Friday, 12th August 2022

ಕೋವಿಡ್: ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ

#corona

ನವದೆಹಲಿ: ಭಾರತದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಏರಿಕೆ ಕಂಡುಬಂದಿದೆ.

24 ಗಂಟೆಗಳ ಅವಧಿಯಲ್ಲಿ 3303 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಆರೋಗ್ಯ ಸಚಿವಾಲಯದ ಬುಲೆಟಿನ್ ಪ್ರಕಾರ ಭಾರತದಲ್ಲಿ 24 ಗಂಟೆಯಲ್ಲಿ 2,563 ಜನರು ಗುಣ ಮುಖಗೊಂಡಿದ್ದಾರೆ.

ದೇಶದ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 16,980 ಆಗಿದೆ. ಇದುವರೆಗೂ ಗುಣ ಮುಖರಾದವರ ಸಂಖ್ಯೆ 42528126 ಮತ್ತು  ಮೃತಪಟ್ಟವರ ಸಂಖ್ಯೆ 523693 ಆಗಿದೆ. ನವದೆಹಲಿಯಲ್ಲಿ ಬುಧವಾರ 1367 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಸಹ ಕೆಲವು ರಾಜ್ಯಗಳಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಇತ್ತೀಚಿನ ದಿನ ಹೆಚ್ಚಾಗುತ್ತಿರುವ ಕುರಿತು ಮಾತನಾಡಿದರು.

ಕೇಂದ್ರ ಆರೋಗ್ಯ ಕಾರ್ಯದರ್ಶಿ ವಿಶ್ವದ ಹಲವು ದೇಶಗಳಲ್ಲಿ ಸೋಂಕು ಪ್ರಕರಣಗಳ ಹೆಚ್ಚಳದ ಬಗ್ಗೆ ಸಭೆಯಲ್ಲಿ ಚರ್ಚಿಸಿದರು.