Thursday, 30th November 2023

ಕರೋನಾ: 1,688 ಪ್ರಕರಣ ಪತ್ತೆ

ವದೆಹಲಿ: ಭಾರತವು ಗುರುವಾರ 24 ಗಂಟೆಗಳಲ್ಲಿ 1,688 ಪ್ರಕರಣಗಳೊಂದಿಗೆ ಕೋವಿಡ್ -19 ಪ್ರಕರಣಗಳಲ್ಲಿ ಗಮನಾರ್ಹ ಕುಸಿತ ಮುಂದುವರಿಸಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ದೈನಂದಿನ ಬಿಡುಗಡೆಯಾದ ಮಾಹಿತಿಯ ಪ್ರಕಾರ ಸಕ್ರಿಯ ಪ್ರಕರಣಗಳ ಹೊರೆ ಕೂಡ 19,613 ಕ್ಕೆ ಇಳಿದಿದೆ.

ರಾಜಸ್ಥಾನದ ನಾಲ್ಕು ಸಾವುಗಳು ಸೇರಿದಂತೆ ಒಂದು ದಿನದಲ್ಲಿ 12 ಹೊಸ ಸಾವು ನೋವು ಗಳು ದಾಖಲಾಗುವುದರೊಂದಿಗೆ ಸಾವಿನ ಸಂಖ್ಯೆ 5,31,736 ಕ್ಕೆ ಏರಿದೆ.

ಮಹಾರಾಷ್ಟ್ರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಗುಜರಾತ್ ಮತ್ತು ಹರಿಯಾಣದಲ್ಲಿ ತಲಾ ಒಂದು ಸಾವು ಸಂಭವಿಸಿದೆ.

ರೋಗದಿಂದ ಚೇತರಿಸಿಕೊಂಡವರ ಒಟ್ಟು ಸಂಖ್ಯೆ 44,425,250 ಕ್ಕೆ ತಲುಪಿದೆ.

error: Content is protected !!