Saturday, 10th June 2023

ಶಿಂಧೆ ಬಣಕ್ಕೆ ‘ಬಿಲ್ಲು ಮತ್ತು ಬಾಣ’ ಚಿಹ್ನೆ ಹಂಚಿಕೆ: ಉದ್ಧವ್ ವಿರೋಧ

ವದೆಹಲಿ: ಚುನಾವಣಾ ಆಯೋಗವು ಫೆ.17 ರಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣವನ್ನು ನಿಜವಾದ ಶಿವಸೇನೆ ಎಂದು ಘೋಷಿಸಿ ಅದಕ್ಕೆ ‘ಬಿಲ್ಲು ಮತ್ತು ಬಾಣ’ ಚಿಹ್ನೆಯನ್ನು ಹಂಚಿಕೆ ಮಾಡಿದೆ ಆದೇಶಿಸಿದೆ.

ಇದರ ಬೆನ್ನಲ್ಲೇ ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ನಾಳೆ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲು ಮುಂದಾಗಿದ್ದು, ಚುನಾವಣಾ ಆಯೋಗದ ಆದೇಶಕ್ಕೆ ತಡೆ ನೀಡುವಂತೆ ಉದ್ಧವ್ ಶಿಬಿರವು ನಾಳೆ ಒತ್ತಾಯಿಸಲಿದೆ.

ಚುನಾವಣಾ ಆಯೋಗ ಆದೇಶದ ಬಳಿಕ ಸಂವಿಧಾನದ ತಿದ್ದುಪಡಿಗಳು ಪ್ರಜಾಪ್ರಭುತ್ವ ವಿರೋಧಿ ಎಂದು ಶಿವ ಸೇನಾ ಮುಖಂಡರು ವಾಗ್ದಾಳಿ ನಡೆಸಿದ್ದವು

ಚುನಾವಣಾ ಆಯೋಗದ ಆದೇಶವು ಅಸಮಂಜಸವಾಗಿದೆ. ಶಿಂಧೆ ಗುಂಪು ಸಾಂಸ್ಥಿಕ ಭಾಗದಲ್ಲಿ ದುರ್ಬಲವಾಗಿರು ವುದರಿಂದ ಉದ್ದೇಶಪೂರ್ವಕವಾಗಿ ಚುನಾವಣಾ ಸಂಸ್ಥೆಯು ಪಕ್ಷದ ಸಂವಿಧಾನವನ್ನು ಪ್ರಜಾಪ್ರಭುತ್ವ ವಿರೋಧಿ, ಬಹುಮತವನ್ನು ನಿರ್ಧರಿಸಲು ಅದನ್ನು ಬದಿಗಿಟ್ಟಿದೆ ಎಂದು ಉದ್ಧವ್ ಬಣ ಹೇಳಿಕೊಂಡಿದೆ.

ಚುನಾವಣಾ ಆಯೋಗವು ಚುನಾಯಿತ ಅಭ್ಯರ್ಥಿಗಳು (ಸಂಸದರು ಮತ್ತು ಶಾಸಕರು) ತೆಗೆದುಕೊಳ್ಳುವ ಮತಗಳ ಮೇಲೆ ಮಾತ್ರ ಅವಲಂಬಿತವಾಗಿದೆ ಎಂದಿದೆ.

ಶಿಂಧೆ ಗುಂಪು ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಅನ್ನು ಸಲ್ಲಿಸಿದ್ದು, ಯಾವುದೇ ತೀರ್ಪು ನೀಡುವ ಮೊದಲು ಈ ವಿಷಯದಲ್ಲಿ ತಮ್ಮ ಪರವಾಗಿ ಕೇಳಬೇಕು ಎಂದು ಹೇಳುತ್ತದೆ.

error: Content is protected !!