Saturday, 2nd December 2023

ಔಷಧಗಳ ಆಮದಿನ ಮೇಲಿನ ಕಸ್ಟಮ್ಸ್ ಸುಂಕ ರದ್ದು: ನಾಳೆಯಿಂದ ಜಾರಿ

ವದೆಹಲಿ: ವಿಶೇಷ ವೈದ್ಯಕೀಯ ಉದ್ದೇಶಗಳಿಗೆ ಬಳಸುವ ಆಹಾರ ಪದಾರ್ಥಗಳು ಹಾಗೂ ಔಷಧಗಳ ಆಮದಿನ ಮೇಲೆ ವಿಧಿಸುವ ಮೂಲ ಕಸ್ಟಮ್ಸ್ ಸುಂಕವನ್ನು ಕೇಂದ್ರ ಸರ್ಕಾರವು ರದ್ದುಮಾಡಿದೆ. ಇದು ಏಪ್ರಿಲ್‌ 1ರಿಂದ ಜಾರಿಗೆ ಬರಲಿದೆ.

ಹಲವು ವಿಧದ ಕ್ಯಾನ್ಸರ್‌ಗಳ ಚಿಕಿತ್ಸೆಯಲ್ಲಿ ಬಳಸುವ ಪೆಂಬ್ರೊಲಿಜುಮ್ಯಾಬ್‌ ಮೇಲಿನ ಮೂಲ ಕಸ್ಟಮ್ಸ್ ಸುಂಕ ವನ್ನು ಕೂಡ ರದ್ದು ಮಾಡಲಾಗಿದೆ.

ಔಷಧಗಳಿಗೆ ಸಾಮಾನ್ಯವಾಗಿ ಶೇಕಡ 10ರಷ್ಟು ಮೂಲ ಕಸ್ಟಮ್ಸ್ ಸುಂಕ ವಿಧಿಸಲಾಗುತ್ತದೆ. ಕೆಲವು ಜೀವರಕ್ಷಕ ಔಷಧಗಳಿಗೆ ಶೇ 5ರಷ್ಟು ಸುಂಕ ಇರುತ್ತದೆ.

‘ಅಪರೂಪದ ಕಾಯಿಲೆಗಳ ಚಿಕಿತ್ಸೆಗೆ ವೈಯಕ್ತಿಕವಾಗಿ ಬಳಕೆ ಮಾಡುವ ಎಲ್ಲ ಔಷಧಗಳು ಹಾಗೂ ವಿಶೇಷ ವೈದ್ಯಕೀಯ ಉದ್ದೇಶದ ಆಹಾರ ಪದಾರ್ಥ ಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ತೆಗೆದುಹಾಕಲಾಗಿದೆ’ ಎಂದು ಕೇಂದ್ರ ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.

error: Content is protected !!