ಬೆಂಗಳೂರು : ನೂ ತರಗುಪೇಟೆಯಲ್ಲಿನ ಭಾರೀ ಸ್ಪೋಟಕದಲ್ಲಿ ಇಬ್ಬರು ಮೃತಪಟ್ಟಿರುವುದಾಗಿ ಬೆಂಗಳೂರು ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ 80 ಬಾಕ್ಸ್ ಪಟಾಕಿ ಸಂಗ್ರಹಣೆ ಪತ್ತೆಯಾಗಿದ್ದು, ಈ ಎಲ್ಲವೂ ಸ್ಪೋಟಗೊಂಡಿದ್ದರೇ, ಭಾರೀ ಅನಾಹುತವೇ ಉಂಟಾಗುತ್ತಿತ್ತು ಎಂದು ತಿಳಿದು ಬಂದಿದೆ.
ಬೆಂಗಳೂರಿನ ನ್ಯೂ ತರಗುಪೇಟೆಯಲ್ಲಿನ ಸ್ಪೋಟಕ ಪ್ರಕರಣದಲ್ಲಿ ಇಬ್ಬರು ಮೃತಪಟ್ಟು, ಜೇಮ್ಸ್, ಅನ್ಬುಸ್ವಾಮಿ ಹಾಗೂ ಗಣಪತಿ ಎಂಬ ಮೂವರು ಗಾಯ ಗೊಂಡು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಟ್ರಾನ್ಸ್ ಪೋರ್ಟ್ ಕಚೇರಿಯಲ್ಲಿ ಈ ಸ್ಪೋಟಕ ಸಂಭವಿಸಿದೆ ಎಂಬುದಾಗಿ ಪ್ರಾಥಮಿಕ ತನಿಖೆ ಯಿಂದ ತಿಳಿದು ಬಂದಿದೆ.
ಸ್ಪೋಟಕ ಸ್ಥಳದಲ್ಲಿ 80 ಬಾಕ್ಸ್ ಪಟಾಕಿ ಸಂಗ್ರಹಿಸಿರುವುದು ಪತ್ತೆಯಾಗಿದೆ. ಟ್ರಾನ್ಸ್ ಪೋರ್ಟ್ ಕಚೇರಿಯಲ್ಲಿ ಪಟಾಕಿ ಸಂಗ್ರಹಿಸಿದ್ದರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತಾ.? ಅನುಮತಿ ಪಡೆದು ಪಟಾಕಿಯನ್ನು ಇಲ್ಲಿ ಸಂಗ್ರಹಿಸಲಾಗಿತ್ತಾ ಎನ್ನುವ ಕುರಿತಂತೆ ತನಿಖೆ ನಡೆಯುತ್ತಿದೆ.