Sunday, 25th September 2022

ರಾಯಲ್ಸ್‌’ರನ್ನು ಮಣಿಸಿದ ಚೆನ್ನೈ

ಮುಂಬೈ : ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 45 ರನ್ ಗಳಿಂದ ಗೆಲುವು ದಾಖಲಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 188 ರನ್ ಬಾರಿಸಿತ್ತು. ಗುರಿ ಬೆನ್ನಟ್ಟಿದ ರಾಜಸ್ತಾನ ನಿಗದಿತ ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಲು ಶಕ್ತವಾಯಿತು.

ಚೆನ್ನೈ ಪರ ಡುಪ್ಲೇಪಿಸ್ 33, ಮೋಯಿನ್ ಅಲಿ 26, ಸುರೇಶ್ ರೈನಾ 18, ಅಂಬಟ್ಟಿ ರಾಯುಡು 27 ಎಂಎಸ್ ಧೋನಿ 18 ಮತ್ತು ಡ್ವೈನ್ ಬ್ರಾವೋ 20 ರನ್ ಬಾರಿಸಿದ್ದಾರೆ. ಆರ್ ಆರ್ ಪರ ಜೋಸ್ ಬಟ್ಲರ್ 49, ಮನನ್ ವೋಹ್ರಾ 14, ಶಿವಂ ದುಬೈ 17, ರಾಹುಲ್ ತೇವಾಟಿ 20, ಜಯದೇವ್ ಉನಾದ್ಕಟ್ 24 ರನ್ ಬಾರಿಸಿದರು. ಆಲ್ರೌಂಡರ್‌ ಮೊಯಿನ್‌ ಅಲಿ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.