲ್ಲಿ 1,721, ಚೆನ್ನೈನಲ್ಲಿ ₹1,918 ರಷ್ಟಿದೆ.

ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸದ್ಯ 14.2 ಕೆ.ಜಿ. ತೂಕದ ಸಿಲಿಂಡರ್‌ ದರವು ಬೆಂಗಳೂರಿನಲ್ಲಿ ₹1,055.50 ರಷ್ಟಿದೆ.

error: Content is protected !!