Thursday, 30th November 2023

ಹಿಂದೂ ಕುಶ್ ಪ್ರದೇಶದಲ್ಲಿ 5.8 ತೀವ್ರತೆಯ ಭೂಕಂಪ

ವದೆಹಲಿ: ಎರಡನೇ ಬಾರಿಗೆ ದೆಹಲಿ ಮತ್ತು ಅದರ ನೆರೆಯ ಪ್ರದೇಶಗಳಲ್ಲಿ ಭೂಕಂಪನ ದ ಅನುಭವವಾಗಿದೆ.

ಭೂಕಂಪನವು ಭೂಮಿಯ ಮೇಲ್ಮೈಯಿಂದ 200 ಕಿಮೀ ಆಳದಲ್ಲಿದೆ. ಯಾವುದೇ ಗಾಯ ಅಥವಾ ಹಾನಿಯಾಗಿರುವ ವರದಿಯಾಗಿಲ್ಲ.

ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಕಂಪನದ ಅನುಭವ ವಾಗಿದೆ. ಅಫ್ಘಾನಿಸ್ತಾನದ ಹಿಂದೂ ಕುಶ್ ಪ್ರದೇಶದಲ್ಲಿ 5.8 ತೀವ್ರತೆಯ ಭೂಕಂಪ ಸಂಭವಿಸಿದೆ.

ನವದೆಹಲಿ ಸೇರಿದಂತೆ ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಉತ್ತರ ಭಾರತದ ಕೆಲವು ಭಾಗಗಳಲ್ಲಿ ಭೂಕಂಪನದ ಅನುಭವವಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಲವರು ಮಾಹಿತಿ ಹಂಚಿಕೊಂಡಿದ್ದಾರೆ.

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಬಲವಾದ ಕಂಪನವು ಕಂಡುಬಂದರೆ, ಇಸ್ಲಾಮಾಬಾದ್, ವಾಯುವ್ಯ ಪಾಕಿಸ್ತಾನದ ಕೆಲವು ಭಾಗಗಳು ಮತ್ತು ನವದೆಹಲಿಯಲ್ಲೂ ಭೂಕಂಪನದ ಅನುಭವವಾಗಿದೆ ಎಂದು ರಾಯಿಟರ್ಸ್ ತಿಳಿಸಿದೆ.

ದೆಹಲಿ – ಎನ್‌ಸಿಆರ್‌ನಲ್ಲಿ 3.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

 
Read E-Paper click here

 

error: Content is protected !!